ಕಚೇರಿಯಲ್ಲೋ ಮತ್ತೆಲ್ಲೋ ವಿವಾಹಿತ ಪುರುಷನೊಬ್ಬ ನಿಮ್ಮ ಸ್ನೇಹ ಬಯಸಿ ಬಂದರೆ ಅದನ್ನು ಸ್ವೀಕರಿಸುವುದು ನಿಮಗೆ ಕಷ್ಟಸಾಧ್ಯವಾಗುತ್ತದೆ. ಅಂತಹ ಸಮಯದಲ್ಲಿ ಅವರನ್ನು ದೂರವಿಡುವುದು ಅವಶ್ಯ. ನಿಮ್ಮ ಪಾಡಿಗೆ ನೀವು ಸುಮ್ಮನಿದ್ದರೂ ಬೇರೊಂದು ರೀತಿಯಲ್ಲಿ ಸಮಸ್ಯೆ ಉಂಟಾಗಬಹುದು. ಹೀಗಾಗಿ, ಕೆಲವು ನಿಲುವು ತೆಗೆದುಕೊಂಡು ಪರಿಸ್ಥಿತಿ ಎದುರಿಸಿ.
ಹೆಂಡತಿಯ ಬಗ್ಗೆ ದೂರುಗಳ ಸುರಿಮಳೆಯನ್ನೇ ಸುರಿಸುತ್ತ, ಸಹೋದ್ಯೋಗಿ ಮಹಿಳೆಯರ ಅನುಕಂಪ ಗಿಟ್ಟಿಸುತ್ತ, ಎಷ್ಟೇ ಕಷ್ಟವಿದ್ದರೂ ನಗುನಗುತ್ತಿರುವ ಅನೇಕ ಪುರುಷರನ್ನು ಕಚೇರಿಗಳಲ್ಲಿ ಕಾಣಬಹುದು. ಸಹೋದ್ಯೋಗಿ ಮಹಿಳೆಯರಲ್ಲಿ “ಅಯ್ಯೋ ಪಾಪ’ ಎನ್ನುವ ಭಾವನೆ ಬರುವಂತೆ ವರ್ತಿಸಿ, ಅವರ ಸ್ನೇಹಕ್ಕೆ ಮುಂದಾಗುವ ಪುರುಷರು ಸಾಮಾನ್ಯವಾಗಿ ಎಲ್ಲೆಡೆ ಕಾಣಸಿಗುತ್ತಾರೆ. ಅಧ್ಯಯನಗಳ ಪ್ರಕಾರ, ನಮ್ಮ ದೇಶದಲ್ಲಿ ಕಚೇರಿಗಳಲ್ಲಿ ವಿವಾಹೇತರ ಸಂಬಂಧಗಳು ಹೆಚ್ಚಂತೆ. ಮಹಿಳೆಯರಿರಲಿ, ಪುರುಷರಿರಲಿ, ದಿನವೂ ಒಬ್ಬರಿಗೊಬ್ಬರು ಸಂಪರ್ಕಕ್ಕೆ ಬರುವಾಗ ಒಂದಿಷ್ಟು ಆಕರ್ಷಣೆ ಮೂಡಬಹುದು. ಆದರೆ, ಮದುವೆಯಾದ ಪುರುಷರ ಸ್ನೇಹ ಮಾಡುವ ಬಹಳಷ್ಟು ಮಹಿಳೆಯರಿಗೆ ಮುಂದಿನ ಪರಿಣಾಮಗಳ ಅರಿವು ಇರಲಿಕ್ಕಿಲ್ಲ. ಅದು ಕೆಲವೊಮ್ಮೆ ವಿಕೋಪಕ್ಕೆ ಹೋಗಿ ಜೀವನದ ಹಲವು ತಿರುವುಗಳಿಗೆ ಕಾರಣವಾಗಬಹುದು. ಹೀಗಾಗಿ, ಮಹಿಳೆಯರು ಅದರಲ್ಲೂ ವಿವಾಹವಾಗದ ಯುವತಿಯರು ವಿವಾಹಿತ ಪುರುಷರ ಸ್ನೇಹಕ್ಕೆ ಬೀಳದಿರುವುದು ಅಗತ್ಯ. ಒಂದೊಮ್ಮೆ ಅವರು ನಿಮ್ಮ ಬಗ್ಗೆ ಆಸಕ್ತಿ ತೋರಿದರೂ ಅದನ್ನು ಎದುರಿಸುವ ಛಾತಿ ಬೆಳೆಸಿಕೊಳ್ಳಬೇಕು. ನಿಮಗೂ ಅವರ ಬಗ್ಗೆ ಆಕರ್ಷಣೆ ಉಂಟಾಗದಂತೆ ನೋಡಿಕೊಳ್ಳಬೇಕು. ಏಕೆಂದರೆ, ವಾಸ್ತವದ ನೆಲೆಗಟ್ಟಿನಲ್ಲಿ ಯೋಚಿಸುವುದು ಮುಖ್ಯ. ಹೀಗಾಗಿ, ವಿವಾಹಿತ ಪುರುಷನೊಬ್ಬ ನಿಮ್ಮ ಸನಿಹಕ್ಕೆ ಬರಲು ಯತ್ನಿಸಿದರೆ ಆತನನ್ನು ದೂರವಿಡಲು ಕೆಲವು ಮಾರ್ಗಗಳನ್ನು ಅನುಸರಿಸಬಹುದು.
• ನಿರ್ಲಕ್ಷಿಸಿ (Ignore)
ಕೆಲಸ ಮಾಡುವ ಸ್ಥಳಗಳಲ್ಲಿ (Work Place) ಮಹಿಳೆಯರು (Women) ಎದುರಿಸುವ ಅತಿ ಸಾಮಾನ್ಯ ಸಮಸ್ಯೆ ಎಂದರೆ ಅನಗತ್ಯವಾಗಿ ಯಾರಾದರೂ ಅವರನ್ನು ಗಮನಿಸುವುದು (Observing). ಇದು ಸಾಕಷ್ಟು ಇರಿಸುಮುರಿಸು ಉಂಟುಮಾಡಿದರೂ ಯಾರೊಂದಿಗೂ ಹೇಳಿಕೊಳ್ಳಲಾರದೆ ಒತ್ತಡ (Stress) ಅನುಭವಿಸುತ್ತಾರೆ. ಮದುವೆಯಾದ ಪುರುಷನೊಬ್ಬ (Married Man) ಆಸಕ್ತಿ ತೋರುತ್ತಿದ್ದಾನೆ ಎಂದರೆ ಅದರ ಹಿಂದೆ ಲೈಂಗಿಕ (Sexual) ಅಪೇಕ್ಷೆಯಲ್ಲದೆ ಇನ್ನೇನೂ ಇರುವ ಸಾಧ್ಯತೆ ಕಡಿಮೆ. ಹೀಗಾಗಿ, ಅವರನ್ನು ನಿರ್ಲಕ್ಷಿಸಿಬಿಡಿ. ನಿಮ್ಮೊಂದಿಗೆ ಫ್ಲರ್ಟ್ (Flirt) ಮಾಡಲು ಮುಂದಾದರೆ ನೇರವಾಗಿ ತಿರುಗೇಟು ನೀಡಿ. ಆತ ವುಮನೈಸರ್ (Womaniser) ಆಗಿದ್ದರೆ ನಿಮ್ಮ ಪ್ರತಿಕ್ರಿಯೆ ನೋಡಿ ಹೆಚ್ಚು ಕಾಲ ಯತ್ನಿಸುವುದಿಲ್ಲ. “ನೀವು ವಿವಾಹಿತರು, ಹೀಗೆಲ್ಲ ವರ್ತಿಸಬೇಡಿ’ ಎಂದು ನೇರವಾಗಿ ಹೇಳಿಬಿಡಿ.
Arranged Marriage ಆಗ್ತಿದ್ದೀರಾ? ಹಾಗಿದ್ರೆ ಇದನ್ನ ನೀವು ಓದ್ಲೇಬೇಕು…
• ನಡೆನುಡಿಯಲ್ಲಿ ಸ್ಪಷ್ಟತೆ (Clarity)
ಒಂದೊಮ್ಮೆ ಆತ ಫ್ಲರ್ಟ್ ಮಾಡದೆ, ವುಮನೈಸರ್ ಕೂಡ ಅಲ್ಲದೆ ಇದ್ದಾಗ ಭಾವನಾತ್ಮಕವಾಗಿ (Emotional) ನಿಮ್ಮನ್ನು ಸೆಳೆಯಲು ನೋಡಬಹುದು. ಆಗ ನಿಮ್ಮ ನಡೆನುಡಿಯಲ್ಲಿ ಸ್ಪಷ್ಟತೆ ಇರುವುದು ಅಗತ್ಯ. ಸ್ಪಷ್ಟತೆ ಇಲ್ಲದಿದ್ದರೆ ಆತ ನಿಮ್ಮ ನಡೆನುಡಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ ಇರುತ್ತದೆ.
• ಸ್ಥಿರತೆ (Consistent) ಇರಲಿ
ಕೆಲವೊಮ್ಮೆ ನೀವು ನೇರವಾಗಿ “ನೋ’ ಎಂದು ಹೇಳಿದಾಗ ಅವರು ತೀವ್ರವಾದ ನಿರಾಶೆಗೆ ಬೀಳಬಹುದು. ಆಗ ನಿಮಗೇ ಅಪರಾಧಿ (Guilty) ಮನೋಭಾವ ಕಾಡಬಹುದು. ಆದರೆ, ನೀವು ಅಪರಾಧಿ ಅಲ್ಲ ಎನ್ನುವ ಸ್ಥಿರವಾದ ಚಿತ್ತ ನಿಮಗಿರಲಿ. ಅಪರಾಧಿ ಮನೋಭಾವ ಕಾಡಿದಾಗ ಅವರ ಬಗ್ಗೆ ನೀವು ಮೆತ್ತಗಾಗುವ (Nice) ಸಾಧ್ಯತೆ ಹೆಚ್ಚು ಹಾಗೂ ಅವರನ್ನು ಸ್ವಲ್ಪ ಓಲೈಸಲು ಆರಂಭಿಸಬಹುದು. ಒಂದೊಮ್ಮೆ ನೀವು ಅವರು ಸ್ನೇಹಿತರಾಗಿದ್ದು, ಈ ಹಿಂದೆ ಅವರೊಂದಿಗೆ ಚೂರುಪಾರು ಫ್ಲರ್ಟ್ ಮಾಡಿದ್ದರೂ ಈಗ ಅದನ್ನು ನೆನಪಿಸಿಕೊಂಡು ಹಿಂಜರಿಯಬೇಕಿಲ್ಲ. ಸಂಬಂಧ (Relation) ಮುಂದುವರಿಸುವುದಕ್ಕಿಂತ ಈ ಸಮಯದಲ್ಲಿ ನೋವಾದರೂ ಪರವಾಗಿಲ್ಲ.
Relationship Tips: ಹುಡುಗಿ ಸದ್ದಿಲ್ಲದೆ ಕೈ ಕೊಟ್ ಬಿಟ್ಳಾ? ಕಾರಣ ಏನಿರ್ಬೋದು?
• ಅವರ ಬಗ್ಗೆ ಹೆಚ್ಚು ಯೋಚನೆ ಬೇಡ (Do’nt Worry about Him)
ನಿಮಗೆ ಅವರಿಗಾಗುವ ನೋವಿನ ಬಗ್ಗೆ ಹೆಚ್ಚು ಚಿಂತೆ ಬೇಕಾಗಿಲ್ಲ. ಏಕೆಂದರೆ, ನೀವು ಮೊದಲಿನಿಂದಲೂ ಅವರಿಗೆ ನಿಮ್ಮ ನಿಲುವನ್ನು ಹೇಳುತ್ತಲೇ ಬಂದಿದ್ದೀರಿ. ಅದನ್ನು ಅರ್ಥ ಮಾಡಿಕೊಳ್ಳದೆ ಈಗ ನೋವು ಅನುಭವಿಸಿದರೆ ಅದಕ್ಕೂ ನಿಮಗೂ ಸಂಬಂಧವಿಲ್ಲ ಎನ್ನುವಂತೆ ಇದ್ದುಬಿಡಿ. ಅವರಿಗೆ ತಿಳಿಹೇಳುವ ಯತ್ನ ಮಾಡಬಹುದು. ಆದರೆ ಅದೂ ಸಹ ಮಿತಿಯಲ್ಲಿರಲಿ. ನಿಮ್ಮ ಭವಿಷ್ಯ (Future) ನಿಮಗೆ ಮುಖ್ಯ. ನಿಮ್ಮ ನಿಲುವಿನ ಕುರಿತು ಅತಿಯಾಗಿ ವಿವರಣೆ ನೀಡುವ ಅಗತ್ಯವೂ ಇಲ್ಲ. ಇನ್ನೂ ಅಗತ್ಯವಿದ್ದರೆ, ಮತ್ತೊಬ್ಬರ ಸಹಾಯ (Help) ಪಡೆದುಕೊಳ್ಳಿ.