Personality Tips: ಭಾರೀ ಬದಲಾವಣೆಗೆ ನಿಮ್ ಮನಸ್ಸು ಸಿದ್ಧವಾಗಿದ್ಯಾ? ಅದನ್ನ ಅರಿಯೋದು ಹೇಗೆ?

By Suvarna News  |  First Published Jul 17, 2023, 4:56 PM IST

ಕಾಡುವ ಅತೃಪ್ತಿ, ಬೇಸರ, ಚಡಪಡಿಕೆಗಳು ಕೆಲವೊಮ್ಮೆ ನಮ್ಮ ಅಂತಃಪ್ರಜ್ಞೆಯಿಂದಲೂ ಮೂಡಬಲ್ಲವು. ಅವು ಜೀವನದ ಮಹತ್ತರ ಬದಲಾವಣೆಗೂ ಕಾರಣವಾಗಬಲ್ಲವು. ಮನಸ್ಸು ಬದಲಾವಣೆಗೆ ಸಿದ್ಧವಾದಾಗ  ಹಲವು ಭಾವನೆಗಳು ನಮ್ಮನ್ನು ಕಾಡಬಲ್ಲವು. ಅವುಗಳನ್ನು ಉಪೇಕ್ಷಿಸಬಾರದು.
 


ಜೀವನದಲ್ಲಿ ಕೆಲವೊಮ್ಮೆ ತೀರ ಅಸಮಾಧಾನ, ಅತೃಪ್ತಿ ಕಾಡುತ್ತವೆ. ಒಂದಲ್ಲ ಒಂದು ಹಂತದಲ್ಲಿ ಬೋರೆನಿಸುತ್ತದೆ. ಇಲ್ಲಿಂದ ಎದ್ದು ಬೇರೆಡೆ ಎಲ್ಲಾದರೂ ಹೊರಟು ಹೋಗೋಣ ಎನಿಸುತ್ತದೆ. “ಎಷ್ಟು ಮಾಡಿದರೂ ಅಷ್ಟೆ, ಈ ಜೀವನ ಸಾಕು, ಬೇರೆ ರೀತಿಯಲ್ಲಿ ಬದುಕೋಣ’ ಎಂಬ ಚಡಪಡಿಕೆ ತೀವ್ರವಾಗುತ್ತದೆ. ಇಂತಹ ಭಾವನೆಗಳು ಎಲ್ಲರಿಗೂ ಸಹಜ. ಇದನ್ನು ಜೀವನದಲ್ಲಿ ಬದಲಾವಣೆ ಎದುರಾಗುವ ಸಮಯ ಎಂದು ಭಾವಿಸಬಹುದು. ಬದಲಾವಣೆಗೆ ಸಿದ್ಧವಾದ ಮನಸ್ಸು ಹಳೆಯದನ್ನು ದೂರ ಮಾಡಿಕೊಳ್ಳುತ್ತ ಸಾಗುತ್ತದೆ. ಆಗ ಹಾಲಿ ವೃತ್ತಿ ಬೇಸರವೆನಿಸುತ್ತದೆ. ಮಾಡುತ್ತಿರುವ ಕೆಲಸದಲ್ಲಿ ಆಸ್ಥೆ ಇರುವುದಿಲ್ಲ. ಇವುಗಳನ್ನು ನಾವ್ಯಾರೂ ಸುಮ್ಮನೆ ಎದುರಾಗುವ ಸಮಯ ಎಂದು ಭಾವಿಸುವಂತಿಲ್ಲ. ಏಕೆಂದರೆ, ಇವುಗಳೇ ಬದಲಾವಣೆಗೆ ಮುನ್ನುಡಿ ಬರೆಯುತ್ತವೆ. ವ್ಯಕ್ತಿಗತ ಬೆಳವಣಿಗೆಗೆ ಕಾರಣವಾಗುತ್ತವೆ.

ಕೆಲವೊಮ್ಮೆ ನಮ್ಮಿಂದ ಅಗಾಧ, ಊಹಿಸಲೂ ಆಗದ ಕೆಲಸವನ್ನು ಮಾಡಿಸುತ್ತವೆ. ಯಾವುದೋ ಒಂದು ಕ್ಷಣದ ನಿರ್ಧಾರದಿಂದ ಭವಿಷ್ಯವೇ ಬದಲಾಗಿ ಹೋಗುತ್ತದೆ. ಹೀಗೆ, ನಿಮ್ಮ ಮನಸ್ಸು ಬದಲಾವಣೆಗೆ ಸಿದ್ಧವಾಗಿದೆ ಅಥವಾ ಬದುಕು ಹೊಸತನ್ನು ಬೇಡುತ್ತಿದೆ ಎನ್ನುವುದನ್ನು ಹಲವು ಸಂದೇಶಗಳ ಮೂಲಕ ಅರಿತುಕೊಳ್ಳಬಹುದು. ಆಗ ನಿಂತ ನೀರಾಗದೇ ಹೊಸದರ ಕಡೆಗೆ ಸಾಗುವುದು ಜಾಣತನ.

Tap to resize

Latest Videos

•    ಅಂಟಿಕೊಂಡು (Stuck) ನಿಂತ ಹಾಗೆನಿಸ್ತಾ ಇದ್ಯಾ?
ಕನಸುಗಳು (Dreams) ಹಾಗೆಯೇ ಇರುತ್ತವೆ. ಅಂದುಕೊಂಡಿದ್ದು ಏನೂ ಆಗುವುದಿಲ್ಲ. ಮಾಡುವ ಕೆಲಸವೂ ಬೋರೆನಿಸುವಾಗ ಇದ್ದಲ್ಲೇ ಅಂಟಿಕೊಂಡು ನಿಂತ ಭಾವನೆ (Feel) ಮೂಡುತ್ತದೆ. ಬ್ಯುಸಿಯಾಗಿದ್ದರೂ ಕ್ರಿಯಾಶೀಲವಾಗಿ (Creative) ಏನನ್ನೂ ಮಾಡದ ಭಾವನೆ ಕಾಡುತ್ತದೆ. ಮನದಲ್ಲಿ ಹೊಸ ಹೊಸ ವಿಚಾರಗಳಿದ್ದರೂ ಕಾಲುಗಳು ಮಾತ್ರ ನೆಲದಲ್ಲಿ ಹುಗಿದಂತೆ ಅನಿಸುತ್ತವೆ. ದೈನಂದಿನ ಕೆಲಸಕಾರ್ಯಗಳಲ್ಲಿ ಮುಳುಗಿ ಹೋದಾಗ ಹೀಗಾಗುವುದು ಸಹಜ. 

ಲವ್‌ ಅಂದ್ರೆ ನಿಮ್ಗೆ ಇಷ್ಟಾನ, ಕಷ್ಟಾನ, ಭಯಾನ; ಫೋಟೋ ನೋಡಿ ನಿಮ್ ಮನಸ್ಥಿತಿ ತಿಳ್ಕೊಳ್ಳಿ

•    ಭಿನ್ನ ಬದುಕಿನ (Life) ಬಗ್ಗೆ ಹಗಲುಕನಸು (Day Dream)
ಮಾಡಲು ಬೇಕಾದಷ್ಟು ಕೆಲಸಗಳಿರುತ್ತವೆ, ಆದರೆ ನೀವು ಮಾತ್ರ ಎಲ್ಲೋ ಕಳೆದು ಹೋಗಿರುತ್ತೀರಿ. ಈಗ ಯಾವ ರೀತಿಯ ಜೀವನ ನಡೆಸುತ್ತಿದ್ದೀರೋ ಅದಕ್ಕೆ ಹೊರತಾದ ಜೀವನದ ಬಗ್ಗೆ ಮನಸ್ಸು ಬರೀ ಹಗಲುಕನಸು ಕಾಣುತ್ತಿರುತ್ತದೆ. ಕನಸು ಕಾಣುವುದು ಮನುಷ್ಯ ಸಹಜ ಗುಣ. ಆದರೆ, ನಿರಂತರವಾಗಿ ಹೀಗಾದರೆ ಕಷ್ಟ. ಹಗಲು ಕನಸುಗಳು ನಮ್ಮ ಅಂತಃಪ್ರಜ್ಞೆಯ (Intuition) ಕಿಂಡಿಯೂ (Window) ಹೌದು ಎನ್ನಲಾಗುತ್ತದೆ. ಅವು ಏನೋ ಸುಳಿವುಗಳನ್ನು ಸಹ ನೀಡಬಹುದು. ಹೀಗಾಗಿ, ನಿಮ್ಮ ಆದ್ಯತೆ, ಕನಸು, ಗುರಿಗಳ ಬಗ್ಗೆ ಸ್ಪಷ್ಟತೆ ಬೆಳೆಸಿಕೊಂಡು ಹೊಸ ದಿಕ್ಕಿನತ್ತ ಸಾಗಲು ಪ್ರಾಯೋಗಿಕವಾಗಿ ವಿಚಾರ ಮಾಡುವುದು ಸೂಕ್ತ. 

•    ಹಾಲಿ ಜೀವನದಿಂದ ಮನಸ್ಸು (Mind) ದೂರ 
ನೀವು ಪ್ರಸ್ತುತ ಇಲ್ಲಿಯೇ ಬದುಕುತ್ತಿದ್ದೀರಿ. ಆದರೂ, ಇದರೊಂದಿಗೆ ಅಂತರ ಬೆಳೆಸಿಕೊಂಡಿದ್ದೀರಿ ಎಂದಾದರೆ ಅಥವಾ ಹಾಲಿ ಜೀವನ ಸಿಕ್ಕಾಪಟ್ಟೆ ಬೇಸರವಾಗಿದ್ದರೆ ಬದಲಾವಣೆಯ (Change) ಸಮಯ ಬಂದಿದೆ ಎಂದರ್ಥ. “ಇದು ನನ್ನ ಜೀವನವಲ್ಲ, ನಾನು ಬದುಕುವುದು ಹೀಗಲ್ಲ, ನನಗೆ ಇಂತಹ ಜೀವನ ಬೇಕಾಗಿಲ್ಲ’ ಎನ್ನುವಂತಹ ಭಾವನೆಗಳು ಪದೇ ಪದೆ ಕಾಡಿದರೆ ಅವುಗಳ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ. ಯಾವ ಕಾರಣಕ್ಕೆ ಹೀಗಾಗುತ್ತಿದೆ ಎಂದು ಅರಿತು ಹೊಸ ಜೀವನದ ಬಗ್ಗೆ ಯೋಚಿಸಿ. ಈ ಸಮಯದಲ್ಲಿ ನಿಮ್ಮ ನೈಜ ಮೌಲ್ಯ, ನಂಬಿಕೆಗಳು ವಿಕಸನಗೊಂಡಿರಬಹುದು. 

ಇವರು ಹೆಚ್ಚು ನಿರಾಶಾವಾದಿಗಳು; ಈ ರಾಶಿಯವರು ಬದಲಾಗಬೇಕು..!

•    ಹಿಂದುಳಿದ ಭಾವನೆ (Feel Behind)
“ಎಲ್ಲರೂ ಅವರ ಜೀವನದಲ್ಲಿ ಮುಂದೆ ಸಾಗಿದ್ದಾರೆ, ನಾನೊಬ್ಬ ಹಿಂದುಳಿದು ಹೀಗಿದ್ದೇನೆ’ ಎಂದು ಕುಗ್ಗುವಂತಾದರೆ ಯೋಚನೆ ಮಾಡಿ. ಇಲ್ಲಿ ಬೇರೊಬ್ಬರೊಂದಿಗೆ ಹೋಲಿಕೆ ಇದೆಯಾದರೂ ಅದು ಹೊಟ್ಟೆಕಿಚ್ಚನ್ನು ಮೂಡಿಸುವುದಿಲ್ಲ, ಬದಲಿಗೆ ನಿಮ್ಮ ಜೀವನವನ್ನು ಮತ್ತೊಮ್ಮೆ ಅವಲೋಕಿಸಲು ನೆರವಾಗುತ್ತದೆ. 

click me!