
ಸಂಬಂಧದಲ್ಲಿ ಪ್ರಾಮಾಣಿಕತೆ, ಪಾರದರ್ಶತಕೆ ಮುಖ್ಯವಾಗುತ್ತದೆ (Transparency and Honesty in Relationship). ಸಂಗಾತಿಯಿಂದ ಮುಖ್ಯ ವಿಷ್ಯಗಳನ್ನು ಮುಚ್ಚಿಟ್ಟಾಗ ಸಮಸ್ಯೆ ಆಗದೆ ಇರಬಹುದು ಆದ್ರೆ ಈ ವಿಷ್ಯ ನಿಮ್ಮ ಬದಲು ಮತ್ತ್ಯಾರಿಂದಲೂ ಸಂಗಾತಿಗೆ ತಿಳಿದಾಗ ಸಂಗಾತಿ ಕೋಪಗೊಳ್ಳೋದು ಸಹಜ. ಯಾರೂ ನಿಮ್ಮ ಮೋಸವನ್ನು ಪತ್ನಿ ಮುಂದೆ ಬಿಚ್ಚಿಟ್ಟಾಗ ನಿಮಗೆ ಅವರ ಮೇಲೆ ಕೋಪ ಬರೋದು ಸಹಜ. ಈಗ ಈ ವ್ಯಕ್ತಿ ಬಣ್ಣ ಆಪಲ್ ನಿಂದ ಬಯಲಾಗಿದೆ. ಆದ ಆಪಲ್ ವಿರುದ್ಧ ತಿರುಗಿ ಬಿದ್ದಿದ್ದಾನೆ.
ವಿಶ್ವದ ಅತಿದೊಡ್ಡ ಟೆಕ್ (Tech) ಕಂಪನಿಗಳಲ್ಲಿ ಒಂದಾದ ಆಪಲ್ ವಿರುದ್ಧ ವ್ಯಕ್ತಿಯೊಬ್ಬ ಮೊಕದ್ದಮೆ ಹೂಡಿದ್ದಾನೆ (Case Against Apple). ಫೋನ್ ನಲ್ಲಿ ಆತ ಲೈಂಗಿಕ ಕಾರ್ಯಕರ್ತೆಯರಿಗೆ (Sex Workers) ಕಳುಹಿಸಿದ ಮೆಸೇಜ್ ಪತ್ನಿಗೆ ಸಿಕ್ಕಿದೆ. ವ್ಯಕ್ತಿ, ಮೆಸ್ಸೇಜ್ (Message) ಡಿಲಿಟ್ ಆಗಿದೆ ಎಂದು ಭಾವಿಸಿದ್ದ. ಆದ್ರೆ ಅದು ಇನ್ನೊಂದು ಕಡೆ ಸೇವ್ ಆಗಿತ್ತು. ಅದನ್ನು ಪತ್ನಿ ಪತ್ತೆ ಮಾಡಿದ್ದಲ್ಲದೆ, ಪತಿ ಮೋಸ ಮಾಡ್ತಿರುವ ಕಾರಣ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಇದಕ್ಕೆ ಆಪಲ್ ಕಂಪನಿಯೇ ಕಾರಣ ಎಂದು ವ್ಯಕ್ತಿ ದೂರಿನಲ್ಲಿ ಹೇಳಿದ್ದಾನೆ.
ಮಕ್ಕಳಿಗೆ ಓದುವ ಅಭ್ಯಾಸ ಬೆಳೆಸೋಕೆ ಇಲ್ಲಿವೆ 5 ಟಿಪ್ಸ್
ವ್ಯಕ್ತಿ ತನ್ನ ಹೆಸರನ್ನು ಬಹಿರಂಗಪಡಿಸಿಲ್ಲ. ಆತ ಲಂಡನ್ ಮೂಲದ ಕಾನೂನು ಸಂಸ್ಥೆ ರೋಸೆನ್‌ಬ್ಲಾಟ್ ಮೂಲಕ ಐಫೋನ್ (IPhone) ತಯಾರಕ ಆಪಲ್ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾನೆ. ಆತ ಐಫೋನ್ ನಲ್ಲಿದ್ದ ಸಂದೇಶವನ್ನು ಡಿಲಿಟ್ ಮಾಡಿದ್ದ. ಆದ್ರೆ ಐಫೋನ್ ಗೆ ಲಿಂಕ್ ಆಗಿದ್ದ ಉಳಿದ ಡಿವೈಸ್ ನಲ್ಲಿ ಮೆಸ್ಸೇಜ್ ಹಾಗೆಯೇ ಇತ್ತು. ಆತನ ಸಂಗಾತಿಗೆ iMacನಲ್ಲಿದ್ದ ಸಂದೇಶ ಸಿಕ್ಕಿದೆ. ಐಫೋನ್ ನಲ್ಲಿರುವ ಮೆಸ್ಸೇಜ್ ಡಿಲಿಟ್ ಆಗಿದೆ ಎಂದು ನಂಬಿದ್ದ ವ್ಯಕ್ತಿ ನಿರಾಳವಾಗಿದ್ದ. ಆದ್ರೆ ಆತನ ನಂಬಿಕೆ ತಲೆಕೆಳಗಾಯ್ತು. ವ್ಯಕ್ತಿ ಪ್ರಾಮಾಣಿಕತೆಯನ್ನು ಪ್ರಶ್ನಿಸಿ ಸಂಗಾತಿ ದೂರವಾಗಿದ್ದಾಳೆ. ಒಂದ್ವೇಳೆ ನನಗೆ ಸತ್ಯ ತಿಳಿದಿದ್ದರೆ ನಾನು ಹೀಗಾಗಲು ಬಿಡ್ತಿರಲಿಲ್ಲ. ನಮ್ಮಿಬ್ಬರ ಮದುವೆ ಉಳಿಯುತ್ತಿತ್ತು ಎಂದು ವ್ಯಕ್ತಿ ಹೇಳಿದ್ದಾನೆ.
ಪತ್ನಿಗೆ, ತಪ್ಪು ಮೂಲದಿಂದ ವಿಷ್ಯ ಗೊತ್ತಾಗಿದೆ. ಹಾಗಾಗಿ ಆಕೆಯ ಮನವೊಲಿಸೋದು ನನಗೆ ಕಷ್ಟವಾಯ್ತು. ಅದೇ ನಾನೇ ಆಕೆಗೆ ವಿಷ್ಯ ತಿಳಿಸಿದ್ದರೆ ಅವಳು ನನ್ನನ್ನು ಕ್ಷಮಿಸುವ ಸಾಧ್ಯತೆ ಇತ್ತು. ಆದ್ರೆ ನನಗೆ ಐಫೋನ್ ನಲ್ಲಿ ಸಂದೇಶ ಡಿಲಿಟ್ ಮಾಡಿದ್ರೂ ಅವು ಐಫೋನ್ ಗೆ ಲಿಂಕ್ ಆಗಿರುವ ಡಿವೈಸ್ ನಲ್ಲಿರುತ್ತವೆ ಎಂಬುದು ಗೊತ್ತಿರಲಿಲ್ಲ ಎಂದು ವ್ಯಕ್ತಿ ದೂರಿದ್ದಾನೆ.
ನಾನು ಸಂದೇಶವನ್ನು ಡಿಲಿಟ್ ಮಾಡಿದಾಗ, ನಿಮ್ಮ ಮೆಸ್ಸೆಜ್ ಡಿಲಿಟ್ ಆಗಿದೆ ಎಂಬ ಸಂದೇಶ ಬಂದಿದೆಯೇ ಹೊರತು, ಇದೊಂದು ಡಿವೈಸ್ ನಲ್ಲಿ ನಿಮ್ಮ ಮೆಸ್ಸೇಜ್ ಡಿಲಿಟ್ ಆಗಿದೆ ಎಂದು ಬಂದಿರಲಿಲ್ಲ. ಒಂದ್ವೇಳೆ ಹಾಗೆ ಬಂದಿದ್ದರೆ ನಾನು ಅಲರ್ಟ್ ಆಗಿರುತ್ತಿದ್ದೆ. ಉಳಿದ ಡಿವೈಸ್ ಬಗ್ಗೆ ಆಲೋಚನೆ ಮಾಡುತ್ತಿದ್ದೆ ಎಂದು ವ್ಯಕ್ತಿ ಹೇಳಿದ್ದಾನೆ. ತಾಂತ್ರಿಕ ತಪ್ಪು ತಿಳುವಳಿಕೆಯಿಂದ ಇಷ್ಟೆಲ್ಲ ಆಗಿದೆ. ಇದಕ್ಕೆ ಆಪಲ್ ಕಾರಣವೆಂದು ವ್ಯಕ್ತಿ ಆರೋಪ ಮಾಡಿದ್ದಾನೆ. ಇಷ್ಟೆ ಅಲ್ಲದೆ, ತನ್ನಂತೆ ಆಪಲ್ ಫೋನ್ ಹೇಗೆ ಬಳಸಬೇಕು ಎಂಬುದು ಗೊತ್ತಿಲ್ಲದೆ ಸಮಸ್ಯೆಗೆ ಸಿಲುಕಿರುವ ಪುರುಷರನ್ನು ಸೇರಿಸಿ ಸಾಮೂಹಿಕ ದೂರು ನೀಡುವ ಆಲೋಚನೆ ಮಾಡ್ತಿದ್ದಾನೆ.
ಈ ಎರಡೇ ಸಂಗತಿಗಳು ನೀವೇನು ಎಂಬುದನ್ನು ಜಗತ್ತಿಗೆ ಹೇಳುತ್ತವೆ; ನಟ ದಳಪತಿ ವಿಜಯ್
ಆಪಲ್ ವಿರುದ್ಧ ದೂರು ಸಲ್ಲಿಸಿರುವ ವ್ಯಕ್ತಿ ಈಗ ವಿಚ್ಛೇದನ ಮತ್ತು ಕಾನೂನು ವೆಚ್ಚಗಳಿಗಾಗಿ 5 ಮಿಲಿಯನ್ ಡಾಲರ್ ಗಿಂತ ಹೆಚ್ಚಿನ ಪರಿಹಾರ ಕೋರಿದ್ದಾನೆ. ಆಪಲ್, ಬಳಕೆದಾರರಿಗೆ ಸ್ಪಷ್ಟ ಮಾಹಿತಿ ನೀಡಿದ್ದರೆ ಈ ನಷ್ಟವಾಗ್ತಿರಲಿಲ್ಲ ಎಂದು ಆತ ಹೇಳಿದ್ದಾನೆ. ಆಪಲ್ ಬಳಕೆದಾರರು ಎಲ್ಲ ಡಿವೈಸ್ ಗೆ ಲಿಂಕ್ ಮಾಡಬಾರದು. ಒಂದ್ವೇಳೆ ಮಾಡಿದ್ರೂ ಎಲ್ಲ ಸಂದೇಶ ಹೋಗುವಂತೆ ಸಿಂಕ್ ಮಾಡ್ಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.