ಮಾಲೀಕನ ಸಾವಿನಿಂದ ಆಘಾತಕ್ಕೀಡಾದ ಶ್ವಾನ: ಆಹಾರ ತಿನ್ನದ ಸಿಧು ಮೂಸೆವಾಲಾ ನಾಯಿ

By Anusha Kb  |  First Published Jun 1, 2022, 10:38 AM IST

ಸಿಧು ಮೂಸೆವಾಲಾ ಅವರ ಸಾವಿನಿಂದ ಅವರ ಪ್ರೀತಿಯ ಶ್ವಾನ ಖಿನ್ನತೆಗೆ ಜಾರಿದ್ದು ಆಹಾರ ಸೇವನೆಗೆ ನಿರಾಕರಿಸುತ್ತಿದೆ. ಶ್ವಾನದ ವಿಡಿಯೋ ವೈರಲ್ ಆಗಿದ್ದು, ನೋಡುಗರ ಕಣ್ಣಲ್ಲಿ ನೀರು ತರಿಸುತ್ತಿದೆ. 


ಮನ್ಸಾ: ಪಂಜಾಬಿ ಗಾಯಕ ಸಿಧು ಮೂಸೇವಾಲಾ ಸಾವಿನಿಂದ ಕೇವಲ ಅವರ ಅಭಿಮಾನಿಗಳು, ಕುಟುಂಬದವರು, ಪೋಷಕರು ದುಃಖತಪ್ತರಾಗಿದ್ದು, ಕೇವಲ ಇವರು ಮಾತ್ರವಲ್ಲದೇ ಮೂಸೇವಾಲಾ ಅವರ ಪ್ರೀತಿಯ ಶ್ವಾನ ಕೂಡ ತೀವ್ರ ಆಘಾತಕ್ಕೊಳಗಾಗಿದ್ದು, ಆಹಾರ ಸೇವನೆಗೆ ನಿರಾಕರಿಸುತ್ತಿದೆ. ಮಾಲೀಕನನ್ನು ತೀವ್ರವಾಗಿ ಮಿಸ್ ಮಾಡಿಕೊಳ್ಳುತ್ತಿರುವ ಬಹುಶಃ ಶ್ವಾನ ತನಗೇನಾಗುತ್ತಿದೆ ಎಂದು ಹೇಳಲಾಗದ ಸ್ಥಿತಿಯಲ್ಲಿದೆ. 

ಖ್ಯಾತ ಪಂಜಾವಿ ಗಾಯಕ (Punjabi singer) ಹಾಗೂ ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ (Sidhu Moosewala) ಅವರನ್ನು ಭಾನುವಾರ ಅಪರಿಚಿತ ದುಷ್ಕರ್ಮಿಗಳು ಪಂಜಾಬ್‌ನ ಮನ್ಸಾ ಜಿಲ್ಲೆಯಲ್ಲಿ (Mansa district) ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದು ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಅವರ ಸಾವಿನಿಂದ ಅವರ ನೂರಾರು ಅಭಿಮಾನಿಗಳು ದುಃಖ ಹತಾಶೆ ಹಾಗೂ ಶಾಕ್‌ಗೆ ಒಳಗಾಗಿದ್ದರು.

 
 
 
 
 
 
 
 
 
 
 
 
 
 
 

Tap to resize

Latest Videos

A post shared by Instant Bollywood (@instantbollywood)

ಗಾಯಕ ಸಿದು ಹತ್ಯೆ ಮತ್ತು ಮುನ್ನಲೆಗೆ ಬಂದ ಪಂಜಾಬ್‌ ಗ್ಯಾಂಗ್‌ಸ್ಟರ್‌ಗಳ ರಕ್ತಸಿಕ್ತ ಇತಿಹಾಸ
 

ಜೊತೆಗೆ ಅವರ ಶ್ವಾನವೂ ಕೂಡ ಮಾಲೀಕನ ಸಾವಿನಿಂದ ತೀವ್ರ ಹತಾಶೆಗೆ ಒಳಗಾಗಿದೆ. ಈ ಶ್ವಾನ ಆಹಾರ ತಿನ್ನಲು ನಿರಾಕರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಶ್ವಾನವೂ ಮಾಲೀಕನ ಸಾವಿನಿಂದ ಖಿನ್ನತೆಗೆ ಜಾರಿದ್ದು, ಏನೂ ನೀಡಿದರೂ ತಿನ್ನಲು ನಿರಾಕರಿಸುತ್ತಿದೆ. ಮನೆಯ ಮೂಲೆಯೊಂದರಲ್ಲಿ ಶ್ವಾನ ಬಿದ್ದುಕೊಂಡಿದ್ದೆ. ಅಲ್ಲದೇ ಇನ್ನೊಂದು ಶ್ವಾನ ಸಣ್ಣ ಧ್ವನಿಯಲ್ಲಿ ಕೊರಗುವುದು ಕೇಳಿಸುತ್ತಿದೆ. ಬಹುಶಃ ಈ ಶ್ವಾನಗಳಿಗೆ ಸಾವಿನ ಅರಿವಿದೆಯೋ ತಿಳಿಯದು ಆದರೆ ಅವುಗಳು ತಮ್ಮ ಮಾಲೀಕನ ಅನುಪಸ್ಥಿತಿಯನ್ನು ನೆನೆದು ಕೊರಗುತ್ತಿರುವುದಂತು ನಿಜ. ಈ ವಿಡಿಯೋ ನೋಡುಗರ ಕಣ್ಣಲ್ಲಿ ನೀರು ತರಿಸುತ್ತಿದೆ. ಅನೇಕರು ವಿಡಿಯೋ ನೋಡಿ ಹೃದಯ ಒಡೆದ ಇಮೋಜಿಗಳನ್ನು ಕಾಮೆಂಟ್ ಮಾಡುತ್ತಿದ್ದಾರೆ.

ಈ ಮಧ್ಯೆ ಸಾವಿರಾರು ಜನ ಸಿಧು ಅಭಿಮಾನಿಗಳು ತಮ್ಮ ನಾಯಕ ಅಥವಾ ತಮ್ಮ ಪ್ರೀತಿಯ ಗಾಯಕನಿಗೆ ಅಂತಿಮ ನಮನ ಸಲ್ಲಿಸಲು ಸಿಧು ಮೂಸೆವಾಲಾ ನಿವಾಸದೆದುರು ಸೇರಿದ್ದರು. ತಮ್ಮ ಕೆಲವು ಸಂಬಂಧಿಗಳ ಜೊತೆ ಮೂಸೆವಾಲಾ ಅವರ ತಂದೆ ತಮ್ಮ ಪುತ್ರನ ದೇಹವನ್ನು ಮನ್ಸಾ ಸಿವಿಲ್ ಆಸ್ಪತ್ರೆಯಿಂದ ಸ್ವೀಕರಿಸಿದರು. ಅಲ್ಲಿ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಇರಿಸಲಾಗಿತ್ತು. ನಂತರ ಮನ್ಸಾ ಜಿಲ್ಲೆಯಲ್ಲಿರುವ ಸಿಧು ಮೂಸೆವಾಲಾ ನಿವಾಸಕ್ಕೆ ಮೃತದೇಹವನ್ನು ಸಾಗಿಸಲಾಗಿತ್ತು. ಈ ವೇಳೆ ಸಿಧು ಮೂಸೆವಾಲಾ ನಿವಾಸದೆದುರು ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. 

2 ಕಿಮೀ ನಡೆದು ಮಾಲೀಕನಿಗೆ ಊಟ ತಲುಪಿಸುವ ಶ್ವಾನ: ವಿಡಿಯೋ ವೈರಲ್‌
28 ವರ್ಷ ಪ್ರಾಯದ ಈ ಪಂಜಾಬಿ ಗಾಯಕ ಇತ್ತೀಚೆಗೆ ಪಂಜಾಬ್ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮನ್ಸಾ ಜಿಲ್ಲೆಯಿಂದ ಸ್ಪರ್ಧಿಸಿದ್ದರು. ಆದರೆ ಎಎಪಿಯ ವಿಜಯ್ ಸಿಂಗ್ಲಾ (Vijay Singla) ವಿರುದ್ಧ ಅವರು ಸೋಲು ಕಂಡಿದ್ದರು.

ಸಿದು ಮೂಸೆವಾಲಾ ಹತ್ಯೆಯಿಂದ ಪಂಜಾಬಿನ ಗ್ಯಾಂಗ್‌ಸ್ಟರ್‌ಗಳ ರಕ್ತಸಿಕ್ತ ಇತಿಹಾಸ ಮತ್ತೆ ಮುನ್ನಲೆಗೆ ಬಂದಿದೆ. ಮೂಸೆವಾಲಾ ಹತ್ಯೆಯ ಹೊಣೆಯನ್ನು ಕೆನಡಾದಲ್ಲಿ ನೆಲೆಸಿರುವ ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್‌ (Canada-based gangster goldy brar) ಹೊತ್ತಿದ್ದಾನೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಗೋಲ್ಡಿ ಬ್ರಾರ್‌, 2021ರಲ್ಲಿ ನಡೆದ ಸ್ನೇಹಿತ ವಿಕ್ಕಿ ಹತ್ಯೆಗೆ ಪ್ರತ್ಯುತ್ತರವಾಗಿ ಸಿದು ಮೂಸೆವಾಲಾರನ್ನು ಹತ್ಯೆ ಮಾಡಿದ್ದೇವೆ ಎಂದು ಹೇಳಿದ್ದಾನೆ. ಅಷ್ಟಕ್ಕೂ ಹತ್ಯೆಗೆ ರಷ್ಯನ್‌ ಅಸಾಲ್ಟ್‌ ರೈಫಲ್‌ ಬಳಕೆ ಮಾಡಲಾಗಿದೆ. ಇವೆಲ್ಲವನ್ನೂ ಗಮನಿಸಿದರೆ ಪಂಜಾಬಿನ ಗ್ಯಾಂಗ್‌ಗಳ ಆಳ ಅಗಲದ ಪರಿಚಯವಾಗುತ್ತದೆ. 

click me!