ವಧು, ಜಿಲ್ಲಾಧಿಕಾರಿ, ಮಕ್ಕಳ ಕಲ್ಯಾಣಾಧಿಕಾರಿ ಸಂದರ್ಶನ ನಡೆಸಿ ವರನ ಆಯ್ಕೆ, ಇದು ವಿಶೇಷ ಮದುವೆ!

By Suvarna NewsFirst Published Feb 4, 2024, 6:15 PM IST
Highlights

ಲವ್ ಮ್ಯಾರೇಜ್ ಅಲ್ಲ, ಅರೇಂಜ್ ಮ್ಯಾರೇಜೂ  ಅಲ್ಲ. ವಧು, ಜಿಲ್ಲಾಧಿಕಾರಿ, ಇತರ ಕೆಲ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ವರನ ಆಯ್ಕೆಗೆ ಸಂದರ್ಶನ, ಅಧಿಕಾರಿಗಳ ರೌಂಡ್‌ನಲ್ಲಿ ಪಾಸ್ ಆದ ವರನನ್ನು ವಧು ಸಂದರ್ಶನ ನಡೆಸಿ ಆಯ್ಕೆ. ಇದು ವಿಚಿತ್ರ ಮದುವೆಯಲ್ಲ, ವಿಶೇಷ ಮದುವೆ. ಈ ಮದುವೆಯ ರೋಚಕ ಸ್ಟೋರಿ ಇಲ್ಲಿದೆ.

ಹರ್ಯಾಣ(ಫೆ.04)  ಲವ್ ಮ್ಯಾರೇಜ್, ಅಥವಾ ಪೋಷಕರು, ಕುಟುಂಬಸ್ಥರ ಒಪ್ಪಿಗೆ ಮೇರೆ ನಡೆಯುವ ಅರೇಂಜ್ ಮ್ಯಾರೇಜ್. ಈ ಎರಡು ಮದುವೆ ಸಾಮಾನ್ಯ. ಆದರೆ ಇಲ್ಲೊಂದು ಮದುವೆಯಲ್ಲಿ ತಾನು ಯಾರನ್ನು ಮದುವೆಯಾಗಬೇಕು ಅನ್ನೋದನ್ನು ವಧು ಸಂದರ್ಶನ ನಡೆಸಿ ಆಯ್ಕೆ ಮಾಡಿದ್ದಾಳೆ. ಈಕೆಯ ಸಂದರ್ಶನದಲ್ಲಿ ಜಿಲ್ಲಾಧಿಕಾರಿ, ಮಕ್ಕಳ ಕಲ್ಯಾಣಾ ಇಲಾಖೆ ಅಧಿಕಾರಿಗಳು ತೀರ್ಪುಗಾರರಾಗಿ ಪಾಲ್ಗೊಂಡಿದ್ದರು. ಹಲವು ಸುತ್ತಿನ ಸಂದರ್ಶನದ ಬಳಿಕ ಕೊನೆಗೂ ವರನ ಆಯ್ಕೆ ಮಾಡಲಾಗಿದೆ. ಜಿಲ್ಲಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ಮದುವೆಯಲ್ಲಿ ಪಾಲ್ಗೊಂಡಿದ್ದಾರೆ.ಜಿಲ್ಲಾ ನ್ಯಾಯಾಲಯದ ಜಡ್ದ್ ಕೂಡ ಈ ಮದುವೆಯಲ್ಲಿ ಪಾಲ್ಗೊಂಡು ಆಶಿರ್ವದಿಸಿದ್ದಾರೆ.ಹರ್ಯಾಣದ ರೋಹ್ಟಕ್‌ನಲ್ಲಿ ಅದ್ಧೂರಿಹಾಗೂ ವಿಶೇಷ ಮದುವೆ ನಡೆದಿದೆ.

ವಧುವಿನ ಹೆಸರು ಕರಿಷ್ಮಾ. ವಯಸ್ಸು 19. ತಾನು ಮದುವೆಯಾಗಬೇಕು ಬಯಕೆ ವ್ಯಕ್ತಪಡಿಸಿದಾಗ, ರೋಹ್ಟಕ್ ಡೆಪ್ಯೂಟಿ ಪೊಲೀಸ್ ಕಮಿಷನರ್, ರೋಹ್ಟಕ್ ಜಿಲ್ಲಾಧಿಕಾರಿ, ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾ ನ್ಯಾಯಾಲಯದ ಜಡ್ಜ್ ಸೇರಿ ಸಭೆ ನಡೆಸಿದ್ದಾರೆ. ಬಳಿಕ ವರನನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲು ನಿರ್ಧರಿಸಿದ್ದಾರೆ. ಈ ಸಂದರ್ಶನದಲ್ಲಿ ಪಾಲ್ಗೊಳ್ಳುವವರಿಗೆ ಕೆಲ ಮಾನದಂಡಗಳನ್ನು ನಿರ್ಧರಿಸಲಾಗಿದೆ. ಕೆಲ ಅರ್ಹತೆಗಳು, ಉದ್ಯೋಗ ಸೇರಿದಂತೆ ಹಲಲವು ಕ್ವಾಲಿಟಿಸ್ ಇರಲೇಬೇಕು ಅನ್ನೋ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

ಚಾಟ್‌ಜಿಪಿಟಿ ನೆರವಿನಿಂದ ಡೇಟಿಂಗ್ ಆ್ಯಪ್‌ನಲ್ಲಿ ಹುಡುಗಿ ಪಟಾಯಿಸಿ ಮದುವೆಯಾದ ಟೆಕ್ಕಿ!

ಬಳಿಕ ಸಂದರ್ಶನಕ್ಕೆ ಕಾಲ್ ಫಾರ್ ಮಾಡಲಾಗಿತ್ತು. ಸಂದರ್ಶನದಲ್ಲಿ ಹಲವರು ಭಾಗಿಯಾಗಿದ್ದರು. ಜಿಲ್ಲಾಧಿಕಾರಿಗಳ ಪ್ರಶ್ನೆ, ಇತರ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿ ಪಾಸ್ ಆದವರನ್ನು ವಧು ಅಂತಿಮ ಸುತ್ತಿನ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗಿದೆ. ಅರೇ ಇದೇನು ಅಂತಾ ಯೋಜನೆ ಮಾಡುತ್ತಿದ್ದೀರಾ? ಮಂತ್ರಿ, ಪ್ರಭಾವಿಗಳ ಮಗಳು ಎಂದುಕೊಂಡಿದ್ದರೆ ತಪ್ಪು. 

19ರ ಹರೆಯದ ಕರಿಷ್ಮಾ ಅನಾಥ ಹೆಣ್ಣಮುಗಳು. ಹುಟ್ಟಿದ ಕೆಲವೇ ದಿನಗಳಲ್ಲಿ ಪೋಷಕರು ಇದೇ ಕರಿಷ್ಮಾಳನ್ನು ಕಸದ ಬುಟ್ಟಿಗೆ ಎಸೆದಿದ್ದರು. ತಂದೆ ತಾಯಿ ಯಾರೆಂದು ಗೊತ್ತಿಲ್ಲ, ಕಸದ ಬುಟ್ಟಿಯಿಂದ ಬದುಕಿ ಬಂದಿದ್ದೇ ಪವಾಡ. ಅನಾಥಾಶ್ರಮದಲ್ಲಿ ಬೆಳೆದ ಹುಡುಗಿ ಕರಿಷ್ಮಾ ಮುಂದಿನ ತಿಂಗಳು ಪಿಯುಸಿ ಪರೀಕ್ಷೆ ಬರೆಯಲು ಸಜ್ಜಾಗಿದ್ದಾಳೆ . ಕರಿಷ್ಮಾ ಬೆಳೆದ ರೋಹ್ಟಕ್‌ನ ಈ ಅನಾಥಾಶ್ರಮಕ್ಕೆ ಅಲ್ಲಿನ ಜಿಲ್ಲಾಧಿಕಾರಿ ಸೇರಿದಂತೆ ಹಲವರು ಆರ್ಥಿಕ ನೆರವು ನೀಡುತ್ತಿದ್ದಾರೆ. ಹೀಗಾಗಿ ಕರಿಷ್ಮಾ ತನಗೆ ಮದುವೆಯಾಗಬೇಕು ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದಾಗ,  ಈ ರೀತಿ ಸಂದರ್ಶನ ನಡೆಸಿ ವರನ ಆಯ್ಕೆ ಮಾಡಲು ನಿರ್ಧರಿಸಲಾಗಿತ್ತು.

ಹುಡುಗಿಗೆ ಪ್ರಪೋಸ್ ಮಾಡುವ ಮುಂಚೆ ಈ ವಿಷ್ಯ ತಿಳ್ಕೊಂಡ್ರೆ ರಿಜೆಕ್ಟ್ ಆಗೋ ಚಾನ್ಸ್ ಇರೋದಿಲ್ಲ

ಡೆಪ್ಯೂಟಿ ಪೊಲೀಸ್ ಕಮಿಷನರ್, ಜಿಲ್ಲಾಧಿಕಾರಿಗಳು ಈಕೆಯ ಮದುವೆಯ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸಂದರ್ಶನದ ಮೂಲಕ ವರನ ಆಯ್ಕೆ ಮಾಡಿ ಮದುವೆಗೆ ಮುಹೂರ್ತ ನಿಗದಿ ಮಾಡಲಾಗಿತ್ತು. ಈ ಮದುವೆಗೆ ರೋಹ್ಟಕ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಆಗಮಿಸಿದ್ದರು. ಹಲವು ಗಣ್ಯರು, ಅಧಿಕಾರಿಗಳು ಮದುವೆಯಲ್ಲಿ ಪಾಲ್ಗೊಂಡಿದ್ದರು. ಈ ವಿಶೇಷ ಮದುವೆ ಇದೀಗ ರೋಹ್ಟಕ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.
 

click me!