ಮತ್ತೆ ಸೊಸೆ ಹೆಗಲ ಮೇಲೆ ಕೈ ಹಾಕಿದ ಮುಖೇಶ್ ಅಂಬಾನಿ, ಸಮ್ ಥಿಂಗ್ ರಾಂಗ್ ಎನ್ನುತ್ತಿದ್ದಾರೆ ನೆಟ್ಟಿಗರು

By Roopa Hegde  |  First Published Oct 17, 2024, 5:38 PM IST

ಮುಖೇಶ್ ಅಂಬಾನಿ ಹಾಗೂ ರಾಧಿಕಾ ಮತ್ತೆ ಟ್ರೋಲ್ ಆಗಿದ್ದಾರೆ. ಸೊಸೆ ಹೆಗಲ ಮೇಲೆ ಕೈ ಹಾಕಿರುವ ಭಾರತದ ಶ್ರೀಮಂತ ಉದ್ಯಮಿ ನೋಡಿ ನೆಟ್ಟಿಗರು ಸಿಟ್ಟಾಗಿದ್ದಾರೆ. ಇದ್ಯಾಕೆ ಹೀಗೆ ಅಂತ ಪ್ರಶ್ನೆ ಕೇಳ್ತಿದ್ದಾರೆ.
 


ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ (richest businessman Mukesh Ambani), ಸೊಸೆ ರಾಧಿಕಾ ಅಂಬಾನಿ (Radhika Ambani ) ವಿಷ್ಯಕ್ಕೆ ಟ್ರೋಲ್ ಆಗ್ತಾನೆ ಇದ್ದಾರೆ. ಮುಖೇಶ್ ಅಂಬಾನಿ ಹಾಗೂ ರಾಧಿಕಾ ಮಧ್ಯೆ ಇರುವ ಬಾಂಡಿಂಗ್ ಯಾಕೋ ಅತೀ ಎನ್ನಿಸುತ್ತಿದೆ ನೋಡುಗರಿಗೆ. ಮುಖೇಶ್ ಹಾಗೂ ರಾಧಿಕಾ ಜೊತೆಗಿರುವ ವಿಡಿಯೋ ಒಂದು ವೈರಲ್ ಆಗಿದೆ. ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಆಗಿರುವ ವಿಡಿಯೋ ನೋಡಿದ ನೆಟ್ಟಿಗರು, ಸಮ್ ಥಿಂಗ್ ರಾಂಗ್ ಎನ್ನುತ್ತಿದ್ದಾರೆ.

radhika_ambani_official ಇನ್ಸ್ಟಾ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ರಾಧಿಕಾ ತುಂಬಾ ಸುಂದರವಾಗಿ ಕಾಣ್ತಿದ್ದಾರೆ ಎನ್ನುವ ಶೀರ್ಷಿಕೆಯನ್ನು ವಿಡಿಯೋಕ್ಕೆ ಹಾಕಲಾಗಿದೆ. ಈ ವಿಡಿಯೋದಲ್ಲಿ ಮುಖೇಶ್ ಅಂಬಾನಿ, ಅನಂತ್ ಅಂಬಾನಿ (Anant Ambani) ಹಾಗೂ ರಾಧಿಕಾ ಕಾಣಿಸಿಕೊಂಡಿದ್ದಾರೆ. ಎಲ್ಲರೂ ಕಪ್ಪು ಬಣ್ಣದ ಡ್ರೆಸ್ ನಲ್ಲಿ ಮಿಂಚುತ್ತಿದ್ದಾರೆ. ರಾಧಿಕಾ ಕಪ್ಪು ಬಣ್ಣದ ಫ್ರಾಕ್ ಧರಿಸಿದ್ದು, ಚಿಕ್ಕ ಹುಡುಗಿಯಂತೆ ಕಾಣ್ತಿದ್ದಾರೆ. ಆದ್ರೆ ಪಾಪರಾಜಿಗಳಿಗೆ ಫೋಸ್ ನೀಡುವ ವೇಳೆ ಮತ್ತೆ ಮುಖೇಶ್ ಅಂಬಾನಿ, ಸೊಸೆ ರಾಧಿಕಾ ಹೆಗಲ ಮೇಲೆ ಕೈ ಹಾಕಿದ್ದಾರೆ. ಮುಖೇಶ್ ಅಂಬಾನಿ ರಾಧಿಕಾ ಹೆಗಲ ಮೇಲೆ ಕೈ ಹಾಕಿ ಫೋಟೋಕ್ಕೆ ಫೋಸ್ ನೀಡ್ತಿರುವ ವೇಳೆ ಅನಂತ್ ಅಂಬಾನಿ ಪಕ್ಕದಲ್ಲಿ ನಿಂತಿದ್ದರು. ಫೋಟೋ ಮುಗಿಸಿ ಮುಂದೆ ಸಾಗುವ ವೇಳೆಯೂ ಮುಖೇಶ್ ಸೊಸೆ ಹೆಗಲ ಮೇಲೆ ಕೈಹಾಕಿಯೇ ಹೋಗ್ತಾರೆ. ಅನಂತ್ ಹಿಂದಿನಿಂದ ಅವರನ್ನು ಫಾಲೋ ಮಾಡ್ತಿದ್ದಾರೆ.

Tap to resize

Latest Videos

undefined

ಗಂಡ, ಮೂರು ಮಕ್ಕಳನ್ನು ಬಿಟ್ಟು ಹೋದವಳಿಗೆ ಕೈ ಕೊಟ್ಟ ಪ್ರೇಮಿ, ಮರಳಿ ಬಂದಾಗ ಪತಿ ರಿಯಾಕ್ಷನ್

ಈ ವಿಡಿಯೋ, ನೆಟ್ಟಿಗರಿಗೆ ಇಷ್ಟವಾಗಿಲ್ಲ. ಮುಖೇಶ್ ಅಂಬಾನಿ ವರ್ತನೆ ಅತಿಯಾಯ್ತು ಎನ್ನತ್ತಿದ್ದಾರೆ. ಸೊಸೆಯನ್ನು ಅವರು ಹೀಗೆಲ್ಲ ಟಚ್ ಮಾಡ್ಬಾರದು ಅಂತ ಒಬ್ಬರು ಹೇಳಿದ್ರೆ, ರಾಧಿಕಾ ಯಾರನ್ನು ಮದುವೆಯಾಗಿದ್ದು ಎಂಬ ಪ್ರಶ್ನೆಯನ್ನೂ ನೆಟ್ಟಿಗರು ಕೇಳಿದ್ದಾರೆ. ಅನಂತ್ ಅಂಬಾನಿ ಪಕ್ಕದಲ್ಲೇ ಇದ್ದು, ಅವರು ರಾಧಿಕಾ ಕೇರ್ ಮಾಡ್ಬೇಕೆ ವಿನಃ ಮುಖೇಶ್ ಅಲ್ಲ. ಲಾಲ್ ಬಾಗ್ ನಲ್ಲಿ ಕೂಡ ಮುಖೇಶ್, ಬಲವಂತವಾಗಿ ರಾಧಿಕಾ ಅವರನ್ನು ಎಳೆದುಕೊಂಡಿದ್ರು. ಇಲ್ಲೂ ಅದೇ ಕೆಲಸ ಮಾಡ್ತಿದ್ದಾರೆ. ಮಕ್ಕಳು, ಸೊಸೆಯಂದಿರ ವಯಸ್ಸಿಗೆ ಆದ್ಯತೆ ನೀಡ್ಬೇಕು ಎಂಬುದು ನೆಟ್ಟಿಗರ ಮಾತು. 

ಅನೇಕರು ಮುಖೇಶ್ ಹಾಗೂ ರಾಧಿಕಾ ಪರ ಮಾತನಾಡಿದ್ದಾರೆ.  ಭಾರತದಲ್ಲಿ ಮಾವ – ಸೊಸೆಯನ್ನು ತಂದೆ – ಮಗಳಿಗೆ ಹೋಲಿಕೆ ಮಾಡಲಾಗುತ್ತದೆ. ಇಬ್ಬರ ಮಧ್ಯೆ ಅಪ್ಪ – ಮಗಳ ಬಾಂಧವ್ಯ ಇರ್ಬೇಕೆಂದು ಎಲ್ಲರೂ ಬಯಸ್ತಾರೆ. ಇವರಿಬ್ಬರು ಹಾಗೆ ಇದ್ದಾರೆ. ಅದ್ರಲ್ಲಿ ತಪ್ಪೇನಿದೆ. ನೀವು ನೋಡುವ ದೃಷ್ಟಿ ಬದಲಿಸಿಕೊಳ್ಳಿ. ರಾಧಿಕಾಗೆ ಇದ್ರಿಂದ ತೊಂದ್ರೆ ಇಲ್ಲ ಅಂದ್ಮೇಲೆ ನಿಮಗೇನು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. 

ಸಲ್ಮಾನ್ ಖಾನ್ ಕ್ರೂರ ಹಂದಿ ಎಂದಿದ್ದ ಮಾಜಿ ಲವರ್​ ಸೋಮಿಯಿಂದ ಲಾರೆನ್ಸ್​ ಬಿಷ್ಣೋಯಿಗೆ ಶಾಕಿಂಗ್ ಪತ್ರ! ಏನಿದೆ ಇದರಲ್ಲಿ?

ಈ ಹಿಂದೆಯೂ ರಾಧಿಕಾ ಹಾಗೂ ಮುಖೇಶ್ ಅಂಬಾನಿ ಆಪ್ತವಾಗಿರುವ ವಿಡಿಯೋಗಳು ವೈರಲ್ ಆಗಿವೆ. ಗಣಪತಿ ದರ್ಶನದ ವೇಳೆ ಲಾಲ್ ಬಾಗ್ ನಲ್ಲಿ ಮುಖೇಶ್ ಅಂಬಾನಿ, ರಾಧಿಕಾ ಸೊಂಟ ಹಿಡಿದು ತಮ್ಮತ್ತ ಎಳೆದುಕೊಂಡಿದ್ದು ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು. ನೂಕುನುಗ್ಗಲಿದ್ದ ಕಾರಣ, ಮುಖೇಶ್ ಅಂಬಾನಿ, ರಾಧಿಕಾ ರಕ್ಷಣೆಗೆ ಮುಂದಾಗಿದ್ದರು. ಆದ್ರೆ ಆಗ್ಲೂ ಟ್ರೋಲ್ ಆಗಿದ್ದರು ಮುಖೇಶ್. ಮದುವೆ ಸಮಯದಲ್ಲೂ ಅನಂತ್ ಜೊತೆ ನಿಂತಿದ್ದ ರಾಧಿಕಾ ಹೆಗಲ ಮೇಲೆ ಕೈ ಹಾಕಲು ಮುಖೇಶ್ ಮುಂದಾಗಿದ್ದರು. ಕೈ ಕೆಳಗಿಳಿಸಿ, ಮಾವನ ಕಿವಿಯಲ್ಲಿ ಏನೋ ಹೇಳಿದ್ದರು ರಾಧಿಕಾ. ನಂತ್ರ ಸುಮ್ಮನೆ ನಿಂತಿದ್ದ ಮುಖೇಶ್ ಅಂಬಾನಿ ನೋಡಿ, ಜನರು, ಅಲ್ಲೇನಾಗ್ತಿದೆ ಎಂದು ಪ್ರಶ್ನೆ ಮಾಡಿದ್ದರು. ಈ ಎರಡು ವಿಡಿಯೋ ವೈರಲ್ ಆದ ಬೆನ್ನಲ್ಲೆ ಈಗ ಮತ್ತೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. 

click me!