ಈ ಮೊಬೈಲ್‌ನಿಂದ ಮಕ್ಕಳು ಮಾತ್ರವಲ್ಲ, ದಾಂಪತ್ಯವೂ ಹಾಳು!

By Suvarna NewsFirst Published Dec 14, 2022, 2:28 PM IST
Highlights

ನಾಲ್ಕೈದು ಜನರಿದ್ದೂ ಮನೆ ಶಾಂತವಾಗಿದೆ ಅಂದ್ರೆ ಎಲ್ಲರ ಕೈನಲ್ಲಿ ಮೊಬೈಲ್ ಇದೆ ಎಂದೇ ಅರ್ಥ. ಈ ಸ್ಮಾರ್ಟ್ಫೋನ್ ಹಾಲ್ ಗೆ ಸೀಮಿತವಾದ್ರೆ ಓಕೆ. ಬೆಡ್ ರೂಮಿಗೂ ಮೊಬೈಲ್ ದಾಳಿ ಮಾಡಿದ್ರೆ ದಾಂಪತ್ಯ ಹಳಸೋದ್ರಲ್ಲಿ ಎರಡು ಮಾತಿಲ್ಲ. 

ಸದ್ಯ ಎಲ್ಲರ ಕೈನಲ್ಲಿ ಒಂದಲ್ಲ ಎರಡೆರಡು ಮೊಬೈಲ್ ಮಾಮೂಲಿ ಎನ್ನುವಂತಾಗಿದೆ. ಒಂದು ಪರ್ಸನಲ್ ಯೂಸ್ ಗೆ ಇನ್ನೊಂದು ಕೆಲಸಕ್ಕೆಂದು ಅನೇಕರು ಎರಡು ಮೊಬೈಲ್ ಬಳಸ್ತಾರೆ. ಮೊಬೈಲ್ ನಮ್ಮ ಕೆಲಸವನ್ನು ಸುಲಭಗೊಳಿಸುತ್ತಿದೆ. ಮನೆಯಲ್ಲೇ ಕುಳಿತು ದೂರದಲ್ಲಿರುವವರ ಜೊತೆ ಸಂಪರ್ಕ ಬೆಳೆಸಬಹುದು. ಅವರನ್ನು ನಾವು ನೋಡಬಹುದು. ಆದ್ರೆ ಮೊಬೈಲ್ ನಮ್ಮ ಅನುಕೂಲಕ್ಕೆ ಮಾತ್ರ ಬಳಕೆಯಾಗ್ತಿಲ್ಲ. ಅದನ್ನು ಇಡೀ ದಿನ ಬಳಸುವವರ ಸಂಖ್ಯೆ ಹೆಚ್ಚಾಗ್ತಿದೆ. ದಿನದ 24 ಗಂಟೆ ಮೊಬೈಲ್ ನೋಡುವವರಿದ್ದಾರೆ. 

ಅತಿಯಾದ ಮೊಬೈಲ್ (Mobile) ಬಳಕೆ  ಸಂಬಂಧಗಳ ಮೇಲೆ ಅಪಾಯಕಾರಿ ಪರಿಣಾಮ  ಬೀರುತ್ತಿದೆ. ಬದುಕಿನ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿರುವ ಸ್ಮಾರ್ಟ್ ಫೋನ್ ಗಳು ಈಗ ಜನರ ಸಂಬಂಧ (Relationship) ಗಳನ್ನು ಕೆಡಿಸುವ ಕೆಲಸ ಮಾಡುತ್ತಿವೆ. ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆ ಭಾರತ (India)ದಲ್ಲಿ  ದಂಪತಿ ನಡುವಿನ ಪ್ರೀತಿ (Love), ಬಾಂಧವ್ಯವನ್ನು ಹಾಳುಮಾಡುತ್ತಿದೆ. ಇಡೀ ದಿನ ಸ್ಮಾರ್ಟ್ಫೋನ್ ಬಳಕೆ ಮಾಡುವ ಜನರು ಪರಸ್ಪರ ಮಾತು ಮರೆತಿದ್ದಾರೆ. ಮನೆಯಲ್ಲಿ ಅಕ್ಕಪಕ್ಕ ಕುಳಿತ ದಂಪತಿ ಮಧ್ಯೆ ಮಾತು ಕಡಿಮೆಯಾಗಿದೆ. ಇಬ್ಬರೂ ಸ್ಮಾರ್ಟ್ಫೋನ್ ನಲ್ಲಿ ದೂರದಲ್ಲಿರುವವರ ಜೊತೆ ಚಾಟ್ ಮಾಡ್ತಾರೆಯೇ ವಿನಃ ಎದುರಿರುವವರ ಸಮಸ್ಯೆ ತಿಳಿಯುವ ಕೆಲಸ ಮಾಡೋದಿಲ್ಲ. 

ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ, ಪುರುಷರ ವೀರ್ಯದ ಸಂಖ್ಯೇನೆ ಕಡಿಮೆಯಾಗುತ್ತೆ!

Latest Videos

ಸ್ಮಾರ್ಟ್ ಸಾಧನ ತಯಾರಕ ಕಂಪನಿ ವಿವೋ ಅಧ್ಯಯನದಲ್ಲೂ ಇದು ಬಹಿರಂಗವಾಗಿದೆ. ಅಧ್ಯಯನದ ವರದಿ ಪ್ರಕಾರ, ಸ್ಮಾರ್ಟ್ಫೋನ್ ಬಳಕೆ ವಿಚ್ಛೇದನಕ್ಕೆ ಕಾರಣವಾಗ್ತಿದೆ. ಶೇಕಡಾ 88ರಷ್ಟು ಜನರು ಸ್ಮಾರ್ಟ್ಫೋನ್ ಅತಿಯಾದ ಬಳಕೆ ಸಂಬಂಧ ಹಾಳುಮಾಡ್ತಿದೆ ಎಂಬ ಸತ್ಯವನ್ನು ಒಪ್ಪಿಕೊಂಡಿದ್ದಾರೆ ಕೂಡ. ಅದಲ್ಲದೆ ಅನೇಕರು ಸ್ಮಾರ್ಟ್ಫೋನ್ ಬಿಟ್ಟು ಸಂಗಾತಿಗೆ ಸಮಯ ನೀಡಲು ಬಯಸ್ತಿದ್ದಾರೆ. ಆದ್ರೆ ಅವರಿಂದ ಇದು ಸಾಧ್ಯವಾಗ್ತಿಲ್ಲ. ಮತ್ತೆ ಕೆಲವರು ಸ್ಮಾರ್ಟ್ಫೋನ್ ಕಾರಣಕ್ಕೆ ಸಂಗಾತಿ ಕೋಪಕ್ಕೆ ಗುರಿಯಾಗ್ತಿದ್ದಾರೆ. ಮತ್ತೆ ಕೆಲವರು ಸಂಗಾತಿ ಜೊತೆಗಿನ ಮಾತುಕತೆ, ಪ್ರೀತಿಗೆ ಮೊಬೈಲ್ ಅಡ್ಡಿಯಾಗ್ತಿದೆ, ಮೊಬೈಲ್ ನೋಡ್ತಿರುವ ವೇಳೆ ಸಂಗಾತಿ ಮಾತನಾಡಿದ್ರೆ ಅಸಮಾಧಾನಗೊಳ್ತೆವೆ ಎಂಬುದನ್ನು ಕೂಡ ಹೇಳಿದ್ದಾರೆ. ಅಧ್ಯಯನದಲ್ಲಿ ಸಾಕಷ್ಟು ಅಂಕಿ – ಅಂಶಗಳನ್ನು ಹೇಳಲಾಗಿದೆ. ಸ್ಮಾರ್ಟ್ಫೋನ್ ಸಂಬಂಧ ಹಾಳು ಮಾಡ್ತಿದೆ ಎಂಬುದು ಬಹುತೇಕ ಎಲ್ಲರಿಗೂ ತಿಳಿದಿದೆ. ಆದ್ರೆ ಅದನ್ನು ಬಿಡಲು ಸಾಧ್ಯವಾಗ್ತಿಲ್ಲ ಎಂಬುದು ಅಷ್ಟೇ ಸತ್ಯ.

ಮೊಬೈಲ್ ಬಳಕೆ ಕಡಿಮೆ ಮಾಡೋದು ಹೇಗೆ? :
ಮೊಬೈಲ್ ಈಗಿನ ದಿನಗಳಲ್ಲಿ ಅನಿವಾರ್ಯವಾಗಿದೆ. ಅದಿಲ್ಲದೆ ಕೆಲಸ ನಡೆಯುವುದಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಮೊಬೈಲೇ ಎಲ್ಲ ಎಂಬ ಸತ್ಯ ಜನರಿಗೆ ತಿಳಿಯಬೇಕಾದ ಅಗತ್ಯವಿದೆ. ದಿನದಲ್ಲಿ ಒಂದಿಷ್ಟು ಗಂಟೆಯನ್ನು ಮೊಬೈಲ್ ವೀಕ್ಷಣೆಗೆ ಸೀಮಿತಗೊಳಿಸುವುದು ಒಳ್ಳೆಯದು.

ಪತಿ – ಪತ್ನಿ ಒಟ್ಟಿಗೆ ಕುಳಿತಾಗ ಅಥವಾ ಕುಟುಂಬಸ್ಥರ (Family) ಜೊತೆ ಮಾತುಕತೆ ನಡೆಯುತ್ತಿರುವಾಗ ಮೊಬೈಲ್ ಬಳಕೆ ಮಾಡ್ಬೇಡಿ. ಸಂಗಾತಿ ಮುಖ್ಯವಾದ ವಿಷ್ಯವನ್ನು ಹೇಳುವಾಗ ಅದಕ್ಕೆ ಕಿವಿಗೊಡದೆ ಮೊಬೈಲ್ ವೀಕ್ಷಣೆ ಮಾಡುವ ಕೆಲಸಕ್ಕೆ ಇಳಿಯಬೇಡಿ. ವಿಷ್ಯ ಮಹತ್ವದ್ದು ಎಂದಾಗ ನೀವಿಬ್ಬರು ಕುಳಿತು ಚರ್ಚೆ ಮಾಡಬೇಕಾಗುತ್ತದೆ. ಯಾವುದೇ ಪ್ರವಾಸಿ ಸ್ಥಳಗಳಿಗೆ ಅಥವಾ ಡಿನ್ನರ್ (Dinner) ಗೆ ಹೋಗುವ ವೇಳೆ, ಸಂಗಾತಿ ಜೊತೆಗಿರುವಾಗ ಮೊಬೈಲ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಲು ಪ್ರಯತ್ನಿಸಿ.

Honeymoon Places: ತಮಿಳುನಾಡಿನಲ್ಲಿದೆ ಮಧುಚಂದ್ರಕ್ಕೆ ಸೂಕ್ತ ಸ್ಥಳ

ಯಾವುದೇ ಕಾರಣಕ್ಕೂ ಬೆಡ್ ರೂಮಿಗೆ ಮೊಬೈಲ್ ತೆಗೆದುಕೊಂಡು ಹೋಗ್ಬೇಡಿ. ಇಬ್ಬರು ಒಂದಿಷ್ಟು ಸಮಯವನ್ನು ಒಟ್ಟಿಗೆ ಕಳೆಯಬೇಕೆಂದ್ರೆ ಬೆಡ್ ರೂಮಿಗೆ ಮೊಬೈಲ್ ಪ್ರವೇಶ ಮಾಡಬಾರದು ಎಂಬುದು ತಿಳಿದಿರಿ. ವೀಕೆಂಡ್ ನಲ್ಲಿ ಮೊಬೈಲ್ ನಿಂದ ಸಂಪೂರ್ಣ ದೂರವಿರಲು ಪ್ರಯತ್ನಿಸಿ. ಸಾಮಾಜಿಕ ಜಾಲತಾಣವನ್ನು (Social Media) ಅತಿ ಹೆಚ್ಚಿಗೆ ವೀಕ್ಷಣೆ ಮಾಡುವವರು ನೀವಾಗಿದ್ದರೆ ಅದರ ಸಮಯವನ್ನು ಸೀಮಿತಗೊಳಿಸಿ. ಸಾಧ್ಯವಾದ್ರೆ ಆ ಅಪ್ಲಿಕೇಷನ್ (Applications) ಗಳನ್ನು ಮೊಬೈಲ್ ನಿಂದ ತೆಗೆದುಹಾಕಿ.  ಮೊಬೈಲ್ ಇಲ್ಲದೆ ಸಂಗಾತಿ ಜೊತೆ ಲೈಫ್ ಎಂಜಾಯ್ ಮಾಡಲು ಕಲಿತ್ರೆ ಸಂಸಾರದಲ್ಲಿ ಮತ್ತೆ ಸಿಹಿ ಕಾಣಬಹುದು.
 

click me!