'ಮದುವೆ ಆಗ್ಲಾ?' ಹೀಗೆ ನಟಿ ಶ್ರದ್ಧಾ ಕಪೂರ್ ಕೇಳಿದ್ದು ಯಾರನ್ನು?

By Suvarna News  |  First Published Feb 5, 2024, 1:22 PM IST

'ತೂ ಜೂಟಿ ಮೈನ್ ಮಕ್ಕರ್' ಚಿತ್ರದ ಬರಹಗಾರ ರಾಹುಲ್ ಮೋದಿ ಜೊತೆ ಶ್ರದ್ಧಾ ಕಪೂರ್ ಲವ್ವಿ ಡವ್ವಿ  ಗಾಸಿಪ್ ನಡುವೆಯೇ ಮದುವೆ ಆಗ್ಲಾ ಎಂದು ನಟಿ ಕೇಳಿದ್ದಾರೆ. ಅವರು ಈ ಪ್ರಶ್ನೆ ಕೇಳಿದ್ದು ಯಾರನ್ನು?


ತನ್ನ ಸ್ಟೈಲ್ ಮತ್ತು ಚಾರ್ಮ್‌ಗೆ ಹೆಸರುವಾಸಿಯಾಗಿರುವ ಶ್ರದ್ಧಾ ಕಪೂರ್ ತನ್ನ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಮದುವೆ ಬಗ್ಗೆ ಹಿಂಟ್ ಕೊಟ್ಟಿದ್ದಾರೆ. ಪೀಚ್-ಪಿಂಕ್ ಅನಾರ್ಕಲಿ ಸೆಟ್‌ನಲ್ಲಿ ದಪ್ಪನೆಯ ಜುಮ್ಕಾ ಧರಿಸಿರುವ ಫೋಟೋ ಅಪ್ಲೋಡ್ ಮಾಡಿರುವ ಶ್ರದ್ಧಾ ಹಿಂದೆಂದಿಗಿಂತ ಸುಂದರವಾಗಿ ಕಾಣಿಸುತ್ತಿದ್ದಾರೆ. ಇದು ವೆಡ್ಡಿಂಗ್ ಗ್ಲೋ ಇರಬಹುದಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಇದಕ್ಕೆ ಮತ್ತೊಂದು ಕಾರಣವೂ ಇದೆ. ನಟಿ ಶ್ರದ್ಧಾ, 'ನಾನು ಚೆನ್ನಾಗಿ ಕಾಣುತ್ತಿರುವೆ, ಮದುವೆ ಆಗ್ಲಾ' ಎಂಬ ಪ್ರಶ್ನೆಯನ್ನು ಕ್ಯಾಪ್ಶನ್‌ನಲ್ಲಿ ಕೇಳಿದ್ದಾರೆ. 

ಎಂದಿನಂತೆ ಈ ಬಾರಿಯೂ ಶ್ರದ್ಧಾ ಅವರ ಶೀರ್ಷಿಕೆ ಫನ್ನಿಯಾಗಿದ್ದರೂ ಅಭಿಮಾನಿಗಳ ಮನದಲ್ಲಿ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಏಕೆಂದರೆ, ಕಡೆಯದಾಗಿ 'ತು ಜೂಟಿ ಮೈನ್ ಮಕ್ಕರ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಶ್ರದ್ಧಾ, ಅದೇ ಚಿತ್ರದ ಬರಹಗಾರ ರಾಹುಲ್ ಮೋದಿಯೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಲೇ ಇದೆ. ಇದರ ಮಧ್ಯೆಯೇ ಮದುವೆ ಆಗ್ಲಾ ಎಂದು ನಟಿ ಕೇಳಿರುವುದು ಅಭಿಮಾನಿಗಳಲ್ಲಿ ಶ್ರದ್ಧಾ ಮದುವೆ ಸಿದ್ಧತೆ ನಡೆಯುತ್ತಿದೆಯೇ ಎಂಬ ಕುತೂಹಲ ಹುಟ್ಟಿಸಿದೆ. 

ಏನೇ ಕೆಲಸವಿರಲಿ, ಮಧ್ಯದಲ್ಲೊಮ್ಮೆ ಸಣ್ಣ ನಿದ್ರೆ ತೆಗೆದ್ರೆ ಮೆದುಳಿನ ವಯಸ್ಸು ಕಡಿಮೆಯಾಗುತ್ತೆ

Tap to resize

Latest Videos

ಶ್ರದ್ಧಾಳ ಈ ಫೋಟೋ ಮತ್ತು ಕ್ಯಾಪ್ಶನ್ಗೆ ಕಾಮೆಂಟ್ ವಿಭಾಗ ತುಂಬಿ ಹರಿಯುತ್ತಿದೆ. ಕೆಲವರು ನಟಿಗೆ ಪ್ರಪೋಸ್ ಮಾಡುತ್ತಿದ್ದರೆ ಮತ್ತೆ ಕೆಲವರು ಖಂಡಿತಾ ಆಗಿ ಎನ್ನುತ್ತಿದ್ದಾರೆ. ಗಾಯಕ ದರ್ಶನ್ ರಾವಲ್ ಕೂಡ ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದು, ಕಣ್ಣಿನಲ್ಲಿ ಹಾರ್ಟ್ ತೋರಿಸಿದ್ದಾರೆ.
ಇನ್ನು ಶಾದಿ ಡಾಟ್ ಕಾಮ್‌ ವೆಬ್ಸೈಟ್ ಕೂಡಾ ಶ್ರದ್ಧಾ ಪೋಸ್ಟ್‌ಗೆ ಪ್ರತಿಕ್ರಿಯಿಸಿ, ನಿಮಗೇನಾದರೂ ಸಹಾಯ ಬೇಕಾದರೆ ನಾವಿದ್ದೇವೆ ಎಂದು ಅಲ್ಲಿಯೂ ಬಿಸ್ನೆಸ್ ಡೀಲ್ ಕುದುರಿಸಲು ನೋಡಿದೆ. 

 

ಹಿಂದಿನ ವರದಿಗಳ ಪ್ರಕಾರ, ಶ್ರದ್ಧಾ ನಾಲ್ಕು ವರ್ಷಗಳ ಕಾಲ ಪ್ರಸಿದ್ಧ ಸೆಲೆಬ್ರಿಟಿ ಫೋಟೋಗ್ರಾಫರ್ ರೋಹನ್ ಶ್ರೇಷ್ಠಾ ಜೊತೆ ಡೇಟಿಂಗ್ ಮಾಡುತ್ತಿದ್ದರು. ಮತ್ತು ಅವರು ಫೆಬ್ರವರಿ 2022 ರಲ್ಲಿ ಬೇರ್ಪಟ್ಟಿದ್ದಾರೆ ಎಂದು ವರದಿಯಾಗಿದೆ. ಇದರ ನಂತರ, ಶ್ರದ್ಧಾ 'ಆಶಿಕಿ 2' ಸಹ-ನಟ ಆದಿತ್ಯ ರಾಯ್ ಕಪೂರ್ ಜೊತೆ ಡೇಟಿಂಗ್ ಮಾಡುವ ಬಗ್ಗೆಯೂ ಊಹಾಪೋಹಗಳು ಹಬ್ಬಿದ್ದವು. ಆದರೆ ಶ್ರದ್ಧಾ ಅಥವಾ ಅವರ ಮಾಜಿ ಸಂಗಾತಿಗಳು ಅವರ ಡೇಟಿಂಗ್ ಊಹಾಪೋಹಗಳನ್ನು ಎಂದಿಗೂ ಒಪ್ಪಿಕೊಳ್ಳಲಿಲ್ಲ ಎಂಬುದು ಗಮನಾರ್ಹ. ಸಧ್ಯ ನಟಿಯು ರಾಹುಲ್ ಮೋದಿಯೊಂದಿಗೆ ಹಲವೆಡೆ ಪಾಪಾರಾಜಿಗಳ ಕಣ್ಣಿಗೆ ಬಿದ್ದಿದ್ದು, ಏನೋ ನಡೀತಿದೆ ಎಂಬ ಊಹೆ ಹೆಚ್ಚಿದೆ. 

ಹಾರ್ಟ್‌ಗೂ ಆಗುತ್ತೆ ಶಾರ್ಟ್ ಸರ್ಕ್ಯೂಟ್! ನಿಮಗಿದ್ಯಾ ಹೃದಯ ಬಡಿತ ಏರುಪೇರಾಗೋ ಸಮಸ್ಯೆ?

ಮುಂದಿನ ಚಿತ್ರ
ವೃತ್ತಿಪರವಾಗಿ ನಟಿಯು 'ನಾಗಿನ್' ಮತ್ತು 'ಚಲ್ಬಾಜ್ ಇನ್ ಲಂಡನ್'ನಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ.

click me!