ಮೊಟ್ಟೆ ಒಡೆದು ಗಿಣಿಮರಿಯ ಹೊರತೆಗೆದು ತುತ್ತು ಕೊಟ್ಟು ಸಾಕಿದ..! ವಿಡಿಯೋ ವೈರಲ್

By Suvarna News  |  First Published Aug 6, 2020, 2:24 PM IST

ತಾಯಿ ಗಿಣಿ ಸತ್ತ ಹೋಗಿದ್ದು ಅದರ ಮೊಟ್ಟೆ ಮಾತ್ರ ಸಿಕ್ಕಿದರೆ ಏನು ಮಾಡಲು ಸಾಧ್ಯ..? ಸಾಮಾನ್ಯ ಮನುಷ್ಯ ಕೃತಕ ಕಾವು ಒದಗಿಸಿ ಆ ಮರಿನ್ನು ಬದುಕಿಸುವುದು ಸಾಧ್ಯವಿಲ್ಲ. ಈತ ಮಾಡಿದ್ದೇನು ನೋಡಿ..


ತಾಯಿ ಗಿಣಿ ಸತ್ತ ಹೋಗಿದ್ದು ಅದರ ಮೊಟ್ಟೆ ಮಾತ್ರ ಸಿಕ್ಕಿದರೆ ಏನು ಮಾಡಲು ಸಾಧ್ಯ..? ಸಾಮಾನ್ಯ ಮನುಷ್ಯ ಕೃತಕ ಕಾವು ಒದಗಿಸಿ ಆ ಮರಿನ್ನು ಬದುಕಿಸುವುದು ಸಾಧ್ಯವಿಲ್ಲ.

ಇದೀಗ ವ್ಯಕ್ತಿಯೊಬ್ಬರು ಪುಟ್ಟ ಗಿಣಿಮರಿಯನ್ನು ಮೊಟ್ಟೆ ಒಡೆದು ಹೊರ ತೆಗೆದು ಅದನ್ನು ಬದುಕಿಸುವ ರೀತಿ ಮಾತ್ರ ನೆಟ್ಟಿಗರನ್ನು ಮಂತ್ರಮುಗ್ಧಗೊಳಿಸಿದೆ. ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Tap to resize

Latest Videos

undefined

ಮದುವೆ: ಒಂದು ಪ್ರೇಮಮಯ ಜಗತ್ತು

ಐಎಫ್‌ಎಸ್ ಅಧಿಕಾರಿ ಪ್ರವೀಣ್ ಕಾಸ್ವಾನ್ ಎಂಬವರು ವಿಡಿಯೋ ಒಂದನ್ನು ಶೇರ್ ಮಾಡಿದ್ದು, ವಿಡಿಯೋ ನೋಡುತ್ತಲೇ ಸಣ್ಣ ಗಿಡಿ ನೋಡಿ ಜನ ಸಂಭ್ರಮಿಸಿದ್ದಾರೆ. ಒಂದು ಸಣ್ಣ ವಿಡಿಯೋ ಶೇರ್ ಮಾಡಿಕೊಂಡಿದ್ದು, ಇದು ನೋಡಲು ಅತ್ಯಂತ ಸುಂದರ ವಿಚಾರ. ತಾಯಿ ಇಲ್ಲದ ಮರಿಯನ್ನು ಬೆಳೆಸಿದ ರೀತಿಯೇ ಸುಂದರ ಎಂಬ ಕ್ಯಾಪ್ಶನ್ ಕೊಟ್ಟಿದ್ದಾರೆ.

ನೂರಾರು ಮೊಂಬತ್ತಿ ಉರಿಸಿ ಗರ್ಲ್‌ಫ್ರೆಂಡ್‌ಗೆ ಪ್ರಪೋಸ್ ಮಾಡೋಕೋಗಿ ಮನೆಯೇ ಸುಟ್ಟೋಯ್ತು..!

ಸಣ್ಣ ಗಾತ್ರದ ಮೊಟ್ಟೆಯಿಂದ ವ್ಯಕ್ತಿ ಮರಿಯೊಂದನ್ನು ಸುರಕ್ಷಿತವಾಗಿ ಹೊರ ತೆಗೆಯಲು ಪ್ರಯತ್ನಿಸುವಲ್ಲಿಂದ ಆರಂಭವಾಗುವ ವಿಡಿಯೋ ರೆಕ್ಕೆ ಪುಕ್ಕ ಬಲಿತ ಹಕ್ಕಿಯವರೆಗೂ ಇದೆ. ಹಕ್ಕಿ ತನಗೆ ಕೊಟ್ಟ ಆಹಾರವನ್ನೇಲ್ಲಾ ಉತ್ಸಾಹದಿಂದ ತಿನ್ನುವುದನ್ನೂ ಕಾಣಬಹುದು.

Sweetest thing to watch. The parrot mother died, so he raised the baby. Just beautiful. pic.twitter.com/gbMgMfMpCj

— Parveen Kaswan, IFS (@ParveenKaswan)

ದ್ರವೀಕೃತ ಆಹಾರವನ್ನೇ ನೀಡಿ ಅದರ ಆರೈಕೆ ಮಾಡಿ ನೋಡಿಕೊಳ್ಳುವ ರೀತಿಗಂತೂ ಜನ ಭಾವುಕರಾಗಿದ್ದಾರೆ. ಈಗಾಗಲೇ ವಿಡಿಯೋಗೆ 32 ಸಾವಿರಕ್ಕೂ ಹೆಚ್ಚು ವ್ಯೂಸ್ ಬಂದಿದೆ.

click me!