ಅತ್ತೆ ಮನೆಯಲ್ಲಿ ಸುಖವಾಗಿರಲು ಎಲ್ಲ ಸೊಸೆಯಂದಿರೂ ಬಯಸುತ್ತಾರೆ. ಆದರೆ, ಮೂಲತಃ ಹೊಂದಾಣಿಕೆಯೇ ಇಲ್ಲಿರುವ ಬಹುದೊಡ್ಡ ಕಷ್ಟ. ಅದರಲ್ಲೂ ಅತ್ತೆ ಅಥವಾ ಅತ್ತೆ ಮನೆಯವರು ಸೊಸೆಯನ್ನು ನಿಯಂತ್ರಿಸುವ ಮನೋಭಾವದವರಾದರೆ ಇನ್ನೂ ಕಷ್ಟ. ಈ ಧೋರಣೆಯನ್ನು ಆರಂಭದಲ್ಲೇ ಗುರುತಿಸಿಕೊಂಡರೆ ಕ್ಷೇಮ.
ಸಂಬಂಧಗಳ (Relationship) ಮಧ್ಯೆ ಯಾವಾಗಲೂ ಒಂದು ಬೌಂಡರಿ ಅಥವಾ ಒಂದು ಸ್ಪೇಸ್ (Space) ಇರಬೇಕು. ಯಾವುದೇ ಸಂಬಂಧಕ್ಕಾದರೂ ಇದು ಸಲ್ಲುವ ಮಾತು. ಆಗಲೇ ಸಂಬಂಧಗಳು ಹೆಚ್ಚು ಆಪ್ತ (Intimate) ಹಾಗೂ ಉಸಿರಾಡಿಸಲು ಸಾಧ್ಯವಾಗುವಂತೆ ಇರುತ್ತವೆ. ಪತಿ-ಪತ್ನಿ (Husbond and Wife) ಸೇರಿದಂತೆ ಎಲ್ಲ ಸಂಬಂಧಗಳು ಅನಗತ್ಯ ಹಸ್ತಕ್ಷೇಪಕ್ಕೆ (Interference) ಒಳಗಾಗಬಾರದು. ಇನ್ನು, ಅತ್ತೆ-ಸೊಸೆಯ ಸಂಬಂಧವಂತೂ ಅತ್ಯಂತ ನಾಜೂಕು. ಅತ್ತೆ (Mother-in-Law) ಎಷ್ಟು ಒಳ್ಳೆಯವರಾಗಿದ್ದರೂ ಅವರು ಅತ್ತೆಯೇ. ಹಾಗೆಯೇ ಸೊಸೆ (Daughter-in- Law) ಕೂಡ. ಮಗಳಂತೆ “ಅಮ್ಮ’ ಎಂದೇ ಕರೆದರೂ ಸೊಸೆ ಮಗಳಾಗಲು ಖಂಡಿತ ಸಾಧ್ಯವಿಲ್ಲ. ಈ ಸಂಬಂಧದ ಸೂಕ್ಷ್ಮತೆಯನ್ನು ಉಳಿಸಿಕೊಂಡೇ ಹೋಗಬೇಕಾಗುತ್ತದೆ. ಇಲ್ಲವಾದಲ್ಲಿ ಮನೆಯಲ್ಲಿ ಉಸಿರು ಕಟ್ಟುವಂತಹ ವಾತಾವರಣ ನಿರ್ಮಾಣವಾಗುತ್ತದೆ.
ಪರಸ್ಪರ ಗೌರವದ (Respect) ಜತೆಗೆ ಅಗತ್ಯವಾದ “ದೂರ’ವೂ ಇದ್ದಾಗ ಅತ್ತೆ ಮನೆ ಚೆಂದ. ಇಲ್ಲವಾದಲ್ಲಿ ಅತ್ತೆ-ಮಾವಂದಿರು ತಮ್ಮ ದೈನಂದಿನ ಬದುಕು ಹಾಗೂ ನಿರ್ಧಾರಗಳಲ್ಲಿ ಬಹಳಷ್ಟು ಕೈಯಾಡಿಸುತ್ತಾರೆ ಎಂದೆನಿಸಲು ಶುರುವಾಗುತ್ತದೆ. ಅದು ಅಸಮಾಧಾನವಾಗಿ ಬೆಳೆದು ಕೊನೆಗೆ ಬೇರೆ ಸಂಸಾರ ಹೂಡುವಷ್ಟು ಬಿರುಕಾಗುತ್ತದೆ. ಹಾಗಾಗದಿರಲು ಆರಂಭದಲ್ಲೇ ಸ್ವಲ್ಪ ಮುನ್ನೆಚ್ಚರಿಕೆ ವಹಿಸಬೇಕು. ಅತ್ತೆ-ಮಾವ ನಿಮ್ಮ ಬದುಕಿನಲ್ಲಿ ಹಸ್ತಕ್ಷೇಪ ಮಾಡಲು ಆರಂಭಿಸಿದ್ದಾರೆ ಎನ್ನುವುದನ್ನು ಕೆಲವು ಸೂಚನೆಗಳ ಮೂಲಕ ತಿಳಿದುಕೊಳ್ಳಬಹುದು. ಅವುಗಳನ್ನು ಅರಿತುಕೊಂಡರೆ ಆರಂಭದಲ್ಲೇ ಅವರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಲು ಸಾಧ್ಯವಾಗುತ್ತದೆ.
Omelette Recipes: ಒಂದ್ಸಲ ಟ್ರೈ ಮಾಡಿ, ಮತ್ತೆ ಮೂರು ಹೊತ್ತು ಇದನ್ನೇ ತಿನ್ತೀರಾ !
• ನಿಮ್ಮ ಸ್ವಾತಂತ್ರ್ಯಕ್ಕೆ (Freedom) ಅಡ್ಡಿಪಡಿಸುವುದು
ಅತ್ತೆ ಹಾಗೂ ಸೊಸೆ ಇಬ್ಬರಿಗೂ ಹೊಂದಾಣಿಕೆ ಇರಬೇಕು. ಇಬ್ಬರಿಗೂ ಅವರದ್ದೇ ಆದ ಆದ್ಯತೆಗಳಿರುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ, ಇಬ್ಬರಿಗೂ ಬಹುದೊಡ್ಡ ಜನರೇಷನ್ ಗ್ಯಾಪ್ (Generation Gap) ಇರುತ್ತದೆ. ಹೀಗಾಗಿ, ನಿಮಗಿಂತ ಹಿಂದಿನ ಕಾಲದವರಾದ ಅತ್ತೆಯಂದಿರು ನಿಮ್ಮ ಡ್ರೆಸ್ (Dress), ಕೆಲವು ಆಹಾರ (Food), ಕೆಲಸಗಳಿಗೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆರಂಭದಲ್ಲಿ ನೀವು ಅವರ ಆಸೆಗೆ ಅನುಗುಣವಾಗಿ ನಡೆದುಕೊಂಡರೆ ಅವರಿಗೆ ಅದೇ ಅಭ್ಯಾಸವಾಗಿ, ನಿಮಗೆ ಕ್ರಮೇಣ ಹಿಂಸೆಯಾಗಲು ಶುರುವಾಗುತ್ತದೆ. ನಿಮ್ಮ ಸ್ವಾತಂತ್ರ್ಯ ಕಳೆದುಹೋಗದಂತೆ ಆರಂಭದಲ್ಲೇ ಎಚ್ಚರಿಕೆ ವಹಿಸಬೇಕು.
Relationship Tips: ನಿಮ್ಮ ಸ್ಥಾನಕ್ಕೆ ಬೇರೊಬ್ಬಳು ಬಂದರೆ ನೀವೇನು ಮಾಡಬೇಕು?
• ಬೈಯುವುದು (Abuse) ಅಥವಾ ಕೆಳಮಟ್ಟದಲ್ಲಿ ನೋಡುವುದು
ಕೆಲವು ಕುಟುಂಬಗಳಲ್ಲಿ ಸೊಸೆಯನ್ನು ಎರಡನೇ ದರ್ಜೆಯ ಪ್ರಜೆಯನ್ನಾಗಿ ನೋಡುವ ಮನೋಭಾವ ಇರುತ್ತದೆ. ಮಾತಿನಲ್ಲಿ ಚುಚ್ಚುವುದು, ಬೈಯುವುದು ಮಾಡಬಹುದು. ಇವುಗಳನ್ನು ಎದುರಿಸಲು ನಿಮ್ಮ ಪತಿಯೊಂದಿಗೆ ಮುಕ್ತ ಹಾಗೂ ಗಟ್ಟಿಯಾದ ಸಂಬಂಧ ಹೊಂದಿರುವುದು ಮುಖ್ಯ. ಇಲ್ಲವಾದರೆ, ಅತ್ತೆ ಮತ್ತು ಅತ್ತೆ ಮನೆಯವರ ಕಾರಣದಿಂದ ಪತಿ-ಪತ್ನಿಯರ ನಡುವೆ ಬಿರುಕು ಮೂಡಬಹುದು. ಗೌರವದ ಬದುಕು ಹಾಗೂ ಗೌರವದ ಸಂಬಂಧ ಬಯಸುವುದನ್ನು ಇಂತಹ ವರ್ತನೆ ಕಂಡುಬಂದಾಗಲೇ ತಿಳಿಸುವುದು ಸೂಕ್ತ.
• ನಿಮ್ಮ ಹಣಕಾಸಿನ (Finance) ನಿಯಂತ್ರಣಕ್ಕೆ (Control) ಯತ್ನಿಸುವುದು
ಮಕ್ಕಳು ಭವಿಷ್ಯಕ್ಕಾಗಿ ಸರಿಯಾದ ಹಣಕಾಸು ಯೋಜನೆ ಹೊಂದಿಲ್ಲ ಎನ್ನುವ ಆತಂಕ ಹಾಗೂ ದೂರನ್ನು ಸಾಮಾನ್ಯವಾಗಿ ಎಲ್ಲ ಪಾಲಕರೂ ಹೊಂದಿರುತ್ತಾರೆ. ಅದನ್ನವರು ನಿಮ್ಮ ಬಳಿಯೂ ಪದೇ ಪದೆ ಹೇಳಬಹುದು. ಆದರೆ, ಅಲ್ಲಿಯೂ ಒಂದು ಮಿತಿ ಅಗತ್ಯ. ನಿಮ್ಮ ನಿಖರವಾದ ಆದಾಯವೆಷ್ಟು, ಯಾವುದಕ್ಕೆ ಎಷ್ಟು ವೆಚ್ಚ ಮಾಡುತ್ತೀರಿ, ಎಲ್ಲಿ ಹೂಡಿಕೆ ಮಾಡಬೇಕು, ಪ್ರತಿ ತಿಂಗಳು ಹಣ ನೀಡು ಇತ್ಯಾದಿ ವಿಚಾರಗಳು ಎದುರಾದರೆ ಅದಕ್ಕೆ ಆಸ್ಪದ ನೀಡಬೇಡಿ. ಅತ್ಯಂತ ಅಪಾಯಕಾರಿ ಧೋರಣೆ ಎಂದೇ ಇದನ್ನು ಪರಿಗಣಿಸುವುದು ಸೂಕ್ತ. ಒಂದೊಮ್ಮೆ ನೀವು ನಿಮ್ಮ ಆದಾಯ, ವೆಚ್ಚ ಇತ್ಯಾದಿ ಮಾಹಿತಿಯನ್ನು ಅವರಿಗೆ ನೀಡಲು ಆರಂಭಿಸಿದರೆ ಅದಕ್ಕೆ ಕೊನೆ ಮೊದಲಿರುವುದಿಲ್ಲ. ಅದು ಯಾಕೆ, ಇದು ಬೇಕೆ ಎನ್ನುತ್ತ ಪ್ರತಿಯೊಂದು ನಿರ್ಧಾರವನ್ನು ತಾವೇ ಕೈಗೊಳ್ಳಲು ಆರಂಭಿಸುತ್ತಾರೆ. ಹಣಕಾಸು ನಿಯಂತ್ರಣವನ್ನು ಯಾರಿಗೂ ಒಪ್ಪಿಸುವುದು ಹಿತವಲ್ಲ. ಇದರಿಂದ ಭಾರೀ ಸಮಸ್ಯೆ ಎದುರಿಸಿದ ಸೊಸೆಯಂದಿರಿದ್ದಾರೆ. ಕೊನೆಗೆ, ನಿಮ್ಮ ಹೆಸರಿನಲ್ಲಿ ಸಾಲ ತೆಗೆಯುವುದು, ನಿಮ್ಮ ಆಭರಣಗಳನ್ನು ಅಡ ಇಡುವುದು ಇಂತಹ ಹಣಕಾಸು ದೌರ್ಜನ್ಯಗಳೂ ಆರಂಭವಾಗಬಹುದು. ಎಚ್ಚರಿಕೆ ಇರಲಿ.