ಗಂಡ, ಮೂರು ಮಕ್ಕಳನ್ನು ಬಿಟ್ಟು ಹೋದವಳಿಗೆ ಕೈ ಕೊಟ್ಟ ಪ್ರೇಮಿ, ಮರಳಿ ಬಂದಾಗ ಪತಿ ರಿಯಾಕ್ಷನ್ ಇದು!

By Roopa Hegde  |  First Published Oct 17, 2024, 4:52 PM IST

ಅತ್ತ ಬಾಯ್ ಫ್ರೆಂಡ್ ಇತ್ತ ಪತಿ. ಇಬ್ಬರಲ್ಲಿ ಯಾರನ್ನೂ ಒಪ್ಪಿಕೊಳ್ಳದ ಸ್ಥಿತಿಯಲ್ಲಿ ಮಹಿಳೆ. ಮೂರು ಮಕ್ಕಳಾದ್ಮೇಲೆ ಲವ್ವರ್ ಜೊತೆ ಓಡಿಹೋಗಿದ್ದವಳು ಈಗ ಪೊಲೀಸ್ ಠಾಣೆಯಲ್ಲಿ ಸುದ್ದಿ ಮಾಡಿದ್ದಾಳೆ. ಆಕೆ ಗಂಡನನ್ನು ನೋಡಿ ಭಲೇ ಎನ್ನುತ್ತಿದ್ದಾರೆ ನೆಟ್ಟಿಗರು. 
 


ಉತ್ತರ ಪ್ರದೇಶ (Uttar Pradesh) ದಲ್ಲಿ ಪ್ರೇಮ ಕಥೆ (love story) ಯೊಂದು ಎಲ್ಲರ ಗಮನ ಸೆಳೆದಿದೆ. ಮೂರು ಮಕ್ಕಳ ತಾಯಿಗೆ ಇನ್ನೊಬ್ಬನ ಮೇಲೆ ಪ್ರೀತಿ ಚಿಗುರಿದೆ. ಮಕ್ಕಳು, ಗಂಡನನ್ನು ಬಿಟ್ಟು, ಅವನ ಹಿಂದೆ ಓಡಿ ಹೋದ ಮಹಿಳೆ ಈಗ ಕಣ್ಣೀರು ಹಾಕ್ತಿದ್ದಾಳೆ. ತಿರುಗಿ ಬಂದ ಪತ್ನಿಗೆ ಪತಿ ಕೊಟ್ಟ ವೆಲ್ ಕಂ ಎಲ್ಲರನ್ನು ಅಚ್ಚರಿಗೊಳಿಸಿದೆ. 

ಈಗಿನ ದಿನಗಳಲ್ಲಿ ಮದುವೆ (Marriage) ಯಾಗಿ ಮಕ್ಕಳಾದ್ಮೇಲೆ ಓಡಿ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಈ ಯಾವುದೇ ಪ್ರೇಮ ಕಥೆ ಸಕ್ಸಸ್ ಆಗಿರೋ ವರದಿ ಇಲ್ಲ. ಬಹುತೇಕ ಮಹಿಳೆಯರು ಮನೆಬಿಟ್ಟ ಮೇಲೆ ಕಷ್ಟ ಅನುಭವಿಸಿದ್ದಾರೆ. ಕೆಲವರು ಹೆಣವಾಗಿ ಪತ್ತೆಯಾಗಿದ್ದಾರೆ. ಆದ್ರೆ ಈ ಮಹಿಳೆ ಜೀವಂತವಾಗಿ ಪೊಲೀಸ್ ಠಾಣೆಗೆ ಬಂದಿದ್ದಾಳೆ. ಎಲ್ಲ ಮುಗಿದ ಮೇಲೆ ಗೋಳೋ ಎನ್ನುತ್ತಿರುವ ಮಹಿಳೆಯನ್ನು ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದಾರೆ.

Tap to resize

Latest Videos

undefined

ಫ್ರೆಂಡ್ ಅಂತಾ ಮನೆಗೆ ಕರ್ಕೊಂಡು ಬಂದ್ರೆ ಅಮ್ಮನ್ನ ಬುಟ್ಟಿಗೆ ಹಾಕೊಂಡ: ಅಪ್ಪ ಇಬ್ಬರ ಕಥೆ ಮುಗಿಸಿದ!

ಇನ್ಸ್ಟಾಗ್ರಾಮ್ (Instagram) ನಲ್ಲಿ ಈ ಪ್ರೇಮಿಗಳ ವಿಡಿಯೋ ವೈರಲ್ ಆಗಿದೆ. ಸುದ್ದಿ ಪ್ರಕಾರ ಮಹಿಳೆ ಮೂರು ಮಕ್ಕಳ ತಾಯಿ. ಆಕೆಗೆ ಇನ್ನೊಬ್ಬನ ಮೇಲೆ ಮನಸ್ಸಾಗಿತ್ತು. ಮನೆ, ಮಕ್ಕಳು, ಗಂಡನನ್ನು ಬಿಟ್ಟು ಆತನ ಜೊತೆ ಓಡಿ ಹೋಗಿದ್ಲು. ಆದ್ರೆ ಈಗೇನಾಯ್ತೋ ಗೊತ್ತಿಲ್ಲ, ಪ್ರೇಮಿ ಆಕೆಯನ್ನು ದೂರ ಮಾಡಿದ್ದಾನೆ. ವಿಡಿಯೋದಲ್ಲಿ ಮಹಿಳೆ ಹಾಗೂ ಆಕೆ ಪ್ರೇಮಿ ಅಳ್ತಿರೋದನ್ನು ನೋಡ್ಬಹುದು. ಮೂರು ಮಕ್ಕಳ ತಾಯಿಯಾಗಿ ಇನ್ನೊಬ್ಬನ ಜೊತೆ ಓಡಿಹೋಗಿದ್ದೀಯಲ್ಲ, ಈಗ ಏನಾಯ್ತು ನೋಡು ಎಂದು ಪೊಲೀಸರು ಮಹಿಳೆಗೆ ಬುದ್ಧಿ ಹೇಳ್ತಿದ್ದಾರೆ. ವಿವಾಹಿತ ಮಹಿಳೆಯನ್ನು ಓಡಿಸಿಕೊಂಡು ಹೋಗಿದ್ದೀಯಲ್ಲ, ನಿನಗೆ ನಾಚಿಕೆ ಆಗಲ್ವಾ ಅಂತ ಪೊಲೀಸರು ಯುವಕನನ್ನು ಪ್ರಶ್ನೆ ಮಾಡ್ತಿದ್ದಾರೆ. ಆತನಿಗೆ ಈ ಮೊದಲೇ ಮದುವೆಯಾಗಿದ್ದು, ಅವನ ಪತ್ನಿ ಕೂಡ ಓಡಿ ಹೋಗಿದ್ದಾಳೆ ಎಂದು ಪೊಲೀಸರು ಮಾತನಾಡೋದನ್ನು ಕೇಳ್ಬಹುದು. ಈ ಮಧ್ಯೆ ಮಹಿಳೆ ಪತಿ ಹಿರೋ ಆಗಿದ್ದಾನೆ.

ಪತ್ನಿಯನ್ನು ಮತ್ತೆ ಒಪ್ಪಿಕೊಂಡ ಪತಿ : ಪತ್ನಿ, ಬಾಯ್ ಫ್ರೆಂಡ್ ಜೊತೆ ಓಡಿ ಹೋದ್ರೂ ಪತ್ನಿಯನ್ನು ಆಕೆ ಪತಿ ಕ್ಷಮಿಸಿದ್ದಾನೆ. ಪೊಲೀಸ್ ಜೊತೆ ಮಾತನಾಡುವ ಆತ, ಪತ್ನಿಯನ್ನು ವಾಪಸ್ ಮನೆಗೆ ಕರೆದುಕೊಂಡು ಹೋಗೋದಾಗಿ ಹೇಳಿದ್ದಾನೆ. ಆಕೆಗೆ ತೊಂದ್ರೆ ಕೊಡ್ಬಾರದು, ಹೊಡೆಯಬಾರದು ಅಂತ ಪೊಲೀಸರು ಎಚ್ಚರಿಕೆ ನೀಡ್ತಾರೆ. ಇದೆಲ್ಲವನ್ನೂ ಒಪ್ಪಿಕೊಳ್ಳುವ ಪತಿ, ಆಕೆಗೆ ಯಾವುದೇ ತೊಂದರೆ ನೀಡೋದಿಲ್ಲ ಎನ್ನುತ್ತಾನೆ. ಆಕೆಯನ್ನು ಸ್ವೀಕರಿಸಲು ಸಿದ್ಧವಿದ್ದು, ವಾಪಸ್ ಕಳುಹಿಸುವುದಿಲ್ಲ ಎನ್ನುತ್ತಾನೆ. ಎಲ್ಲರೂ ಅಳ್ತಿದ್ದಾರೆ, ನಿನಗೆ ಬೇಸರವಿಲ್ವಾ, ನೋವಾಗ್ತಿಲ್ವ ಎಂಬ ಪ್ರಶ್ನೆಗೆ ನೋವಾಗ್ತಿದೆ ಎನ್ನುವ ಪತಿಯ ಸ್ವಭಾವ ಜನರಿಗೆ ಇಷ್ಟವಾಗಿದೆ. ಆದರೆ ಪತ್ನಿ ಮಾತ್ರ ಪತಿ ಜೊತೆ ಹೋಗಲೂ ಸಿದ್ಧವಿಲ್ಲ. ನಾನು ಆತನ ಜೊತೆ ಹೋಗಲ್ಲ ಎನ್ನುತ್ತಿದ್ದು, ಮತ್ತೆಲ್ಲಿಗೆ ಹೋಗ್ತೀಯಾ ಎಂದು ಪೊಲೀಸರು ಆಕೆಯನ್ನು ಕೇಳಿದ್ದಾರೆ. 

ಮಕ್ಕಳಿಗೆ 5 ವರ್ಷ ತುಂಬುವುದರೊಳಗೆ ಈ ಬದುಕಿನ ಪಾಠ ಕಲಿಸೋದ ಮರೀಬೇಡಿ!

ಇನ್ಸ್ಟಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಜನರು ಕಮೆಂಟ್ ಮಾಡ್ತಿದ್ದಾರೆ. ಕೆಲ ಪುರುಷರು ಆರಂಭದಲ್ಲಿ ಕ್ಷಮಿಸಿರೋದಾಗಿ ಹೇಳ್ತಾರೆ. ಆದ್ರೆ ನಂತ್ರ ಟಾರ್ಚಟ್ ನೀಡಲು ಶುರು ಮಾಡ್ತಾರೆ. ತಮ್ಮ ಇಮೇಜ್ ಉಳಿಸಿಕೊಳ್ಳಲು, ಅತ್ಯುತ್ತಮ ಮನುಷ್ಯ ಎನ್ನಿಸಿಕೊಳ್ಳಲು ಪತಿ ಈಗ ತಲೆಯಾಡಿಸ್ತಿದ್ದಾನೆಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಇದು ಟ್ರೈ ಆಂಗಲ್ ಲವ್ ಸ್ಟೋರಿ ಅಂತ ಒಬ್ಬರು ಹೇಳಿದ್ರೆ, ಮತ್ತೆ ಕೆಲವರು ಪತಿಯ ಕೆಲಸವನ್ನು ಮೆಚ್ಚಿದ್ದಾರೆ. ಇನ್ನು ಕೆಲವರು ಒಮ್ಮೆ ಓಡಿ ಹೋದವಳು ಇನ್ನೊಮ್ಮೆ ಅದೇ ಕೆಲಸ ಮಾಡಲ್ಲ ಎಂಬ ಗ್ಯಾರಂಟಿ ಏನಿದೆ ಎಂದು ಪ್ರಶ್ನೆ ಕೇಳಿದ್ದಾರೆ.

click me!