ನೀವು ಮುಷ್ಟಿ ಹಿಡಿಯೋ ರೀತಿ ನಿಮ್ಮ ಲವ್ ಲೈಫ್‌ನ ಫ್ಯೂಚರ್ ಹೇಗಿರಲಿದೆ ಅನ್ನೋದನ್ನು ಹೇಳುತ್ತೆ

By Vinutha Perla  |  First Published Aug 20, 2023, 10:38 AM IST

ಪರ್ಸನಾಲಿಟಿ ಅನ್ನೋದು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಒಬ್ಬೊಬ್ಬರು ಒಂದೊಂದು ರೀತಿಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅವರ ಮಾತಿನಿಂದ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ನಾವು ಕೈಯನ್ನು ಮುಷ್ಟಿ ಹಿಡಿಯುವ ರೀತಿಯಲ್ಲೂ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಬಹುದು ಅನ್ನೋದು ನಿಮ್ಗೆ ಗೊತ್ತಿದ್ಯಾ?
 


ಮನುಷ್ಯನ ಗುಣ, ಸ್ವಭಾವ, ಮಾತು ಎಲ್ಲವೂ ವ್ಯಕ್ತಿತ್ವವನ್ನು ನಿರ್ಧರಿಸುತ್ತೆ. ಆದರೆ ಈ ಪರ್ಸನಾಲಿಟಿ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತದೆ. ಒಬ್ಬರ ಸ್ವಭಾವ ಇನ್ನೊಬ್ಬರಿಗೆ ಇರುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ನಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಬಹುಶಃ ನಾವು ನಾವೇ ಸ್ಪಷ್ಟವಾಗಿ ತಿಳಿದುಕೊಳ್ಳುವುದು ಕಷ್ಟ. ಇನ್ನೊಬ್ಬರ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಸಹ ನಾವು ನಿರ್ಧರಿಸುವುದು ಕಷ್ಟ. ಒಬ್ಬ ವ್ಯಕ್ತಿಯ ಜೊತೆಗೆ ಹೆಚ್ಚು ಬೆರೆತಾಗ ನಾವು ಆ ವ್ಯಕ್ತಿಯ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.  ಕೈಯನ್ನು ಮುಷ್ಟಿ ಹಿಡಿಯುವ ರೀತಿಯಲ್ಲೂ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಬಹುದು ಅನ್ನೋದು ನಿಮ್ಗೆ ಗೊತ್ತಿದ್ಯಾ?

A
ತೋರು ಬೆರಳಿನ ಮೇಲೆ ನಿಮ್ಮ ಹೆಬ್ಬೆರಳು ಇದೆ. ಅಂದರೆ ಬಾಕ್ಸರ್‌ಗಳು ತಮ್ಮ ಮುಷ್ಟಿಯನ್ನು ಹಿಡಿದಿರುವಂತೆ ಇದ್ದರೆ, ನೀವು ಬಲವಾದ ಕಲ್ಪನೆಯನ್ನು ಹೊಂದಿದ್ದೀರಿ ಎಂಬರ್ಥವಾಗಿದೆ. ನೀವು ಎಲ್ಲರ ಬಗ್ಗೆ ಸಹಾನುಭೂತಿ ಹೊಂದಿದ್ದೀರಿ. ಆದರೆ ಸ್ವಲ್ಪ ಅಸುರಕ್ಷಿತರಾಗಿದ್ದೀರಿ. ಆದರೆ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ನೀವು ಎದುರಿಸಲು ಸಿದ್ಧರಾಗಿರುತ್ತೀರಿ. ಕೆಲವೊಮ್ಮೆ ತಾಳ್ಮೆಯನ್ನು ಕಳೆದುಕೊಳ್ಳುತ್ತೀರಿ. ಆದರೆ ಹೆಚ್ಚಿನ ಸಮಯದಲ್ಲಿ ನೀವು ತಮಾಷೆಯ ಸ್ವಭಾವವನ್ನು ಹೊಂದಿರುತ್ತೀರಿ ಎಂಬರ್ಥವಾಗಿದೆ.

Tap to resize

Latest Videos

ಫೋಟೋ ನೋಡಿದ ತಕ್ಷಣ ನಿಮಗೇನ್ ಕಾಣ್ಸುತ್ತೆ, ಪುರುಷನ ಮುಖಾನ, ಮಹಿಳೆನಾ?

ಆಂತರಿಕವಾಗಿ ನೀವು ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿಯಾಗಿರುತ್ತೀರಿ. ಜನರು ನಿಮ್ಮ ಒಳ್ಳೆಯತನವನ್ನು ಕೆಟ್ಟದಾಗಿ ಬಳಸಿಕೊಳ್ಳುತ್ತಾರೆ. ಆದರೆ ಅವರು ನಿಮ್ಮನ್ನು ನೋಯಿಸಿದರೂ ನೀವು ಅವರನ್ನು ಸುಮ್ಮನೆ ಇಷ್ಟಪಡುತ್ತೀರಿ. ಯಾವುದೇ ಗೊಂದಲವಿಲ್ಲದೆ ಸರಳವಾಗಿಲು ಇಷ್ಟಪಡುತ್ತೀರಿ ಎಂಬುದನ್ನು ತಿಳಿಸುತ್ತದೆ. ಹಾಗೆಯೇ ಬಹುತೇಕ ಸಂದರ್ಭದಲ್ಲಿ ನೀವು ನಿಮ್ಮ ಭಾವನೆಗಳ್ನು ನಿಗ್ರಹಿಸಿಕೊಳ್ಳುತ್ತೀರಿ. ನಿಮ್ಮ ಸಂಗಾತಿಗೆ ನೀವು ಹೇಳುವುದು ನೀವು ನಿಜವಾಗಿಯೂ ಅನುಭವಿಸುವ ಅರ್ಧದಷ್ಟು ಮಾತ್ರ. ನಿಮ್ಮ ಸಂಗಾತಿಯ ಮೇಲಿನ ಕೋಪವನ್ನು ಸಹ ನೀವು ನಿಗ್ರಹಿಸುತ್ತೀರಿ.

B
ನೀವು ಸಾಕಷ್ಟು ಪ್ರತಿಭೆಯಿಂದ ತುಂಬಿದ್ದೀರಿ ಮತ್ತು ತುಂಬಾ ಮುಕ್ತ ಮನಸ್ಸಿನವರಾಗಿರುತ್ತೀರಿ. ಜನರು ನಿಮ್ಮನ್ನು ಸ್ನೇಹಪರ ಮತ್ತು ಸೃಜನಶೀಲ ವ್ಯಕ್ತಿಯಾಗಿ ನೋಡುತ್ತಾರೆ. ನಿಮ್ಮ ಆತ್ಮವಿಶ್ವಾಸ ಮತ್ತು ಬಲವಾದ ಸ್ವಾಭಿಮಾನವು ಜನರನ್ನು ಪ್ರಭಾವಿಸುತ್ತದೆ. ಕಠಿಣ ಕೆಲಸಗಾರ, ಆದರ್ಶವಾದಿ ಮತ್ತು ತುಂಬಾ ಜಾಗರೂಕರಾಗಿ ವಿಷಯಗಳನ್ನು ಹ್ಯಾಂಡಲ್ ಮಾಡುತ್ತೀರಿ. ನೀವು ಎಲ್ಲರಿಂದಲೂ ಸಾಕಷ್ಟು ವಿಷಯವನ್ನು ನಿರೀಕ್ಷಿಸುತ್ತೀರಿ. ಅದು ಈಡೇರದಿದ್ದಾಗ ಸಂಪೂರ್ಣ ನಿರಾಶೆಯನ್ನು ಅನುಭವಿಸುತ್ತೀರಿ. ಯಾಕೆಂದರೆ ನೀವು ತುಂಬಾ ದುರ್ಬಲ ಹೃದಯದವರಾಗಿರುತ್ತೀರಿ. ನಿಮ್ಮ ಸಂಗಾತಿಯನ್ನು ನೀವು ತುಂಬಾ ಪ್ರೀತಿಸುತ್ತೀರಿ. ಯಾವಾಗಲೂ ಅವರ ಜೊತೆಗೇ ಇರಬೇಕೆಂದು ಬಯಸುತ್ತೀರಿ.. 

Optical Illusion: ಫೋಟೋದಲ್ಲಿ ನಿಮಗೇನು ಕಾಣುತ್ತೆ ಅನ್ನೋದು ನಿಮ್ ವ್ಯಕ್ತಿತ್ವದ ಬಗ್ಗೆ ಹೇಳುತ್ತೆ!

C
ನೀವು ತುಂಬಾ ಬುದ್ಧಿವಂತರು, ಚುರುಕುಬುದ್ಧಿಯವರು. ನಿಮ್ಮ ಆಲೋಚನೆಗಳನ್ನು ಗಟ್ಟಿ ಧ್ವನಿಯಲ್ಲಿ ಹೇಳುವಲ್ಲಿ ನಿಸ್ಸೀಮರು. ಆದರೆ ಎಲ್ಲಾ ವಿಷಯಕ್ಕೂ ಬಹಳ ಬೇಗನೆ ಪ್ರತಿಕ್ರಿಯಿಸುತ್ತೀರಿ ಮತ್ತು ಆಗಾಗ  ಭಾವನಾತ್ಮಕವಾಗಿರುತ್ತೀರಿ. ನೀವು ಪ್ರಾಯೋಗಿಕ ಆದರೆ ಚಿಂತನಶೀಲರು. ನಿಮ್ಮ ಸೂಕ್ಷ್ಮ ವ್ಯಕ್ತಿತ್ವದಿಂದಾಗಿ ನೀವು ತುಂಬಾ ಚಿಂತೆ ಮಾಡುತ್ತೀರಿ.

ಒಬ್ಬ ವ್ಯಕ್ತಿಯಾಗಿ ನೀವು ಮೌನವಾಗಿ ಮತ್ತು ಸೌಮ್ಯವಾಗಿರಲು ಆಯ್ಕೆ ಮಾಡಿಕೊಳ್ಳುತ್ತೀರಿ. ಯಾವುದೇ ನಕಾರಾತ್ಮಕತೆಯನ್ನು ತಪ್ಪಿಸಲು ಸಾಕಷ್ಟು ತ್ಯಾಗ ಮಾಡುವ ವ್ಯಕ್ತಿ ನೀವು. ಯಾರನ್ನೂ ನೋಯಿಸದಂತೆ ನೀವು ನಿಮ್ಮ ಕೈಲಾದಷ್ಟು ಪ್ರಯತ್ನಿಸುತ್ತೀರಿ. ನಿಮ್ಮನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟವಲ್ಲ ಮತ್ತು ನೀವು ಮತ್ತು ನಿಮ್ಮ ಕನಸುಗಳನ್ನು ಅರ್ಥಮಾಡಿಕೊಳ್ಳಲು ಒಬ್ಬ ವ್ಯಕ್ತಿಯನ್ನು ಬಯಸುತ್ತೀರಿ. ಆದರೆ, ನಿಮ್ಮ ದೊಡ್ಡ ದೌರ್ಬಲ್ಯವೆಂದರೆ ನಿಮ್ಮ ಮೃದು ಹೃದಯ. ಸಂಗಾತಿಯು ನಿಮ್ಮನ್ನು ಎಷ್ಟು ನೋಯಿಸಿದರೂ ಸಹ, ನೀವು ಅವನ/ಅವಳ ಪ್ರಾಮಾಣಿಕ ಕ್ಷಮೆ ಕೇಳುತ್ತೀರಿ. 

ನೀವು ನಿಮ್ಮ ಕೈಯನ್ನು ಮುಷ್ಟಿ ಹಿಡಿಯುವ ರೀತಿ ಮತ್ತು ನಿಮ್ಮ ವ್ಯಕ್ತಿತ್ವ ಮ್ಯಾಚ್ ಆಗ್ತಿದ್ಯಾ? ಕಾಮೆಂಟ್‌ನಲ್ಲಿ ತಿಳಿಸಿ.
ನಿಮ್ಮ ವಿವರಣೆ ಸರಿಯೇ? ಕೆಳಗಿನ ವಿಭಾಗದಲ್ಲಿ ನಿಮ್ಮ ಕಾಮೆಂಟ್‌ಗಳನ್ನು ಹಂಚಿಕೊಳ್ಳಿ.

click me!