ಇದೆಂಥಾ ವಿಚಿತ್ರ ಸಂಪ್ರದಾಯ..ವರನ ಬಾಯಿಗೆ ಸಿಗರೇಟ್​ ಇಟ್ಟು ಸ್ವಾಗತಿಸಿದ ಅತ್ತೆ!

Published : Feb 16, 2023, 03:26 PM IST
ಇದೆಂಥಾ ವಿಚಿತ್ರ ಸಂಪ್ರದಾಯ..ವರನ ಬಾಯಿಗೆ ಸಿಗರೇಟ್​ ಇಟ್ಟು ಸ್ವಾಗತಿಸಿದ ಅತ್ತೆ!

ಸಾರಾಂಶ

ಭಾರತದ ಮದುವೆ ಸಂಪ್ರದಾಯಗಳು ಜಗತ್ತಿನಾದ್ಯಂತ ಫೇಮಸ್ ಆಗಿವೆ. ಇಲ್ಲಿನ ಆಚಾರ-ವಿಚಾರ, ಸಂಪ್ರದಾಯಗಳನ್ನು ವಿದೇಶಿಗರು ಸಹ ಇಷ್ಟಪಡುತ್ತಾರೆ. ಆದ್ರೆ  ಗುಜರಾತ್‌ನಲ್ಲಿ ಅತ್ತೆ , ವರನ ಬಾಯಿಗೆ ಸಿಗರೇಟ್​ ಇಟ್ಟು ಸ್ವಾಗತಿಸಿದ್ದು, ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

ನವದೆಹಲಿ: ಭಾರತ ದೇಶ, ವಿಶಿಷ್ಟವಾದ ಸಂಸ್ಕೃತಿ ಮತ್ತು ಸಂಪ್ರದಾಯಗಳ ತವರೂರು. ದೇಶದ ನಾನಾ ಜಿಲ್ಲೆಗಳಲ್ಲಿ ಭಿನ್ನ-ವಿಭಿನ್ನ ಸಂಪ್ರದಾಯ, ಆಚರಣೆಗಳಿವೆ. ಭಾಷೆ, ಉಡುಗೆ-ತೊಡುಗೆ, ಹಬ್ಬ-ಹರಿದಿನ, ಸಂಪ್ರದಾಯ-ಸಂಸ್ಕೃತಿ ಎಲ್ಲವೂ ವಿಭಿನ್ನವಾಗಿದೆ. ವೈವಿಧ್ಯತೆಯಿದ್ದರೂ ವಿಶಿಷ್ಟವಾಗಿದೆ. ಇಲ್ಲಿನ ಆಚರಣೆಗಳು, ಸಂಪ್ರದಾಯಗಳನ್ನು ವಿದೇಶಿಗರು ಸಹ ಇಷ್ಟಪಡುತ್ತಾರೆ. ಅದರಲ್ಲೂ ಮದುವೆ ಅಂತಾ ಬಂದಾಗ ಭಾರತದ ಸಂಪ್ರದಾಯಗಳು ವಿದೇಶಿಗರಿಗೆ ಅತಂತ್ಯ ಪ್ರಿಯವಾಗುತ್ತದೆ. ಮಂಟಪ, ಮಹೂರ್ತ, ಧಾರೆ, ತಾಳಿ ಕಟ್ಟುವುದು, ಸಪ್ತಪದಿ ಮೊದಲಾದ ಆಚರಣೆಗಳ ಬಗ್ಗೆ ಫಾರಿನರ್ಸ್‌ ಅಚ್ಚರಿ ವ್ಯಕ್ತಪಡಿಸುತ್ತಾರೆ. ಭಾರತದ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪ್ರೀತಿಸುತ್ತಾರೆ.

ವರನನ್ನು ಸಿಗರೇಟ್ ಮತ್ತು ಪಾನ್‌ನೊಂದಿಗೆ ಸ್ವಾಗತಿಸುವ ಅತ್ತೆ
ಆದರೆ ಭಾರತದಲ್ಲೂ ಮದುವೆ (Marriage) ನಡೆಸುವುದರಲ್ಲಿ ಒಂದೊಂದು ಕಡೆಯಲ್ಲೂ ಒಂದೊಂದು ರೀತಿಯ ಆಚರಣೆ ಇರುತ್ತದೆ. ಕೆಲವೊಂದು ಸರಳ ಎನಿಸಿದರೆ, ಇನ್ನೊಂದಿಷ್ಟು ವಿಚಿತ್ರ ಎನಿಸದೇ ಇರದು. ಗುಜರಾತ್‌ನಲ್ಲಿ ನಡೆಯುವ ಇಂಥಹದ್ದೊಂದು ಮದುವೆ ಸಂಸ್ಕೃತಿ ಭಾರತೀಯ ಸಂಪ್ರದಾಯಕ್ಕೆ (Indian tradition) ಕಪ್ಪು ಚುಕ್ಕೆಯಂತಿದೆ. ಗುಜರಾತ್‌ನಲ್ಲಿ ನಡೆಯುವ ಮದುವೆ ಸಂಪ್ರದಾಯದಲ್ಲಿ ವರನನ್ನು (Groom) ಅತ್ತೆ ಸಿಗರೇಟ್ ಮತ್ತು ಪಾನ್‌ನೊಂದಿಗೆ ಸ್ವಾಗತಿಸುವುದನ್ನು ನೋಡಬಹುದು. ಈ ವೀಡಿಯೋ ಸದ್ಯ ಎಲ್ಲೆಡೆ ವೈರಲ್ ಆಗ್ತಿದೆ.

ಹೆಂಡ್ತಿ ಸ್ನೇಹಿತೆಯನ್ನೇ ಮದುವೆಯಾದ ಗಂಡ, ಇದು ಪತ್ನಿಯ ಮಹದಾಸೆಯಂತೆ !

ಮದ್ಯ ಸೇವನೆ, ಧೂಮಪಾನ ಚಟ ಇರುವ ಹುಡುಗನಿಗೆ ಹೆಣ್ಣನ್ನು ಕೊಡುವುದಿಲ್ಲ ಎಂದು ಹುಡುಗಿಯ ಮನೆಯವರು ಹೇಳೋದನ್ನು ಕೇಳಬಹುದು. . ಆದರೆ, ಇಲ್ಲಿ ಅತ್ತೆ-ಮಾವನೇ ವರನ ಬಾಯಿಗೆ ಸಿಗರೇಟ್​ ಇಟ್ಟು ಬೆಂಕಿ ಹಚ್ಚುವ ಮೂಲಕ ಅದ್ಧೂರಿ ಸ್ವಾಗತವನ್ನು ಕೋರಿದ್ದಾರೆ. ಅಲ್ಲದೆ, ಪಾನ್​ ಮಸಾಲವನ್ನೂ ನೀಡಿದ್ದಾರೆ. ಇನ್​ಸ್ಟಾಗ್ರಾಂ ಪೇಜ್​ ಒಂದರಲ್ಲಿ ವಿಡಿಯೋ ಶೇರ್​ ಮಾಡಲಾಗಿದೆ.

ಇನ್‌ಸ್ಟಾಗ್ರಾಂನಲ್ಲಿ ವೈರಲ್ ವೀಡಿಯೋ, ನೆಟ್ಟಿಗರಿಂದ ತರಾಟೆ
ವಿಡಿಯೋದಲ್ಲಿ ವರ ಸೋಫಾ ಮೇಲೆ ಕುಳಿತಿರುತ್ತಾನೆ. ಈ ವೇಳೆ ಅತ್ತೆ (Mother in law) ವರನ ಬಾಯಿಗೆ ಸಿಗರೇಟ್​​​ ಇಡುತ್ತಾರೆ. ಬಳಿಕ ಮಾವ ಬೆಂಕಿ ಕಡ್ಡಿಯಿಂದ ಸಿಗರೇಟ್​ ಹಚ್ಚತ್ತಾರೆ. ಆದರೆ, ವರ ಸಿಗರೇಟ್​ ಸೇದುವುದಿಲ್ಲ. ಬದಲಾಗಿ ಅದನ್ನು ವಾಪಸ್​ ತೆಗೆದು ಮಾವನ ಕೈಯಲ್ಲೇ ಕೊಡುತ್ತಾನೆ. ಬಳಿಕ ಸಂಪ್ರದಾಯದಂತೆ ವರನು ಇಬ್ಬರಿಗೂ ಸ್ವಲ್ಪ ಹಣವನ್ನು ಹಸ್ತಾಂತರಿಸುತ್ತಾನೆ. ಇದೀಗ ಈ ವೀಡಿಯೋ ವೈರಲ್ ಆಗಿದ್ದು, ಸಂಪ್ರದಾಯದ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಇಂತಹ ಸಂಪ್ರದಾಯ ಈ ಹಿಂದೆ ಚಾಲ್ತಿಯಲ್ಲಿತ್ತು ಎಂದು ಕೆಲವರು ವಾದಿಸಿದರೆ, ಇನ್ನು ಕೆಲವರು ಇಂತಹ ಆಚರಣೆ ಈ ಕೂಡಲೇ ನಿಲ್ಲಿಸಿ ಎಂದಿದ್ದಾರೆ. ಘಟನೆಯ ನಿಖರವಾದ ಸ್ಥಳವನ್ನು ತಕ್ಷಣವೇ ಕಂಡುಹಿಡಿಯಲು ಆಗದಿದ್ದರೂ, ಈ ಆಚರಣೆಯು ಗುಜರಾತ್‌ನಲ್ಲಿ ನಡೆದಿದೆ ಎಂದು ಹಲವರು ಸೂಚಿಸಿದ್ದಾರೆ.

ಇದೆಂಥಾ ವಿಚಿತ್ರ, ಈ ದೇಶದಲ್ಲಿ ಮಹಿಳೆಯರು ಗಂಡನನ್ನು ಎಕ್ಸ್‌ಚೇಂಜ್ ಮಾಡಿಕೊಳ್ಬೋದು!

ಒಬ್ಬ ಬಳಕೆದಾರರು, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡೀ ಆಗಲು ಹಿಂದೂ ಆಚರಣೆಗಳನ್ನು ಹಾಳು ಮಾಡಬೇಡಿ ಎಂದು ವಿನಂತಿ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, 'ಇದು ಸಂಪೂರ್ಣವಾಗಿ ಅಸಂಬದ್ಧ ವಿಷಯವಾಗಿದೆ. ಧೂಮಪಾನವು ಕ್ಯಾನ್ಸರ್‌ನ್ನು ಉಂಟುಮಾಡುತ್ತದೆ ಮತ್ತು ಸಾಮಾಜಿಕ ಮಾಧ್ಯಮದ (Social media)  ಗಮನಕ್ಕಾಗಿ ಅವರು ಇದನ್ನು ಮಾಡುತ್ತಿದ್ದಾರೆ' ಎಂದು ಟೀಕಿಸಿದ್ದಾರೆ. ಇನ್ನು ಕೆಲವರು ಈ ಸಂಪ್ರದಾಯವನ್ನು ಭಾರತದ ಇತರ ಭಾಗಗಳಲ್ಲಿಯೂ ಅನುಸರಿಸಲಾಗುತ್ತದೆ ಎಂದರು. 'ಇದು ಒಡಿಶಾದಲ್ಲಿನ ಹಳೆಯ ಸಂಪ್ರದಾಯ' ಎಂದು ಒಬ್ಬರು ಹೇಳಿದರೆ, ಮತ್ತೊಬ್ಬ ಬಳಕೆದಾರರು, 'ಬಿಹಾರದಲ್ಲಿ, ನಾವು ವರನ ಕುಟುಂಬ ಸದಸ್ಯರಿಗೆ ಪಾನ್, ಸಿಗರೇಟ್ ನೀಡುತ್ತೇವೆ' ಎಂದು ಬರೆದಿದ್ದಾರೆ.

ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ, 'ಇದು ದಕ್ಷಿಣ ಗುಜರಾತ್‌ನ ಕೆಲವು ಹಳ್ಳಿಗಳಲ್ಲಿ ಅನುಸರಿಸುತ್ತಿರುವ ಹಳೆಯ ಸಂಪ್ರದಾಯವಾಗಿದೆ. ಅವನು ಧೂಮಪಾನ ಮಾಡುವುದಿಲ್ಲ. ಬದಲಿಗೆ ಮನೋರಂಜನೆಗಾಗಿ ಬಾಯಿಗೆ ಸಿಗರೇಟ್ ಇಟ್ಟು ತೆಗೆಯುತ್ತಾರೆ. ಇದನ್ನು ವೀಡಿಯೋದಲ್ಲಿ ನೀವು ನೋಡಬಹುದು' ಎಂದಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?