ಈ ದಂಪತಿ ಜೀವನದಲ್ಲಿ ಸಂತೋಷದ ಹೊಸ ಗಾಳಿ ಬೀಸ್ತಿದೆ. 37 ವರ್ಷದ ಅಂತರವಿದ್ರೂ ದಂಪತಿಗೊಂದು ಮಗುವಾಗ್ತಿದೆ. 63 ವರ್ಷದ ಅಜ್ಜಿ ಮನೆಯಲ್ಲಿ ಮಗುವಿನ ನಗು ಕೇಳಿ ಬರಲಿದೆ.
ವಯಸ್ಸು 40 ದಾಟುತ್ತಿದ್ದಂತೆ ಸಾಮಾನ್ಯ ಮಹಿಳೆಯರು ಗರ್ಭಧರಿಸಲು ಹಿಂದೇಟು ಹಾಕ್ತಾರೆ. ಆಗ ಗರ್ಭಧರಿಸೋದು ಕಷ್ಟವಾಗೋದಲ್ಲದೆ ಜನಿಸುವ ಮಕ್ಕಳ ಆರೋಗ್ಯದ ಬಗ್ಗೆಯೂ ಅನುಮಾನವಿರುತ್ತದೆ. ಶಿಕ್ಷಣ, ವೃತ್ತಿ ಹಿಂದೆ ಓಡುವ ಈಗಿನ ಮಹಿಳೆಯರು ನಲವತ್ತರ ನಂತ್ರವೇ ಮಕ್ಕಳನ್ನು ಪಡೆಯುವ ನಿರ್ಧಾರಕ್ಕೆ ಬರ್ತಿದ್ದಾರೆ. ವಯಸ್ಸು ಐವತ್ತು ದಾಟುತ್ತಿದ್ದಂತೆ ಮಕ್ಕಳನ್ನು ಬೆಳೆಸುವ ತಾಳ್ಮೆ ಕಡಿಮೆಯಾಗುತ್ತದೆ. ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವ ಶಕ್ತಿ ಕೂಡ ಅವರಿಗೆ ಇರೋದಿಲ್ಲ ಎಂಬ ಭಾವನೆಯಲ್ಲಿ ನಾವಿದ್ದೇವೆ. ಆದ್ರೆ ಇಲ್ಲೊಬ್ಬ ಮಹಿಳೆ ಅಚ್ಚರಿ ಹುಟ್ಟಿಸಿದ್ದಾಳೆ. ತನ್ನ 63ನೇ ವಯಸ್ಸಿನಲ್ಲಿ ಆಕೆ ತಾಯಿಯಾಗ್ತಿದ್ದಾಳೆ. ಅದೂ ತನಗಿಂತ 37 ವರ್ಷ ಚಿಕ್ಕ ಯುವಕನ ಮಗುವಿಗೆ ತಾಯಿಯಾಗ್ತಿದ್ದಾಳೆ. 63 ವರ್ಷದ ಮಹಿಳೆ ಚಿಕ್ಕ ವಯಸ್ಸಿನ ಯುವಕನನ್ನು ಪ್ರೀತಿಸಿ ಸಂಸಾರ ನಡೆಸುತ್ತಿರುವುದಲ್ಲದೆ ತಮ್ಮ ಕುಟುಂಬ ಮುಂದುವರೆಸುವ ಮಹತ್ವದ ನಿರ್ಧಾರಕ್ಕೆ ಬಂದು, 63ನೇ ವಯಸ್ಸಿನಲ್ಲಿ ಅಮ್ಮನಾಗುತ್ತಿದ್ದಾಳೆ. ಶುಗರ್ ಡ್ಯಾಡಿಯಂತೆ ಶುಗರ್ ಮಮ್ಮಿ ಈಗ ಪ್ರಸಿದ್ಧಿಯಾಗಿದ್ದು, ಈ ಜೋಡಿಯನ್ನು ನೋಡಿ ಜನರು ಹುಬ್ಬೇರಿಸುವಂತಾಗಿದೆ.
63 ವರ್ಷದ ಚೆರಿಲ್ ತನ್ನ 26 ವರ್ಷದ ಪತಿ ಕುರಾನ್ ಮೆಕ್‌ಕಾನ್ ಅವರೊಂದಿಗೆ ವೀಡಿಯೊ (Video) ವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ತಾನು ಶೀರ್ಘದಲ್ಲೇ ತಾಯಿಯಾಗ್ತಿದ್ದೇನೆಂದು ಚೆರಿಲ್ ಹೇಳಿದ್ದಾಳೆ. ಚೆರಿಲ್, ಪರೀಕ್ಷೆ ವರದಿಯನ್ನು ಸಾಮಾಜಿಕ ಜಾಲತಾಣ (Social Media) ದ ಬಳಕೆದಾರರಲ್ಲಿ ಹಂಚಿಕೊಂಡಿದ್ದಾಳೆ. ಒಂದು ವಾರದ ಹಿಂದೆ ಬಾಡಿಗೆ ತಾಯಿ ಗರ್ಭಿಣಿ (Pregnant) ಯಾಗಿದ್ದಾಳೆಂದು ಚೆರಿಲ್ ಹೇಳಿದ್ದಾಳೆ.
ಡಿಯರ್ ಲೇಡೀಸ್, ನಿಮ್ಮವನೊಂದಿಗೆ ಈ 3 ತಪ್ಪು ಎಂದಿಗೂ ಮಾಡ್ಬೇಡಿ!
ಇನ್ಸ್ಟಾಗ್ರಾಮ್ ಹಾಗೂ ಟಿಕ್ ಟಾಕ್ ನಲ್ಲಿ ಈ ವಿಡಿಯೋವನ್ನು ಆಕೆ ಹಂಚಿಕೊಂಡಿದ್ದಾಳೆ. ಮಗುವಿನ ಹಾರ್ಟ್ ಬೀಟ್ (Heart Beat) ಕೇಳಿದ್ದಾಗಿ ದಂಪತಿ ಹೇಳಿದ್ದಾರೆ. ಬಾಡಿಗೆ ತಾಯಿಯನ್ನು (Surrogate Mother) ಪರೀಕ್ಷೆಗೆಂದು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಕೆ ಗರ್ಭಿಣಿ ಎಂಬ ವಿಷ್ಯ ಗೊತ್ತಾಗುತ್ತಿದ್ದಂತೆ ಖುಷಿಯಾಯ್ತು. ನಮ್ಮಿಬ್ಬರ ಕುಟುಂಬ ಮುಂದುವರೆಯಲಿದೆ ಎಂಬ ಸಂತೋಷವಿದೆ.
ಕುರಾನ್ ಮೆಕ್‌ಕಾನ್ ಕೂಡ ವಿಡಿಯೋದಲ್ಲಿ ಪ್ರತಿಕ್ರಿಯೆ ನೀಡಿದ್ದಾನೆ. ನನಗೆ ತುಂಬಾ ಖುಷಿಯಾಗಿದೆ. ನನಗೆ ಕಾಯಲು ಸಾಧ್ಯವಾಗ್ತಿಲ್ಲ. ನಾನು ತಂದೆಯಾಗ್ತಿದ್ದೇನೆ. ನಮ್ಮಿಬ್ಬರ ಸಂಸಾರ ಶುರುವಾಗಿದೆ ಎಂದು ಕುರಾನ್ ಮೆಕ್‌ಕಾನ್ ಹೇಳಿದ್ದಾನೆ.
ಈ ವಿಡಿಯೋ ನೋಡಿದ ಬಳಕೆದಾರರು ಸಕಾರಾತ್ಮಕ ಹಾಗೂ ನಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಇದು ಹೇಗೆ ಸಾಧ್ಯ ಎಂದು ಕೆಲವರು ಪ್ರಶ್ನೆ ಮಾಡಿದ್ರೆ ಇದು ಸಾಧ್ಯವೇ ಇಲ್ಲ ಎಂದು ಮತ್ತೆ ಕೆಲವರು ಹೇಳಿದ್ದಾರೆ. ಇನ್ನು ಕೆಲವರು ದಂಪತಿ ಬೆಂಬಲಕ್ಕೆ ನಿಂತಿದ್ದಾರೆ. ಜನರು ಏನು ಹೇಳ್ತಾರೆ ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಮಗುವಿಗೆ ಕೊಡಲು ನಿಮ್ಮ ಬಳಿ ಸಾಕಷ್ಟು ಪ್ರೀತಿ ಇದೆ. ಈಗಿನ ಕಾಲದಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಅನೇಕ ಪಾಲಕರಿಗೆ ಸಮಯವೇ ಇಲ್ಲ. ನಿಮ್ಮನ್ನು ನೋಡಿ ನನಗೆ ಖುಷಿಯಾಗ್ತಿದೆ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ನಿಮ್ಮ ಬಾಡಿಗೆ ತಾಯಿಯನ್ನು ಆರೋಗ್ಯವಾಗಿಟ್ಟುಕೊಳ್ಳಿ. ಅವರಿಗೆ ಸಾಮಾಜಿಕ ಜಾಲತಾಣ ಸೇರಿ ಯಾವುದೇ ಒತ್ತಡ (Sress) ನೀಡುವ ಅಗತ್ಯವಿಲ್ಲ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ (Social Media) ಚೆರಿಲ್ ಮತ್ತು ಪತಿ ಕುರಾನ್ ಮೆಕ್‌ಕಾನ್ ಅನೇಕ ವಿಡಿಯೋಗಳನ್ನು ಈ ಹಿಂದೆಯೂ ಹಂಚಿಕೊಂಡಿದ್ದಾರೆ. ಅವರಿಬ್ಬರು ಡಾನ್ಸ್ ಮಾಡೋದು ಸೇರಿದಂತೆ ಅನೇಕ ಸಂದರ್ಶನದ ವಿಡಿಯೋಗಳನ್ನು ನೀವು ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೋಡಬಹುದು.
ಇವರು ಅಮ್ಮ – ಮಗಳಲ್ಲ… ದಂಪತಿ! ಈ ಜೋಡಿ ಮಧ್ಯೆ ಇದೆ 37 ವರ್ಷಗಳ ಅಂತರ
ಚೆರಿಲ್ ಮತ್ತು ಪತಿ ಕುರಾನ್ ಮೆಕ್‌ಕಾನ್ ಮಾತ್ರವಲ್ಲ ಇಂಥ ಅನೇಕ ಜೋಡಿಗಳನ್ನು ನಾವೀಗ ನೋಡ್ಬಹುದು. ಕೆಲ ದಿನಗಳ ಹಿಂದೆ ಶುಗರ್ ಮಮ್ಮಿ (Sugar Mummy) ಸುದ್ದಿ ವೈರಲ್ ಆಗಿತ್ತು. ಇಬ್ಬರೂ ನೂಡಲ್ಸ್ (Noodles) ತಿನ್ನುತ್ತಿದ್ದ ವಿಡಿಯೋವನ್ನು ಬಳಕೆದಾರರು ಇಷ್ಟಪಟ್ಟಿದ್ದರು. ಆತನ ವಯಸ್ಸು ಹತ್ತೊಂಭತ್ತು ವರ್ಷವಾದ್ರೆ ಪ್ರೇಯಸಿ ವಯಸ್ಸು ಎಪ್ಪತ್ತೇಳು ವರ್ಷ. ಇವರಿಬ್ಬರು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಪ್ರಸಿದ್ಧಿಯಾಗಿದ್ದು, ನಾನಾ ವಿಡಿಯೋಗಳನ್ನು ಹಂಚಿಕೊಳ್ತಿರುತ್ತಾರೆ.