ದಿನ ಬೆಳಗಾದ್ರೆ ಟೆನ್ಶನ್ (Tension). ಮಾರ್ಕ್ಸ್, ಜಾಬ್ (Job) ಮುಂದೇನು ಎಂಬ ಚಿಂತೆ. ಮನೆಯಲ್ಲಿಯೂ ಕಿರಿಕಿರಿ. ಐಯಾಮ್ ಟೋಟಲೀ ಫೆಡ್ ಅಪ್ ಅಂತನಿಸ್ತಿದೆಯಾ ? ಚಿಲ್, ಫ್ರೆಂಡ್ಸ್ (Friends) ಜತೆ ಮಿಂಗಲ್ ಆಗಿ ಎಲ್ಲಾ ಸರಿಯಾಗುತ್ತೆ.
ಜೀವನ (Life)ದಲ್ಲಿ ಪ್ರತಿಯೊಂದು ಸಂಬಂಧವೂ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಪ್ಪ-ಅಮ್ಮ, ಅಣ್ಣ-ತಂಗಿ, ಗಂಡ-ಹೆಂಡತಿ, ಸ್ನೇಹಿತರು (Friends) ಹೀಗೆ ಎಲ್ಲಾ ಸಂಬಂಧಕ್ಕೂ ಅದರದ್ದೇ ಆದ ಮಹತ್ವವಿದೆ. ಹದಿಹರೆಯ ಕಳೆದ ನಂತರ ಸಾಮಾನ್ಯವಾಗಿ ಎಲ್ಲರೂ ಕುಟುಂಬಕ್ಕಿಂತ ಹೆಚ್ಚಾಗಿ ಸ್ನೇಹಿತರನ್ನು ಹಚ್ಚಿಕೊಳ್ಳುತ್ತಾರೆ. ಸ್ನೇಹಿತರ ಜತೆ ಖುಷಿ-ದುಃಖದ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ. ಸ್ನೇಹಿತರ ಜತೆ ಸಮಯ ಕಳೆಯುವುದು ಮಾನಸಿಕ ಆರೋಗ್ಯ (Health)ಕ್ಕೂ ಉತ್ತಮ ಅನ್ನೋದು ನಿಮಗೆ ಗೊತ್ತಾ ?
ಹೌದು, ಉತ್ತಮ ಸ್ನೇಹಿತರ ಜತೆ ಸಮಯ ಕಳೆಯುವುದು ಜೀವನ ಹಾಯಾಗಿರುವಂತೆ ಮಾಡುತ್ತದೆ. ಸ್ನೇಹಿತರ ಜತೆ ಮಾತನಾಡುವುದು, ಸಮಯ ಕಳೆಯುವುದು ಮೊದಲಾದ ಚಟುವಟಿಕೆಗಳು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಜೀವನದಲ್ಲಿ ಹೆಚ್ಚು ಸಾಧನೆ ಮಾಡಲು ಪ್ರೇರೇಪಿಸುತ್ತದೆ. ಮಾನಸಿಕ ಆರೋಗ್ಯಕ್ಕೆ ಸ್ನೇಹಿತರೊಂದಿಗೆ ಸಮಯ ಕಳೆಯುವುದು ಅತ್ಯಗತ್ಯ ಯಾಕೆ ಎಂಬ ಮಾಹಿತಿ ಇಲ್ಲಿದೆ.
Mental Health: ಸಮಸ್ಯೆಗಳು ಅಂದ್ರೆ ಭಯಾನ, ಮೆಂಟಲೀ ಸ್ಟ್ರಾಂಗ್ ಆಗೋದು ಹೇಗೆ ?
ಒತ್ತಡ ಕಡಿಮೆಯಾಗುತ್ತದೆ
ಪ್ರತಿಯೊಬ್ಬರ ಜೀವನದಲ್ಲಿ ಏನಾದರೊಂದು ಸಮಸ್ಯೆ ಇದ್ದೇ ಇರುತ್ತದೆ. ಸಮಸ್ಯೆಯಿದ್ದ ಮೇಲೆ ಒತ್ತಡ (Pressure), ಟೆನ್ಶನ್ ಸಹ ತಪ್ಪಿದ್ದಲ್ಲ. ಆದರೆ ಈ ರೀತಿ ಸಮಸ್ಯೆಗಳಿದ್ದಾಗ ನೀವು ಸ್ನೇಹಿತರ ಜತೆ ಈ ವಿಚಾರವನ್ನು ಹಂಚಿಕೊಂಡರೆ ಮನಸ್ಸು ಹಗುರವಾಗುತ್ತದೆ. ಸಮಸ್ಯೆಯನ್ನು ಎದುರಿಸಲು ಧೈರ್ಯ ದೊರಕುತ್ತದೆ. ಮನಸ್ಸಿಗೆ ಒತ್ತಡವೆನಿಸಿದಾಗ ಮುಖ್ಯವಾಗಿ ಬೇಕಾಗುವುದೇ ಸಮಸ್ಯೆಯನ್ನು ಎದುರಿಸಬಲ್ಲೆ ಎಂಬ ಆತ್ಮಸ್ಥೈರ್ಯ. ಸ್ನೇಹಿತರ ಬಳಗದಲ್ಲಿದ್ದಾಗ ಈ ಆತ್ಮಸ್ಥೈರ್ಯ ದೊರಕುತ್ತದೆ. ಏನಾದ್ರೂ ಮಾಡೋಣ ಬಿಡು ಎಲ್ಲಾ ಸರಿಗೋಗುತ್ತದೆ ಎಂಬ ಸ್ನೇಹಿತರ ಭರವಸೆಯ ಮಾತುಗಳು ಮನಸ್ಸಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
ಆತ್ಮವಿಶ್ವಾಸ ಹೆಚ್ಚಾಗುತ್ತದೆ
ಸ್ನೇಹಿತರ ಜತೆ ಬೆರೆಯುವುದು ಆತ್ಮವಿಶ್ವಾಸ (Confidence)ವನ್ನು ಹೆಚ್ಚಿಸಬಹುದು. ಯಾವುದೇ ಸಾಧನೆ ಮಾಡಿದಾಗ ಸ್ನೇಹಿತರು ಮುಂದೆ ಬಂದು ಮನಸಾರೆ ಹೊಗಳುತ್ತಾರೆ. ಮಾಡಿರುವ ತಪ್ಪನ್ನೂ ತಿಳಿಸಿ ಸರಿಮಾಡಿಕೊಳ್ಳುವಂತೆ ಸೂಚಿಸುತ್ತಾರೆ. ಸ್ನೇಹಿತರು ನೀಡುವ ಈ ಪ್ರಶಂಸೆ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡಬಹುದು. ಇದು ನೀವು ಜೀವನದಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಲು ನೆರವಾಗುತ್ತದೆ.
Mental Health : ಎಲ್ಲರ ಮುಂದೆ ಒಳ್ಳೆಯವರಾಗಲು ಹೋಗಿ ನೆಮ್ಮದಿ ಕಳೆದುಕೊಳ್ಬೇಡಿ
ಭಾವನಾತ್ಮಕ ಬೆಂಬಲ ದೊರಕುತ್ತದೆ
ಕಠಿಣ ಪರಿಸ್ಥಿತಿಯಲ್ಲಿದ್ದಾಗ ಸ್ನೇಹಿತರ ಬಳಗದಲ್ಲಿರುವುದು ಜೀವನದೆಡೆಗೆ ಸಕಾರಾತ್ಮಕವಾಗಿರಲು ನೆರವಾಗುತ್ತದೆ. ಕಷ್ಟದಲ್ಲಿದ್ದಾಗ ಸ್ನೇಹಿತರ ಭರವಸೆಯ ಮಾತುಗಳು ಮನಸ್ಸಿನಲ್ಲಿ ಸಮಸ್ಯೆಯಿಂದ ಹೊರಬರುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನೀವು ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದರೆ, ನಿಮಗೆ ಸಹಾಯ ಮಾಡಲು ಸ್ನೇಹಿತರನ್ನು ಹೊಂದಿದ್ದರೆ ಜೀವನದಲ್ಲಿ ಕಷ್ಟಗಳು ಎದುರಾದರೂ ಸಮಸ್ಯೆಗಳಾಗುವುದಿಲ್ಲ.. ಸಾಮಾಜಿಕ ಸಂಬಂಧಗಳು ಭಾವನಾತ್ಮಕ ಬೆಂಬಲವನ್ನು ನೀಡುತ್ತವೆ. ಇದು ನಿಮ್ಮ ಮಾನಸಿಕ ಯೋಗಕ್ಷೇಮವನ್ನು ಸುಧಾರಿಸುತ್ತದೆ. ತಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ಬೆಂಬಲಿಗರು ಎಂದು ಪರಿಗಣಿಸುವ ಜನರು ಜೀವನದಲ್ಲಿ ಹೆಚ್ಚಿನ ಅರ್ಥವನ್ನು ಹೊಂದಿದ್ದಾರೆ.
ಧನಾತ್ಮಕವಾಗಿ ಪರಿಣಾಮ ಬೀರುತ್ತದೆ
ಉತ್ತಮ ಸ್ನೇಹಿತರು ಒಳ್ಳೆಯದನ್ನು ಮಾಡಲು ಮಾತ್ರ ಪ್ರೇರೇಪಿಸುತ್ತಾರೆ. ಕೆಟ್ಟ ಹವ್ಯಾಸಗಳನ್ನು ತೆಗೆದು ಹಾಕಲು ಯತ್ನಿಸುತ್ತಾರೆ. ನೀವು ಯಾವುದಾದರೂ ತಪ್ಪುಗಳನ್ನು ಮಾಡುವಾಗ ಎಚ್ಚರಿಸುತ್ತಾರೆ. ಈ ರೀತಿ ಮಾಡುವುದು ನಿಮಗೆ ಒಳ್ಳೆಯದಲ್ಲ ಎಂಬುದನ್ನು ಬಿಡಿಸಿ ಹೇಳುತ್ತಾರೆ. ಉತ್ತಮ ಗುಣಗಳಿರುವ ಸ್ನೇಹಿತರ ಜತೆ ಬೆರೆತಾಗ ನಿಮ್ಮಲ್ಲೂ ಉತ್ತಮ ಜೀವನ ಮೌಲ್ಯಗಳನ್ನು ಅಳವಡಿಸಲು ಸಾಧ್ಯವಾಗುತ್ತದೆ. ನಿಮ್ಮ ಸ್ನೇಹಿತರು ನಿಮ್ಮಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ನಿಮ್ಮ ವ್ಯಕ್ತಿತ್ವ (Personality)ವನ್ನು ಉತ್ತಮಗೊಳಿಸಬಹುದು. ನೀವು ಜಿಮ್‌ಗೆ ಸೇರಲು ಅಥವಾ ವಾಕಿಂಗ್ ಮಾಡಲು ಪ್ರಾರಂಭಿಸಲು ಬಯಸಿದರೆ, ಉತ್ತಮ ಸ್ನೇಹಿತರು ಇದಕ್ಕೆ ಸಾಥ್ ನೀಡುತ್ತಾರೆ.
ಜೀವನದ ಎಲ್ಲಾ ಹಂತಗಳಲ್ಲಿ ಒಳ್ಳೆಯ ಸ್ನೇಹಿತರು ಅತ್ಯಗತ್ಯ. ನಿಮ್ಮ ಸ್ನೇಹದ ಕೆಲವು ಅಂಶಗಳು ಕಾಲಾನಂತರದಲ್ಲಿ ನೀವು ಪ್ರಬುದ್ಧರಾದಾಗಲು, ಉತ್ತಮ ವ್ಯಕ್ತಿಗಳಾಗಿ ಬದಲಾಗಲು ಕಾರಣವಾಬಹುದು.