ಇನ್ಫಿ ಸುಧಾ ಮೂರ್ತಿ- ನಾರಾಯಣಮೂರ್ತಿ ಅವರಿಬ್ಬರದು ಆದರ್ಶ ದಾಂಪತ್ಯ. ಯಶಸ್ವಿ ದಾಂಪತ್ಯಕ್ಕೆ ಇವರ ಸಲಹೆ ಎಲ್ಲರಿಗೆ ಒಪ್ಪಿಗೆಯಾಗುವಂಥದು. ಸುಧಾ ಮೂರ್ತಿ ಈ ನಿಟ್ಟಿನಲ್ಲಿ ನೀಡಿದ ಕೆಲವು ಸೂತ್ರಗಳು ಇಲ್ಲಿವೆ.
ಇನ್ಫಿ ಸುಧಾ ಮೂರ್ತಿ- ನಾರಾಯಣಮೂರ್ತಿ ಅವರಿಬ್ಬರದು ಆದರ್ಶ ದಾಂಪತ್ಯ. ತಾವೂ ಬೆಳೆದು ಖ್ಯಾತರಾಗಿ, ಇನ್ಫೋಸಸ್‌ನಂಥ ಸಂಸ್ಥೆಯನ್ನು ಕಟ್ಟಿ ಬೆಳೆಸಿ, ಇದೆಲ್ಲದರ ನಡುವೆ ಸಂಸಾರವನ್ನು ನಿಭಾಯಿಸಿ ಮಕ್ಕಳಿಬ್ಬರನ್ನು ಬೆಳೆಸಿ ಖ್ಯಾತರಾಗಿಸುವುದು ಸಣ್ಣದಲ್ಲ. ಹೀಗಾಗಿ, ಯಶಸ್ವಿ ದಾಂಪತ್ಯಕ್ಕೆ ಇವರ ಸಲಹೆ ಎಲ್ಲರಿಗೆ ಒಪ್ಪಿಗೆಯಾಗುವಂಥದು. ಸುಧಾ ಮೂರ್ತಿ ಈ ನಿಟ್ಟಿನಲ್ಲಿ ನೀಡಿದ ಕೆಲವು ಸೂತ್ರಗಳು ಇಲ್ಲಿವೆ.
1) ದಾಂಪತ್ಯ ಸಣ್ಣ ಧಡಕಿಗೂ ಬಿಟ್ಟು ಪರಾರಿಯಾಗುವವರಿಗೆ ಅಲ್ಲ. ಕುಟುಂಬವನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಸಿದ್ಧರಿರುವವರಿಗೆ ಮಾತ್ರ.
2) ನೀವು ದಾಂಪತ್ಯವನ್ನು ಸರಿಯಾಗಿ ಮಾಡಿದರೆ, ಅದು ನಿಮ್ಮಲ್ಲಿ ಮತ್ತು ನಿಮ್ಮ ಸಂಗಾತಿಯಲ್ಲಿ ಉತ್ತಮವಾದ ಬದಲಾವಣೆಗಳನ್ನು ತರುತ್ತದೆ.
3). ಸೆಕ್ಸ್ ಮುಖ್ಯ. ಆದರೆ ದಾಂಪತ್ಯವನ್ನು ಗಟ್ಟಿಯಾಗಿಡುವುದು ಅದು ಒಂದೇ ವಿಷಯವಲ್ಲ.
4) ಯವ್ವನ ಇರುವಾಗ ಎಷ್ಟು ಸಾಧ್ಯವೋ ಅಷ್ಟು ಪ್ರೀತಿಸಿ (Love when you energy in your body) ಮಾಡಿ, ಆನಂದಿಸಿ. ನಿಮ್ಮಲ್ಲಿರುವುದೆಲ್ಲ ಬರೀ ನೆನಪುಗಳಾಗುವ ಸಮಯ ಬರಲಿದೆ.
5) ಸ್ನೇಹಿತರು ಬರುತ್ತಾರೆ, ಹೋಗುತ್ತಾರೆ, ನಿಮ್ಮ ಸಂಗಾತಿಯನ್ನು ನಿಮ್ಮ ಆದ್ಯತೆಯಾಗಿ ಇರಿಸಿಕೊಳ್ಳಿ.
6) ಪ್ರತಿ ದಾಂಪತ್ಯವೂ ಕಪ್ಪು ನೆರಳುಗಳನ್ನು ಹೊಂದಿರುತ್ತದೆ. ಆದರೆ ಬುದ್ಧಿವಂತ ದಂಪತಿಗಳು ಬೆಳಕನ್ನೇ ಹಚ್ಚುತ್ತಾರೆ.
7) ಮಕ್ಕಳಿಗಾಗಿ ಒಟ್ಟಿಗೆ ಇರಬೇಡಿ, ಅಂತಿಮವಾಗಿ ಅವರು ನಿಮ್ಮಿಬ್ಬರನ್ನು ಬಿಟ್ಟು ಹೋಗುತ್ತಾರೆ. ನೀವು ನಿಮ್ಮಿಬ್ಬರನ್ನೇ ಹಿಡಿದಿಟ್ಟುಕೊಳ್ಳಬೇಕು.
8) ವಯಸ್ಸಾಗುತ್ತಿದೆ ಎಂದರೆ ನಿಮ್ಮ ಸಂಗಾತಿಯಲ್ಲಿ ವಿಶೇಷ ಭಾವನೆ ಮೂಡಿಸಲು ಸಾಧ್ಯವಿಲ್ಲ ಎಂದಲ್ಲ. ಅಗಲೂ ನೀವು ಅವನ/ಅವಳ ಹೃದಯ ಪುಳಕಗೊಳಿಸಬಹುದು.
9) ನಿಮ್ಮ ಹೃದಯವನ್ನು ಹಗುರವಾಗಿರಿಸಿಕೊಳ್ಳಿ. ಇಲ್ಲದಿದ್ದರೆ ದಾಂಪತ್ಯ ತುಂಬಾ ಭಾರವಾಗಿರುತ್ತದೆ.
10) ದ್ವೇಷವನ್ನು ಇಟ್ಟುಕೊಳ್ಳಬೇಡಿ, ಇಲ್ಲದಿದ್ದರೆ ಒತ್ತಡ ನಿಮ್ಮನ್ನು ಕೊಲ್ಲುತ್ತದೆ.
11) ನೀವಿಬ್ಬರೂ ಪ್ರತ್ಯೇಕ ವ್ಯಕ್ತಿಗಳಾಗಿ ನಿಮ್ಮ ಗುರಿಗಳ ಮೇಲೆ ಕೆಲಸ ಮಾಡಿ. ನಿಮ್ಮನ್ನು ಕಳೆದುಕೊಳ್ಳಬೇಡಿ.
12. ಹೊರಗಿನವರು ನಿಮ್ಮ ದಾಂಪತ್ಯದಲ್ಲಿ ಮೂಗು ತೂರಿಸಲು ಬಿಡಬೇಡಿ. ನೀವೇ ಬಗೆಹರಿಸಿಕೊಳ್ಳಿ. ವಿವೇಚನೆ ಇರಲಿ.
13) ನೀವು ನಿಮ್ಮ ಕುಟುಂಬವನ್ನು ಕಳೆದುಕೊಳ್ಳುತ್ತೀರಿ ಎಂದು ನಿಮ್ಮ ಕುಟುಂಬಕ್ಕಾಗಿ ಹಣದ ಹಿಂದೆ ಹೆಚ್ಚು ಅಲೆಯಬೇಡಿ.
14) ನಿಮ್ಮ ಸಂಗಾತಿಗಾಗಿ ಪ್ರಾರ್ಥಿಸುವುದು ನಿಮ್ಮ ವೈಯಕ್ತಿಕ ಜವಾಬ್ದಾರಿ. ಅದನ್ನು ನೀವು ಇನ್ನೊಬ್ಬ ವ್ಯಕ್ತಿಗೆ ನಿಯೋಜಿಸಲು ಸಾಧ್ಯವಿಲ್ಲ
15) ಬೆಚ್ಚಗಿನ ಪ್ರೀತಿಯ ಪದಗಳೊಂದಿಗೆ ಪ್ರತಿ ದಿನವನ್ನು ಪ್ರಾರಂಭಿಸಿ. ದಿನದ ಟೋನ್ ಉತ್ತಮವಾಗಿರುತ್ತದೆ.
16) ವಯಸ್ಸಾಗುವುದಕ್ಕೆ ಹೆದರಬೇಡಿ. ವಯಸ್ಸಿನೊಂದಿಗೆ ಕೆಲವು ಸಾಮರ್ಥ್ಯಗಳು ಕಡಿಮೆಯಾದರೂ ಇನ್ನು ಕೆಲವು ಹೆಚ್ಚುತ್ತವೆ.
Parenting Tips: ಪ್ರೀತಿ ಹೆಸರಲ್ಲಿ ಮಕ್ಕಳಿಗೆ ಕೇಳಿದ್ದನ್ನೆಲ್ಲ ಕೊಡಿಸ್ಬೇಡಿ!
17) ನೀವು ಕೆಲಸ ಮಾಡುವಾಗ, ನಿವೃತ್ತಿಯ ಬಗ್ಗೆ ಯೋಚಿಸಿ. ಉಳಿತಾಯ (Savings), ಹೂಡಿಕೆ (Investment), ಯೋಜನೆ ಮಾಡಿ. ನಿಮ್ಮಲ್ಲಿ ಈಗಿರುವ ಶಕ್ತಿಯನ್ನು ನೀವು ಯಾವಾಗಲೂ ಹೊಂದಿರುವುದಿಲ್ಲ.
18) ನಿಮ್ಮ ಮದುವೆಯ ಮೊದಮೊದಲ ವರ್ಷಗಳಲ್ಲಿ ನೀವು ಒಳ್ಳೆ ಬೀಜ ಬಿತ್ತಿದರೆ, ಕೊನೆಕೊನೆಯ ವರ್ಷಗಳಲ್ಲಿ ಉತ್ತಮ ಬೆಳೆ ಕೊಯ್ಯುತ್ತೀರಿ
19) ಇಬ್ಬರೂ ಕೆಲಸ ಮಾಡಿದರೆ ದೃಢ ಕುಟುಂಬ ಸಾಧ್ಯ.
20) ನೀವು ಹೊರಗಿನ ಪ್ರಪಂಚಕ್ಕೆ ನೀವಿಬ್ಬರೂ ಸಂತೋಷವಾಗಿರುವಿರಿ ಎಂದು ನಟಿಸಬಹುದು. ಆದರೆ ಮುಚ್ಚಿದ ಬಾಗಿಲ ಹಿಂದೆ, ನಿಮ್ಮಿಬ್ಬರ ಕೂಟದ ನಿಜವಾದ ಸ್ಥಿತಿ ನಿಮಗೆ ತಿಳಿದಿದೆ. ಸಾರ್ವಜನಿಕ ಸುಳ್ಳನ್ನು ಬದುಕುವುದನ್ನು ನಿಲ್ಲಿಸಿ, ನಿಜವಾದ ಪ್ರೀತಿಯನ್ನು (Pure Love) ಹೊಂದಿರಿ.
21) ನೀವು ಬೇರೆಯಾಗಬೇಕು ಎಂದು ಭಾವಿಸಿದರೆ ಸ್ವಲ್ಪ ಹಿಂದೆ ಸರಿಯಿರಿ, ಉಸಿರಾಡಿ, ವಸ್ತುನಿಷ್ಠರಾಗಿರಿ. ಮತ್ತು ನೀವು ತೊರೆಯಬೇಕಾಗಿಲ್ಲ ಎಂದು ಅರ್ಥಮಾಡಿಕೊಳ್ಳುವಿರಿ. ಯಾವಾಗಲೂ ಭಾವನೆಗಳನ್ನು ನಂಬಬೇಡಿ, ಅವುಗಳನ್ನು ಪರೀಕ್ಷಿಸಿ.
22) ನಿಮ್ಮ ಸಂಗಾತಿಯನ್ನು ನೀವು ಹೇಗೆ ನಡೆಸಿಕೊಂಡಿದ್ದೀರಿ ಎಂಬುದಕ್ಕೆ ಒಂದು ದಿನ ನೀವು ದೇವರಿಗೆ ಲೆಕ್ಕ ಕೊಡಬೇಕಾಗುತ್ತದೆ. ದೇವರು ನಿಮ್ಮ ಬಗ್ಗೆ ಸಂತೋಷಪಡಲಿ.
ಮದ್ವೆಯಾಗಿನ್ನೂ ಆರು ತಿಂಗಳಾಗಿಲ್ಲ, ಗಂಡಸರಿಗೇಕೆ ಲೈಂಗಿಕ ನಿರಾಸಕ್ತಿ?