ಖುಷಿ ಪಡೋವಂಥ ವಿಷಯ ಹೇಳಿದ್ರೂ ಬೇಜಾರು ಮಾಡಿಕೊಂಡ್ರೆ ಡಿಪ್ರೆಶನ್ ಲಕ್ಷಣವೇ?

By Suvarna News  |  First Published Sep 29, 2023, 7:00 AM IST

ಖಿನ್ನತೆ ಸಂಬಂಧವನ್ನು ಸುಲಭವಾಗಿ ಹಾಳು ಮಾಡುತ್ತದೆ. ಸಂಗಾತಿ ವರ್ತನೆ ಬದಲಾಗಿದೆ ಎಂಬ ಕಾರಣವಿಟ್ಟುಕೊಂಡು ನೀವು ಜಗಳಕ್ಕೆ ನಿಂತಾಗ ಸಮಸ್ಯೆ ಬಗಹರಿಯುವ ಬದಲು ಹದಗೆಡುತ್ತದೆ. ಎಲ್ಲ ಕೈಮೀರಿ ಹೋಗುವ ಮುನ್ನ ಏನು ಮಾಡ್ಬೇಕು ಗೊತ್ತಾ?
 


ಸಂಗಾತಿ ಜೊತೆ ಸಂತೋಷವಾಗಿರಬೇಕೆಂಬುದು ಎಲ್ಲರ ಬಯಕೆ. ಪ್ರೀತಿ, ಪ್ರಣಯ ಹಾಗೂ ಶಾಂತಿಯ ಜೀವನ ಸಿಕ್ಕರೆ ಅದಕ್ಕಿಂತ ಮತ್ತೇನೂ ಬೇಕಾಗಿರೋದಿಲ್ಲ. ಆದ್ರೆ ಎಲ್ಲ ಸಮಯವೂ ಒಂದೇ ರೀತಿ ಇರಲು ಸಾಧ್ಯವಿಲ್ಲ. ಆನಂದ, ಖುಷಿಯ ಜೀವನದಲ್ಲಿ ಜಗಳ, ಗಲಾಟೆ, ಭಿನ್ನಾಭಿಪ್ರಾಯ ಕೂಡ ಕಾಣಿಸಿಕೊಳ್ಳಬಹುದು. ಎಲ್ಲರ ಜೀವನದಲ್ಲೂ ಇದು ಸಾಮಾನ್ಯ ಎಂಬುದು ತಿಳಿದಿರಬೇಕು. ನಿಮ್ಮಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಕಾಣಿಸಿಕೊಂಡಾಗ ಪ್ರತಿ ಬಾರಿ ಸಂಗಾತಿ ಮೇಲೆ ರೇಗಾಡುವುದು, ಅವರನ್ನೇ ತಪ್ಪಿತಸ್ಥರನ್ನಾಗಿ ಮಾಡುವುದು ತಪ್ಪು. ನಮಗೆ ನಮ್ಮ ಸ್ವಾರ್ಥ, ನಮ್ಮ ಸುಖವೇ ಮುಖ್ಯವಾಗುತ್ತದೆ. ನಾನು ನಮ್ಮ ದೃಷ್ಟಿಕೋನದಲ್ಲಿಯೇ ಆಲೋಚನೆ ಮಾಡ್ತೇವೆ. ನಮ್ಮ ಸಮಸ್ಯೆಯನ್ನು ಮಾತ್ರ ಗಮನಿಸ್ತಾ ಅದ್ರಲ್ಲೇ ಕಳೆದು ಹೋಗ್ತಾವೆ. ಈ ಒತ್ತಡದ ಜೀವನದಲ್ಲಿ ಸಂಗಾತಿ ಯಾವ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಅವರ ಮನಸ್ಥಿತಿ ಹೇಗಿದೆ ಎಂಬುದನ್ನು ತಿಳಿಯುವ ಪ್ರಯತ್ನ ನಡೆಸೋದಿಲ್ಲ. 

ಸಂಗಾತಿ (Spouse) ಬಗ್ಗೆ ನೀವು ಹೊಂದುವ ನಿರ್ಲಕ್ಷ್ಯ ಅವರ ಒತ್ತಡ ಮತ್ತು ಆತಂಕವನ್ನು ಹೆಚ್ಚಿಸಬಹುದು.  ನಿಮ್ಮ ಆಗುಹೋಗುಗಳ ಜೊತೆ ಸಂಗಾತಿ ಬಗ್ಗೆ ನೀವು ಗಮನ ಹರಿಸಬೇಕು. ಕೆಲವೊಂದು ಆರಂಭಿಕ ಖಿನ್ನತೆ (Depression) ಲಕ್ಷಣಗಳನ್ನು ನೀವು ಅವರಲ್ಲಿ ಗುರುತಿಸಿದ್ದರೆ ಸೂಕ್ತ ಚಿಕಿತ್ಸೆ, ಬೆಂಬಲದ ಮೂಲಕ ಖಿನ್ನತೆಯಿಂದ ಅವರನ್ನು ಹೊರತರಲು ಪ್ರಯತ್ನಿಸಬಹುದು. 

Tap to resize

Latest Videos

ಕಾಮಾಸಕ್ತಿ ಹೆಚ್ಚು, ಕಡಿಮೆಯಾಗೋದ್ರಲ್ಲೇ ತಿಳೀಬಹುದು ಆರೋಗ್ಯ ಸಮಸ್ಯೆ

ಸಂಗಾತಿಯಲ್ಲಿ ಕಾಣಿಸಿಕೊಳ್ಳುವ ಖಿನ್ನತೆಯ ಆರಂಭಿಕ ಲಕ್ಷಣ : 

ನಿದ್ರೆ (Sleep) ಯಲ್ಲಿ ಏರುಪೇರು : ಸಂಗಾತಿ ನಿದ್ರೆಯಲ್ಲಾಗುವ ಬದಲಾವಣೆ ಮೂಲಕವೇ ನೀವು ಅವರಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಪತ್ತೆ ಮಾಡಬಹುದು. ನಿಮ್ಮ ಸಂಗಾತಿ ಮೊದಲಿಗಿಂತ ಹೆಚ್ಚು ನಿದ್ರೆ ಮಾಡ್ತಿದ್ದರೆ ಅಥವಾ ಅತಿ ಕಡಿಮೆ ನಿದ್ರೆ ಮಾಡ್ತಿದ್ದರೆ, ಮಧ್ಯರಾತ್ರಿ ನಿದ್ರೆ ಬರದೆ ಚಡಪಡಿಸುತ್ತಿದ್ದರೆ ಅವರು ಯಾವುದೋ ಚಿಂತೆಯಲ್ಲಿ ಮುಳುಗಿದ್ದಾರೆ, ಖಿನ್ನತೆ ಆರಂಭಿಕ ಲಕ್ಷಣ ಅವರಲ್ಲಿ ಕಾಣಿಸಿಕೊಂಡಿದೆ ಎಂದು ನೀವು ಅರ್ಥೈಸಿಕೊಳ್ಳಬಹುದು.

ಹೆಂಡತಿಗೆ ಹೊಡೆಯೋ ಗಂಡಂದಿರೇ ಇಲ್ ಕೇಳಿ, ನಿಮ್ಮ ದುಷ್ಕೃತ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!

ಏಕಾಏಕಿ ಬರುವ ಕೋಪ, ಕಿರಿಕಿರಿ : ಶಾಂತ ಸ್ವಭಾವದ ಸಂಗಾತಿಗೆ ಸಣ್ಣ ವಿಷ್ಯಕ್ಕೂ ಕೋಪ ಬರ್ತಿದೆ, ಮಾತು – ಮಾತಿಗೂ ಕಿರಿಕಿರಿ ಅನುಭವಿಸುತ್ತಿದ್ದಾರೆ ಎಂದಾದ್ರೆ ನಿಮ್ಮ ಸಂಗಾತಿ ಮನಸ್ಥಿತಿ ಸರಿಯಿಲ್ಲ ಎಂದೇ ಅರ್ಥ. ಖಿನ್ನತೆಯ ಆರಂಭದಲ್ಲಿ ಅತಿಯಾದ ಕೋಪ, ಕಿರಿಕಿರಿ ಕಾಡುತ್ತದೆ.

ಸಮಾಜದಿಂದ ದೂರ : ಖಿನ್ನತೆಗೆ ಒಳಗಾದ ಯಾವುದೇ ವ್ಯಕ್ತಿ ಸಮಾಜದ ಜೊತೆ ಬೆರೆಯುವ ಮನಸ್ಸು ಮಾಡೋದಿಲ್ಲ. ಸದಾ ಏಕಾಂಗಿಯಾಗಿರಲು ಬಯಸುತ್ತಾರೆ. ಪಾರ್ಟಿ, ಕುಟುಂಬದ ಕಾರ್ಯಕ್ರಮ, ಸಮಾರಂಭದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವುದಿಲ್ಲ. ಅವರ ಮಾತು, ಮಾತಿನ ದಾಟಿಯಲ್ಲಿ ಬದಲಾವಣೆಯಾಗಿರುತ್ತದೆ. ಸೋಶಿಯಲ್ ಆಗಿದ್ದವರು ಮನೆಯಲ್ಲಿ ಬಂಧಿಯಾಗಲು ಇಷ್ಟಪಡ್ತಿದ್ದರೆ ಈ ಬಗ್ಗೆ ಹೆಚ್ಚು ಗಮನ ಹರಿಸುವುದು ಒಳ್ಳೆಯದು.

ಸದಾ ದುಃಖ, ಉದಾಸೀನ : ಅತ್ಯಂತ ಸಂತೋಷದ ವಿಷ್ಯವನ್ನೂ ಉದಾಸೀನವಾಗಿ ತೆಗೆದುಕೊಳ್ತಿದ್ದರೆ, ಒಂದಲ್ಲ ಒಂದು ಕಾರಣ ಹೇಳಿ ದುಃಖಿಸುತ್ತಿದ್ದರೆ ಸಂಗಾತಿ ಖಿನ್ನತೆಯ ಆರಂಭಿಕ ಲಕ್ಷಣದಲ್ಲಿದ್ದಾರೆ ಎಂದೇ ಅರ್ಥ. ಮೊದಲಿನಂತೆ ನಗು, ಸಂತೋಷ, ಉತ್ಸಾಹ ಅವರಲ್ಲಿ ಕಂಡು ಬರ್ತಿಲ್ಲ ಎಂದಾದ್ರೆ, ನಿಮ್ಮ ಜೊತೆ ಮಾತು ಕಡಿಮೆಯಾಗಿದೆ, ಸದಾ ಮೌನವಾಗಿರ್ತಾರೆ, ಯಾವುದೇ ವಿಷ್ಯದಲ್ಲಿ ಆಸಕ್ತಿ ಇಲ್ಲ ಎಂದಾದ್ರೆ ಇದು ಸಂಗಾತಿ ಖಿನ್ನತೆಗೊಳಗಾಗಿದ್ದಾರೆ ಎಂಬ ಸೂಚನೆಯಾಗಿದೆ. 

ಖಿನ್ನತೆಗೊಳಗಾದ ಸಂಗಾತಿಗೆ ನೆರವಾಗೋದು ಹೇಗೆ? : ನಿಮ್ಮ ಸಂಗಾತಿ ಖಿನ್ನತೆಗೆ ಒಳಗಾಗ್ತಿದ್ದಾರೆ ಎಂಬುದು ನಿಮ್ಮ ಅರಿವಿಗೆ ಬಂದ್ರೆ ಅವರನ್ನು ದೂರವಿಡುವ ಬದಲು ಹೆಚ್ಚು ಪ್ರೀತಿ ತೋರಿಸುವ ಪ್ರಯತ್ನ ಮಾಡಿ. ಅವರ ಕೆಲಸಗಳನ್ನು ವಿರೋಧಿಸುವ ಬದಲು ಅವರಿಗೆ ಬೆಂಬಲವಾಗಿ ನಿಲ್ಲಿ. ಖಿನ್ನತೆಯಿಂದ ಹೊರಬರಲು ಅವರಿಗೆ ಸಹಾಯ ಮಾಡಿ. ಸಂಗಾತಿಯನ್ನು ಸೂಕ್ತ ತಜ್ಞರ ಬಳಿ ಕರೆದೊಯ್ದು ಚಿಕಿತ್ಸೆ ಕೊಡಿಸುವ ಅಗತ್ಯವಿದ್ರೆ ಅದನ್ನು ಮಾಡಲು ಹಿಂಜರಿಯಬೇಡಿ.  
 

click me!