ಗಂಡ-ಹೆಂಡ್ತಿ ಸಂಬಂಧಕ್ಕೆ ಹುಳಿ ಹಿಂಡಿದ ನಕಲಿ ಫಾದರ್: ನಡು ರಸ್ತೆಯಲ್ಲಿ ಧರ್ಮದೇಟು ಕೊಟ್ಟ ಪತಿರಾಯ

By Sathish Kumar KHFirst Published Feb 4, 2024, 8:56 PM IST
Highlights

ಅನ್ಯೋನ್ಯವಾಗಿದ್ದ ದಂಪತಿ ನಡುವೆ ಬಿರುಕು ಮೂಡಿಸಿದ ನಕಲಿ ಚರ್ಚ್‌ ಫಾದರ್‌ಗೆ ನಡುರಸ್ತೆಯಲ್ಲಿ ಧರ್ಮದೇಟು ನೀಡಿದ ಘಟನೆ  ಹುಬ್ಬಳ್ಳಿಯಲ್ಲಿ ನಡೆದಿದೆ. 

ಹುಬ್ಬಳ್ಳಿ (ಫೆ.04): ನಗರದಲ್ಲಿ ತಾವಾಯ್ತು, ತಮ್ಮ ಜೀವನವಾಯ್ತು ಎಂದು ಅನ್ಯೋನ್ಯವಾಗಿದ್ದ ದಂಪತಿ ನಡುವೆ ಬಿರುಕು ಮೂಡಿಸಿದ ನಕಲಿ ಚರ್ಚ್‌ ಫಾದರ್‌ಗೆ ನಡುರಸ್ತೆಯಲ್ಲಿ ಧರ್ಮದೇಟು ನೀಡಿದ ಘಟನೆ  ಹುಬ್ಬಳ್ಳಿಯಲ್ಲಿ ನಡೆದಿದೆ. 

ತಾನು ಫಾಸ್ಟರ್ ಅಂತ ಹೇಳಿಕೊಂಡಿದ್ದ ವ್ಯಕ್ತಿ ದಂಪತಿಗಳ ನಡುವೆ ಬಿರುಕು ಮೂಡಿಸಿದ ಎನ್ನಲಾಗಿದೆ. ನಕಲಿ ಪಾಸ್ಟರ್‌ನ ಎಂಟ್ರಿಯಿಂದ ದಂಪತಿಗಳ ನಡುವೆ ಬಿರುಕು ಉಂಟಾಗಿ ಡೈವರ್ಸ್ ಹಂತಕ್ಕೆ ತಲುಪಿತ್ತು. ಮಹಿಳೆಯ ಬ್ರೈನ್ ವಾಶ್ ಮಾಡಿ ಅಕೌಂಟ್ ನಿಂದ ಹಣ ವರ್ಗಾವಣೆ ಆರೋಪವೂ ಕೇಳಿಬಂದಿದೆ. ಫಾದರ್ ಹೆಸರಿನಲ್ಲಿ ಆಗಾಗ ಮನೆಗೆ ಬರುತ್ತಿದ್ದ ಸಂತೋಷ ಗಂಧದ ಎಂಬ ನಕಲಿ ಫಾದರ್ ಗೆ ಗೂಸಾ ಬಿದ್ದಿದೆ. ಮಹಿಳೆಯ ಪತಿ ನಕಲಿ ಫಾದರ್ ಗೆ ಹಿಗ್ಗಾಮುಗ್ಗ ಥಳಿಸಿದ್ದಾನೆ. 

ಹೆಗ್ಗೆರಿ ಚರ್ಚ್ ಬಳಿ ಮಹಿಳೆಯ ಪತಿ ಸಂತೋಷಗೆ ಥಳಿಸಿದ್ದಾನೆ. ಸಂತೋಷ ಗಂಧದ ಹುಬ್ಬಳ್ಳಿಯ ಹೆಗ್ಗರಿಯ ನಿವಾಸಿಯಾಗಿದ್ದು, ನವೀನ್ ಒಳಗುಂದಿ ಹಾಗೂ ಫ್ರೆನಿ ಒಳಗುಂದಿ ದಂಪತಿಗಳ ನಡುವೆ ಬಿರುಕು ಮೂಡಿಸಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಕಳೆದ 16 ವರ್ಷದ ಹಿಂದೆ ಮದುವೆಯಾಗಿದ್ದ ನವೀನ್ ಹಾಗೂ ಫ್ರೆನಿ ನಗರದ ಮಿಷನ್ ಕಾಪೌಂಡ್ ನಲ್ಲಿ ವಾಸವಿದ್ದರು. 6 ವರ್ಷದ ಹಿಂದೆ ಒಳಗುಂದಿ ಕುಟುಂಬಕ್ಕೆ ಪರಿಚಯವಾಗಿದ್ದ ಸಂತೋಷ, 2 ವರ್ಷಗಳ ಹಿಂದೆಯಿಂದ ಮಹಿಳೆಯೊಂದಿಗೆ ಸಲಿಗೆ ಬೆಳೆಸಿದ್ದನು. 

ಸೋಮೇಶ್ವರ ದೇವಾಲಯ ಶಿವಲಿಂಗದ ಮೇಲೆ ವಿಕೃತಿ ಮೆರೆದ ಕಿಡಿಗೇಡಿಗಳು; ಕರಾವಳಿಯಲ್ಲಿ ಕೋಮುಗಲಭೆ ಸಂಶಯ

ಗುಟ್ಟು ಗುಟ್ಟಾಗಿ ಫಾದರ್ ಮತ್ತು ಮಹಿಳೆ ನಡುವೆ ಭೇಟಿ ನಡೆಯುತ್ತಿತ್ತು. ಫ್ರೆನಿ ಸದ್ಯ ನವೀನ್ ಗೆ ವಿಚ್ಛೇದನ ನೀಡಲು ಮುಂದಾಗಿದ್ದಾಳೆ. ಸಂತೋಷನೇ ಫ್ರೆನಿ ಪುಸಲಾಯಿಸಿದ್ದಾನೆ. ವಿಚ್ಛೇದನಕ್ಕೆ ಆತನೇ ಕಾರಣ ಎಂದು ಆರೋಪಿಸಲಾಗಿದೆ. ಹಲವು ಬಾರಿ ಹಿರಿಯರ ನಡುವೆ ಸಂಧಾನ ಮಾಡಲಾಗಿತ್ತು. ಆದರೂ ಪುನಃ ತನ್ನ ಕ್ಯಾತೆ ಶುರುವಿಟ್ಟಿದ್ದನು. ಇದರಿಂದ ಫೇನಿ 1 ತಿಂಗಳ ಹಿಂದೆ ಗಂಡನಿಂದ ದೂರಾಗಿದ್ದಾಳೆ. ಪತಿ ಹಾಗೂ ಪತಿಯ ಸಹೋದರ ಈ ಬಗ್ಗೆ ತಿಳಿಹೇಳುವ ಪ್ರಯತ್ನ ನಡೆಸಿದ್ದರು. ಈ ವೇಳೆ ಫಾದರ್ ಮಾತಿಗೆ ಮಾತು ಬೆಳೆಸಿದ್ದಾನೆ. ಈ ಹಿನ್ನೆಲೆ ಪತಿ ಹಾಗೂ ಸಹೋದರ ಸಂತೋಷಗೆ ಥಳಿಸಿದ್ದಾರೆ. ಹಲ್ಲೆ ಹಿನ್ನೆಲೆ ಸಂತೋಷ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾನೆ.

ಸಂಬಂಧದಲ್ಲಿ ಅಣ್ಣ-ತಂಗಿಯಾದ್ರೂ ಲವ್ ಮಾಡಿದ್ರು, ಮನೆಯವರು ವಿರೋಧಿಸಿದ್ದಕ್ಕೆ ಸಾವಿಗೆ ಶರಣಾದ್ರು:
ಕಲಬುರಗಿ (ಫೆ.03):
ಸಂಬಂಧದಲ್ಲಿ ನೀವಿಬ್ಬರೂ ಅಣ್ಣ- ತಂಗಿ ಆಗುತ್ತೀರಿ. ಪ್ರೀತಿ, ಪ್ರೇಮ ಅಂತಾ ಮಾಡಿ ಸಂಬಂಧಗಳಿಗೆ ಚ್ಯುತಿ ತರಬೇಡಿ ಎಂದು ಮನೆಯವರು ಬೈದು ಬುದ್ಧಿ ಹೇಳಿ ತಂಗಿಯನ್ನು ಬೇರೆಡೆ ಮದುವೆ ಮಾಡಿಕೊಡಲು ಮುಂದಾಗಿದ್ದಾರೆ. ಆದರೆ, ಅಣ್ಣ-ತಂಗಿ ಸಂಬಂಧವನ್ನೂ ಮೀರಿ ಇವರಿಬ್ಬರ ಪ್ರೀತಿಯೇ ಹೆಚ್ಚಾಗಿದ್ದರಿಂದ ಇಬ್ಬರೂ ಮನೆಯಿಂದ ಓಡಿಹೋಗಿ ಗುಟ್ಟಾಗಿ ಮದುವೆ ಮಾಡಿಕೊಂಡಿದ್ದಾರೆ. ನಂತರ ನಾವಿಬ್ಬರೂ ಜೀವನ ಮಾಡುವುದಕ್ಕೆ ಜನರು ಬಿಡುವುದಿಲ್ಲ ಎಂದರಿತು ಇಬ್ಬರೂ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಈ ದುರ್ಘಟನೆ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಮಾಗಣಗೇರೆ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಶಶಿಕಲಾ (20) ಹಾಗೂ ಗೊಲ್ಲಾಳಪ್ಪ (24) ಎಂದು ಹೇಳಲಾಗುತ್ತಿದೆ. 

ಬೆಳಗಾವಿ ಕಬ್ಬಿನ ಟ್ರ್ಯಾಕ್ಟರ್ ಪಲ್ಟಿ: ನಾಲ್ವರು ಮಹಿಳಾ ಕೃಷಿ ಕೂಲಿ ಕಾರ್ಮಿಕರು ಸಾವು

ಶಶಿಕಲಾ ಹಾಗೂ ಮೃತ ಗೊಲ್ಲಾಳಪ್ಪ ಇಬ್ಬರು ಕೂಡ ವರಸೆಯಲ್ಲೆ ಅಣ್ಣ ತಂಗಿ ಆಗಬೇಕು. ಅಣ್ಣ ತಂಗಿಯ ಪ್ರೀತಿಗೆ ಮನೆಯವರು ನಿರಾಕರಣೆ ಮಾಡಿದ್ದಾರೆ. ಇನ್ನು ಅಣ್ಣ ತಂಗಿ ಆಗಿದ್ದರೂ ಪ್ರೀತಿಸಿ ಮದುವೆಯಾದರೆ ಇಡೀ ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಭಾವಿಸಿ ಶಶಿಕಲಾಳನ್ನು ಮದುವೆ ಮಾಡಿಕೊಡಲು ಮುಂದಾಗಿದ್ದಾರೆ. ಯುವತಿಯ ಕುಟುಂಬಸ್ಥರು ವಿಜಯಪುರ ಜಿಲ್ಲೆಯ ಸಿಂಧಗಿ ಗ್ರಾಮದ ಯುವಕನ ಜೊತೆ ನಿಶ್ಚಿತಾರ್ಥ ಮಾಡಿದ್ದರು. ಮುಂದಿನ ತಿಂಗಳು ಶಶಿಕಲಾ ಮದುವೆ ಕೂಡ ನಿಶ್ಚಯವಾಗಿತ್ತು. ಮದುವೆ ನಿಶ್ಚಯವಾದ ಹಿನ್ನಲೆಯಲ್ಲಿ ಆಕೆಯ ಪ್ರಿಯತಮ ಗೊಲ್ಲಾಳಪ್ಪ ನಿನ್ನೆ ರಾತ್ರಿ ಮನೆಯಿಂದ ಶಶಿಕಲಾಳನ್ನು ಕರೆದೊಯ್ದು ಮಾಗಣಪುರ ಗ್ರಾಮದ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದಾನೆ. ಬಳಿಕ ಮಾಗಣಪುರ ಗ್ರಾಮದ ಹೊರವಲಯದ ತೋಟದ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾರೆ.

click me!