
2.5 ವರ್ಷದ toxic ಸಂಬಂಧದಿಂದ ಹೊರಬಂದ ಹುಡುಗಿಯೊಬ್ಬಳ ಹೃದಯವಿದ್ರಾವಕ ಕಥೆ Redditನಲ್ಲಿ ವೈರಲ್ ಆಗಿದೆ. ಸುಮಾರು 19 ವರ್ಷದ ಹುಡುಗಿ ರೆಡ್ಡಿಟ್‌ನಲ್ಲಿ "ನಾನು ಸುಮಾರು 2.5 ವರ್ಷಗಳ ಕಾಲ ನನ್ನ ಎಕ್ಸ್ ಬಾಯ್‌ಫ್ರೆಂಡ್ ಜೊತೆ ಸಂಬಂಧದಲ್ಲಿದ್ದೆ. ಆರಂಭದಿಂದಲೂ ಅವನು ನನ್ನ ಮೇಲೆ ನಿಂದನೆ, ಅವಮಾನ, ಕ್ಲಾಸ್‌ನಲ್ಲಿಯೇ ಗಲಾಟೆ ಮಾಡುತ್ತಿದ್ದ. ಎಲ್ಲವೂ ಸಹಿಸಿಕೊಂಡೆ. ಆದರೆ ಈ ವರ್ಷ ಅವನಿಂದ ದೂರ ಹೋಗೋಣ ಅಂತ ನಿರ್ಧರಿಸಿದೆ." ಎಂದಿದ್ದಾಳೆ.
ಪ್ರಾಮಿಸ್ ಮಾಡಿಯೂ ಪದೇ ಪದೇ ಎಕ್ಸ್ ಬಾಯ್‌ಫ್ರೆಂಡ್ ದೊಡ್ಡ ತಪ್ಪು ಮಾಡುತ್ತಿದ್ದ. ಆತನಿಂದ ಇಬ್ಬರ ಕುಟುಂಬಗಳ ನಡುವೆ ದೊಡ್ಡ ಗಲಾಟೆಯೂ ಆಗಿದೆ. ಇದೇ ಕಾರಣಕ್ಕೆ ಹುಡುಗಿಯ ಮನೆಯವರು ಆಕೆಗೆ ಹಿಂಸೆ ಮಾಡಿದ್ದು, ಪರೀಕ್ಷೆ ಸಮಯದಲ್ಲಿಯೇ ಮನೆಯ ಹೊರಗೆ ಹಾಕಿರುವುದು ಇನ್ನು ದುರಂತ. ಈ ಕುರಿತು ಪೋಸ್ಟ್‌ನಲ್ಲಿ ಹುಡುಗಿ ತನ್ನ ದುಃಖ ತೋಡಿಕೊಂಡಿದ್ದಾಳೆ.
"ನಾನು mentally already weak ಆಗಿದ್ದೆ. ಆದರೆ ಈ ನಡುವೆಯೇ ಅವನು ಮತ್ತೆ ಆ*ತ್ಮಹ*ತ್ಯೆ ಸಂದೇಶಗಳನ್ನ ಕಳುಹಿಸಿ, ನನ್ನ guilt trip ಗೆ ಒತ್ತಾಯ ಮಾಡ್ತಿದ್ದ. ಕೈ ಕತ್ತರಿಸಿಕೊಂಡು ನಾನೇ ಏನೋ ತಪ್ಪು ಮಾಡಿದಂತೆ ನಡೆದುಕೊಳ್ಳುತ್ತಿದ್ದ. ಒಂದು ಬಾರಿ ನಾನು ಫೋನ್‌ನಲ್ಲಿ ಮಾತಾಡುತ್ತಿದ್ದಾಗ ನನ್ನ ಸ್ನೇಹಿತೆಯೂ ಜೊತೆ ಇದ್ದಳು. ಅವನು ಅದೆಲ್ಲಾ ತಪ್ಪಾಗಿ ಅರ್ಥ ಮಾಡಿಕೊಂಡು, ನನ್ನನ್ನು ಮತ್ತು ನನ್ನ ಫ್ರೆಂಡನ್ನು ನಿಂದಿಸಿದ.
ಅವನ ಅಜ್ಜಿ ನನ್ನ ತಾಯಿಗೆ ಕರೆ ಮಾಡಿ, ಇಲ್ಲದಸಲ್ಲದ ಸುಳ್ಳು ಹೇಳಿದರು. ಅವರ ಮಾತುಗಳನ್ನು ನಂಬಿ ನನ್ನ ತಾಯಿ ನನ್ನ ಕಡೆ ಬೇಸರದಿಂದ ನೋಡಲು ಪ್ರಾರಂಭಿಸಿದರು. ಅಪ್ಪ ಕೂಡ ನನ್ನ ಜೊತೆ ಕೆಟ್ಟದಾಗಿ ವರ್ತಿಸಿದರು" ಎಂದು ಆಕೆ ತಮ್ಮ Reddit ಪೋಸ್ಟಿನಲ್ಲಿ ಬರೆದಿದ್ದಾಳೆ.
ಇನ್ನೂ ಇದೆ…
ಈ ಯುವತಿ ಎಕ್ಸ್ ಬಾಯ್‌ಫ್ರೆಂಡ್‌ಗೆ ಹಣಕಾಸು ಸಹಾಯ ನೀಡಿದ್ರೂ, ಈಗ ಅದನ್ನೇ ವಿರುದ್ಧ ಅಸ್ತ್ರವಾಗಿ ಉಪಯೋಗಿಸುತ್ತಿದ್ದಾನೆ. ಬ್ರೇಕಪ್ ನಂತರ ನಗ್ನ ಫೋಟೋಗಳನ್ನು ಡಿಲೀಟ್ ಮಾಡುವುದಾಗಿ ಹೇಳಿದ್ದ. ಆದರೆ ಡಿಲೀಟ್ ಮಾಡದೇ ಇವತ್ತಿಗೂ ಆಕೆಯ ಮೇಲೆ mental pressure ಹಾಕುತ್ತಿದ್ದಾನೆ. ಇದರಿಂದ ಹುಡುಗಿಗೆ ಫೋಟೋಗಳು ಇತರರ ಕೈಗೆ ಹೋಗುವುದೋ ಎಂಬ ಭಯದೊಂದಿಗೆ ಜೀವನ ಸಾಗಿಸುತ್ತಿದ್ದಾಳೆ.
ಬಳಕೆದಾರರ ಪ್ರತಿಕ್ರಿಯೆ...
ಸದ್ಯ ಈ ಘಟನೆ Reddit ನಲ್ಲಿ ಚರ್ಚೆಗೆ ಕಾರಣವಾಗಿದ್ದು, ಹಲವರು ಆಕೆಗೆ ಬೆಂಬಲ ನೀಡಿದ್ದಾರೆ.
"ನೀವು ಯಾವ ತಪ್ಪೂ ಮಾಡಿಲ್ಲ"
"ತಕ್ಷಣ ಸೂಕ್ತ ಸಹಾಯ ಪಡೆದುಕೊಳ್ಳಿ"
"ಯಾವ ನಿರ್ಧಾರವನ್ನಾದರೂ ತೆಗೆದುಕೊಳ್ಳೋದಕ್ಕೂ ಮುಂಚೆ ಅವನ ಬಳಿ ನಿಮಗೆ ಸಂಬಂಧಪಟ್ಟ ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸಿ ಪೊಲೀಸ್‌ಗೆ ಮಾಹಿತಿ ನೀಡಿ. ಆ ನಂತರ ನೀವು ಮುಂದೇನು ಮಾಡಬೇಕು ಎಂಬುದನ್ನು ಯೋಚಿಸಬಹುದು. ದಯವಿಟ್ಟು ಒಂದು ಮಾತು ನೆನಪಿಟ್ಟುಕೊಳ್ಳಿ, ಇದು ನಿಮ್ಮ ಬದುಕಿನ ಕೊನೆ ಅಲ್ಲ. ನಿಮ್ಮ ಜೀವನಕ್ಕಿಂತ ಅದೆಲ್ಲ ಮುಖ್ಯವಲ್ಲ"
"ನೀವು ಈಗ 19 ವರ್ಷದವರಾಗಿದ್ದರೆ, ಮತ್ತು ನಿಮ್ಮ ಸಂಬಂಧ 2.5 ವರ್ಷಗಳಷ್ಟು ಹಿಂದೆಯಾದ್ದಾದರೆ, ಆ ಫೋಟೋಗಳು ನೀವು ಅಪ್ರಾಪ್ತ ವಯಸ್ಸಿನವರಾಗಿದ್ದಾಗ ಕ್ಲಿಕ್ಕಿಸಿದ್ದರೆ ಅವನ ಜೀವನವೇ ಈಗಾಗಲೇ ನಾಶವಾಗಿದೆ. ಏಕೆಂದರೆ ಅವನು ಈಗಾಗಲೇ ಆ ಫೋಟೋಗಳನ್ನು ಯಾರಿಗಾದರೂ ಕಳಿಸಿದ್ದರೆ, ಈಗ ನೀವು ಮಾಡಬೇಕಾದದ್ದು POCSO ಕಾಯ್ದೆಯಡಿ ಪೂರ್ಣ ಪ್ರಮಾಣದ ಕಾನೂನು ಕ್ರಮ ತೆಗೆದುಕೊಳ್ಳುವುದು ಮಾತ್ರ" ಎಂದು ಪ್ರತಿಕ್ರಿಯಿಸಿದ್ದಾರೆ.
ಕೊನೆಯ ಮಾತು…
ಯಾವುದೇ ಹುಡುಗಿಗೆ ಇಂತಹ ಸಂದರ್ಭ ಎದುರಾದಾಗ ತಾಳ್ಮೆಯಿಂದ ಲಾಜಿಕ್ ಬಳಸಿ, ಕಾನೂನು ಮಾರ್ಗದ ಮೂಲಕ ಮುಂದೆ ಹೋಗಬೇಕು. ಓದು, ಜೀವ, ಕನಸುಗಳು... ಅದನ್ನೆಲ್ಲಾ ಒಂದು toxic ಹುಡುಗನಿಗಾಗಿ ಕಳೆದುಕೊಳ್ಳಬಾರದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.