
ಬೆಂಗಳೂರು (ಜು.18): ಆಸ್ಟ್ರೋನಾಮರ್ ಕಂಪನಿಯ ಸಿಇಒ ಆಂಡಿ ಬೈರಾನ್ ಅವರ ಅನೈತಿಕ ಸಂಬಂಧದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಮ್ಮದೇ ಕಂಪನಿಯ ಚೀಫ್ ಪಬ್ಲಿಕ್ ಆಫೀಸರ್ ಕ್ರಿಸ್ಟೀನ್ ಕ್ಯಾಬೋಟ್ ಜೊತೆ ಬೋಸ್ಟನ್‌ನಲ್ಲಿ ಕೋಲ್ಡ್ ಪ್ಲೇ ಕಾನ್ಸರ್ಟ್‌ನಲ್ಲಿ ಭಾಗವಹಿಸಿದ್ದಾಗಲೇ ಅವರ ವಿಡಿಯೋ ಕಿಸ್ ಕ್ಯಾಮ್ ಮೂಲಕ ದೈತ್ಯ ಪರದೆಯಲ್ಲಿ ವೈರಲ್ ಆಗಿದೆ. ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅವರ ವಿಡಿಯೋ ಕಿಸ್ ಕ್ಯಾಮೆರಾ ಮೂಲಕ ದೈತ್ಯ ಪರದೆಯಲ್ಲಿ ಪ್ರಸಾರವಾಗಿತ್ತು.
ಬ್ರಿಟಿನ್ ಬ್ಯಾಂಡ್‌ನ ಕಾರ್ಯಕ್ರಮದ ವೇಳೆ, ಕಿಸ್ ಕ್ಯಾಮ್ ಪ್ರೇಕ್ಷಕರ ಮೇಲಿಂದ ಹಾದು ಹೋಗುತ್ತಿತ್ತು. ಈ ವೇಳೆ ಆಂಡಿ ಬೈರಾನ್ ಹಾಗೂ ಕ್ರಿಸ್ಟೀನ್ ಕ್ಯಾಬೋಟ್ ಅವರು ತಬ್ಬಿಕೊಂಡಿದ್ದು ದಾಖಲಾಗಿತ್ತು. ಸಾಮಾನ್ಯ ದಂಪತಿಗಳಂತೆ ಅವರು ನಿಂತಿದ್ದರು. ಬೈರಾನ್‌ನ ಕೈಗಳು ಕ್ಯಾಬೋಟ್ ಅವರ ಸೊಂಟ ಹಿಡಿದುಕೊಂಡಿದ್ದವು.
ತಮ್ಮ ಸಂಬಂಧ ಗೊತ್ತಾಗುತ್ತಿದ್ದಂತೆ ಬೈರಾನ್ ಹಾಗೂ ಕ್ಯಾಬೋಟ್ ಇಬ್ಬರಿಗೂ ಶಾಕ್ ಆಗಿತ್ತು. ಬೈರಾನ್ ತಕ್ಷಣವೇ ತಡೆಗೋಡೆಯ ಹಿಂದೆ ಅಡಗಿಕೊಂಡರೆ, ಕ್ಯಾಬೋಟ್ ತನ್ನ ಮುಖ ಮುಚ್ಚಿಕೊಂಡರು.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದರೆ, ಆಸ್ಟ್ರಾನಾಮರ್ ಸಿಇಒ ಆಂಡಿ ಬೈರಾನ್ ಪತ್ನಿ ಮೇಗನ್ ಕರ್ರಿರ್ಗನ್ ಫೇಸ್‌ಬುಕ್ ಪುಟದಲ್ಲಿ ತಮ್ಮ ಸರ್‌ನೇಮ್‌ಅನ್ನು ತೆಗೆದುಹಾಕಿದ್ದು, ಶೀಘ್ರದಲ್ಲೇ ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಬಹುದು ಎನ್ನಲಾಗಿದೆ.
ಅಮೆರಿಕದ ಬೋಸ್ಟನ್‌ನಲ್ಲಿ ಜನಿಸಿದ ಕ್ರಿಸ್ಟೀನ್ ಕ್ಯಾಬೋಟ್, ಗೆಟ್ಟಿಸ್‌ಬರ್ಗ್ ಕಾಲೇಜಿನಿಂದ ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದರು. ನವೆಂಬರ್ 2024 ರಲ್ಲಿ ಟೆಕ್ ಕಂಪನಿ ಆಸ್ಟ್ರೋನೊಮರ್‌ಗೆ ಸೇರಿದರು, ಇದು ಕಂಪನಿಗೆ ಒಂದು ರೋಮಾಂಚಕಾರಿ ಮತ್ತು ಪರಿವರ್ತನಾಶೀಲ ಸಮಯ ಎಂದು ಬಣ್ಣಿಸಿದರು. ಅವರು 2000 ರಲ್ಲಿ ದಿ ಸ್ಕ್ರೀನ್ ಹೌಸ್‌ನಲ್ಲಿ ಪ್ರಾಜೆಕ್ಟ್ ಮ್ಯಾನೇಜರ್/ಅಕೌಂಟ್ ಮ್ಯಾನೇಜರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಹಲವಾರು ಸಂಸ್ಥೆಗಳಲ್ಲಿ ಸಂಕ್ಷಿಪ್ತ ಅವಧಿಯ ನಂತರ, ಅವರು 2004 ರಲ್ಲಿ ಡಿಜಿಟಾಸ್ ಎಲ್ ಬಿಐ ಸೇರಿದರು, ಅಲ್ಲಿ ಅವರು ಯುಎಸ್ ಪ್ರತಿಭಾ ಕಾರ್ಯಾಚರಣೆಗಳು ಮತ್ತು ನೇಮಕಾತಿಯ ಅಸೋಸಿಯೇಟ್ ನಿರ್ದೇಶಕಿ ಮತ್ತು ಮುಖ್ಯಸ್ಥರಂತಹ ಹುದ್ದೆಗಳನ್ನು ಅಲಂಕರಿಸಿದರು.
ನಂತರ, ಆಕೆ ಆಸ್ಟ್ರಾನಾಮರ್‌ಗೆ ಸೇರುವ ಮುನ್ನ ವಿವಿಧ ಸಂಸ್ಥೆಗಳಲ್ಲಿ ಜಾಗತಿಕ ಪ್ರತಿಭಾ ನಿರ್ವಹಣೆಯ ಮುಖ್ಯಸ್ಥರ ಪಾತ್ರವನ್ನು ನಿರ್ವಹಿಸಿದರು.
ಕ್ಯಾಬಟ್ ತನ್ನನ್ನು ತಾನು ಉತ್ಸಾಹಿ ಜನ ನಾಯಕಿ ಎಂದು ಬಣ್ಣಿಸಿಕೊಳ್ಳುತ್ತಾಳೆ, ವೇಗವಾಗಿ ಬೆಳೆಯುತ್ತಿರುವ ಸ್ಟಾರ್ಟ್‌ಅಪ್‌ಗಳು ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳಿಗಾಗಿ ಪ್ರಶಸ್ತಿ ವಿಜೇತ ಸಂಸ್ಕೃತಿಗಳನ್ನು ನೆಲದಿಂದಲೇ ನಿರ್ಮಿಸಲು ಹೆಸರುವಾಸಿಯಾಗಿದ್ದಾಳೆ ಎಂದು ತನ್ನ ಲಿಂಕ್ಡ್‌ಇನ್ ಬಯೋದಲ್ಲಿ ಹೇಳಲಾಗಿದೆ.
ಕ್ಯಾಬಟ್ ಈ ಹಿಂದೆ ಕೆನ್ನೆತ್ ಸಿ. ಥಾರ್ನ್ಬಿ ಅವರನ್ನು ವಿವಾಹವಾಗಿದ್ದರು. ಅವರು 2018 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆಂದು ವರದಿಯಾಗಿದೆ ಮತ್ತು 2022 ರಲ್ಲಿ ವಿವಾಹವನ್ನು ಅಧಿಕೃತವಾಗಿ ವಿಚ್ಛೇದನ ಎಂದು ಘೋಷಿಸಲಾಯಿತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.