Short couple get Married: ವೈರಲ್ ಆಗ್ತಿದೆ ಶಾರ್ಟ್ ಜೋಡಿಯ ಮದ್ವೆ ಫೋಟೋ

By Suvarna News  |  First Published Nov 28, 2021, 3:48 PM IST
  • ವಿವಾಹ ಸ್ವರ್ಗದಲ್ಲಿ ನಿಶ್ಚಯವಾಗುತ್ತೆ ಅನ್ನುವುದು ಇದಕ್ಕೇ..!
  • ಶಾರ್ಟ್ ಜೋಡಿಯ ಸಂಭ್ರಮದ ಮದುವೆ(Marriage)
  • ಚಿಕ್ಕಬಳ್ಳಾಪುರದಲ್ಲಿ(Chikkaballapura) ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ಚಿಕ್ಕಬಳ್ಳಾಪುರ(ನ.28): ವಿವಾಹ(Marriage) ಎಂಬ ವಿಚಾರ ಬಂದಾಗ ಬಹಳಷ್ಟು ಗೊಂದಲಗಳಿರುತ್ತವೆ. ಪ್ರೀತಿಸಿ (Love) ಮದುವೆಯಾಗುವವರದ್ದು ಬೇರೆ ಕಥೆ. ಅಲ್ಲಿ ಕೊರತೆಗಳೆಲ್ಲ ಲೆಕ್ಕಕ್ಕೇ ಇಲ್ಲ. ಆದರೆ ಅರೇಂಜ್ಡ್ ಮ್ಯಾರೆಜ್ ಅಂದಾಗ ಇದ್ದದ್ದು ಇಲ್ಲದ್ದು ಎನ್ನುತ್ತಾ ಒಂದರ ಹಿಂದೊಂದು ಸಮಸ್ಯೆಗಳು ಬಂದೆರಗುತ್ತಲೇ ಇರುತ್ತವೆ. ಸೌಂದರ್ಯ, ಉದ್ಯೋಗ, ಆರ್ಥಿಕತೆ, ವೇತನ ಸಂಗಾತಿಯ ಆಯ್ಕೆ ಮಾಡುವಾಗ ಗಮನಿಸುವ ಮಾನದಂಡಗಳು ಒಂದೆರಡಲ್ಲ. ಇತ್ತೀಚೆಗೆ ವ್ಯಕ್ತಿಯೊಬ್ಬರು ಮದುವೆಯಾಗಲು ಬೇಕಾದ ವಧುವಿನ ಒಳಉಡುಪಿನ ಗಾತ್ರವನ್ನೂ ನಮೂದಿಸಿ ಜಾಹೀರಾತು ಹಾಕಿದ್ದು ಭಾರೀ ಸುದ್ದಿಯಾಗಿತ್ತು. ಇದೆಲ್ಲದರ ಮಧ್ಯೆ ಕರ್ನಾಟಕ ಚಿಕ್ಕಬಳ್ಳಾಪುರದಲ್ಲಿ ನಡೆದ ಮದುವೆ ನಿಜಕ್ಕೂ ಮಾದರಿ.

ಕೈವಾರದಲ್ಲಿ ಒಂದು ಅಪರೂಪದ ಮದುವೆ ನಡೆದಿದೆ. ಕ್ಯೂಟ್ ಆಗಿರೋ ಶಾರ್ಟ್ ಜೋಡಿ(Short Couple) ವಿವಾಹಿತರಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎನ್ನುವಂತೆ ಇಂದು ಕಲ್ಯಾಣನಗರ ಶ್ರೀ ಕ್ಷೇತ್ರ ಕೈವಾರದಲ್ಲಿ ನಡೆದ ಅಪರೂಪದ ಮದುವೆ. ಫೋಟೋ ನೋಡಿ ಇದು ಮಕ್ಕಳ ಮದುವೆ ಎಂದುಕೊಳ್ಳಬೇಡಿ. ಗಂಡಿಗೆ 28 ವರ್ಷ ಹೆಣ್ಣಿಗೆ 25 ವರ್ಷ.ನೋಡಲು ವಾಮನ ಮೂರ್ತಿ ಗಳಂತೆ ಚಿಕ್ಕದಾಗಿ ಕಾಣುತ್ತಾರೆ. ಹಸೆಮಣೆ ಏರಿದ ಗಂಡು ವಿಷ್ಣು ಬೆಂಗಳೂರಿನವರು. ಹೆಣ್ಣು ಜ್ಯೋತಿ ಕೋಲಾರ ಮೂಲದವರು. ಇಬ್ಬರೂ ಪದವೀಧರರಾಗಿದ್ದು,ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.

Tap to resize

Latest Videos

ಬ್ರಾ ಸೈಜ್ 32B, ಸೊಂಟ 28, ವಯಸ್ಸು 26 ರೊಳಗಿನ ವಧು ಬೇಕಾಗಿದೆ ಪೋಸ್ಟ್ ವೈರಲ್

ವಿಶೇಷವಾಗಿ ಕಂಡ ಅಪರೂಪದ ಜೋಡಿ ಕ್ಷೇತ್ರಕ್ಕೆ ಬಂದ ಭಕ್ತಾದಿಗಳನ್ನು ಆಕರ್ಷಿಸಿದರು. ಇವರ ದಾಂಪತ್ಯ ಜೀವನ ಅನ್ಯೋನ್ಯವಾಗಿ ಸಂತೋಷವಾಗಿರಲಿ ಎಂದು ಹಾರೈಸಿದರು. ಸದ್ಗುರು ತಾತಯ್ಯನವರ ಸನ್ನಿಧಿಯಲ್ಲಿ ಮದುವೆಯಾದದ್ದು ನಮ್ಮ ಸೌಭಾಗ್ಯವೆಂದ ನೂತನ ವಧು-ವರರು ಅರಿಶಿನ ಸೇವೆಯಲ್ಲಿ ಭಾಗವಹಿಸಿ ತಾತಯ್ಯನವರ ಆಶೀರ್ವಾದವನ್ನು ಪಡೆದಿದ್ದಾರೆ. ಈ ಶಾರ್ಟ್ & ಕ್ಯೂಟ್ ಜೋಡಿಯ ಮುದುವೆ ಫೋಟೋಗಳು ಈಗ ವೈರಲ್ ಆಗಿದೆ.

ಇತ್ತೀಚಿನ ದಿನಗಳಲ್ಲಿ ವಿವಾಹ ಕುರಿತ ದೃಷ್ಟಿಕೋನ ಬಹಳಷ್ಟು ಬದಲಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಅದರೊಂದಿಗೆ ಜನರೂ ಹೊಂದಿಕೊಂಡಿದ್ದಾರೆ. ಆದರೆ ಹೈಟ್, ವೈಟ್, ಕಲರ್ ಕುರಿತು ಜನರು ಇನ್ನೊಬ್ಬರನ್ನು ಅಳೆಯುವ, ಜಡ್ಜ್ ಮಾಡುವ ಮನಸ್ಥಿತಿ ಇಂದಿಗೂ ಹಾಗೆಯೇ ಇದೆ. ಮೈಬಣ್ಣ, ತೂಕ. ಎತ್ತರ ಎಲ್ಲವೂ ಮ್ಯಾಟರ್ ಆಗುವಂತಹ ದಿನಗಳಲ್ಲಿ ಈ ಶಾರ್ಟ್ ಜೋಡಿ ಖುಷಿಯಾಗಿ ಮದುವೆಯಾಗಿರುವುದು ಮಾದರಿಯಾಗಿದೆ.

ಬಾಡಿ ಶೇಮಿಂಗ್:

ಬಹುತೇಕ ಎಲ್ಲರೂ ಬಾಡಿ ಶೇಮಿಂಗ್ ಅನುಭವಿಸಿರುತ್ತಾರೆ. ಸಣ್ಣಗಿದ್ದರೂ, ದಪ್ಪಗಿದ್ದರೂ ಬಹಳಷ್ಟು ಸಲ ಹೊರಗಡೆ ಜನರ ಹಾಸ್ಯಕ್ಕೆ ಗುರಿಯಾಗಬೇಕಾಗುತ್ತದೆ. ಇನ್ನು ಶಾರ್ಟ್ ಇದ್ದರಂತೂ ಮುಗಿಯಿತು. ಅವರು ಮತ್ತೆ ಮನೆಯಿಂದಲೇ ಹೊರಬರಬಾರದಷ್ಟು ಹಿಂಸೆಯಾಗುವಂತ ಮಾತುಗಳು ಕೇಳಿಬರುತ್ತವೆ. ಸಮಾಜ ಇರುವುದೇ ಹೀಗೆ, ಬಾಡಿ ಶೇಮಿಂಗ್ ತುಂಬಾ ಕಾಮನ್ ಎಂದರೂ ಅದನ್ನು ಅರಗಿಸಿಕೊಂಡು ಮುನ್ನಡೆಯಲು ಧೈರ್ಯಬೇಕು.

ಸೆಲ್ಫ್‌ ಲವ್:

ಈ ವಿವಾಹವಾದ ಜೋಡಿಯೂ ಖಂಡಿಯವಾಗಿ ಬಾಡಿ ಶೇಮಿಂಗ್ ಅನುಭವಿಸಿರುತ್ತಾರೆ. ಕುಳ್ಳಗಿರುವುದಕ್ಕೆ ವಿದ್ಯಾಭ್ಯಾಸ ಪಡೆಯುವಾಗ, ಉದ್ಯೋಗ ಪಡೆಯಲು, ವಿವಾಹದ ವಿಚಾರದಲ್ಲಿ ಬಹಳಷ್ಟು ಕಡೆ ಬಾಡಿ ಶೇಮಿಂಗ್ ಅನುಭವಗಳಾಗಿರುತ್ತದೆ. ಆದರೆ ಅವರು ಅದನ್ನು ಮೆಟ್ಟಿ ನಿಂತು ಶಿಕ್ಷಣ ಪಡೆದು, ಉದ್ಯೋಗವನ್ನೂ ಮಾಡುತ್ತಾ, ಸ್ವಾವಲಂಬಿಯಾಗಿ ಬದುಕಿ, ಎಲ್ಲರಂತೆ ವೈವಾಹಿಕ ಜೀವನಕ್ಕೂ ಕಾಲಿಟ್ಟಿದ್ದಾರೆ. ತಮ್ಮನ್ನು ವಿಚಿತ್ರವಾಗಿ, ವಿಶೇಷವಾಗಿ ಕಾಣುವ ಜನರಿಗೆ ನಾವು ನಿಮ್ಮಂತೆಯೇ ಎಂದು ಬದುಕಿ ತೋರಿಸಿದ್ದಾರೆ ಚಿಕ್ಕಬಳ್ಳಾಪುರದ ಈ ಜೋಡಿ. ಇದು ಇವರ ಸೆಲ್ಫ್ ಲವ್‌ನ ನಿದರ್ಶನ. ತಮ್ಮ ಕೊರತೆಗಳನ್ನು ಒಪ್ಪಿಕೊಂಡು ತಮ್ಮನ್ನು ತಾವು ಪ್ರೀತಿಸಿರುವ ಜೋಡಿಯನ್ನು ಈಗ ನೆಟ್ಟಿಗರೆಲ್ಲ ಪ್ರೀತಿಸುತ್ತಿದ್ದಾರೆ.

click me!