ದಿಶಾ, ಸುಶಾಂತ್‌ ಸಾವಿನ ಮಧ್ಯೆ ತನ್ನನ್ನು ಎಳೆದಿದ್ದಕ್ಕೆ ಬಾಲಿವುಡ್ ಯಂಗ್ ನಟ ಗರಂ..!

Suvarna News   | Asianet News
Published : Aug 06, 2020, 02:58 PM ISTUpdated : Aug 06, 2020, 06:12 PM IST
ದಿಶಾ, ಸುಶಾಂತ್‌ ಸಾವಿನ ಮಧ್ಯೆ ತನ್ನನ್ನು ಎಳೆದಿದ್ದಕ್ಕೆ ಬಾಲಿವುಡ್ ಯಂಗ್ ನಟ ಗರಂ..!

ಸಾರಾಂಶ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಹಾಗೂ ಆತ ಮಾಜಿ ಮ್ಯಾನೇಜರ್ ದಿಶಾ ಸಾಲ್ಯಾನ್ ಸಾವಿನ ಪ್ರಕರಣಗಳೆರಡು ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿವೆ. ಈ ಸಂದರ್ಭ ವ್ಯಥಾ ತನ್ನ ಹೆಸರನ್ನು ಮಧ್ಯೆ ತಂದಿದಕ್ಕೆ ಬಾಲಿವುಡಗ ಯಂಗ್ ನಟ ಸೂರಜ್ ಪಂಚೋಲಿ ಫುಲ್ ಗರಂ ಆಗಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಹಾಗೂ ಆತ ಮಾಜಿ ಮ್ಯಾನೇಜರ್ ದಿಶಾ ಸಾಲ್ಯಾನ್ ಸಾವಿನ ಪ್ರಕರಣಗಳೆರಡು ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿವೆ. ಈ ಸಂದರ್ಭ ವ್ಯಥಾ ತನ್ನ ಹೆಸರನ್ನು ಮಧ್ಯೆ ತಂದಿದಕ್ಕೆ ಬಾಲಿವುಡಗ ಯಂಗ್ ನಟ ಸೂರಜ್ ಪಂಚೋಲಿ ಫುಲ್ ಗರಂ ಆಗಿದ್ದಾರೆ.

ಈ ಎರಡೂ ಸಾವಿನ ವಿಚಾರವಾಗಿ ಯುವ ನಟ ಸೂರಜ್ ಹೆಸರು ತಳುಕು ಹಾಕುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನಟ ತನಗೆ ದಿಶಾ ಪರಿಚಯವೇ ಇಲ್ಲ ಎಂದು ಕೋಪಿಸಿಕೊಂಡಿದ್ದಾರೆ.

ತಾನೇ ನಿರ್ಮಿಸಿದ ಸಿನಿಮಾ ಟ್ರೈಲರ್, ಪೋಸ್ಟರ್‌ನಿಂದ ಕರಣ್ ಔಟ್..! ಅಸಲಿಗೆ ಆಗಿದ್ದೇನು..?

ದಿಶಾ ಜೊತೆ ಸೂರಜ್ ಇದ್ದಾನೆ ಎನ್ನಲಾದ ಫೋಟೋಗಳೂ ಇನ್‌ಸ್ಟಾಗ್ರಾಂ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಎಚ್ಚೆತ್ತ ನಟ ನೆಟ್ಟಿಗರ ಮೇಲೆ ಕೋಪಿಸಿಕೊಂಡಿದ್ದಾರೆ. ಫೋಟೋ ನೋಡಿದ ನಟ ಇದೆಂತಹ ಅವಸ್ಥೆ, ಇದು ನನ್ನ ಗೆಳತಿ ಅನುಶ್ರೀ ಗೌರ್ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಬಿಗ್‌ಬಾಸ್‌ ಬ್ಯೂಟಿಯ ಬರ್ತ್‌ಡೇ ಫನ್..! ಇಲ್ಲಿವೆ ಚಂದದ ಫೋಟೋಸ್

ಮಾಧ್ಯಮ ವರದಿಯೊಂದರ ಸ್ಕ್ರೀನ್ ಶಾಟ್‌ ಶೇರ್ ಮಾಡಿಕೊಂಡ ನಟ, ಮಾಧ್ಯಮಕ್ಕೂ ಬೈದಿದ್ದಾರ. ಈ ಮಾಧ್ಯಮವನ್ನು ನಾವು ನಂಬಬೇಕಾ..? ಈ ಫೋಟೋ 2016ರಲ್ಲಿ ಕ್ಲಿಕ್ಕಿಸಿದ್ದು. ಇದು ದಿಶಾ ಸಾಲ್ಯಾನ್ ಅಲ್ಲ. ಅದು ನನ್ನ ಗೆಳತಿ ಅನುಶ್ರೀ ಗೌರ್. ಆಕೆ ಭಾರತದಲ್ಲಿಯೇ ಇಲ್ಲ.  ಸುಮ್ಮನೆ ಜನರ ಬ್ರೈನ್ ವಾಶ ಮಾಡೋದು ನಿಲ್ಲಿಸಿ. ಈ ರೀತಿ ನನ್ನನ್ನು ಹರಾಸ್ ಮಾಡುವುದನ್ನೂ ನಿಲ್ಲಿಸಿ, ಸುಮ್ಮನೆ ಸಂಬಂಧವಿಲ್ಲದ್ದಕ್ಕೆ ನನ್ನನ್ನು ಎಳೆಯಬೇಡಿ ಎಂದಿದ್ದಾರೆ.

ನಿವೇನು ಮಾಡುತ್ತಿದ್ದೀರಿ ಎಂಬ ಬಗ್ಗೆ ಜಾಗೃತಿ ಇರಲಿ. ಅದರಿಂದ ಇನ್ನೊಬ್ಬರ ಬದುಕು ಹಾಳಾಗದಿರಲಿ. ಇದನ್ನು ಮುಂಚೆಯೂ ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ. ನಾನು ಇದುವರೆಗೂ ದಿಶಾ ಸಾಲ್ಯಾನ್‌ನನ್ನು ಭೇಟಿಯಾಗಿಯೂ ಇಲ್ಲ, ಮಾತಾಡಿಯೂ ಇಲ್ಲ ಎಂದಿದ್ದಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?
ಚಾಣಕ್ಯ ನೀತಿಯ ಪ್ರಕಾರ ಇಂಥ ಸಂಗಾತಿ ಸಿಕ್ಕರೆ ಜೀವನಪೂರ್ತಿ ಕಷ್ಟ ತಪ್ಪಿದ್ದಲ್ಲ!