
ಆಪ್ತರ ನಿಧನ (Death) ಅಪಾರ ದುಃಖ, ನೋವಿ (pain)ಗೆ ಕಾರಣವಾಗುತ್ತದೆ. ಅವರ ಮಾತು, ಕೆಲಸಗಳನ್ನು ನೆನೆಪುಮಾಡಿಕೊಳ್ತಾ ಕುಟುಂಬಸ್ಥರು (family members) ಕಣ್ಣೀರಿಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮವರನ್ನು ಕಳೆದುಕೊಂಡ ಸಂಕಟವನ್ನು ಹಂಚಿಕೊಳ್ತಾರೆ. ಅಪ್ಪ ಸತ್ತ ನಂತ್ರ ಇಲ್ಲೊಬ್ಬ ವ್ಯಕ್ತಿ ಬರೆದ ಪತ್ರವೊಂದು ವೈರಲ್ ಆಗಿದೆ. ಈ ಲೆಟರ್ (letter) ಓದಿದ ಜನರು ಬಿದ್ದು ಬಿದ್ದು ನಗ್ತಿದ್ದಾರೆ. ಇಂಥ ಜನರೂ ಭೂಮಿ ಮೇಲೆ ಇರ್ತಾರಾ ಎನ್ನುತ್ತಿದ್ದಾರೆ.
74 ವರ್ಷದ ರಾಬರ್ಟ್ ಅಡಾಲ್ಫ್ ಬೋಹ್ಮ್ ಅಕ್ಟೋಬರ್ 6 ರಂದು ಸಾವನ್ನಪ್ಪಿದ್ರು. ಟೆಕ್ಸಾಸ್‌ನ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬಿದ್ದ ಅವರು ಮತ್ತೆ ಏಳಲಿಲ್ಲ. ರಾಬರ್ಟ್ ಬೋಮ್ರ ನಾಲ್ಕನೇ ಮಗ ಚಾರ್ಲ್ಸ್ ಬೋಮ್ ತಮ್ಮ ತಂದೆಗೆ ಸಂಬಂಧಿಸಿದಂತೆ ಮರಣ ಪತ್ರ ಬರೆದಿದ್ದಾರೆ. ಚಾರ್ಲ್ಸ್ ತನ್ನ ತಂದೆಯನ್ನು ಚೇಷ್ಟೆ ಮಾಡುತ್ತಲೇ ಅವರ ಜೀವನವನ್ನು ಎಲ್ಲರ ಮುಂದಿಟ್ಟಿದ್ದಾರೆ. ದೇವರಿಗೆ ಮುಂದಿನ ಜವಾಬ್ದಾರಿ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್ ಆಗಿದೆ. ಈ ಪತ್ರವನ್ನು ಓದಿದ ಜನರು, ರಾಬರ್ಟ್ ಚಾಲ್ಸ್ ಸಾವಿಗೆ ಸಂತಾಪ ಸೂಚಿಸುವ ಬದಲು ನಗ್ತಿದ್ದಾರೆ.
ಪ್ರೀತಿ ಉಳಿಸಿಕೊಳ್ಳಬೇಕೆಂದ್ರೆ ಕ್ಲೀನ್ ಶೇವ್ ಮಾಡಿಕೊಳ್ಳಿ: ಏನಿದು ಹೊಸ ಅಭಿಯಾನ?
ರಾಬರ್ಟ್‌ಸನ್ ಫ್ಯೂನರಲ್ ಡೈರೆಕ್ಟರ್‌ಗಳ ಫೇಸ್‌ಬುಕ್ ಪೋಸ್ಟ್‌ನ ಪ್ರಕಾರ, ಚಾರ್ಲ್ಸ್ ಬರೆದ ಮರಣಪತ್ರ ಭಿನ್ನವಾಗಿದೆ. ಮೋಜಿನ ಜೀವನ ನಡೆಸುತ್ತಿದ್ದ, ತಮ್ಮ ವೈಯಕ್ತಿಕ ಜೀವನವನ್ನು ಬ್ರಾಂಡ್‌ನಂತೆ ಬದುಕಿದ್ದವರು ಅಕ್ಟೋಬರ್ 6, 2024 ರಂದು ಅಕಾಲಿಕವಾಗಿ ದೇವರಿಗೆ ಪ್ರಿಯರಾದರು. ಸ್ವಲ್ಪ ಸಮಯದ ಹಿಂದೆ ಜಾರಿ ಬಿದ್ದರು. ಅವರ ತಲೆ ನೆಲಕ್ಕೆ ಹೊಡೆದ ಅವರು ಸಾವನ್ನಪ್ಪಿದ್ರು ಎಂದು ಬರೆದಿರುವ ಚಾರ್ಲ್ಸ್, ತಮ್ಮ ಪತ್ರದಲ್ಲಿ ತಂದೆಯ ಜೀವನದ ಸಂಪೂರ್ಣ ವಿವರ ನೀಡಿದ್ದಾರೆ.
ಇನ್ಮುಂದೆ ಭಗವಂತನಿಗೆ ಸಮಸ್ಯೆ : ಅಪ್ಪ ದೇವರಪಾದ ಸೇರಿದ್ದು, ಇನ್ಮುಂದೆ ದೇವರಿಗೆ ಸಮಸ್ಯೆ ನೀಡಲಿದ್ದಾರೆ ಎಂದು ಚಾರ್ಲ್ಸ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಚಾರ್ಲ್ಸ್ ಪ್ರಕಾರ, ಅವರ ತಂದೆ ಮಿಲಿಟರಿ ಲಾರಿಗೆ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ನನ್ನ ಅಪ್ಪ 1950ರಲ್ಲಿ ಜನಿಸಿದರು. ಅದ್ರ ನಂತ್ರ ದೇವರು ನಮ್ಮಪ್ಪನನ್ನು ತಯಾರಿಸಿದ ಅಚ್ಚನ್ನೇ ಮರೆತ್ರು. ಧನ್ಯವಾದ ದೇವರೆ, ತಂದೆ ಐದು ವರ್ಷದಲ್ಲಿ ಮೂರು ಬಾರಿ ಪತ್ನಿಯನ್ನು ಅಮ್ಮನನ್ನಾಗಿ ಮಾಡಿದ್ರು. ಕ್ಯಾಥೋಲಿಕ್ ಯುದ್ಧದಿಂದ ತಪ್ಪಿಸಿಕೊಳ್ಳಲು 1967ರಿಂದ 1972ರ ನಡುವೆ ನನ್ನ ಮೂರು ಅಣ್ಣಂದಿರಿಗೆ ತಂದೆಯಾದ್ರು ಎಂದು ಚಾರ್ಲ್ಸ್ ಬರೆಯುತ್ತಾರೆ. ತನ್ನ ತಂದೆಗೆ ಗ್ರೆನಡಾ ಯುದ್ಧದ ಆತಂಕವಿತ್ತು. ಹಾಗಾಗಿ ನಾಲ್ಕನೇಯವನಾಗಿ 1983ರಲ್ಲಿ ನನ್ನನ್ನು ಅಂದ್ರೆ ಚಾರ್ಲ್ಸ್ ನನ್ನು ಹುಟ್ಟಿಸಿದ್ರು. ತಂದೆ ಸ್ವಭಾವದ ಬಗ್ಗೆ ಬರೆದ ಚಾರ್ಲ್ಸ್, ಹಾರ್ಮೋನಿಯಂ ಸಹಾಯದಿಂದ ಮಧ್ಯರಾತ್ರಿ ನಾಯಿ ಬೊಗಳಲು ಕಾರಣವಾಗ್ತಿದ್ದ ನನ್ನ ತಂದೆ, ನೆರೆಹೊರೆಯವರಿಗೆ ಮನರಂಜನೆ ನೀಡ್ತಿದ್ದರು, ನಂತ್ರ ಅದನ್ನು ಮೊಮ್ಮಕ್ಕಳಿಗೆ ಹಸ್ತಾಂತರಿಸಿದ್ರು ಎಂದು ಬರೆದಿದ್ದಾರೆ. ನಾನು ಅವರ ಚೇಷ್ಟೆಗಳನ್ನು ಜೀವನದುದ್ದಕ್ಕೂ ಆನಂದಿಸಿದ್ದೇನೆ. ಅವರನ್ನು ಸಹಿಸಿಕೊಳ್ಳುವ ಪ್ರಯತ್ನ ನಡೆಸಿದ್ದೇನೆ. ಈಗ ಅವರನ್ನು ಸಹಿಸಿಕೊಳ್ಳುವ ಸಮಸ್ಯೆ ಭಗವಂತನದ್ದು ಎಂದು ಚಾರ್ಲ್ಸ್ ಬರೆದಿದ್ದಾರೆ.
ಮತ್ತೆ ಸೊಸೆ ಹೆಗಲ ಮೇಲೆ ಕೈ ಹಾಕಿದ ಮುಖೇಶ್ ಅಂಬಾನಿ, ಸಮ್ ಥಿಂಗ್ ರಾಂಗ್ ಎನ್ನುತ್ತಿದ್ದಾರೆ
ಚಾರ್ಲ್ಸ್ ಬರವಣಿಗೆಯನ್ನು ಸೋಶಿಯಲ್ ಮೀಡಿಯಾ ಬಳಕೆದಾರರು ಬೆಚ್ಚಿದ್ದಾರೆ. ಅಧ್ಬುತವಾದ ಸಂತಾಪಪತ್ರ. ತಂದೆಯ ಸ್ವಭಾವವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ ಎಂದು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. ಮರಣಪತ್ರ ನೋಡಿ ನಗು ಬರ್ತಿದೆ, ಆದ್ರೆ ತಂದೆ ಮೇಲಿನ ನಿಮ್ಮ ಪ್ರೀತಿ, ಅವರನ್ನು ಅರಿತುಕೊಂಡ ರೀತಿ ಪ್ರಿಯವಾಗಿದೆ ಎಂದಿರುವ ಬಳಕೆದಾರರು, ಚಾರ್ಲ್ಸ್ ಗೆ ಧೈರ್ಯ ತುಂಬಿದ್ದಾರೆ. ನಿಮ್ಮ ಪತ್ರ ನೋಡಿ ಮೇಲಿರುವ ತಂದೆ ನಗ್ತಿರ್ತಾರೆ, ಹೆಮ್ಮೆಪಡುತ್ತಿರುತ್ತಾರೆಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.