ಶಿಕ್ಷಕಿ ತೂಕ ಹೆಚ್ಚೆಂದು ಮಗಳನ್ನು ಶಾಲೆಯಿಂದ ಬಿಡಿಸಿದ ಅಪ್ಪ! ಅದ್ಯಾಕೆ?

By Suvarna News  |  First Published Oct 27, 2023, 1:32 PM IST

ಶಾಲೆಯಲ್ಲಿ ವಿದ್ಯಾಭ್ಯಾಸ ಸರಿ ಇಲ್ಲ ಎಂದಾಗ ಪಾಲಕರು, ಮಕ್ಕಳ ಸ್ಕೂಲ್ ಬದಲಿಸುವ ಆಲೋಚನೆ ಮಾಡ್ತಾರೆ. ಆದ್ರೆ ಕೆಲವರ ಕಾರಣ ವಿಚಿತ್ರವಾಗಿರುತ್ತದೆ. ಈ ವ್ಯಕ್ತಿ ಮಗಳನ್ನು ಬಿಡಿಸಿದ ಕಾರಣ ಕೇಳಿ ನೆಟ್ಟಿಗರ ಕೋಪ ನೆತ್ತಿಗೇರಿದೆ.
 


ಮಕ್ಕಳನ್ನು ಸ್ಕೂಲ್ ಗೆ ಸೇರಿಸುವ ಮುನ್ನ ಪಾಲಕರು ಸಾಕಷ್ಟು ತನಿಖೆ ನಡೆಸ್ತಾರೆ. ಯಾವ ಸ್ಕೂಲ್ ಬೆಸ್ಟ್ ಇದೆ, ಯಾವ ಸ್ಕೂಲ್ ಹೆಸರು ಮಾಡಿದೆ, ಅದ್ರ ಶುಲ್ಕ ಎಷ್ಟು ಹೀಗೆ ಎಲ್ಲ ಮಾಹಿತಿ ಜಾಲಾಡಿ ಮಕ್ಕಳಿಗೆ ಯೋಗ್ಯವೆನಿಸಿದ ಶಾಲೆಗೆ ಹೆಸರು ನೋಂದಾಯಿಸುತ್ತಾರೆ. ಒಂದ್ವೇಳೆ ಇವರು ಅಂದುಕೊಂಡಂತೆ ಆ ಶಾಲೆ ಇಲ್ಲದೆ ಹೋದಲ್ಲಿ, ಅಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಕ್ತಿಲ್ಲ ಎಂದಾಗ ಒಂದು ಬೇರೆ ಶಾಲೆಗೆ ಮಕ್ಕಳನ್ನು ವರ್ಗಾಯಿಸುವ ಪ್ರಯತ್ನ ನಡೆಸ್ತಾರೆ. ಕೆಲವರು ಮಕ್ಕಳಿಗೆ ಪ್ರತ್ಯೇಕ ಟ್ಯೂಷನ್ ನೀಡಲು ಮುಂದಾಗ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ವಿಚಿತ್ರ ಕಾರಣ ಇಟ್ಟುಕೊಂಡು ಮಗಳನ್ನು ಶಾಲೆಯಿಂದ ಬಿಡಿಸಿದ್ದಾನೆ.

ಸೌಂದರ್ಯ (Beauty) ಎನ್ನುವುದು ಆಂತರಿಕವಾಗಿರಬೇಕೇ ವಿನಃ ಬಾಹ್ಯವಾಗಿರಬಾರದು. ಬಣ್ಣ, ತೂಕ, ಆಕಾರ ಎಲ್ಲವೂ ನಮ್ಮ ಕೈನಲ್ಲಿಲ್ಲ. ಹುಟ್ಟುವಾಗ್ಲೇ ಯಾರೂ ತಮ್ಮ ದೇಹದ ಆಕಾರ ಹೀಗಿರಬೇಕೆಂದು ಬಯಸಿ ಜನಿಸಿರೋದಿಲ್ಲ. ಅನೇಕ ಬಾರಿ ನಾವೆಷ್ಟು ಪ್ರಯತ್ನಿಸಿದ್ರೂ ನಮ್ಮಲ್ಲಿರುವ ಖಾಯಿಲೆ ಅಥವಾ ಬೇರೆ ಇನ್ನಾವುದೋ ಕಾರಣಕ್ಕೆ ನಮ್ಮ ತೂಕ ಹೆಚ್ಚಿರುತ್ತದೆ. ಪೊಲೀಸ್, ಮಿಲಿಟರಿ, ಸೆಕ್ಯೂರಿಟಿ ಗಾರ್ಡ್ (Security Gaurd) ಸೇರಿದಂತೆ ಕೆಲ ಉದ್ಯೋಗ ಪಡೆಯಲು ಫಿಟ್ನೆಸ್ (Fitness) ಅಗತ್ಯವಿರುತ್ತದೆ. ಹಾಗಂತ ಎಲ್ಲ ಕೆಲಸಕ್ಕೂ ಸುಂದರ ವ್ಯಕ್ತಿ, ಫಿಟ್ನೆಸ್ ಹೊಂದಿರುವ ವ್ಯಕ್ತಿ ಬೇಕು ಎನ್ನುವುದು ಮೂರ್ಖತನ. ಜನರ ತೂಕ, ಬಣ್ಣ ಮಕ್ಕಳನ್ನು ದಾರಿ ತಪ್ಪಿಸುವುದಿಲ್ಲ. ಮಕ್ಕಳನ್ನು ಅಡ್ಡದಾರಿಗೆ ಕರೆದೊಯ್ಯುವ ಮಾರ್ಗ ಸಾಕಷ್ಟಿದೆ. ಆದ್ರೆ ಈಗ ನಾವು ಹೇಳಲು ಹೊರಟಿರುವ ವ್ಯಕ್ತಿಗೆ ಮನುಷ್ಯದ ಬಾಹ್ಯ ಸೌಂದರ್ಯವೇ ಮುಖ್ಯವಾಗಿದೆ. ಮಗಳಿಗೆ ಕಲಿಸುವ ಟೀಚರ್ (Teacher) ಸುಂದರವಾಗಿಲ್ಲ, ಓವರ್ ತೂಕ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಮಗಳನ್ನು ಶಾಲೆಯಿಂದ ಬಿಡಿಸಿದ್ದಾನೆ. ಅಷ್ಟೇ ಅಲ್ಲ, ಈ ಬಗ್ಗೆ ಶಿಕ್ಷಕಿಗೆ ನೋವಾಗುವ ಮಾತನಾಡಿ ಬಂದಿದ್ದಾನೆ.

Latest Videos

undefined

ಮುಕೇಶ್ ಅಂಬಾನಿ ಮದುವೆಯಾಗಲು ನೀತಾ ಅಂಬಾನಿ ಒಪ್ಪಿಕೊಂಡಿದ್ದು ಇದೇ ಕಾರಣಕ್ಕಂತೆ!

ಪುಸ್ತಕ ಬರಹಗಾರ, ಸ್ಪೀಕರ್, ರಿಯಲ್ ಎಸ್ಟೇಟ್ ಗುರು ಮತ್ತು ಪ್ರಭಾವಿ ಕ್ರಿಸ್ ಕ್ರೋನ್ ಹೆಸರಿನ ವ್ಯಕ್ತಿ ಟಿಕ್‌ಟಾಕ್‌ನಲ್ಲಿ ಈ ವಿಷ್ಯವನ್ನು ಹೇಳಿದ್ದಾನೆ. ತನ್ನ ಮಗಳನ್ನು ಶಾಲೆಯಿಂದ ಬಿಡಿಸಲು ಶಿಕ್ಷಕಿ ತೂಕ ಕಾರಣ ಎಂದಿದ್ದಾನೆ. ಪೇರೆಂಟ್ – ಟೀಚರ್ ಮೀಟಿಂಗ್ ಗಾಗಿ ನಾನು ಗಳ ಶಾಲೆಗೆ ಹೋಗಿದ್ದೆ. ಮಗಳ ಶಿಕ್ಷಕಿ ಸುಮಾರು 90 ಕೆ.ಜಿ ತೂಕ ಹೊಂದಿದ್ದರು. ನೀವು ತುಂಬಾ ಕಡಿಮೆ ಶಕ್ತಿಯನ್ನು  ಹೊಂದಿದ್ದೀರಿ. ಖಿನ್ನತೆ ನಿಮ್ಮನ್ನು ಕಾಡುತ್ತಿದೆ. ನನ್ನ ಮಗುವಿನೊಂದಿಗೆ ನೀವು ಇಡೀ ದಿನವನ್ನು ಕಳೆಯುತ್ತೀರಿ, ನೀವು ಅವಳ ಮೇಲೆ ಎಷ್ಟು ಕೆಟ್ಟ ಪ್ರಭಾವ ಬೀರುತ್ತೀರಿ ಎಂದು ನಾನು ಶಿಕ್ಷಕಿಗೆ ಕೇಳಿದೆ ಎಂದು ಕ್ರಿಸ್ ಕ್ರೋನ್ ಹೇಳಿದ್ದಾನೆ. ಮಕ್ಕಳಿಗೆ ಶಿಕ್ಷಕರು ಬರೀ ಪುಸ್ತಕದಲ್ಲಿರುವ ವಿಷ್ಯ ಕಲಿಸುವುದಿಲ್ಲ. ಲೈಫ್‌ಸ್ಟೈಲ್ ಬಗ್ಗೆಯೂ ಕಲಿಸುತ್ತಾರೆ. ಆದ್ರೆ ನೀವು ಸ್ಪೂರ್ತಿದಾಯಕ ವ್ಯಕ್ತಿಯೇ ಅಲ್ಲ ಎಂದು ಕ್ರಿಸ್ ಕ್ರೋನ್, ಶಿಕ್ಷಕಿಗೆ ಹೇಳಿದ್ದಾನಂತೆ.

ಅನೈತಿಕ ಸಂಬಂಧದ ಕಾರಣ, ಕರ್ನಾಟಕದಲ್ಲಿ ಎಷ್ಟಿದೆ ಡಿವೋರ್ಸ್ ರೇಟ್?

ಅಷ್ಟೇ ಅಲ್ಲ, ಅನೇಕ ಶಿಕ್ಷಕರು ಮಕ್ಕಳಿಗೆ ಸ್ಪೂರ್ತಿ ನೀಡೋದಿಲ್ಲ. ಅವರಿಗೆ ಅವರ ಕೆಲಸ ಇಷ್ಟವಿರೋದಿಲ್ಲ. ಸುರಕ್ಷಿತ ಕೆಲಸ ಬೇಕು ಎನ್ನುವ ಕಾರಣಕ್ಕೆ ಅವರು ಶಿಕ್ಷಕ ಹುದ್ದೆ ಆಯ್ಕೆ ಮಾಡಿಕೊಂಡಿರುತ್ತಾರೆ. ನಿಮ್ಮ ಮಕ್ಕಳನ್ನು ನೀವು ಪಬ್ಲಿಕ್ ಸ್ಕೂಲ್ ನಲ್ಲಿ ಓದಿಸುತ್ತಿದ್ದರೆ ನಿಮಗೆ ಎಂಥ ಶಿಕ್ಷಕರು ಬೇಕು ಎಂದು ಕ್ರೋನ್ ಪ್ರಶ್ನೆ ಕೂಡ ಮಾಡಿದ್ದಾನೆ. ಕ್ರೋನ್ ಟಿಕ್ ಟಾಕ್ ವಿಡಿಯೋಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಶಿಕ್ಷಕಿಯನ್ನು ಅಪಮಾನ ಮಾಡಿದ್ದೀರಿ ಎಂದು ಒಬ್ಬರು ಹೇಳಿದ್ರೆ, ಶಿಕ್ಷಕಿ ತೂಕದಿಂದ ನಿಮಗೆ ಸಿಗೋದೇನಿದೆ ಎಂದು ಇನ್ನೊಬ್ಬರು ಕೇಳಿದ್ದಾರೆ. ನಿಮಗೆ ಪರ್ಫೆಕ್ಟ್ ಶಿಕ್ಷಕರು ಸಿಗಲು ಸಾಧ್ಯವೇ ಇಲ್ಲವೆಂದು ಇನ್ನೊಬ್ಬರು ಹೇಳಿದ್ದಾರೆ. 

click me!