Divorce: 11 ವರ್ಷವಾದ್ರೂ ಗಂಡನ ಜೊತೆ ಸೇರಲು ಈ ಮಹಿಳೆಗೆ ಸಿಗ್ಲಿಲ್ಲ ಮುಹೂರ್ತ!

By Suvarna NewsFirst Published Jan 5, 2022, 3:56 PM IST
Highlights

ಮದುವೆಯಾದ್ಮೇಲೂ ಒಂಟಿಯಾಗಿರುವ ಅಂದ್ರೆ ಹೆಂಗೆ? ಒಂದೋ ಎರಡೋ ದಿನ ಇರಬಹುದು. ಹೆಚ್ಚು ಅಂದ್ರೆ ಒಂದೆರಡು ತಿಂಗಳು ದೂರ ಇರ್ಬಹುದು. ಬರೋಬ್ಬರಿ 11 ವರ್ಷ ಕಾದ್ರೂ ಹೆಂಡತಿ ಜೊತೆಗೆ ಬಂದಿಲ್ಲ ಅಂದ್ರೆ ಏನ್ ಮಾಡೋದು? 

ಹಿಂದೂ ಧರ್ಮ (Hinduism)ದಲ್ಲಿ ಮುಹೂರ್ತಕ್ಕೆ ಮಹತ್ವವಿದೆ. ಶುಭ (Good )ಕೆಲಸ ಮಾಡುವಾಗ ಶುಭ ಗಳಿಗೆ,ದಿನ,ಮುಹೂರ್ತ ನೋಡಲಾಗುತ್ತದೆ. ದಂಪತಿ ಸುಖವಾಗಿರಬೇಕೆಂಬ ಕಾರಣಕ್ಕೆ ಜಾತಕ,ಮುಹೂರ್ತ ನೋಡಿ ಮದುವೆ ಮಾಡಲಾಗುತ್ತದೆ. ಜಾತಕದಲ್ಲಿ ಹೊಂದಾಣಿಕೆಯಾದರೆ ಜೋಡಿ, ಜೀವನ ಪರ್ಯಂತ ಸುಖವಾಗಿರುತ್ತಾರೆಂಬ ನಂಬಿಕೆಯಿದೆ. ಮದುವೆ ಮಾತ್ರವಲ್ಲ ಮದುವೆ ನಂತ್ರ ನಡೆಯುವ ಮೊದಲ ರಾತ್ರಿಗೂ ಅನೇಕ ಕಡೆ ಮುಹೂರ್ತ ನೋಡಲಾಗುತ್ತದೆ.

ಶುಭ ಮುಹೂರ್ತ ಸಿಕ್ಕಿಲ್ಲವೆಂದ್ರೆ ದಂಪತಿ ಒಂದೆರಡು ದಿನ ಕಾಯಬೇಕಾಗುತ್ತದೆ.  ಮುಹೂರ್ತಕ್ಕೆ ವಾರಗಟ್ಟಲೆ ಕಾದು, ವಿರಹ ವೇದನೆ ಅನುಭವಿಸಿದ ಜೋಡಿಗಳೂ ಇವೆ. ಆದ್ರೆ ಈ ನಂಬಿಕೆ ಒಂದು ಸಂಸಾರ ಹಾಳು ಮಾಡ್ಬಾರದು. ಇಬ್ಬರು ಒಂದಾಗಿ ಬಾಳಿದಾಗ ಮಾತ್ರ ದಾಂಪತ್ಯವಾಗುತ್ತದೆ. ಕೂಡಿ ಬಾಳ್ವೆ ನಡೆಸುವಾಗ ಶಾರೀರಿಕ ಸಂಬಂಧವೂ ಮಹತ್ವ ಪಡೆಯುತ್ತದೆ. ಸಂಭೋಗ ದಾಂಪತ್ಯವನ್ನು ಗಟ್ಟಿಗೊಳಿಸುತ್ತದೆ ನಿಜ. ಆದ್ರೆ ಪ್ರೀತಿ ಇರುವ ಜೋಡಿ ಮಧ್ಯೆ ಕೆಲವೊಮ್ಮೆ ಸಂಭೋಗ ಅತ್ಯಗತ್ಯವೆನಿಸಿಕೊಳ್ಳುವುದಿಲ್ಲ. ಕೆಲ ಕಾರಣಗಳಿಗೆ ಸಂಗಾತಿ ಮಧ್ಯೆ ಲೈಂಗಿಕ ಸಂಪರ್ಕ ಬೆಳೆಯದೇ ಹೋದ್ರೂ ಜೋಡಿ ಜೀವನ ಪೂರ್ತಿ ಒಂದಾಗಿರುತ್ತಾರೆ. ಇವೆಲ್ಲ ಸಂಗಾತಿ (Partner) ಮಧ್ಯೆ ಇರುವ ಪ್ರೀತಿ, ಗೌರವ, ನಂಬಿಕೆ ಮೇಲೆ ನಿಂತಿರುತ್ತದೆ. ಮೊದಲ ರಾತ್ರಿಗಲ್ಲ, ಗಂಡನ ಮನೆಗೆ ಬರಲು ಮುಹೂರ್ತ ಹುಡುಕಿದ ಮಹಿಳೆಯೊಬ್ಬಳಿಗೆ ವಿಚ್ಛೇದನ (Divorce) ನೀಡಲು ಕೋರ್ಟ್ (Court) ಅನುಮತಿ ನೀಡಿದೆ.

ಈ ಅಚ್ಚರಿಯ ಘಟನೆ ನಡೆದಿರುವುದು ಛತ್ತೀಸ್ಗಢದಲ್ಲಿ. ಶುಭ ಮುಹೂರ್ತದ ಹೆಸರಿನಲ್ಲಿ ಮಹಿಳೆ ಸುಮಾರು 11 ವರ್ಷಗಳ ಕಾಲ ಪತಿಯನ್ನು ತನ್ನಿಂದ ದೂರವಿಟ್ಟಿದ್ದಾಳೆ. ಇಷ್ಟು ದಿನ ದೂರವಿಟ್ಟಿದ್ದನ್ನು ಕೋರ್ಟ್ ಪರಿತ್ಯಾಗವೆಂದು ಪರಿಗಣಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಪತಿಗೆ ಬಿಡುಗಡೆ ಭಾಗ್ಯ ನೀಡಿದೆ. 

ದಂಪತಿ ಮಧ್ಯೆ ಆಗಿದ್ದೇನು ? 
ಅರ್ಜಿದಾರ ಸಂತೋಷ್ ಸಿಂಗ್ (Santosh Singh)ಗೆ 2010ರಲ್ಲಿ ಮದುವೆಯಾಗಿದೆ. ಮದುವೆಯಾದ ನಂತ್ರ ಕೇವಲ 11 ದಿನಗಳ ಕಾಲ ಮಾತ್ರ ಪತ್ನಿ ಆಕೆ ಜೊತೆಗಿದ್ದಳಂತೆ. ಗಂಡನ ಮನೆಯಲ್ಲಿ ವಾಸಿಸಲು ನಿರಾಕರಿಸಿ ತವರಿಗೆ ಹೋದ ಪತ್ನಿ ವಾಪಸ್ ಬರಲಿಲ್ಲ. ಸಂತೋಷ್ ಸಿಂಗ್ ಪ್ರಕಾರ, ಮದುವೆ (Marriage)ಯಾದ 11ನೇ ದಿನ ಪತ್ನಿ ಕಡೆಯವರು ಸಂತೋಷ್ ಮನೆಗೆ ಬಂದಿದ್ದಾರೆ. ಮುಖ್ಯವಾದ ಕೆಲಸವಿದೆ ಎನ್ನುತ್ತ ಪತ್ನಿಯನ್ನು ತವರಿಗೆ ಕರೆದುಕೊಂಡು ಹೋಗಿದ್ದಾರಂತೆ. ಎರಡು ಬಾರಿ ಸಂತೋಷ್ ಆಕೆ ತವರಿಗೆ ಹೋಗಿದ್ದನಂತೆ. ಶುಭ ಮುಹೂರ್ತ(Good luck )ದ ಕಾರಣವನ್ನಿಟ್ಟುಕೊಂಡು ಆಕೆ ಗಂಡನ ಮನೆಗೆ ಬರಲಿಲ್ಲವಂತೆ. 

Unwanted pregnancy ತಪ್ಪಿಸಲು ಆಯುರ್ವೇದ ವಿಧಾನಗಳು..

ವಿಚ್ಛೇದನಕ್ಕೆ ಅರ್ಜಿ : ಪತ್ನಿ ಅಂದು ಬರ್ತಾಳೆ, ಇಂದು ಬರ್ತಾಳೆ ಎಂದು ಕಾದು ಕಾದು ಸುಸ್ತಾದ ಸಂತೋಷ್ ಕೋರ್ಟ್ ಮೆಟ್ಟಿಲೇರಿದ್ದಾನೆ. ಅನೇಕ ಬಾರಿ ಪತ್ನಿ ಮನವೊಲಿಸಲು ಯತ್ನಿಸಿ, ವಿಫಲವಾದ ಸಂತೋಷ್ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ. ಸಂತೋಷ್ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಡೈವರ್ಸ್ ನೀಡಲು ನಿರಾಕರಿಸಿದೆ. ಇದಾದ ಬಳಿಕ ಸಂತೋಷ್ ಹೈಕೋರ್ಟ್ ಮೊರೆ ಹೋಗಿದ್ದ.  

Astrology And Personality Traits: ಈ ರಾಶಿಯವರು ಸಂಗಾತಿಗೆಂದೂ ಮೋಸ ಮಾಡಲ್ಲ!

ಹೈಕೋರ್ಟ್ ಹೇಳಿದ್ದೇನು ? : ಅರ್ಜಿ ವಿಚಾರಣೆ ನಡೆಸಿದ  ನ್ಯಾಯಮೂರ್ತಿಗಳಾದ ಭಾದುರಿ ಮತ್ತು ರಜನಿ ದುಬೆ ನೇತೃತ್ವದ ವಿಭಾಗೀಯ ಪೀಠ,ವಿಚ್ಛೇದನ ಪಡೆಯಲು ಒಪ್ಪಿಗೆ ನೀಡಿದೆ. ಶುಭ ಮುಹೂರ್ತ ಎನ್ನುವುದು ಕುಟುಂಬದ ಸಂತೋಷಕ್ಕೆ ಕಾರಣವಾಗಬೇಕು. ಆದರೆ ಪತ್ನಿಯಾದವಳು ವೈವಾಹಿಕ ಜೀವನದ ಸುಖ ಹಾಳು ಮಾಡಲು ಇದನ್ನು ಸಾಧನವಾಗಿ ಬಳಸಬಾರದು ಎಂದು ಕೋರ್ಟ್ ಹೇಳಿದೆ. ಹಿಂದೂ ಮೆರಿಟ್ ಆಕ್ಟ್ ಅಡಿಯಲ್ಲಿ ನ್ಯಾಯಾಲಯವು ಈ ವಿವಾಹವನ್ನು ವಿಸರ್ಜಿಸಿದೆ. ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 13 (IB) ಅಡಿಯಲ್ಲಿ ವಿಚ್ಛೇದನಕ್ಕೆ ಅನುಮೋದನೆ ನೀಡಲಾಗಿದೆ. ಹೆಂಡತಿ  ಪತಿಯನ್ನು ಸಂಪೂರ್ಣವಾಗಿ ತೊರೆದಿದ್ದಾಳೆ. ಹಾಗಾಗಿ ಇದನ್ನು ವಿಚ್ಛೇದನಕ್ಕೆ ಆಧಾರವಾಗಿಟ್ಟುಕೊಳ್ಳಬಹುದು ಎಂದು ಕೋರ್ಟ್ ಹೇಳಿದೆ.  

click me!