Mental Health : ಎಲ್ಲರ ಮುಂದೆ ಒಳ್ಳೆಯವರಾಗಲು ಹೋಗಿ ನೆಮ್ಮದಿ ಕಳೆದುಕೊಳ್ಬೇಡಿ
ಅದನ್ನ ಕಲಿಬೇಕು, ಇದನ್ನು ಕಲಿಬೇಕು..ಒಂದಲ್ಲ ಎರಡಲ್ಲ ಎಲ್ಲ ಕ್ಷೇತ್ರದಲ್ಲಿ ಮಿಂಚಬೇಕು. ಎಲ್ಲರ ಜೊತೆ ಚೆನ್ನಾಗಿರಬೇಕು. ಈ ಗುರಿಯಿಟ್ಟು ಮುನ್ನುಗ್ಗುವುದು ನಮ್ಮ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಅನೇಕರು ನಂಬಿದ್ದಾರೆ. ಆದರೆ ಇದು ಅಪಾಯಕಾರಿ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಪರ್ಫೆಕ್ಟ್ ಆಗ್ತೇನೆ ಎನ್ನುವವರು ಅನಾರೋಗ್ಯಕ್ಕೊಳಗಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ಹೇಳ್ತಾರೆ.
ಪರ್ಫೆಕ್ಷನಿಸ್ಟ್(Perfectionist) ಅಂದ್ರೆ ತುಂಬಾ ಒಳ್ಳೆಯವರಾಗುವುದು ಅಥವಾ ಎಲ್ಲದರಲ್ಲೂ ಪರಿಪೂರ್ಣರಾಗಿರುವುದು ಸುಲಭದ ಮಾತಲ್ಲ. ಬಹುತೇಕರು ತಮ್ಮನ್ನು ಎಲ್ಲ ಕ್ಷೇತ್ರದಲ್ಲೂ ನೋಡಲು ಬಯಸ್ತಾರೆ. ಎಲ್ಲರ ಮುಂದೆ ಒಳ್ಳೆಯವರಾಗಿರಲು ಬಯಸ್ತಾರೆ. ಆದ್ರೆ ಈ ಪರ್ಫೆಕ್ಷನಿಸ್ಟ್ ಹುಚ್ಚು ನಿಮ್ಮ ಮೇಲೆ ಋಣಾತ್ಮಕ ಪರಿಣಾಮ (Negative Effect )ಬೀರಬಹುದು. ಉದಾಹರಣೆ(Example )ಗೆ ತೆಳ್ಳಗಾಗುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತೀರಿ. ಆದರೆ ಆ ಫಲಿತಾಂಶ (Result) ನಿಮ್ಮನ್ನು ಸಂತೋಷ(happy)ಗೊಳಿಸುವುದಿಲ್ಲ.
ಸಿನಿಮಾ ಕಲಾವಿದರ ಫಿಟ್ನೆಸ್ (Fitness )ನಿಮಗೆ ಬೇಕು ಮತ್ತು ಇದಕ್ಕಾಗಿ ನೀವು ಎಲ್ಲ ಕಸರತ್ತು ಮಾಡ್ತಿರಿ. ಆದ್ರೆ ಇದು ನಿಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಮ್ಮ ದೇಹ ಇದಕ್ಕೆ ಸ್ಪಂದಿಸದೆ ನೀವು ಅನಾರೋಗ್ಯ (Ilness)ಕ್ಕೊಳಗಾಗಬಹುದು. ಪರಿಪೂರ್ಣವಾಗುವುದು ಅಥವಾ ಒಳ್ಳೆಯವರಾಗುವುದು ತಪ್ಪಲ್ಲ. ಆದ್ರೆ ಇದನ್ನು ಪ್ರಯತ್ನಿಸುವಾಗ ಕೆಲವು ಸಲಹೆಗಳನ್ನು ನೆನಪಿನಲ್ಲಿಡಿ.
ಪರಿಪೂರ್ಣವಾಗಲು ಪ್ರಯತ್ನಿಸುವಾಗ ನೆನಪಿಡಬೇಕಾದ ವಿಷ್ಯಗಳು
ಇಲ್ಲ ಎನ್ನಲು ಕಲಿಯಿರಿ (Learn To Say NO) : ಪರಿಪೂರ್ಣ ವ್ಯಕ್ತಿ, ಪರಿಪೂರ್ಣ ಪತಿ (Perfect husband), ಪರಿಪೂರ್ಣ ಬಾಯ್ ಫ್ರೆಂಡ್ ಅಥವಾ ಪರಿಪೂರ್ಣ ಮಗನಾಗಲು ಪ್ರಯತ್ನಿಸುತ್ತೀರಿ. ಎಲ್ಲರ ಮುಂದೆ ಒಳ್ಳೆಯವನು ಎನ್ನಿಸಿಕೊಳ್ಳಲು ಮುಂದಾಗ್ತೀರಿ. ಈ ಎಲ್ಲಾ ಪಾತ್ರಗಳನ್ನು ಸಂಪೂರ್ಣವಾಗಿ ನಿರ್ವಹಿಸಲು ಅಗತ್ಯವಿರುವ ಎಲ್ಲವನ್ನೂ ನೀವು ಆಗಾಗ್ಗೆ ಮಾಡುತ್ತೀರಿ. ಈ ಎಲ್ಲಾ ಕೆಲಸ (Work)ಗಳನ್ನು ಮಾಡಲು ಪ್ರಯತ್ನಿಸಿದಾಗ ನೀವು ನಿಮ್ಮ ಅಭಿಪ್ರಾಯದ ಬದಲು ಬೇರೆಯವರ ಅಭಿಪ್ರಾಯದಂತೆ ನಡೆಯುತ್ತೀರಿ. ಅವರ ಯಾವುದೇ ಮಾತಿಗೆ ಇಲ್ಲ ಎನ್ನದೆ ಕೆಲಸ ಮಾಡುತ್ತೀರಿ. ಇದರಿಂದ ನಿಮಗೆ ಸಂತೋಷ ಸಿಗುವ ಬದಲು ಒತ್ತಡ ಹೆಚ್ಚಾಗುತ್ತದೆ. ಸಂಬಂಧ (Relationship)ಗಳು ಪರಿಪೂರ್ಣವಾಗುತ್ತವೆ. ಆದರೆ ನೀವು ಅಪೂರ್ಣರಾಗುತ್ತೀರಿ. ಹಾಗಾಗಿ ಎಲ್ಲ ಸಂದರ್ಭದಲ್ಲೂ ತಲೆಯಾಡಿಸಬೇಡಿ. ನಿಮಗಿಷ್ಟವಿಲ್ಲದ ಕೆಲಸ ಮಾಡುವ ವೇಳೆ ಇಲ್ಲ ಎಂಬುದನ್ನು ಕಲಿಯಿರಿ.
ಎಲ್ಲವೂ ನಿಮಗಾಗಿ ಅಲ್ಲ (Everything Is Not For You) : ಮೊದಲು ನಿಮ್ಮ ಮಿತಿಯನ್ನು ಅರ್ಥ ಮಾಡಿಕೊಳ್ಳಿ. ಎಲ್ಲವನ್ನೂ ನೀವು ಮಾಡಲು ಸಾಧ್ಯವಿಲ್ಲ. ನಿಮ್ಮ ಸಾಮರ್ಥ್ಯ ಮೀರಿ ನೀವು ಕೆಲಸ ಮಾಡಲು ಮುಂದಾದಾಗ ಪರಿಣಾಮ ಧನಾತ್ಮಕವಾಗಿರುವುದಿಲ್ಲ. ಕೊಹ್ಲಿಯಂತ ಆಟ,ಧೋನಿಯಂತ ನಾಯಕತ್ವ,ಸುದೀಪ್ ರಂತ ನಟನೆ,ಪುನೀತ್ ರಾಜ್ಕುಮಾರ್ ರಂತ ಡಾನ್ಸ್ ಎಲ್ಲವೂ ನಿಮ್ಮಲ್ಲಿಯೇ ಬರಬೇಕೆಂದ್ರೆ ಅದು ಅಸಾಧ್ಯ ಎಂಬುದನ್ನು ಅರಿತಿರಿ.
ಯಾರೂ ಪರಿಪೂರ್ಣರಾಗಲು ಸಾಧ್ಯವಿಲ್ಲ (Perfection Is Unreachable) :
ಪರಿಪೂರ್ಣವಾಗಲು ಪ್ರಯತ್ನಿಸುವಾಗ ನಾವು ನಮ್ಮನ್ನು ಹಿಂಸಿಸಲು ಶುರು ಮಾಡ್ತೇವೆ. ಇದರಿಂದ ದೈಹಿಕ ಅಥವಾ ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಯಾರೂ ಪರಿಪೂರ್ಣರಲ್ಲ ಎಂಬುದನ್ನು ತಿಳಿಯುವುದು ಮುಖ್ಯ. ಒಬ್ಬೊಬ್ಬರು ಒಂದೊಂದು ಕ್ಷೇತ್ರದಲ್ಲಿರುತ್ತಾರೆ ಎಂಬ ಸತ್ಯ ಅರಿತಿರಬೇಕು.
Hair Fall Remedies: ಕೂದಲು ಉದುರುವಿಕೆಗೆ ಇಲ್ಲಿದೆ ಪರಿಹಾರ
ಹೊಸ ಪ್ರಯತ್ನ (Something New) : ನಿಂತಲ್ಲಿ ನಿಂತ ನೀರಾಗುವುದು ಒಳ್ಳೆಯದಲ್ಲ. ಪರಿಪೂರ್ಣವಾಗಲು ಪ್ರಯತ್ನಿಸುವಾಗ, ನೀವು ಹೊಸದನ್ನು ನಿರಂತರವಾಗಿ ಪ್ರಯತ್ನಿಸುತ್ತಿರಬೇಕು. ಅವಕಾಶ ಸಿಕ್ಕಾಗ ಬೇರೆ ಬೇರೆ ವಿಷ್ಯಗಳನ್ನು ಕಲಿಯಬೇಕು. ಆಗ ಹೆಚ್ಚಿನ ಪ್ರಯತ್ನವಿಲ್ಲದೆ ನೀವು ಹೆಚ್ಚಿನದನ್ನು ಕಲಿತಿರುತ್ತೀರಿ. ನಿಮಗೆ ಸೂಕ್ತವಾದ ಕೆಲಸ ಯಾವುದು ಎಂಬುದೂ ನಿಮಗೆ ಆಗ ಅರಿವಿಗೆ ಬರುತ್ತದೆ.
Pineapple Health Benefits: ಅನಾನಸ್ ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟು ಲಾಭವಿದೆ ಗೊತ್ತಾ ?
ವಿಫಲವಾದ್ರೆ ಏನಾಯ್ತು? (What If You Are Fail): ಪರಿಪೂರ್ಣರಾಗಲು ಪ್ರಯತ್ನಿಸುವಾಗ ಒಮ್ಮೆ ಜನರು ಸೋತ್ರೆ ನಂತ್ರ ಅದರ ಸಹವಾಸ ಬಿಡ್ತಾರೆ. ಆದರೆ ಪರಿಪೂರ್ಣರಾಗುವ ಪ್ರಕ್ರಿಯೆಯಲ್ಲಿ, ಅತ್ಯಂತ ಮುಖ್ಯವಾದ ವಿಷಯವೆಂದರೆ ನೀವು ಪ್ರಯತ್ನಿಸುತ್ತಲೇ ಇರಬೇಕು. ಒಮ್ಮೆ ಸೋತ್ರೆ ನೀವು ಕಳೆದುಕೊಂಡಿದ್ದು ಏನೂ ಇಲ್ಲ. ಸತತ ಪ್ರಯತ್ನದ ನಂತ್ರವೇ ನಿಮಗೆ ಯಶಸ್ಸು ಸಿಗುತ್ತದೆ ಎಂಬುದನ್ನು ನೀವು ತಿಳಿದಿರಬೇಕು.