
ಬೆಂಗಳೂರು (ಜು.18): ಇಷ್ಟು ವರ್ಷಗಳ ಕಾಲ ಸೀಕ್ರೆಟ್ ಆಗಿ ಇರಿಸಿಕೊಂಡಿದ್ದ ಸಂಬಂಧ ಕೋಲ್ಡ್ ಪ್ಲೇ ಸಂಗೀತ ಕಚೇರಿಯ ವೇಳೆ ಬಹಿರಂಗವಾಗಿದೆ. ಇದರಿಂದಾಗಿ ವಿಶ್ವದ ಪ್ರಖ್ಯಾತ ಐಟಿ ಕಂಪನಿ ಆಸ್ಟ್ರೋನಾಮರ್ ಸಿಇಒ ಆಂಡಿ ಬೈರಾನ್ ಅವರ ಸಂಸಾರವೇ ಛಿದ್ರಛಿದ್ರವಾಗಿದೆ. ಸದ್ಯ ಆಂಡಿ ಬ್ರಯಾನ್ ಅವರ ಪತ್ನಿ ಕೆರಿರ್ಗನ್ ಬೈರಾನ್ ಸೋಶಿಯಲ್ ಮೀಡಿಯಾ ಖಾತೆಯಿಂದ ತಮ್ಮ ಸರ್‌ನೇಮ್‌ಅನ್ನು ಅಳಿಸಿ ಹಾಕಿದ್ದು, ವಿಚ್ಛೇದನದ ಸುಳಿವು ನೀಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?: ಇತ್ತೀಚೆಗೆ ಅಮೆರಿಕದ ಬೋಸ್ಟನ್‌ನಲ್ಲಿ ಕೋಲ್ಡ್ ಪ್ಲೇ ಸಂಗೀತ ಕಚೇರಿ ನಡೆದಿತ್ತು. ಈ ಹಂತದಲ್ಲಿ ಗಾಯಕ ಕ್ರಿಸ್ ಮಾರ್ಟಿನ್ ಪ್ರೇಕ್ಷಕರೊಂದಿಗೆ ಸಂವಾದ ಕಾರ್ಯಕ್ರಮ ಎನ್ನುವಂತೆ ಕಿಸ್‌ಕ್ಯಾಮ್‌ಅನ್ನು ಹಾರಿಬಿಟ್ಟಿದ್ದರು. ಕಿಸ್ ಕ್ಯಾಮ್ ಹಾರುತ್ತಾ ಆಸ್ಟ್ರೋನಾಮರ್ ಸಿಇಒ ಆಂಡಿ ಬೈರಾನ್ ಅವರ ಬಳಿ ಬಂದಿದೆ. ಈ ವೇಳೆ ಆಂಡಿ ಬೈರಾನ್, ಒಬ್ಬ ಹುಡುಗಿಯನ್ನು ಹಿಂದಿನಿಂದ ತಬ್ಬಿಕೊಂಡು ನಿಂತಿದ್ದರು. ಕಿಸ್‌ಕ್ಯಾಮ್ ಬಳಿ ಬಂದು ಅವರ ವಿಡಿಯೋ ದೈತ್ಯ ಪರದೆಯಲ್ಲಿ ಪ್ರಸಾರವಾಗುತ್ತಿದ್ದಂತೆ ಆಂಡಿ ಬೈರಾನ್ ಅಡಗಿಕೊಳ್ಳಲು ಆರಂಭಿಸಿದ್ದರು. ಅದಕ್ಕೆ ಕಾರಣವೂ ಇತ್ತು. ಆಂಡಿ ಬೈರಾನ್ ತಬ್ಬಿಕೊಂಡಿದ್ದ ಹುಡುಗಿ ಬೇರೆ ಯಾರೂ ಆಗಿರಲಿಲ್ಲ. ಆಸ್ಟ್ರೋನಾಮರ್ ಕಂಪನಿಯ ಚೀಫ್ ಪೀಪಲ್ ಆಫೀಸರ್ ಕ್ರಿಸ್ಟಿನ್ ಕ್ಯಾಬೋಟ್ ಆಗಿದ್ದರು. ಇಲ್ಲಿಯವರೆಗೂ ಸೀಕ್ರೆಟ್ ಆಗಿದ್ದ ಅಫೇರ್ ಕೋಲ್ಡ್ ಪ್ಲೇ ಸಂಗೀತ ಕಚೇರಿಯ ಕಿಸ್ ಕ್ಯಾಮ್ ಮೂಲಕ ಜಗತ್ತಿಗೆ ಗೊತ್ತಾಗಿತ್ತು.
ಕಾನ್ಸರ್ಟ್‌ಗೆ ಬಂದಿದ್ದ ಜನಸಮೂಹದೊಂದಿಗೆ ಸಂವಹನ ನಡೆಸುವಾಗ, ಮಾರ್ಟಿನ್ ಪ್ರೇಕ್ಷಕರಲ್ಲಿ ಒಬ್ಬ ದಂಪತಿಗಳತ್ತ ಕಿಸ್ ಕ್ಯಾಮೆರಾವನ್ನು ತಿರುಗಿಸಿದರು. ಆದರೆ ಆ ಕ್ಷಣವು ಕೆಲಸದ ಸ್ಥಳದಲ್ಲಿ ವಂಚನೆ ಹಗರಣ ಬಹಿರಂಗವಾಗಲು ಕಾರಣವಾಗುತ್ತದೆ ಎನ್ನುವ ಅಂದಾಜು ಕೂಡ ಕ್ರಿಸ್ ಮಾರ್ಟಿನ್‌ಗೆ ಇದ್ದಿರಲಿಲ್ಲ. ಕ್ಲಿಪ್ ಪ್ರಕಾರ, ಈಗಾಗಲೇ ವಿವಾಹಿತರಾಗಿರುವ ಬೈರನ್, ಬುಧವಾರ ಬೋಸ್ಟನ್‌ನಲ್ಲಿ ತಮ್ಮ ಎಚ್‌ಆರ್ ಲೀಡ್ ಕ್ರಿಸ್ಟಿನ್ ಕ್ಯಾಬೋಟ್ ಜೊತೆಗೆ ಸಂಗೀತ ಕಚೇರಿಯಲ್ಲಿ ಭಾಗವಹಿಸಿದ್ದರು. ಕಿಸ್ ಕ್ಯಾಮ್ ಇಬ್ಬರ ಮೇಲೆ ಇಳಿಯುತ್ತಿದ್ದಂತೆ, ಮಾರ್ಟಿನ್, "ಓಹ್, ಇವರಿಬ್ಬರನ್ನು ನೋಡಿ" ಎಂದು ಹೇಳಿದ್ದರು.
ಆದರೆ, ಕಿಸ್ ಕ್ಯಾಮೆರಾ ನೋಡಿ ಆಘಾತಕ್ಕೆ ಒಳಗಾಗಿದ್ದ ಬೈರನ್, ಕ್ಯಾಬೋಟ್ ಅವರನ್ನು ಬಿಟ್ಟು ತಡೆಗೋಡೆಗಳ ಹಿಂದೆ ಅಡಗಿಕೊಳ್ಳಲು ಮುಂದಾಗಿದ್ದರು. ಅಷ್ಟರಲ್ಲಿ, ಆ ಮಹಿಳೆ ಸ್ಪಾಟ್‌ಲೈಟ್‌ನಲ್ಲಿ ನಿಂತು, ತನ್ನ ಕೈಗಳಿಂದ ಮುಖವನ್ನು ಮರೆಮಾಡಿಕೊಂಡಳು. ಆಗ ಗಾಯಕ "ಓಹ್ ವಾಟ್.. ಒಂದೋ ಅವರು ಸಂಬಂಧ ಹೊಂದಿದ್ದಾರೆ ಅಥವಾ ಅವರು ತುಂಬಾ ನಾಚಿಕೆಪಡುತ್ತಾರೆ" ಎಂದು ಹೇಳುತ್ತಿದ್ದಂತೆ ಇಡೀ ಜಿಲೆಟ್ ಕ್ರೀಡಾಂಗಣವು ನಗೆಯಲ್ಲಿ ಮುಳುಗಿತು.
ಬೈರನ್‌ರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು ಆಸ್ಟ್ರೋನೊಮರ್ ಎಂಬ ಸಾಫ್ಟ್‌ವೇರ್ ಅಭಿವೃದ್ಧಿ ಕಂಪನಿಯ ಸಿಇಒ ಆಗಿದ್ದಾರೆ. ಈ ನಡುವೆ, ಕ್ಯಾಬೋಟ್ ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್‌ನೊಂದಿಗೆ ಸಂಸ್ಥೆಯ ಮುಖ್ಯ ಪೀಪಲ್ ಆಫೀಸರ್ ಹುದ್ದೆಯನ್ನು ಅಲಂಕರಿಸಿದ್ದಾರೆ, ಅವರು "ಸಿಇಒಗಳಿಂದ ವ್ಯವಸ್ಥಾಪಕರು ಮತ್ತು ಸಹಾಯಕರವರೆಗೆ ಎಲ್ಲಾ ಹಂತದ ಉದ್ಯೋಗಿಗಳೊಂದಿಗೆ ವಿಶ್ವಾಸವನ್ನು ವರ್ತಿಸುತ್ತಾರೆ" ಎಂದು ಹೇಳಿದ್ದಾರೆ.
ಎಕ್ಸ್‌ನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, "ಛೀ, ಅದನ್ನು ವಿವರಿಸಲು ಕಷ್ಟ." ಮತ್ತೊಬ್ಬ ಯೂಸರ್, "ಹೆಂಡತಿಗೆ ಕ್ಷಮಿಸಿ ಆದರೆ ಅವರು ಬಹಿರಂಗಗೊಂಡಿದ್ದಕ್ಕೆ ಮತ್ತು ಮುಜುಗರಕ್ಕೊಳಗಾಗಿದ್ದಕ್ಕೆ ಸಂತೋಷವಾಗಿದೆ." ಮೂರನೇ ಯೂಸರ್ ಒಬ್ಬರು, "HR ನೀತಿಗಳನ್ನು ಶೀಘ್ರದಲ್ಲೇ ನವೀಕರಿಸಲಾಗುತ್ತದೆ." ಎಂದು ಕಾಮೆಂಟ್ ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.