
ಮಗುವನ್ನು ಬೆಳೆಸುವುದು ಒಂದು ಸವಾಲಿನ ಕೆಲಸವೇ ಸರಿ. ಪಾಲಕರು ತಪ್ಪು ಹೆಜ್ಜೆಯಿಟ್ಟರೆ ಮಕ್ಕಳು ಕೂಡ ಅದೇ ದಾರಿಯಲ್ಲಿ ನಡೆಯುತ್ತಾರೆ. ಮಕ್ಕಳಿಗೆ ಒಳ್ಳೆ ಭವಿಷ್ಯ ನೀಡಬೇಕು ಎನ್ನುವ ಪಾಲಕರು ಮೊದಲು ತಮ್ಮ ಸ್ವಭಾವದಲ್ಲಿ ಬದಲಾವಣೆತರಬೇಕು. ಅನೇಕ ಬಾರಿ ನಮ್ಮ ಮಕ್ಕಳೇ ನಮಗೆ ಕನ್ನಡಿಯಾಗಿರುತ್ತಾರೆ. ಕನ್ನಡಿಯಲ್ಲಿ ನಮ್ಮ ಮುಖ ಚೆನ್ನಾಗಿ ಕಾಣ್ಬೇಕೆಂದ್ರೆ ಮಕ್ಕಳನ್ನು ಬೆಳೆಸುವ ಕಲೆ ನಮಗೆ ತಿಳಿದಿರಬೇಕು.
ವಯಸ್ಸು (Age) ಹೆಚ್ಚಾಗ್ತಿದ್ದಂತೆ ಮನುಷ್ಯ ತಾಳ್ಮೆ(Patience) ಕಳೆದುಕೊಳ್ಳುವುದು ಹೆಚ್ಚು. ಹಾಗೆಯೇ ಜನರೇಷನ್ ಗ್ಯಾಪ್ ದೊಡ್ಡ ಕಾರಣವಾಗುತ್ತದೆ. ಮಕ್ಕಳು ತಪ್ಪು ಮಾಡಿದಾಗ ಪಾಲಕರು ಕೂಗಾಡುತ್ತಾರೆ. ಮಕ್ಕಳು (Children ) ಚಿಕ್ಕವರಾಗಿದ್ದರೆ ಅವರ ಮೇಲೆ ಕೈ ಮಾಡ್ತಾರೆ. ಮಕ್ಕಳ ವಿಷ್ಯದಲ್ಲಿ ಪಾಲಕರು ಕಟ್ಟುನಿಟ್ಟಾಗಿರ್ತಾರೆ. ಕೂಗಾಡಿ, ಕಿರುಚಾಡಿ, ಬೈದು, ಹೊಡೆದು ಮಾಡುವುದ್ರಿಂದ ಮಕ್ಕಳನ್ನು ಸುಧಾರಿಸಲು ಸಾಧ್ಯವಿಲ್ಲ. ಮಕ್ಕಳ ಪಾಲನೆಗೆ ಪಾಲಕರು ಯಾವಾಗ್ಲೂ ಶಾಂತವಾದ ಟ್ರಿಕ್ಸ್ ಫಾಲೋ ಮಾಡ್ಬೇಕು. ಶಾಂತಿ ಎನ್ನುವ ಪದ ಪಾಲಕರಿಗೆ ನೆನಪಿರಬೇಕು. ಮಕ್ಕಳು ತಪ್ಪು ಮಾಡಿದಾಗ ಮೊದಲು ಪಾಲಕರು ತಮ್ಮ ಮನಸ್ಸನ್ನು ಶಾಂತಗೊಳಿಸಿಕೊಂಡು ನಂತ್ರ ಮಕ್ಕಳ ಜೊತೆ ಮಾತನಾಡಬೇಕು.
ಶಾಂತಿಯುತ ಪಾಲನೆಯಿಂದ ಆಗುವ ಲಾಭವೇನು? :
ಮಕ್ಕಳ ಖುಷಿ ಹೆಚ್ಚಾಗುತ್ತದೆ : ಮಕ್ಕಳು ತಪ್ಪು ಮಾಡಿದಾಗ ಕೂಗಾಡಿ, ಹೊಡೆಯುವ ಬದಲು ಶಾಂತವಾಗಿ ಮಕ್ಕಳಿಗೆ ಪ್ರೀತಿ (Love) ಯಿಂದ ಬುದ್ಧಿ ಹೇಳುವ ಪಾಲಕರಿಂದ ಮಕ್ಕಳು ಖುಷಿಯಾಗ್ತಾರೆ. ಮಕ್ಕಳು ಆಗ ಪಾಲಕರು ಹೇಳಿದ್ದನ್ನು ಕೇಳ್ತಾರೆ. ಮಕ್ಕಳು ಅಡ್ಜೆಸ್ಟ್ ಆಗಲು ಶುರುವಾಗ್ತಾರೆ. ನಿಮ್ಮ ಬಳಿ ಮತ್ತೆ ಯಾವುದೇ ಪ್ರಶ್ನೆ ಕೇಳದೆ ಅವರು ನಿಮಗೆ ಹೊಂದಿಕೊಳ್ಳುತ್ತಾರೆ. ಮಗು ಸ್ವಭಾವ ಶಾಂತವಾಗಿರಬೇಕು, ಮುಂದೆ ಅವರು ಶಾಂತಿಯುವ ಪಾಲಕರಾಗಬೇಕು ಎಂದಾದ್ರೆ ನೀವು ಶಾಂತಿಯುವ ಪಾಲನೆಯನ್ನು ಅಳವಡಿಸಿಕೊಳ್ಳಬೇಕು.
ಬಾಂಧವ್ಯ (Attachment) ಗಟ್ಟಿಯಾಗುತ್ತದೆ : ಪೋಷಕರು ತಮ್ಮ ಮಕ್ಕಳೊಂದಿಗೆ ಶಾಂತಿ ಮತ್ತು ಪ್ರೀತಿಯಿಂದ ಕನೆಕ್ಟ್ ಆಗ್ತಾರೆ. ಇಲ್ಲಿ ಪೋಷಕರು ಮತ್ತು ಮಕ್ಕಳು ಇಬ್ಬರೂ ಮನಸ್ಸು ಬಿಚ್ಚಿ ಮಾತನಾಡಲು ಅವಕಾಶವಿರುತ್ತದೆ. ಇದ್ರಿಂದ ಪೋಷಕರು ಮತ್ತು ಮಕ್ಕಳು ಪರಸ್ಪರ ಹತ್ತಿರವಾಗ್ತಾರೆ. ಇದು ಅವರಿಬ್ಬರ ಬಾಂಧವ್ಯ (Attachment) ವನ್ನು ಗಟ್ಟಿಗೊಳಿಸುತ್ತದೆ.
ಬುದ್ಧಿವಂತ (Intelligent) ರಾಗ್ತಾರೆ ಮಕ್ಕಳು : ಶಾಂತಿಯುತ ಪಾಲನೆಯಲ್ಲಿ ಬೆಳೆಯುವ ಮಕ್ಕಳು ದೊಡ್ಡವರಾದ್ಮೇಲೆ ಶಿಸ್ತು ಬೆಳೆಸಿಕೊಳ್ತಾರೆ. ಜವಾಬ್ದಾರಿಯುತವಾಗಿ ವರ್ತಿಸುತ್ತಾರೆ. ಹೆಚ್ಚು ಬುದ್ಧವಂತಿಕೆ ಹೊಂದಿರುತ್ತಾರೆ. ಎಲ್ಲ ಕ್ಷೇತ್ರಗಳಲ್ಲೂ ಮಕ್ಕಳೂ ಬೆಳವಣಿಗೆ ಕಾಣಬೇಕು, ಎಲ್ಲ ಒಳ್ಳೆಯ ಗುಣ ಮಕ್ಕಳಿಗೆ ಬರಬೇಕು ಎಂದಾದ್ರೆ ಶಾಂತಿಯುತ ಪೋಷಣೆಯನ್ನು ಪಾಲಕರು ಅಳವಡಿಸಿಕೊಳ್ಳಬೇಕಾಗುತ್ತದೆ.
Parenting Tips: ಸದಾ ಮಕ್ಕಳ ಸುತ್ತ ಸುತ್ತುವ ಬದಲು ಈ ಸ್ಟೈಲ್ ಫಾಲೋ ಮಾಡಿ
ಶಾಂತಿಯುತ ಪೋಷಕರಾಗುವುದು ಹೇಗೆ? : ಮೊದಲೇ ಹೇಳಿದಂತೆ ಶಾಂತಿಯುತವಾಗಿನ ಮಕ್ಕಳನ್ನು ಬೆಳೆಸುವುದು ದೊಡ್ಡ ಸವಾಲು. ಮನೆ ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಮಕ್ಕಳನ್ನು ಹೆದರಿಸಿದ್ರೆ ಬೇಗ ಕೆಲಸವಾಗುತ್ತದೆ. ಎರಡು ಏಟು ನೀಡಿದ್ರೆ ಮಕ್ಕಳು ನೀವು ಹೇಳಿದಂತೆ ಕೇಳುತ್ತಾರೆ. ಮಕ್ಕಳು ಗಲಾಟೆ ಮಾಡುವ ಸಮಯದಲ್ಲಿ ನೀವು ಶಾಂತವಾಗಬೇಕಾಗುತ್ತದೆ. ಸಾರ್ವಜನಿಕ ಪ್ರದೇಶದಲ್ಲಿ ಮಗು ಕಿರುಚಾಡುತ್ತಿದೆ, ಅಳುತ್ತಿದೆ ಎಂದಾಗ ನೀವು ಮೌನವಾಗಿರಿ. ನಿಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳಿ. ಇದಕ್ಕೆ ನೀವು ಒಂದರಿಂದ ಹತ್ತನ್ನು ಎಣಿಸಬಹುದು. ನಿಮ್ಮ ಮನಸ್ಸು ಶಾಂತವಾದ್ಮೇಲೆ ಮಗುವಿನ ಜೊತೆ ಪ್ರೀತಿಯಿಂದ ಮಾತನಾಡಿ. ಆರಂಭದಲ್ಲಿ ಕಷ್ಟವೆನ್ನಿಸಿದ್ರೂ ದಿನಕಳೆದಂತೆ ಅಭ್ಯಾಸವಾಗುತ್ತದೆ. ಇದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು ಎಂಬುದು ನೆನಪಿನಲ್ಲಿರಲಿ.
ನೀವು single child ಪೋಷಕರಾಗಿದ್ದರೆ, ಈ ವಿಷ್ಯ ತಿಳಿದಿದ್ದರೆ ಸೇಫ್!
ಮಕ್ಕಳ ಜೊತೆ ನೀವು ಪ್ರತಿ ದಿನ ಸ್ವಲ್ಪ ಸಮಯ ಕಳೆಯುವುದು ಕೂಡ ಮುಖ್ಯವಾಗುತ್ತದೆ. ನೀವು ಕೋಪ ಮಾಡಿಕೊಳ್ಳುವುದು ಹೊಡೆಯುವುದು ನಿಲ್ಲಿಸಿದ್ದೀರಿ ಎಂದ ತಕ್ಷಣ ಮಕ್ಕಳು ಬದಲಾಗುವುದಿಲ್ಲ. ಮೊದಲು ನಿಮ್ಮಿಬ್ಬರ ಮಧ್ಯೆ ಬಾಂಧವ್ಯ ಬೆಳೆಯಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.