ಒಬ್ಬರ ಮೇಲೆ ಇನ್ನೊಬ್ಬರು ಅಸೂಯೆ ಪಡುವುದು ಬಾಲ್ಯದಿಂದಲೇ ಶುರುವಾಗುತ್ತದೆ. ಪಾಲಕರ ಪ್ರೀತಿ ಹಂಚಿಕೆಯಾದಾಗ ಈ ಹೊಟ್ಟೆಕಿಚ್ಚು ಮಕ್ಕಳಲ್ಲಿ ಹೆಚ್ಚಾಗಿ ಕಾಣುತ್ತದೆ. ಆರಂಭದಲ್ಲಿ ತಮಾಷೆಯಾಗಿರುವ ಈ ವಿಷ್ಯ ಮುಂದೆ ಸಮಸ್ಯೆಯಾಗುತ್ತದೆ. ಹಾಗಾಗಿ ಆರಂಭದಲ್ಲಿಯೇ ಇದನ್ನು ಚಿವುಟಿ ಹಾಕುವ ಅಗತ್ಯವಿದೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳ (Children)ಲ್ಲೂ ಹಿರಿಯರಂತೆ ಅಸೂಯೆ (Jealousy) ಅಂದರೆ ಹೊಟ್ಟೆಕಿಚ್ಚು ಭಾವನೆ ಬಹುಬೇಗ ಹುಟ್ಟಿಕೊಳ್ತಿದೆ. ಚಿಕ್ಕ ವಯಸ್ಸಿನಲ್ಲೇ ಮಕ್ಕಳ ಮನಸ್ಸಿ (Mind)ನಲ್ಲಿ ಅಸೂಯೆ ಮೂಡುವುದು ಒಳ್ಳೆಯ ಲಕ್ಷಣವಲ್ಲ. ಸಹೋದರ ಅಥವಾ ಸಹೋದರಿಯ ಆಗಮನದ ನಂತ್ರ ಪೋಷಕರ ಪ್ರೀತಿ (Love )ವಿಭಜನೆಯಾದಾಗ ಮಕ್ಕಳಲ್ಲಿ ಹೆಚ್ಚಾಗಿ ಈ ಅಸೂಯೆ ಕಾಣಿಸಿಕೊಳ್ಳುತ್ತದೆ. ಇದು ತುಂಬಾ ಸಾಮಾನ್ಯವಾಗಿದೆ. ತಾಯಿ ವಿಷ್ಯದಲ್ಲಿ ಮಕ್ಕಳು ಅಸೂಯೆ ಪಡುವುದು ಹೆಚ್ಚು. ತಂದೆಗಿಂತ ತಾಯಿಯ ಜೊತೆ ಹೆಚ್ಚಿನ ಒಡನಾಟವಿರುವ ಕಾರಣ ಈ ಹೊಟ್ಟೆಕಿಚ್ಚು ಕಾಣಿಸಿಕೊಳ್ಳುತ್ತದೆ.
ಮಕ್ಕಳಲ್ಲಿ ಅಸೂಯೆ ಸಾಮಾನ್ಯ ಭಾವನೆ ಎಂದು ತಜ್ಞರು ಹೇಳುತ್ತಾರೆ. ಹೆತ್ತವರು ಹೊಸ ಅತಿಥಿಯನ್ನು ಹೆಚ್ಚು ಪ್ರೀತಿಸುತ್ತಿದ್ದಾರೆ,ನನ್ನ ಮೇಲೆ ಪ್ರೀತಿ,ಗಮನ ಕಡಿಮೆಯಾಗಿದೆ ಎಂಬ ಭಯದಿಂದ ಇದು ಉಂಟಾಗುತ್ತದೆ. ಕೆಲವೊಮ್ಮೆ ಈ ಅಸೂಯೆ ಮಕ್ಕಳಲ್ಲಿ ಎಷ್ಟರಮಟ್ಟಿಗೆ ಹೆಚ್ಚುತ್ತದೆ ಎಂದರೆ,ಒಡಹುಟ್ಟಿದವರನ್ನು ಪ್ರೀತಿಸುವ ಬದಲು ದ್ವೇಷಿಸಲು ಶುರು ಮಾಡ್ತಾರೆ. ಇದರಿಂದ ಅವರ ನಡುವೆ ಆಗಾಗ ಜಗಳ ನಡೆಯುತ್ತಿರುತ್ತದೆ. ಪೋಷಕರ ಜವಾಬ್ದಾರಿ ಈ ಸಂದರ್ಭದಲ್ಲಿ ಹೆಚ್ಚಿರುತ್ತದೆ. ಮಕ್ಕಳಲ್ಲಿ ಅಸೂಯೆ ಮೂಡದಂತೆ ನೋಡಿಕೊಳ್ಳಬೇಕಾಗುತ್ತದೆ. ಮಕ್ಕಳಲ್ಲಿ ಅಸೂಯೆಯ ಭಾವನೆಯನ್ನು ಹೋಗಲಾಡಿಸಲು ಪಾಲಕರು ಏನು ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೆವೆ.
ಅಸೂಯೆ ಹೋಗಲಾಡಿಸಲು ಪಾಲಕರು ಮಾಡಬೇಕಾದ ಕೆಲಸ :
ಮಕ್ಕಳ ಗಮನವನ್ನು ಮಹಾತ್ವಾಕಾಂಕ್ಷೆಕಡೆ ತಿರುಗಿಸಿ : ನಿಮ್ಮ ಮಗುವಿನಲ್ಲಿ ಅಸೂಯೆ ಮೂಡುತ್ತಿದೆ ಎಂಬುದು ನಿಮಗನಿಸಿದ್ರೆ ಅವರ ಗಮನವನ್ನು ಬೇರೆಕಡೆ ತಿರುಗಿಸಿ. ಅವರ ಓದಿನ ಬಗ್ಗೆ ಹೆಚ್ಚು ಗಮನ ನೀಡಿ. ಹೆಚ್ಚು ಅಧ್ಯಯನ ಮಾಡಲು ಮತ್ತು ಉತ್ತಮ ಅಂಕಗಳನ್ನು ಪಡೆಯಲು ಪ್ರೋತ್ಸಾಹಿಸಿ. ಇಲ್ಲವೇ ಬೇರೆ ಕಲೆಗಳನ್ನು ಅವರಿಗೆ ಕಲಿಸುವ ಪ್ರಯತ್ನ ಮಾಡಿ.
ಮಕ್ಕಳ ಮಾತನ್ನೂ ಕೇಳಿ : ನಿಮ್ಮ ಮಗುವಿನ ಜೊತೆ ಮಾತನಾಡಿ ಮತ್ತು ಅವರ ಅಸೂಯೆಪಡುವ ಕಾರಣಗಳನ್ನು ಕಂಡುಹಿಡಿಯಿರಿ.ತಾಳ್ಮೆಯಿಂದ ಅವರು ಹೇಳುವ ಪ್ರತಿಯೊಂದು ಮಾತುಗಳನ್ನೂ ಕೇಳಿ. ಅನೇಕ ಪಾಲಕರು,ಮಗುವಿನ ಮಾತನ್ನು ನಿರ್ಲಕ್ಷ್ಯಿಸುತ್ತಾರೆ. ಇನ್ನೊಂದು ಮಗುವಿನ ಆರೈಕೆಗೆ ಹೆಚ್ಚಿನ ಸಮಯ ನೀಡುವುದ್ರಿಂದ ಈ ಮಗುವಿಗೆ ಮೊದಲು ನೀಡ್ತಿದ್ದ ಆದ್ಯತೆ ನೀಡಲಾಗುವುದಿಲ್ಲ. ಆಗ ಮಗುವಿನ ಆತ್ಮ ವಿಶ್ವಾಸ ಕಡಿಮೆಯಾಗುತ್ತದೆ. ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. ಮಗು ಇನ್ನೊಂದು ಮಗುವಿನ ಮೇಲೆ ಅಸೂಯೆಪಡಲು ಶುರು ಮಾಡುತ್ತದೆ. ಇದು ಬರೀ ಸಹೋದರ,ಸಹೋದರಿ ಮಧ್ಯೆ ಆಗ್ಬೇಕಾಗಿಲ್ಲ,ಕೆಲವೊಮ್ಮೆ ಸ್ನೇಹಿತರ ಮಧ್ಯೆಯೂ ಅಸೂಯೆ ಮೂಡುತ್ತದೆ. ಆಗ ಮಕ್ಕಳ ಮಾತನ್ನು ಆಲಿಸಿ,ಅವರ ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ಬಗೆಹರಿಸುವ ಪ್ರಯತ್ನ ಮಾಡಬೇಕು.
Laughing during sex: ಶಾರೀರಿಕ ಸಂಬಂಧ ಬೆಳೆಸುವ ವೇಳೆ ನಗ್ತಾಳಂತೆ ಪತ್ನಿ!
ಬೇರೆಯವರ ಜೊತೆ ಹಂಚಿಕೊಳ್ಳುವ ಅಭ್ಯಾಸ ಕಲಿಸಿ : ಮಕ್ಕಳು ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆ ಇತರರ ಮೇಲೆ ದ್ವೇಷಪಡುತ್ತಾರೆ. ಯಾರ ಬಳಿಯೂ ಅವರ ವಸ್ತುಗಳನ್ನು ಹಂಚಿಕೊಳ್ಳುವುದಿಲ್ಲ. ನಿಮ್ಮ ಮಗು ಇದನ್ನು ಮಾಡುತ್ತಿದ್ದರೆ ಹಂಚಿಕೊಳ್ಳುವ ಮಹತ್ವವನ್ನು ಅವರಿಗೆ ತಿಳಿಸಿ. ನಿಧಾನವಾಗಿ ಹಂಚಿಕೊಳ್ಳುವ ಅಭ್ಯಾಸವನ್ನು ಮಗು ಶುರು ಮಾಡ್ತಿದ್ದಂತೆ ಆ ಕ್ಷಣವನ್ನು ಅದು ಆನಂದಿಸಲು ಶುರು ಮಾಡುತ್ತದೆ. ಜೊತೆಗೆ ಆಡುವ ಅಭ್ಯಾಸ ಬೆಳೆಯುತ್ತದೆ. ಅಭದ್ರತೆ ಕಡಿಮೆಯಾಗುತ್ತದೆ.
ಮಗುವನ್ನು ಪ್ರೀತಿಸಿ : ಮಕ್ಕಳು ತುಂಬಾ ಮುಗ್ದರಾಗಿರುತ್ತಾರೆ. ಪೋಷಕರಿಂದ ಹೆಚ್ಚಿನ ಪ್ರೀತಿ ಮತ್ತು ಬೆಂಬಲ ಬಯಸುತ್ತಾರೆ. ಅಸೂಯೆ ಪಟ್ಟುಕೊಳ್ಳಲು ಕಾರಣವೇನೇ ಇರಲಿ, ತಂದೆಯ ಮಾರ್ಗದರ್ಶನ ಮತ್ತು ತಾಯಿಯ ಪ್ರೀತಿ ಅವರ ಮನಸ್ಸನ್ನು ಬದಲಿಸುವ ಶಕ್ತಿ ಹೊಂದಿರುತ್ತದೆ. ಪ್ರತಿ ಮಗು ತನ್ನ ಸಾಮರ್ಥ್ಯದ ಬಗ್ಗೆ ಪೋಷಕರಿಂದ ಕೇಳಲು ಇಷ್ಟಪಡುತ್ತದೆ. ನಿಮ್ಮ ಮಗುವಿನ ಸಾಮರ್ಥ್ಯವನ್ನು ಸಹ ನೀವು ಹೈಲೈಟ್ ಮಾಡಬೇಕು. ಇದರಿಂದ ಅವರ ಧೈರ್ಯ ಹೆಚ್ಚುತ್ತದೆ.
MARRIED LIFE: ಗಂಡ-ಹೆಂಡ್ತಿ ಮಧ್ಯೆ ಯಾವಾಗ್ಲೂ ಜಗಳಾನ ? ಖುಷಿಯಾಗಿರಲು ಹೀಗೆ ಮಾಡಿ
ಪರಸ್ಪರ ಸಹಕಾರ : ಮಕ್ಕಳಲ್ಲಿ ಕಿರಿಕಿರಿಯನ್ನು ಕಡಿಮೆ ಮಾಡಲು ಇದು ಅತ್ಯುತ್ತಮ ಮಾರ್ಗವಾಗಿದೆ. ಬಾಲ್ಯದಿಂದಲೂ ಅವರಿಗೆ ಪರಸ್ಪರ ಬೆಂಬಲಿಸುವ ಕಲೆ ಕಲಿಸಿ. ಇತರರಿಗೆ ಸಹಾಯ ಮಾಡಲು ಮತ್ತು ಒಟ್ಟಿಗೆ ಕೆಲಸ ಮಾಡಲು ಅವರಿಗೆ ಹೇಳಿಕೊಡಿ. ಸಣ್ಣಪುಟ್ಟ ಕೆಲಸಗಳನ್ನು ಮಗು ಮಾಡಿದಾಗ ಅವರನ್ನು ಪ್ರೋತ್ಸಾಹಿಸಿ. ಆಗ ಖುಷಿಯಾಗಿ ಮಕ್ಕಳು ಮತ್ತೊಂದಿಷ್ಟು ಒಳ್ಳೆ ಕೆಲಸ ಮಾಡಲು ಯತ್ನಿಸುತ್ತಾರೆ. ಒಳ್ಳೆಯ ಕೆಲಸವನ್ನು ಮಾಡಿ,ಪ್ರಶಂಸೆ ಪಡೆದಾಗ ಮಗುವಿನ ಗಮನ ಸಕಾರಾತ್ಮಕ ಭಾವನೆಗಳ ಕಡೆಗೆ ತಿರುಗುತ್ತದೆ. ಮಗುವಿನಲ್ಲಿ ಅಸೂಯೆ ಕಡಿಮೆಯಾಗುತ್ತದೆ.