
ತಾಯಿಯಾದವಳು ಯಾವತ್ತೂ ಕ್ರೂರಿಯಾಗಲು ಸಾಧ್ಯವೇ ಇಲ್ಲ ಎಂದು ಹಿಂದಿನಿಂದಲೂ ಸಮಾಜ ಹೇಳಿಕೊಂಡೇ ಬರುತ್ತಿದೆ. ಆದರೆ ಹೆತ್ತು ಹೊತ್ತು ಸಾಕಿ ಸಲಹಿದ ಮಗುವನ್ನೇ ತಾಯಿ ಕಸದ ತೊಟ್ಟಿಗೆ ಎಸೆಯುವ, ಆಸ್ಪತ್ರೆಯಲ್ಲಿ ಬಿಟ್ಟು ಬರುವ ಅದೆಷ್ಟೋ ಘಟನೆಗಳು ನಡೆದಿವೆ. ಕರುಳಬಳ್ಳಿಯ ಸಂಬಂಧವನ್ನೇ ಮರೆತು ಬದುಕುವ ಕ್ರೂರಿ ತಾಯಿಗಳೂ ಇದ್ದಾರೆ. ಆಕೆಯೂ ಅಂಥವಳೇ, ಆತನೊಟ್ಟಿಗೆ ಬರೋಬ್ಬರಿ ಮೂರೂವರೆ ವರ್ಷ ಸಂಬಂಧದಲ್ಲಿದ್ಲು. ಗರ್ಭಿಣಿಯೂ ಆದ್ಲು. ಆದ್ರೆ ಪುಟ್ಟ ಕಂದಮ್ಮ ಕಣ್ಣು ಪಿಳಿ ಪಿಳಿ ಬಿಡುತ್ತಾ ಭೂಮಿಗೆ ಬಂದಿದ್ದೇ ತಡ ಹಿಂತಿರುಗಿ ನೋಡದೆ ಹೊರಟೇ ಹೋದ್ಲು. ಪ್ರೀತಿಸಿದ ತಪ್ಪಿಗೆ ಸಿಂಗಲ್ ಪೇರೆಂಟಿಂಗ್ ಜವಾಬ್ದಾರಿ ಆತನ ಮೇಲೆ ಬಿತ್ತು. ಆದರೂ ಕಾನೂನಿನ ತೊಡಕುಗಳನ್ನು ಎದುರಿಸಿ ಆತ ಮಗುವನ್ನು ಪಡೆದುಕೊಂಡಿದ್ದೇ ದೊಡ್ಡ ಕಥೆ.
ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಲಿವ್-ಇನ್ ರಿಲೇಶನ್ ಶಿಪ್‌ನಲ್ಲಿ ಇರಲು ಒಮ್ಮತದಿಂದ ನಿರ್ಧರಿಸಿದರು. ಆರಂಭದ ಕೆಲ ವರ್ಷ ಎಲ್ಲವೂ ಚೆನ್ನಾಗಿಯೇ ಇತ್ತು. ಆಕೆ ಗರ್ಭಿಣಿಯಾದಳು. ಜೊತೆಗೆ ಆಕೆ ಹಾಕಿಕೊಂಡಿದ್ದ ಪ್ರೀತಿಯ ಮುಖವಾಡವೂ ಕಳಚಿಬಿತ್ತು. ಆಕೆ ಮಾಡಿದ ಮೋಸವೇನು? ಅದರಿಂದ ಹುಡುಗ ಅನುಭವಿಸಿದ ಸಂಕಷ್ಟಗಳೇನು? ಆತನ ಮಾತಲ್ಲೇ ಕೇಳಿ.
Online ವಂಚನೆ, Virtual ಜಗತ್ತಿನ ಬಣ್ಣದ ಮಾತಿಗೆ ಮರಳಾಗೋ ಮುನ್ನ ಇರಲಿ ಎಚ್ಚರ!
ಲಿವ್ ಇನ್ ರಿಲೇಶನ್ ಶಿಪ್
ನಾವು ಬರೋಬ್ಬರಿ ಮೂರೂವರೆ ವರ್ಷಗಳ ಕಾಲ ಲಿವ್-ಇನ್ ಸಂಬಂಧದಲ್ಲಿದ್ದೆವು. ಈ ಸಂದರ್ಭದಲ್ಲಿ ನನ್ನ ಗೆಳತಿ ಆಕೆ ಗರ್ಭಿಣಿಯಾಗಿರಬಹುದು ಎಂದು ಅನುಮಾನಿಸಿದಳು. ನಾನು ಈ ಸಂದರ್ಭದಲ್ಲಿ ಕೆಲಸದ ನಿಮಿತ್ತ ಹೊರ ಹೋಗಿದ್ದೆ. ವಿಷಯ ತಿಳಿದು ತಕ್ಷಣ ಮನೆಗೆ ಮರಳಿದೆ. ಟೆಸ್ಟ್ ಮಾಡಿದ ಬಳಿಕ ನಾವಿಬ್ಬರೂ ಪೋಷಕರಾಗುತ್ತಿದ್ದೇವೆ ಎಂಬುದನ್ನು ನಾವು ತಿಳಿದುಕೊಂಡೆವು. ಅವಳು ನಾಲ್ಕು ತಿಂಗಳ ಗರ್ಭಿಣಿ ಎಂಬುದು ತಿಳಿದುಬಂತು. ಅವಳು ವಿಷಯ ತಿಳಿದು ತುಂಬಾ ಗಾಬರಿಯಾದಳು. ನಾನು ಎಂಥಾ ಸಂದರ್ಭದಲ್ಲೂ ಜೊತೆಗಿರುತ್ತೇನೆ ಎಂದು ಆಕೆಗೆ ಧೈರ್ಯ ತುಂಬಿದೆ. ತಕ್ಷಣವೇ ಮದುವೆಯಾಗುವ ಎಂದು ಸಹ ಹೇಳಿದೆ.
ನಂತರ ಅವಳು ಮಗುವನ್ನು ಉಳಿಸಿಕೊಳ್ಳಲು ನಿರ್ಧರಿಸಿದಳು. ನಾನು ಅವಳ ಆಯ್ಕೆಯನ್ನು ಗೌರವಿಸಿದೆ. ಕೆಲವೊಂದಷ್ಟು ಸಮಸ್ಯೆಗಳಿದ್ದರೂ, ನಾನು ಪೋಷಕರಾಗಲು ಉತ್ಸುಕನಾಗಿದ್ದೆ. ಆದರೆ ಆ ನಂತರದ ದಿನಗಳಲ್ಲಿ ನನಗೆ ಆಕೆಗೆ ತುಂಬಾ ಹುಡುಗರೊಂದಿಗೆ ಸಂಬಂಧ ಇರುವುದು ಗೊತ್ತಾಯಿತು. ಆದರೆ ಈ ಬಗ್ಗೆ ಕೇಳಿದಾಗ ಆಕೆ ಮಾತು ತಪ್ಪಿಸುತ್ತಿದ್ದಳು. ನಮ್ಮ ಮಗುವಿಗಾಗಿ ನಾನು ಎಲ್ಲವನ್ನೂ ಸಹಿಸಿಕೊಳ್ಳಬೇಕೆಂದು ನಿರ್ಧರಿಸಿದೆ. ಅವಳನ್ನು ಹೆಚ್ಚು ಕಾಳಜಿ ವಹಿಸಿ ನೋಡಿಕೊಂಡೆ. ಮಾರ್ಚ್ 2020ರಲ್ಲಿ, ಆಕೆ ಮುದ್ದಾದ ಮಗುವಿಗೆ ಜನ್ಮ ನೀಡಿದಳು.
Love Sex Dhokha: ಆತ ನಿಮ್ಮನ್ನು ಪ್ರೀತಿಸ್ತಿದ್ದಾನಾ ? ಅಲ್ಲ ಟೈಂ ಪಾಸಾ ? ಮೊದಲು ತಿಳ್ಕೊಳ್ಳಿ
ಅವಳ ಮೋಸ
ಮಗುವನ್ನು ಮನೆಗೆ ಕರೆದುಕೊಂಡು ಬಂದ ನಂತರ ನಾನು ಇಬ್ಬರೂ ಮನೆಯಲ್ಲಿ ಮದುವೆ ಬಗ್ಗೆ ಮಾತನಾಡುವ ಎಂದು ತಿಳಿಸಿದೆ. ಆದರೆ ಆಕೆ ಅದನ್ನು ಇಗ್ನೋರ್ ಮಾಡುತ್ತಲೇ ಬಂದಳು. ಸಣ್ಣಪುಟ್ಟ ಕಾರಣ ಕೊಟ್ಟು ಮನೆಮಂದಿಯ ಭೇಟಿಯನ್ನು ನಿರಾಕರಿಸುತ್ತಿದ್ದಳು. ಹಾಗೆಯೇ ಒಂದು ದಿನ ಆಕೆ ನನ್ನನ್ನು ಕಾಲ್ ಮಾಡಿ ಕರೆದಳು. ನಾನು ಮನೆಯವರನ್ನು ಮದುವೆಯಾಗಲು ಕನ್ವಿನ್ಸ್ ಮಾಡಬಹುದೆಂದು ಉತ್ಸಾಹದಿಂದ ತೆರಳಿದೆ. ಆದರೆ ಅವಳ ಜೊತೆಗೆ ಯುವಕನೊಬ್ಬನಿದ್ದ. ಹಣ ನೀಡಿ ಆಕೆಯನ್ನು ಬಿಟ್ಟು ಬಿಡುವಂತೆ ಹೇಳಿದ. ಇಲ್ಲದಿದ್ದರೆ ಮಗುವನ್ನು ಅನಾಥಾಶ್ರಾಮದಲ್ಲಿ ಬಿಡುವುದಾಗಿ ಹೇಳಿದರು. ನಾನು ಈ ವಿಷಯವನ್ನು ಆಕೆಯ ಮನೆಯವರ ಬಳಿ ತಿಳಿಸಿದೆ. ಅವರು ಸಹ ಮಗಳ ಮಾತನ್ನು ಬೆಂಬಲಿಸಿದರು. ಈ ವಿಚಾರವಾಗಿ ಹೆಚ್ಚು ಮಾತನಾಡಿದರೆ ಮಗುವಿಗೆ ವಿಷ ಕೊಟ್ಟು, ನಿನ್ನ ಮೇಲೆ ರೇಪ್ ಕೇಸ್ ಹಾಕುತ್ತೇನೆಂದು ಬೆದರಿಕೆ ಹಾಕಿದರು.
ಸಿಂಗಲ್ ಪೇರೆಂಟಿಂಗ್
ಅವಳ ಮೋಸ, ಪೋಷಕರ ಬೆದರಿಕೆ ಮಧ್ಯೆಯೂ ನನಗೆ ನನ್ನ ಮಗುವಿನ ಸುರಕ್ಷತೆಯೂ ಮುಖ್ಯವಾಗಿತ್ತು. ನಾನು ಮಗುವನ್ನು ಕಸ್ಟಡಿಗೆ ಪಡೆಯಲು ಅರ್ಜಿ ಸಲ್ಲಿಸಿದೆ. 356 ದಿನಗಳ ನಂತರ ಎಪ್ರಿಲ್ 2023ರಲ್ಲಿ ಮಗುವನ್ನು ನನಗೆ ಒಪ್ಪಿಸಲಾಯಿತು. ಈಗ ನನ್ನ ಮುದ್ದು ಮಗಳು ನನ್ನ ಜೊತೆ ಸುರಕ್ಷಿತವಾಗಿದ್ದಾಳೆ ಎಂದು ಅಪರಿಚಿತ ವ್ಯಕ್ತಿ ಇನ್‌ಸ್ಟಾಗ್ರಾಂನಲ್ಲಿ ಮಾಡಿದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ವ್ಯಕ್ತಿಯ ಸಿಂಗಲ್ ಪೇರೆಂಟಿಂಗ್‌ಗೆ ಜನರು ಶಹಬ್ಬಾಸ್ ಅಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.