
ನಟ ಆಯುಷ್ಮಾನ್ ಖುರಾನಾ ವೀರ್ಯ ದಾನ (Bollywood Actor Ayushman Khurana Acted Vicky Donor) ಮಾಡಿದ ಬಾಲಿವುಡ್ ಚಿತ್ರ ವಿಕ್ಕಿ ಡೋನರ್ ಸಿನಿಮಾ ಎಲ್ಲರಿಗೂ ಗೊತ್ತು. ಆ ಕಾಲದಲ್ಲಿ ವೀರ್ಯ ದಾನದ ಬಗ್ಗೆ ಮಾಡಿದ್ದ ಚಿತ್ರ ಸಾಕಷ್ಟು ಚರ್ಚೆಯಾಗಿತ್ತು. ಹೊಸ ವಿಚಾರ ಜನರ ಗಮನ ಸೆಳೆದಿತ್ತು. ಆದ್ರೀಗ ಸ್ಪರ್ಮ್ ದಾನ (Sperm Donation) ಮಾಡೋದನ್ನು ಜನರು ಸಾಮಾನ್ಯದಂತೆ ಪರಿಗಣಿಸಿದ್ದಾರೆ. ವೀರ್ಯ ದಾನ ಮಾಡಿ, ಮಕ್ಕಳಿಲ್ಲದ ದಂಪತಿ ಮಡಿಲು ತುಂಬುವ ಕೆಲಸವನ್ನು ಕೆಲವರು ಮಾಡ್ತಿದ್ದಾರೆ. ಅದ್ರಲ್ಲಿ ಅರಿ ನಾಗೆಲ್ ಎಲ್ಲರ ಗಮನ ಸೆಳೆದಿದ್ದಾರೆ. ಅರಿ ನಾಗೆಲ್ ಒಂದಲ್ಲ ಎರಡಲ್ಲ 165 ಮಕ್ಕಳ ತಂದೆ ಅಂದ್ರೆ ನೀವು ನಂಬ್ಲೇಬೇಕು.
ಅಮೆರಿಕ (America) ದ ನಿವಾಸಿಯಾಗಿರುವ ಅರಿ ನಾಗೆಲ್ ಗೆ ಈಗ 48 ವರ್ಷ ವಯಸ್ಸು. ವೃತ್ತಿಯಲ್ಲಿ ಗಣಿತದ ಪ್ರೊಫೆಸರ್. ಅರಿ ನಾಗೆಲ್ ಬರೀ ಪ್ರೊಫೆಸರ್ ಮಾತ್ರವಲ್ಲ ಇದ್ರ ಜೊತೆ ವೀರ್ಯ (sperm) ದಾನ ಮಾಡಿ ಚರ್ಚೆಗೆ ಬಂದಿದ್ದಾರೆ. ಅರಿ ನಾಗೆಲ್, ಅಮೆರಿಕ, ಯುರೋಪ್, ಏಷ್ಯಾ, ಆಫ್ರಿಕಾ ಸೇರಿದಂತೆ ವಿಶ್ವದ ಮೂಲೆ ಮೂಲೆಯಲ್ಲಿರುವ ಮಹಿಳೆಯರಿಗೆ ವೀರ್ಯ ದಾನ ಮಾಡಿದ್ದಾರೆ. ಅರಿ ನಾಗೆಲ್, ತನ್ನ ಮಗು ಹೆಸರೇನು, ಜನ್ಮದ ದಿನಾಂಕ, ಅಡ್ರೆಸ್, ಪಾಲಕರ ಕಚೇರಿ ಅಡ್ರೆಸ್ ಸೇರಿ ಮಕ್ಕಳ ಎಲ್ಲ ಮಾಹಿತಿಯನ್ನು ಅವರು ಸಂಗ್ರಹಿಸಿಟ್ಟುಕೊಂಡಿದ್ದಾರೆ.
ಹ್ಯಾಪಿ ಫಾದರ್ಸ್ ಡೇ ಅಪ್ಪಾ, ಯೂ ಆರ್ ಫಾರ್ ಎವರ್ ಮೈ ಹೀರೋ; ವಿನೀಶ್ ತೂಗುದೀಪ
ಮಕ್ಕಳ ಕಡೆಯಿಂದ ಫಾದರ್ಸ್ ಡೇ (Fathers Day) ಸಂದರ್ಭದಲ್ಲಿ ಅರಿ ನಾಗೆಲ್‌ಗೆ ಉಡುಗೊರೆಗಳು, ಶುಭಾಷಯಗಳು ಹರಿದು ಬರುತ್ತವೆ. ಅರಿ ನಾಗೆಲ್ ಒಂದು ವಾರದಲ್ಲಿ ಒಂದರಿಂದ ಇಬ್ಬರು ಮಹಿಳೆಯರಿಗೆ ವೀರ್ಯ ದಾನ ಮಾಡುತ್ತಾರೆ. ಈ ಕೆಲಸಕ್ಕಾಗಿ ಕ್ಲಿನಿಕ್, ಆಸ್ಪತ್ರೆ ಸಂಪರ್ಕದಲ್ಲಿರುತ್ತಾರೆ ಅರಿ ನಾಗೆಲ್.
ಸ್ಪರ್ಮಿನೇಟರ್ ಎಂದು ಅರಿ ನಾಗೆಲ್ ರನ್ನು ಕರೆಯಲಾಗುತ್ತದೆ. ಅವರು ತನಗೆ 50 ವರ್ಷವಾಗುವವರೆಗೂ ವೀರ್ಯ ದಾನ ಮಾಡ್ತೇನೆ. ಆ ನಂತ್ರ ವೀರ್ಯ ದಾನ ಮಾಡೋದಿಲ್ಲ ಎಂದಿದ್ದಾರೆ. ಐವತ್ತು ವರ್ಷದ ನಂತ್ರ ವೀರ್ಯ ದಾನ ಮಾಡಿದ್ರೆ ಅದು ಅಪಾಯಕಾರಿ ಎಂಬ ಭಯ ಅರಿ ನಾಗೆಲ್ ಅವರಿಗಿದೆ. ಆಟಿಸಂನಂತಹ ಗಂಭೀರ ಮಾನಸಿಕ ಅಸ್ವಸ್ಥತೆಯ ಅಪಾಯವಾಗಬಹುದೆಂದು ಅವರು ನಂಬಿದ್ದಾರೆ.
ಅರಿ ನಾಗೆಲ್ ಅವರ 56 ಮಕ್ಕಳು ನ್ಯೂಯಾರ್ಕ್ ನಲ್ಲಿದ್ರೆ, 20 ಮಕ್ಕಳು ನ್ಯೂ ಜರ್ಸಿಯಲ್ಲಿದ್ದಾರೆ. 13 ಮಕ್ಕಳು ಕನೆಕ್ಟಿಕಟ್‌ನಲ್ಲಿದ್ದಾರೆ. ಕೆಲ ಮಕ್ಕಳು ಅರಿ ನಾಗೆಲ್ ಸಂಪರ್ಕದಲ್ಲಿದ್ರೆ ಮತ್ತೆ ಕೆಲ ಮಕ್ಕಳು ಸಂಪರ್ಕದಲ್ಲಿಲ್ಲ. ಆಗಸ್ಟ್ – ಜುಲೈನಲ್ಲಿ ಅರಿ ನಾಗೆಲ್ ವೀರ್ಯ ದಾನ ಪಡೆದ 10 ಮಹಿಳೆಯರಿಗೆ ಹೆರಿಗೆ ಆಗಲಿದೆ. ಅವರ ಅತಿ ದೊಡ್ಡ ಮಗನ ವಯಸ್ಸು 20 ವರ್ಷ.
ಅರಿ ನಾಗೆಲ್ ಗೆ ಇನ್ನೂ ಮದುವೆ ಆಗಿಲ್ಲ. ಅರಿ ನಾಗೆಲ್ ವೀರ್ಯ ದಾನ ಮಾಡ್ತಾರೆ ಎನ್ನುವ ಕಾರಣಕ್ಕೆ ಅನೇಕರು ಅವರನ್ನು ಮದುವೆಯಾಗಲು ಹಿಂದೇಟು ಹಾಕುತ್ತಾರೆ. ಆದ್ರೆ ಇದ್ರಿಂದ ಅರಿ ನಾಗೆಲ್ ಗೆ ಬೇಸರವಿಲ್ಲ. ನನ್ನಿಂದಾಗಿ ಇಷ್ಟೊಂದು ಮಕ್ಕಳು ಜನಿಸಿದ್ದು, ಅನೇಕರು ಖುಷಿಯಾಗಿರೋದು ನನಗೆ ಸಂತೋಷ ನೀಡುತ್ತದೆ ಎಂದು ಅರಿ ನಾಗೆಲ್ ಹೇಳುತ್ತಾರೆ. ನಾಗೆಲ್ ಪ್ರಸ್ತುತ ಬಹಾಮಾಸ್‌ನಲ್ಲಿದ್ದಾರೆ. ಅವರು ಮೊದಲ ಮಗ 20 ವರ್ಷದ ಟೈಲರ್ ಮತ್ತು 33ನೇ ಮಗು, 7 ವರ್ಷದ ಮಗಳು ಟೋಪಾಜ್ ಜೊತೆ ಸುತ್ತಾಡುತ್ತಿರುತ್ತಾರೆ.
ಮೆಟ್ಟು ಮೇಲ್ಗಡೆ ಇಟ್ಟು ಇಳೀರಿ, ಗಂಗಮ್ಮ ತಾಯಿಗ್ ಹಿಂಗೆಲ್ಲಾ ಮಾಡ್ಬಾರ್ದು; ಶಾಕ್ ಆಗಿದ್ರಂತೆ ಡಾ ರಾಜ್!
ಯಾವುದೇ ಮಹಿಳೆಗೆ, ಅರಿ ನಾಗೆಲ್ ತನ್ನ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವಂತೆ ಒತ್ತಡ ಹೇರುವುದಿಲ್ಲ. ಮಹಿಳೆಯರು ಬಯಸಿದ್ರೆ ಈ ವಿಷ್ಯವನ್ನು ಹೇಳ್ಬಹುದು. ಆಯ್ಕೆ ಮಹಿಳೆಯರಿಗೆ ಬಿಟ್ಟಿದ್ದು. ಕೆಲ ಮಹಿಳೆಯರು ಇದನ್ನು ಗೌಪ್ಯವಾಗಿಡುತ್ತಾರೆ. ಮತ್ತೆ ಕೆಲವರು, ಮಕ್ಕಳು ಪ್ರಶ್ನೆ ಕೇಳುವಷ್ಟು ದೊಡ್ಡವರಾದ ಮೇಲೆ ಅವರಿಗೆ ಅರಿ ನಾಗೆಲ್ ಬಗ್ಗೆ ಮಾಹಿತಿ ನೀಡುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.