ನಿಮ್ಮ ಹೆಂಡ್ತಿಯಲ್ಲಿದ್ಯಾ ಈ ಗುಣ? ಹಾಗಾದ್ರೆ ಒಳ್ಳೇಯವಳು ಎಂದರ್ಥ!

By Suvarna News  |  First Published Apr 5, 2023, 4:40 PM IST

ಅದೃಷ್ಟವಿದ್ದವರಿಗೆ ಮಾತ್ರ ಉತ್ತಮ ಸಂಗಾತಿ ದೊರೆಯುತ್ತಾರೆ ಎನ್ನುವ ಮಾತಿದೆ. ಹಾಗೇನೂ ಇಲ್ಲ. ಕೆಲವು ಗುಣಗಳಿರುವ ಮಹಿಳೆಯರು ಉತ್ತಮ ಪತ್ನಿಯಾಗಬಲ್ಗರು. ಇಂಥ ಗುಣಗಳನ್ನು ಅಳವಡಿಸಿಕೊಂಡರೆ ಯಾರೇ ಬೇಕಾದರೂ ಉತ್ತಮ ಸಂಗಾತಿಯಾಗಬಲ್ಲರು.
 


ಉತ್ತಮ ಸಂಗಾತಿ ದೊರೆಯುವುದು ಒಂದು ರೀತಿಯಲ್ಲಿ ಅದೃಷ್ಟವಿದ್ದಂತೆ. ಪುರುಷನಾಗಲೀ, ಮಹಿಳೆಯಾಗಲೀ, ಎಲ್ಲರೂ ಉತ್ತಮ ಸಂಗಾತಿಯಾಗಲು ಸಾಧ್ಯವಿಲ್ಲ. ಉತ್ತಮ ಪತ್ನಿ ಅಥವಾ ಪತಿ ದೊರೆತಾಗ ಬದುಕು ಸಹ್ಯವಾಗುತ್ತದೆ, ನೆಮ್ಮದಿಯಿಂದ ಕೂಡಿರುತ್ತದೆ ಹಾಗೂ ಸಮಸ್ಯೆಗಳು ಸಮಸ್ಯೆ ಎಂದೇ ಅನ್ನಿಸುವುದಿಲ್ಲ. ಪತಿಯಾದವನು ಸರಿಯಾಗಿಲ್ಲದಿದ್ದರೆ ಪತ್ನಿಗೆ ನೆಮ್ಮದಿ ಇರುವುದಿಲ್ಲ, ಪತ್ನಿಯಾದವಳು ಸರಿಯಾಗಿಲ್ಲ ಎಂದರೆ ಪತಿಗೂ ಜೀವನ ಹಿಂಸೆಯಾಗುತ್ತದೆ. ಹಾಗಿದ್ದರೆ, ಇಲ್ಲಿ “ಸರಿʼ ಎನ್ನುವುದರ ಅರ್ಥವೇನು? ಬೇಕಷ್ಟು ಅರ್ಥಗಳನ್ನು ಇಲ್ಲಿ ನೀಡಬಹುದು. ನಾವಿಲ್ಲಿ ಉತ್ತಮ ಪತ್ನಿಯ ಲಕ್ಷಣಗಳನ್ನು ಗಮನಿಸೋಣ. ಒಳ್ಳೆಯ ಪತ್ನಿ ದೊರೆಯಬೇಕೆಂದು ಎಲ್ಲ ಪುರುಷರೂ ಬಯಸುತ್ತಾರೆ. ಆದರೆ, ಅಂಥ ಹುಡುಗಿಯನ್ನು ಗುರುತಿಸಲು ಸೋಲುತ್ತಾರೆ. ಏಕೆಂದರೆ, ಆರಂಭದಲ್ಲಿ ಅವರು ಅಷ್ಟು ಆಕರ್ಷಣೆ ಎನಿಸದೇ ಇರಬಹುದು. ಆದರೆ, ಕೆಲವು ಯುವತಿಯರು ಉತ್ತಮ ಪತ್ನಿಯಾಗುವ ಎಲ್ಲ ಲಕ್ಷಣಗಳನ್ನೂ ಹೊಂದಿರುತ್ತಾರೆ. ಅವರು ಪತಿಗೆ ಭಾರವಾಗದೆ ಸ್ವತಂತ್ರವಾಗಿ ಜೀವನ ನಡೆಸುವಂಥವರಾಗಿರುತ್ತಾರೆ. ಪ್ರಬುದ್ಧತೆಯಿಂದ ಕೂಡಿರುತ್ತಾರೆ. ಇಲ್ಲೊಂದು ಮಾತು, ತಾವೊಂದೇ ಉತ್ತಮ ಪತ್ನಿಯಾದರೆ ಸಾಕಾ, ಗಂಡಸು ಉತ್ತಮ ಪತಿಯಾಗುವುದು ಬೇಡವಾ ಎಂದು ಮಹಿಳೆಯರು ಪ್ರಶ್ನಿಸುತ್ತಿರುವುದರಲ್ಲಿ ಅರ್ಥವಿಲ್ಲ. ಅವರೂ ಆಗಬೇಕು, ನೀವೂ ಈ ಗುಣಗಳನ್ನು ಬೆಳೆಸಿಕೊಂಡರೆ ವೈವಾಹಿಕ ಜೀವನ ಸುಖಮಯವಾಗುತ್ತದೆ.

•    ಸ್ವತಂತ್ರ ಧೋರಣೆ (Independence)
ಸಾಂಗತ್ಯದಲ್ಲಿ (Relationship) ಒಬ್ಬರ ಮೇಲೆ ಒಬ್ಬರು ಅವಲಂಬಿತರಾಗುವುದು ಸಹಜ. ಭಾವನಾತ್ಮಕವಾಗಿ (Emotionally) ಇದು ಅಗತ್ಯವೂ ಹೌದು. ಆದರೂ ಸ್ವತಂತ್ರ ಧೋರಣೆಯೂ ಅಷ್ಟೇ ಅಗತ್ಯ. ಪ್ರತಿಯೊಂದು ಸಣ್ಣಪುಟ್ಟ ನಿರ್ಧಾರ (Decision) ಕೈಗೊಳ್ಳುವಾಗಲೂ ಪತಿಯ ಮುಖ ನೋಡದೆ ತಾವೇ ಸ್ವತಂತ್ರರಾಗಿ ನಿರ್ಧರಿಸುವ ಗುಣ ದಾಂಪತ್ಯದಲ್ಲಿ ಅಗತ್ಯ. ಸ್ವತಂತ್ರ ಚಿಂತನೆ ಸಂಬಂಧದಲ್ಲಿ ಅತಿ ಮುಖ್ಯ. ದೃಢವಾದ ಇಬ್ಬರು ವ್ಯಕ್ತಿಗಳಿದ್ದಾಗ ದಾಂಪತ್ಯ ಸುಗಮವಾಗುತ್ತದೆ. ಹೆಂಡತಿ (Wife) ಎಲ್ಲವನ್ನೂ ನಿಭಾಯಿಸುವ ಛಾತಿ ಹೊಂದಿದ್ದಾಗ ಪುರುಷರಿಗೆ ಕೆಲವು ಜವಾಬ್ದಾರಿಗಳು ಕಡಿಮೆಯಾಗುತ್ತವೆ.

Tap to resize

Latest Videos

ನೀವು ಡೇಟಿಂಗ್ ಮಾಡುತ್ತಿರುವ ವ್ಯಕ್ತಿಗೆ ಈಗಾಗ್ಲೇ ಮದ್ವೆ ಆಗಿದ್ಯಾ? ಹೀಗೆ ತಿಳ್ಕೊಳಿ…

•    ಪ್ರಬುದ್ಧತೆ (Maturity)
ಸಂಬಂಧದಲ್ಲಿ ಸಮಾನತೆ (Equality) ಅತಿ ಮುಖ್ಯ. ಪ್ರಬುದ್ಧ ಮಹಿಳೆಯರು ತಾವು ಹೇಳಿದಂತೆಯೇ ಎಲ್ಲವೂ ನಡೆಯಬೇಕು ಎನ್ನುವ ಹಠಕ್ಕೆ ಬೀಳುವುದಿಲ್ಲ. ಬದಲಿಗೆ, ಸಂಗಾತಿಗೂ (Partner) ತನ್ನಷ್ಟೇ ಆದ್ಯತೆ ಇದೆ ಎನ್ನುವುದನ್ನು ಅರಿತುಕೊಂಡು ನಡೆಯುತ್ತಾರೆ. ತಮ್ಮ ಭಾವನೆಗಳನ್ನು ನಿಭಾಯಿಸುವುದು ಇವರಿಗೆ ಗೊತ್ತಿರುತ್ತದೆ. ಪುರುಷರೂ (Male) ಅಷ್ಟೆ. ಇದನ್ನು ಅರ್ಥೈಸಿಕೊಳ್ಳಬೇಕು. ತಮ್ಮ ನಿರ್ಧಾರವೇ ಅಂತಿಮ ಎನ್ನುವಂತೆ ನಡೆದುಕೊಂಡರೆ ಉತ್ತಮ ಪತಿಯಾಗಲು ಸಾಧ್ಯವಿಲ್ಲ.

•    ಇತಿಹಾಸವನ್ನು (History) ಎಳೆಯೋಲ್ಲ
ಬಹಳಷ್ಟು ಮಹಿಳೆಯರು (Women) ಹಿಂದೆ ನಡೆದಿರುವುದನ್ನು ಕೆಣಕಿ ಹಾಲಿ ಕ್ಷಣವನ್ನು ಆಸ್ವಾದಿಸುವುದಿಲ್ಲ. ಆದರೆ, ಉತ್ತಮ ಸಂಗಾತಿ ಈ ಗುಣಕ್ಕೆ ಪ್ರೋತ್ಸಾಹ ನೀಡುವುದಿಲ್ಲ. ಹಿಂದಾಗಿರುವ ಕೆಟ್ಟ ಘಟನೆಗಳನ್ನು ಮರೆಯುವುದು ಉತ್ತಮ ಸಂಬಂಧಕ್ಕೆ ಪೂರಕ.

•    ಹಣಕಾಸು ಜವಾಬ್ದಾರಿ (Financial Responsibility)
ಕೆಲವು ಮಹಿಳೆಯರು ಮನೆಯ ಹಣಕಾಸು ಸ್ಥಿತಿ ನಿಭಾಯಿಸುವುದರಲ್ಲಿ ಭಾರೀ ಚುರುಕಾಗಿರುತ್ತಾರೆ. ಇಂಥವರು ಸಂಸಾರಕ್ಕೆ (Married Life) ಸಾಕಷ್ಟು ಅತ್ಯಮೂಲ್ಯ ಕೊಡುಗೆ ನೀಡುತ್ತಾರೆ. ಏಕೆಂದರೆ, ಕಷ್ಟಪಟ್ಟು ದುಡಿದ ಹಣ ಎಲ್ಲಿಯೂ ಪೋಲಾಗಲು ಬಿಡುವುದಿಲ್ಲ. ವಿಚ್ಛೇದನಕ್ಕೆ ಬಹುಮುಖ್ಯ ಕಾರಣಗಳಲ್ಲಿ ಹಣಕಾಸು ಅಶಿಸ್ತು, ಅವ್ಯವಸ್ಥೆಯೂ ಒಂದು ಎನ್ನುವುದು ಗಮನಾರ್ಹ ಅಂಶ.

Teenage: ಹದಿಹರೆಯದ ಮಗಳು ಇದನ್ನು ತಿಳಿದಿರ್ಬೇಕು

•    ಸಂಬಂಧ ಚೆನ್ನಾಗಿರಲು ಪ್ರಯತ್ನ
ಬೇಕಾಬಿಟ್ಟಿ ವರ್ತನೆ (Behave) ಮಾಡುವುದರಿಂದ, ಅತೀವ ಸ್ವಾರ್ಥ ಅಥವಾ ಈಗೋ (Ego) ಮತ್ತಿತರ ಸಮಸ್ಯೆಗಳಿಂದ ದಂಪತಿಗಳು ದೂರವಾಗುವುದು ಹೆಚ್ಚು. ಇಂಥವರಲ್ಲಿ ತಮ್ಮ ಸಂಬಂಧ ಚೆನ್ನಾಗಿರಬೇಕಾದರೆ ತಾವೇನು ಕೊಡುಗೆ ನೀಡಲು ಸಾಧ್ಯ ಎಂದು ಯೋಚಿಸುವ ಬುದ್ಧಿ ಇರುವುದಿಲ್ಲ. ತಮ್ಮ ಧೋರಣೆಯೇ ಅಂತಿಮವಾಗಿರುವಂತೆ ಕಂಡುಬರುತ್ತಾರೆ. ಆದರೆ, ಸಂಬಂಧಕ್ಕಾಗಿ ಸ್ವಾರ್ಥವನ್ನು, ಈಗೋವನ್ನು ಬಿಡುವವರು ಉತ್ತಮ ಸಂಗಾತಿಯಾಗುತ್ತಾರೆ.

•    ಬದ್ಧತೆ (Loyelty)
ಬದ್ಧತೆಯುಳ್ಳ ಮಹಿಳೆಯರು ಜೀವನದ ಏರಿಳಿತಗಳಲ್ಲೂ ಸಂಗಾತಿಗೆ ಜತೆಯಾಗಿರುತ್ತಾರೆ. ಸಂಗಾತಿ ತನ್ನ ಗುರಿ ತಲುಪಲು ತಮ್ಮಿಂದಾದ ಕೊಡುಗೆ ನೀಡುತ್ತಾರೆ.  

click me!