ಪುರುಷರ ಲೈಂಗಿಕ ಶಕ್ತಿ ಹೆಚ್ಚಿಸುತ್ತವೆ ಈ ಆಯುರ್ವೇದ ಮೂಲಿಕೆಗಳು!

Published : Mar 16, 2023, 12:41 PM IST
ಪುರುಷರ ಲೈಂಗಿಕ ಶಕ್ತಿ ಹೆಚ್ಚಿಸುತ್ತವೆ ಈ ಆಯುರ್ವೇದ ಮೂಲಿಕೆಗಳು!

ಸಾರಾಂಶ

ಸೆಕ್ಸ್‌ಗೂ ಮನಸ್ಥಿತಿಗೂ, ಲೈಫಿಗೂ ಸಾಕಷ್ಟು ಸಂಬಂಧವಿದೆ. ಸೆಕ್ಸ್‌ನಲ್ಲಿ ಆಸಕ್ತಿ ಕುಂದಿಹೋದರೆ ಜೀವನೋತ್ಸಾಹವೂ ತಗ್ಗುತ್ತದೆ. ಪುರುಷರಲ್ಲಿ ಲೈಂಗಿಕ ಆಸಕ್ತಿ ವೃದ್ಧಿಸುವ ಕೆಲವು ಗಿಡಮೂಲಿಕೆಗಳನ್ನು ಆಯುರ್ವೇದ ಮಾನ್ಯ ಮಾಡಿದೆ.

ಲೈಂಗಿಕತೆ ಅನ್ನೋದು ಊಟ, ನಿದ್ದೆಯಷ್ಟೇ ಸಹಜ, ಸಾಮಾನ್ಯ. ಇದರಲ್ಲಿ ಊಟ, ನಿದ್ದೆಯಂತೆ ಲೈಂಗಿಕತೆಯಲ್ಲಿ ಆಸಕ್ತಿ ಕುಂದಿದರೂ ಲೈಫು ಚೆನ್ನಾಗಿರೋದಿಲ್ಲ. ಇಂದಿನ ಲೈಫ್‌ಸ್ಟೈಲಿನಲ್ಲಿ ಲೈಂಗಿಕ ನಿರಾಸಕ್ತಿ ಸಾಮಾನ್ಯವಾಗುತ್ತದೆ. ಹೆಣ್ಮಕ್ಕಳ ಲೈಂಗಿಕ ನಿರಾಸಕ್ತಿಗೆ ಕೆಲವು ಕಾರಣಗಳಿದ್ದರೆ ಪುರುಷರ ಲೈಂಗಿಕ ಶಕ್ತಿ ಕುಂದಲು ಅನೇಕ ಕಾರಣಗಳಿರುತ್ತವೆ. ಈ ಸಮಸ್ಯೆಗೆ ಆಯುರ್ವೇದದಲ್ಲಿ ಅತ್ಯುತ್ತಮ ಪರಿಹಾರವಿದೆ. ಅಲೋಪಥಿ ಮೆಡಿಸಿನ್‌ ತೆಗೆದುಕೊಂಡರೆ ಆಗುವ ದುಷ್ಪರಿಣಾಮಗಳು ಇದರಿಂದ ಆಗವು. ಇದರ ಪರಿಣಾಮ ಕೊಂಚ ನಿಧಾನವಾದರೂ ಪರಿಣಾಮ ದೀರ್ಘಕಾಲದವರೆಗೆ ಇರುತ್ತದೆ ಅನ್ನುವುದು ಅಷ್ಟೇ ನಿಜ. ಈ ಆಯುರ್ವೇದ ಚಿಕಿತ್ಸೆ ಸಾಮಾನ್ಯ . ಆಯುರ್ವೇದ ಚಿಕಿತ್ಸೆ ದೇಹದಲ್ಲಿನ ವಾತ, ಪಿತ್ತ ಮತ್ತು ಕಫದ ಸಮತೋಲನವನ್ನು ಕಾಪಾಡುತ್ತದೆ. ಹಾಗೆಯೇ ಆಯುರ್ವೇದವು ಲೈಂಗಿಕ ಚೈತನ್ಯವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಲೈಂಗಿಕತೆ ಹೆಚ್ಚಿಸುವ ಕೆಲವು ಆಯುರ್ವೇದಿಕ್‌ ಗಿಡಮೂಲಿಕೆಗಳ ವಿವರ ಇಲ್ಲಿದೆ.

ಲೈಂಗಿಕ ಚೈತನ್ಯಕ್ಕೆ ಅಶ್ವಗಂಧ​

ಅಶ್ವಗಂಧಕ್ಕೆ ಭಾರತೀಯ ಜಿನ್ಸೆಂಗ್ ಎಂದು ಕರೆಯುತ್ತಾರೆ. ಲೈಂಗಿಕ ಶಕ್ತಿಯನ್ನು ವೃದ್ಧಿಸಲು ಇದು ಸಹಕಾರಿ. ಹಾಗೆ ನೋಡಿದರೆ ಅಶ್ವಗಂಧವು ಆಯುರ್ವೇದ ಚಿಕತ್ಸೆಯಲ್ಲಿ ಜನಪ್ರಿಯ ಗಿಡಮೂಲಿಕೆ. ಆರೋಗ್ಯ ಮತ್ತು ಚೈತನ್ಯವನ್ನು ಸುಧಾರಿಸಲು ಇದನ್ನು ಶತಮಾನಗಳಿಂದ ಬಳಸಲಾಗುತ್ತಿದೆ. ಅಶ್ವಗಂಧವು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸಲು ಹೆಸರುವಾಸಿಯಾಗಿದೆ. ಇದು ವೀರ್ಯದ ಕೌಂಟ್‌ ಮತ್ತು ಚಲನಶೀಲತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಶ್ವಗಂಧವನ್ನು ಪೂರಕವಾಗಿ ತೆಗೆದುಕೊಳ್ಳಬಹುದು ಅಥವಾ ಚಹಾಕ್ಕೆ ಮಿಕ್ಸ್ ಮಾಡಿ ಸೇವಿಸಬಹುದು. ಇದು ಚ್ಯವನಪ್ರಾಶ ಮಾದರಿಯಲ್ಲೂ ಲಭ್ಯವಿರುತ್ತದೆ. ಇದು ಲೈಂಗಿಕ ಕ್ರಿಯೆ ಮತ್ತು ಫಲವತ್ತತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೆಲವು ಕ್ರೀಡಾಪಟುಗಳು ಇದನ್ನು ಸೇವಿಸುತ್ತಾರೆ. ಅಶ್ವಗಂಧದ ಟಾನಿಕ್ ಆನ್ನೂ ಸೇವಿಸಬಹುದು.

ಸೆಕ್ಸ್ ಪವರ್ ಹೆಚ್ಚಿಸೋದ್ರಿಂದ, ಕ್ಯಾನ್ಸರ್ ನಿವಾರಿಸೋವರೆಗೂ… ಶತಾವರಿ ಬೆಸ್ಟ್ ಔಷಧಿ

ಸಫೇದ್ ಮುಸ್ಲಿ
ಕ್ಲೋರೋಫೈಟಮ್ ಬೊರಿವಿಲಿಯನಮ್ ಎಂದು ಕರೆಯಲ್ಪಡುವ ಸಫೇದ್ ಮುಸ್ಲಿಯು ಭಾರತದ ಸ್ಥಳೀಯ ಮೂಲಿಕೆಯಾಗಿದೆ. ಲೈಂಗಿಕ ಕ್ರಿಯೆ ಮತ್ತು ಫಲವತ್ತತೆಯನ್ನು ಸುಧಾರಿಸಲು ಶತಮಾನಗಳಿಂದಲೂ ಆಯುರ್ವೇದದಲ್ಲಿ ಇದನ್ನು ಬಳಸಲಾಗುತ್ತಿದೆ. ಸಫೇದ್‌ ಮುಸ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸಲು ಹೆಸರುವಾಸಿಯಾಗಿದೆ. ಲೈಂಗಿಕ(Sex) ನಿರಾಸಕ್ತಿಯ ಚಿಕಿತ್ಸೆಯಲ್ಲಿ ಇದನ್ನು ಬಳಸೋದುಂಟು. ಇದು ಪುರುಷ ಚೈತನ್ಯ ವೃದ್ಧಿಸಲು ಸಹಕಾರಿ.

ವಿದಾರಿ ಕಾಂದ
ವಿದಾರಿ ಕಾಂದವನ್ನು ನೈಸರ್ಗಿಕ ಕಾಮೋತ್ತೇಜಕ ಎನ್ನುತ್ತಾರೆ. ಇದು ಕಾಮಾಸಕ್ತಿ ಸುಧಾರಿಸಲು ಸಹಾಯ(Help) ಮಾಡುತ್ತದೆ. ಇದನ್ನು ಪೂರಕವಾಗಿ ತೆಗೆದುಕೊಳ್ಳಬಹುದು ಅಥವಾ ಟಾನಿಕ್ ಆಗಿ ಸೇವಿಸಬಹುದು. ಇದರ ಜೊತೆಗೆ ಪ್ಯುರೇರಿಯಾ ಟ್ಯೂಬೆರೋಸಾ, ಒಟ್ಟಾರೆ ಆರೋಗ್ಯ ಮತ್ತು ಚೈತನ್ಯವನ್ನು ಸುಧಾರಿಸಲು ಆಯುರ್ವೇದದಲ್ಲಿ ಬಳಸಲಾಗುವ ಮೂಲಿಕೆಯಾಗಿದೆ. ಇದು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತದೆ. ಜೊತೆಗೆ ಲೈಂಗಿಕ ಕ್ರಿಯೆ ಮತ್ತು ಸ್ನಾಯುವಿನ ದ್ರವ್ಯರಾಶಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಟ್ರಿಬುಲಸ್ ಟೆರೆಸ್ಟ್ರಿಸ್ ಎಂದೂ ಕರೆಯಲ್ಪಡುವ ಗೋಕ್ಷುರಾ, ಪುರುಷರ ಚೈತನ್ಯವನ್ನು ಸುಧಾರಿಸಲು ಆಯುರ್ವೇದದಲ್ಲಿ ಜನಪ್ರಿಯ(Popular) ಗಿಡಮೂಲಿಕೆಯಾಗಿದೆ. ಇದು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುವುದಲ್ಲದೆ ಲೈಂಗಿಕ ಕ್ರಿಯೆ ಮತ್ತು ಸ್ನಾಯುವಿನ ದ್ರವ್ಯರಾಶಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಗೋಕ್ಷುರಾ ಚಹಾ ಕೂಡ ಪೂರಕ.

ಈ ಔಷಧಗಳನ್ನು ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆ ಕೇಳುವುದು ಅತ್ಯಗತ್ಯ.

ಗರ್ಭದಲ್ಲೇ ಭ್ರೂಣಕ್ಕೆ ಅಪಾಯಕಾರಿ ಹಾರ್ಟ್ ಆಪರೇಷನ್, 90 ಸೆಕೆಂಡ್‌ನಲ್ಲಿ ಉಳಿಯಿತು ತಾಯಿ-ಮಗುವಿನ ಜೀವ..!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌