ಜವಾಬ್ದಾರಿ ಬೇಡ, ಬದ್ಧತೆ ಬೇಡ, ಪ್ರೀತಿ, ಸಂಸಾರದ ಗಲಾಟೆ ಬೇಡ ಎನ್ನುವವರ ಸಂಖ್ಯೆ ಈಗ ಹೆಚ್ಚಾಗಿದೆ. ತಮ್ಮ ಕೆಲಸದಲ್ಲಿ ಯಾರೂ ತಲೆಹಾಕ್ಬಾರದು ಎನ್ನುವ ಜನರು ಸಂಬಂಧಕ್ಕೆ ಕಟ್ಟುಬೀಳದೆ ದೈಹಿಕ ಸುಖ ಪಡೆಯುತ್ತಿದ್ದಾರೆ. ಯುವಜನತೆಯಲ್ಲಿ ಈ ಟ್ರೆಂಡ್ ಹೆಚ್ಚಾಗಿದೆ.
ಇಲ್ಲಿ ಯಾವುದೇ ಭರವಸೆಗಳು, ಆಣೆ ಪ್ರಮಾಣಗಳು, ಮೋಸಗಳು ಇಲ್ಲ.. ನಾನು ಕೊನೆಯವರೆಗೂ ನಿನ್ನೊಂದಿಗೆ ಇರುತ್ತೇನೆ ನೀನೇ ನನ್ನ ಜೀವ, ನೀನೇ ನನ್ನ ಜಗತ್ತು ಎನ್ನುವ ಪ್ರತಿಜ್ಞೆಗಳೂ ಇಲ್ಲ. ಮದುವೆ, ಸಪ್ತಪದಿಗಳ ಹಂಗೂ ಇವರಿಗಿಲ್ಲ. ಇದೊಂದು ಹೊಸ ಬಗೆಯ ಡೇಟಿಂಗ್ ಅಷ್ಟೇ. ಲಿವಿಂಗ್ ಟುಗೆದರ್ ಆಯ್ತು, ಡೇಟಿಂಗ್ ಆಯ್ತು.. ಈಗ ಅದೇ ಡೇಟಿಂಗ್ ನ ಜಗತ್ತು ಮೊದಲಿಗಿಂತಲೂ ಹೆಚ್ಚು ಬದಲಾಗಿ ಅದಕ್ಕೆ ಹೊಸ ಪದಗಳ ಸೇರ್ಪಡೆಯಾಗಿದೆ. ಇದು ಹೃದಯದ ಭಾವನೆಗಳಿಗಿಂತ ಹೆಚ್ಚು ದೈಹಿಕ ಸುಖಕ್ಕೆ ಸಂಬಂಧಪಟ್ಟಿದೆ. ಹಾಲಿವುಡ್ ನ ಫ್ರೆಂಡ್ಸ್ ವಿತ್ ಬೆನಿಫಿಟ್ಸ್, ನೋ ಸ್ಟ್ರಿಂಗ್ ಅಟ್ಯಾಚ್, ಒನ್ ನೈಟ್ ಸ್ಟ್ಯಾಂಡ್ ಮುಂತಾದ ಚಿತ್ರಗಳನ್ನು ವೀಕ್ಷಿಸಿದವರಿಗೆ ಸಿಚುಯೇಶನ್ಶಿಪ್ ಬಗ್ಗೆ ಸ್ವಲ್ಪ ಅರ್ಥವಾಗಬಹುದು. ಈ ದಿನಗಳಲ್ಲಿ ಸಿಚುಯೇಶನ್ಶಿಪ್ ಟ್ರೆಂಡ್ ನಲ್ಲಿದೆ. ಯುವಪೀಳಿಗೆ ಈ ಸಂಬಂಧವನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ.
ಏನಿದು ಸಿಚುಯೇಶನ್ಶಿಪ್ (Situationship) ? : ತಜ್ಞರು ಹೇಳುವಂತೆ ಸಿಚುಯೇಶನ್ಶಿಪ್ ಶಬ್ದದಲ್ಲಿ ‘ಸಿಚುಯೇಶನ್’ ಮತ್ತು ‘ರಿಲೇಶನ್ಶಿಪ್’ (Relationship) ಈ ಎರಡೂ ಶಬ್ದಗಳು ಸೇರಿದೆ. ಈ ಸಂಬಂಧಕ್ಕೆ ಒಳಗಾದವರು ಸಂಬಂಧಗಳ ಹಂಗನ್ನು ತೊರೆದು ಕೇವಲ ರೋಮಾನ್ಸ್ ಗಾಗಿ ಮಾತ್ರ ಪರಸ್ಪರ ಜೊತೆಯಲ್ಲಿರುತ್ತಾರೆ. ಈ ತರಹದ ಸಂಬಂಧದಲ್ಲಿ ಅನ್ಯೋನ್ಯತೆ, ಒಟ್ಟಿಗೆ ಕಳೆಯುವ ಸಮಯವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತ ಹೋಗುತ್ತದೆ.
ಹೆಸರೇ ಸೂಚಿಸುವಂತೆ ಸಿಚುಯೇಶನ್ ಅಥವಾ ಪರಿಸ್ಥಿತಿ ಹೇಗೆ ಬರುತ್ತೋ ಅದಕ್ಕೆ ಅನುಗುಣವಾಗಿ ಎಲ್ಲವೂ ಇರುತ್ತೆ. ಇಲ್ಲಿ ಇಬ್ಬರು ತಮ್ಮ ದೈಹಿಕ (Physical) ಕಾಮನೆಗಳನ್ನು ಹಂಚಿಕೊಳ್ಳಲು ಮಾತ್ರ ಒಟ್ಟಿಗೇ ಇರುತ್ತಾರೆ. ಹಾಗಾಗಿ ಈ ಸಂಬಂಧವನ್ನು ಮುರಿದುಕೊಳ್ಳುವುದು ಬಹಳ ಸುಲಭ. ಯಾವುದೇ ಕಟ್ಟುಪಾಡುಗಳು, ಭಾವನೆಗಳಿಲ್ಲದೇ ಪಾರ್ಟನರ್ ಅನ್ನು ಬಿಡಬಹುದು.
ಸೆಕ್ಸ್ ಪವರ್ ಹೆಚ್ಚಿಸೋದ್ರಿಂದ, ಕ್ಯಾನ್ಸರ್ ನಿವಾರಿಸೋವರೆಗೂ… ಶತಾವರಿ ಬೆಸ್ಟ್ ಔಷಧಿ
Gen Z ಏಕೆ ಇದನ್ನು ಅಷ್ಟು ಇಷ್ಟಪಡ್ತಾರೆ? : ಈಗಿನ ಯುವಜನತೆ ತಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವ ಯಾವುದೇ ಕಟ್ಟುಪಾಡುಗಳಿಗೆ ಬದ್ಧರಾಗಿರುವುದಿಲ್ಲ. ಸದಾಕಾಲ ಸಾಮಾಜಿಕ ಜಾಲತಾಣದಲ್ಲೇ ಮೈಮರೆಯುವ ಅವರು ಅವುಗಳಿಂದಲೇ ಹೆಚ್ಚು ಪ್ರಭಾವಿತರಾಗುತ್ತಾರೆ. ಈಗಿನ ಯುವಜನತೆ ಯಾವುದೇ ರೀತಿಯ ಜವಾಬ್ದಾರಿಗಳನ್ನು ಹೊರಲು ಸಿದ್ಧರಿರುವುದಿಲ್ಲ. ಸಾಧ್ಯವಾದಷ್ಟು ಸಂಬಂಧ ಮತ್ತು ಕಟ್ಟುಪಾಡುಗಳಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಹಾಗಾಗಿಯೇ ಅವರು ಸಿಚುಯೇಶನ್ಶಿಪ್ ನಂತಹ ಸಂಬಂಧಗಳಿಗೆ ಆಕರ್ಷಿತರಾಗುತ್ತಾರೆ. ಇನ್ನೂ ಕೆಲವು ಮಂದಿ ತಮ್ಮ ಹಳೆಯ ಪ್ರೀತಿಯಲ್ಲಾದ ಮೋಸ ಮತ್ತು ವೈಫಲ್ಯದ ಕಾರಣದಿಂದ ಹೊಸ ಸಂಬಂಧಗಳನ್ನು ಇಷ್ಟಪಡ್ತಾರೆ.
ಫ್ರೆಂಡ್ಸ್ ವಿತ್ ಬೆನಿಫಿಟ್ಸ್ ಮತ್ತು ಸಿಚುಯೇಶನ್ಶಿಪ್ ನಡುವೆ ಅಂತರವೇನು?: ಸಿಚುಯೇಶನ್ಶಿಪ್ ಸಂಬಂಧ ಸಾಮಾನ್ಯವಾಗಿ ಯಾವುದೋ ಪರಿಚಯವಿಲ್ಲದ ವ್ಯಕ್ತಿಯ ಜೊತೆಗೆ ನಡೆಯುವ ದೈಹಿಕ ಸಂಬಂಧವಾಗಿದೆ. ಆದರೆ ಫ್ರೆಂಡ್ಸ್ ವಿತ್ ಬೆನಿಫಿಟ್ಸ್ ಸಂಬಂಧ ಇಬ್ಬರು ಗೆಳೆಯರ ನಡುವಿನ ಫಿಜಿಕಲ್ ಇಂಟಿಮಸಿಗೆ ಸಂಬಂಧಿಸಿದೆ.
Relationship Tips: ಮದುವೆಯಾಗೋಕೆ ಯಾವ ವಯಸ್ಸು ಬೆಸ್ಟ್? ಇಪ್ಪತ್ತು ವರ್ಷನಾ ಮೂವತ್ತಾ?
ಸಿಚುಯೇಶನ್ಶಿಪ್ ನಿಂದಾಗುವ ತೊಂದರೆ ಏನು? : ಈ ಸಂಬಂಧಕ್ಕೆ ಪರಸ್ಪರ ಇಬ್ಬರು ಒಪ್ಪಿಗೊಂಡಾಗ ಜವಾಬ್ದಾರಿ, ಸಂಸಾರದ ಟೆನ್ಶನ್ ನಿಂದ ದೂರವಿರಬಹುದು ಎಂದೆನಿಸಿದರೆ ಕೊನೆಗೆ ಇದರಿಂದ ತೊದರೆಯಾಗಬಹುದು. ದೈಹಿಕ ಸಂಬಂಧದ ನಂತರ ಯಾರಾದರೂ ಒಬ್ಬರು ಭಾವನೆಗಳಿಗೆ ಬೆಲೆಕೊಟ್ಟು ತಮ್ಮ ಕಮಿಟ್ಮೆಂಟ್ ಗಳನ್ನು ಈಡೇರಿಸಲು ಹೇಳಿದರೆ ಸಿಚುಯೇಶನ್ಶಿಪ್ ಸಂಬಂಧ ಕುತ್ತಿಗೆಗೆ ಉರುಳಾಗಬಹುದು. ಸಿಚುಯೇಶನ್ನ್ಶಿಪ್ ನಿಯಮದ ಬಗ್ಗೆ ಮೊದಲೇ ತಿಳಿದುಕೊಳ್ಳದೇ ಭಾವನೆಗಳಿಗೆ ಧಕ್ಕೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಸಿಚುಯೇಶನ್ಶಿಪ್ ಸಂಬಂಧದ ಲಕ್ಷಣಗಳು :
• ಗೆಳೆತನಕ್ಕಿಂತ ಹೆಚ್ಚು ಸಂಬಂಧಕ್ಕಿಂತ ಕಡಿಮೆ
• ಯಾರಿಗೂ ತಮ್ಮ ಸಂಬಂಧಗಳ ಬಗ್ಗೆ ಹೇಳದಿರುವುದು
• ಸಾಮಾಜಿಕ ಕಾರ್ಯಕ್ರಮಗಳಲ್ಲಿ ಒಟ್ಟಿಗೇ ಭಾಗವಹಿಸದೇ ಇರುವುದು
• ಯಾವುದೇ ಕಮಿಟ್ ಮೆಂಟ್ ಗೆ ಒಳಗಾಗದೇ ಇರುವುದು
• ಎಮೋಷನಲ್ ಅಟ್ಯಾಚ್ಮೆಂಟ್ ಕಡಿಮೆ ಇರುವುದು
• ಸಂಬಂಧಗಳ ಭವಿಷ್ಯದ ಕುರಿತು ಮಾತನಾಡದೇ ಇರುವುದು
• ಒಬ್ಬರೊಂದಿಗೆ ಸಂಬಂಧ ಹೊಂದಿದ ಮೇಲೂ ಇನ್ನೊಬ್ಬರ ಜೊತೆ ಡೇಟ್ ಗೆ ಹೋಗುವುದು