ಅಜಿತ್ ಪವಾರ್ ನಿಧನ: ಸುಪ್ರಿಯಾ ಸುಳೆ ಹಾಗೂ ಸುನೇತ್ರಾ ಅವರನ್ನು ಸಮಾಧಾನಿಸುತ್ತಿರುವ ವೃದ್ಧ ಯಾರು?

Published : Jan 29, 2026, 02:42 PM IST
businessman Vitthal Seth Maniyar

ಸಾರಾಂಶ

ವಿಮಾನ ಅಪಘಾತದಲ್ಲಿ ನಿಧನರಾದ ಅಜಿತ್ ಪವಾರ್ ಅವರ ಅಂತ್ಯಸಂಸ್ಕಾರದ ವೇಳೆ, ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದ ವೃದ್ಧರೊಬ್ಬರು ಗಮನ ಸೆಳೆದಿದ್ದು, ಅವರು ಅಜಿತ್ ಪವಾರ್ ಪತ್ನಿ, ಸೋದರಿಗೆ ಸಾಂತ್ವಾನ ಹೇಳುತ್ತಿರುವುದು ವೀಡಿಯೋದಲ್ಲಿ ಸೆರೆ ಆಗಿದೆ. ಅವರು ಯಾರು?

ಪಂಚಭೂತಗಳಲ್ಲಿ ಲೀನವಾದ ಬಾರಾಮತಿಯ ದಾದಾ:

ಪುಣೆ: ನಿನ್ನೆ ನಡೆದ ವಿಮಾನ ಅಪಘಾತದಲ್ಲಿ ಹಠಾತ್ ಸಾವನ್ನಪ್ಪಿದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದೆ. ಅವರನ್ನು ಅರ ಕರ್ಮಭೂಮಿ ಎನಿಸಿದ ಬಾರಾಮತಿಯಲ್ಲೇ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಯ್ತು. ಇಲ್ಲಿನ ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ನಡೆದ ಅಂತಿಮ ಕ್ರಿಯೆಗೆ ಸಾವಿರಾರು ಜನ ಸೇರಿದ್ದರು. ಪವಾರ್ ಅವರ ಪುತ್ರರಾದ ಪಾರ್ಥ್ ಮತ್ತು ಜಯ್ ಪವಾರ್ ನೆರೆದಿದ್ದ ಸಾವಿರಾರು ಜನರ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನವನ್ನು ನೆರವೇರಿಸಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಅವರ ಸಾವು ಆತ್ಮೀಯರು, ಸ್ನೇಹಿತರು, ಕುಟುಂಬದವರರಲ್ಲದೇ ಅವರ ಪತ್ನಿಸುನೇತ್ರಾ ಪವಾರ್ ಸೋದರಿ ಸೋದರಿ ಸುಪ್ರಿಯಾ ಸುಳೆ ಅವರಿಗೆ ತೀವ್ರ ಆಘಾತ ನೀಡಿದ್ದು, ಅವರನ್ನು ಸಮಾಧಾನಿಸಲು ಸಾಧ್ಯವಾಗುತ್ತಿಲ್ಲ.

 

 

ನಿನ್ನೆ ಪ್ರಾರಂಭವಾದ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ಸುನೇತ್ರಾ ಪವಾರ್ ಮತ್ತು ಸುಪ್ರಿಯಾ ಸುಳೆ ಇಬ್ಬರೂ ದೆಹಲಿಯಲ್ಲಿದ್ದರು. ಹೀಗಾಗಿ ಘಟನೆ ನಡೆಯುವ ವೇಳೆ ಇಬ್ಬರೂ ದೆಹಲಿಯಲ್ಲಿದ್ದರು. ವಿಚಾರ ತಿಳಿದು ಇಬ್ಬರು ದೆಹಲಿಯಿಂದ ಖಾಸಗಿ ವಿಮಾನದಲ್ಲಿ ಒಟ್ಟಿಗೆ ಮರಳಿದ್ದರು. ಅವರ ಆಗಮನದ ನಂತರ, ಸುನೇತ್ರಾ ಪವಾರ್ ಮತ್ತು ಸುಪ್ರಿಯಾ ಸುಳೆ ದುಃಖ ತಡೆಯಲಾಗದೇ ಕಣ್ಣೀರು ಸುರಿಸುತ್ತಿರುವ ದೃಶ್ಯಗಳು ವೈರಲ್ ಆದವು. ಜನರಿಗೆ ರಾಜಕೀಯವಾಗಿ ಪರಿಚಯವಿಲ್ಲದ ವೃದ್ಧ ವ್ಯಕ್ತಿಯೊಬ್ಬರು ಅಜಿತ್ ಪವಾರ್ ಪತ್ನಿ ಮತ್ತು ಸೋದರ ಸಂಬಂಧಿ ಸುಪ್ರಿಯಾ ಸುಳೆ ಅವರಿಗೆ ಸಾಂತ್ವನ ಹೇಳುತ್ತಿರುವುದು ಕಂಡುಬಂದಿತು.

 

 

 

ಅವರು ಘಟನೆ ನಡೆದಾಗಿನಿಂದಲೂ ಸ್ಥಳದಲ್ಲಿದ್ದರು ಮತ್ತು ಕುಟುಂಬವನ್ನು ಒಳಗೊಂಡ ಬಹುತೇಕ ಪ್ರತಿಯೊಂದು ದೃಶ್ಯದಲ್ಲೂ ಕಾಣಿಸಿಕೊಂಡಿದ್ದರು ಆ ವ್ಯಕ್ತಿಯ ಉಪಸ್ಥಿತಿ ಅವರು ಯಾರು ಎಂಬ ಕುತೂಹಲವನ್ನು ಅನೇಕರಿಗೆ ಹುಟ್ಟು ಹಾಕಿತ್ತು. ಹೀಗೇ ಅಜಿತ್ ಪವಾರ್ ಕುಟುಂಬದ ಕಷ್ಟದಲ್ಲಿ ಜೊತೆಯಾದ ಅವರನ್ನು ಉದ್ಯಮಿ ವಿಠ್ಠಲ್ ಸೇಠ್ ಮಣಿಯಾರ್ ಎಂದು ಗುರುತಿಸಲಾಗಿದೆ.

ವಿಠ್ಠಲ ಮಣಿಯಾರ್ ಯಾರು?

ವಿಠ್ಠಲ್ ಸೇಠ್ ಮಣಿಯಾರ್ ಒಬ್ಬ ಉದ್ಯಮಿಯಾಗಿದ್ದು, ಅವರು ಶರದ್ ಪವಾರ್ ಅವರ ಅತ್ಯಂತ ಆಪ್ತ ಗೆಳೆಯನಾಗಿದ್ದು, ಬಹಳ ದೀರ್ಘಕಾಲದಿಂದ ಅವರ ಕುಟುಂಬ ಸ್ನೇಹಿತರಾಗಿದ್ದಾರೆ. ಅವರು ರಾಜಕೀಯದ ಆರಂಭಿಕ ದಿನಗಳಿಂದಲೂ ಶರದ್ ಪವಾರ್ ಅವರೊಂದಿಗೆ ನಿಂತಿದ್ದಾರೆ. ಶರದ್ ಪವಾರ್ ಮೊದಲು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದಾಗ, ವಿಠ್ಠಲ್ ಸೇಠ್ ಅವರೊಂದಿಗೆ ಇದ್ದರು. ಅವರ ಸ್ನೇಹವು ಹಲವಾರು ದಶಕಗಳಿಂದ ಮುಂದುವರೆದಿದೆ ಮತ್ತು ಇಂದಿಗೂ ಪ್ರಬಲವಾಗಿದೆ. ಸುಪ್ರಿಯಾ ಸುಳೆ ಅವರನ್ನು ಅಪ್ಪಿಕೊಂಡು ಕಣ್ಣೀರಿಟ್ಟ ರೀತಿ ವಿಠ್ಠಲ್ ಸೇಠ್ ಪವಾರ್ ಕುಟುಂಬಕ್ಕೆ ಎಷ್ಟು ಆಪ್ತರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ.

ಇದನ್ನೂ ಓದಿ: ವಿಮಾನ ಅಪಘಾತದ ವೇಳೆ ಟಿವಿ ನೋಡ್ತಿದ್ದ ಅಜಿತ್ ಪವಾರ್ ತಾಯಿ: ಮನೆಯ ಕೇಬಲ್ ಸಂಪರ್ಕ ಕಡಿತಗೊಳಿಸಿದ ಸಿಬ್ಬಂದಿ

ಕೆಲವು ವರ್ಷಗಳ ಹಿಂದೆ ನಡೆದ ಸಂದರ್ಶನವೊಂದರಲ್ಲಿ, ವಿಠ್ಠಲ್ ಸೇಠ್ ಅವರು ಶರದ್ ಪವಾರ್ ಅವರೊಂದಿಗಿನ ತಮ್ಮ ಸ್ನೇಹವನ್ನು ನೆನಪಿಸಿಕೊಂಡಿದ್ದರು. ಕಾಲೇಜಿಗೆ ಸೇರಿದ ನಂತರ, ಶರದ್ ಪವಾರ್ ವಿರುದ್ಧ ವಿದ್ಯಾರ್ಥಿ ಪ್ರತಿನಿಧಿ ಚುನಾವಣೆಯಲ್ಲಿ ಸ್ಪರ್ಧಿಸಿ ನಾನು ಸೋತಿದ್ದೆ.ಆದರೆ ಆ ಸೋಲು ನನಗೆ ಉತ್ತಮ ಸ್ನೇಹಿತನನ್ನು ನೀಡಿತು. ಸ್ನೇಹಿತರನ್ನು ಮಾಡಿಕೊಳ್ಳುವುದು ಸುಲಭ, ಆದರೆ ಕೊನೆಯವರೆಗೂ ಸ್ನೇಹವನ್ನು ಕಾಪಾಡಿಕೊಳ್ಳುವುದು ಕಷ್ಟ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಏಮ್ಸ್‌ ಆಸ್ಪತ್ರೆಯ ಲಿಫ್ಟ್‌ನಲ್ಲಿ ಚಿನ್ನದ ಸರ ಕದ್ದಿದ್ದು ಬೇರೆ ಯಾರೋ ಅಲ್ಲ: 45 cctv ನೋಡಿ ಆರೋಪಿಯ ಬಂಧನ

ವಿಠ್ಠಲ್ ಮನಿಯಾರ್ ಮತ್ತು ಶರದ್ ಪವಾರ್ ನಡುವಿನ ಸ್ನೇಹ ಪುಣೆಯ ಬೃಹನ್ ಮಹಾರಾಷ್ಟ್ರ ಕಾಲೇಜ್ ಆಫ್ ಕಾಮರ್ಸ್ (ಬಿಎಂಸಿಸಿ) ನಿಂದ ಪ್ರಾರಂಭವಾಯಿತು. ಮನಿಯಾರ್ ಪ್ರಸಿದ್ಧ ಬಿಎಂಸಿಸಿಯಲ್ಲಿ ನಡೆದ ಚುನಾವಣೆಯಲ್ಲಿ ಸೋತು ನಿರಾಶೆಗೊಂಡಾಗ ಅವರನ್ನು ಸಂಪರ್ಕಿಸಿದ ಪವಾರ್, ಜನರಿಗಾಗಿ ಕೆಲಸ ಮಾಡಲು ಒಬ್ಬರಿಗೆ ಸ್ಥಾನದ ಅಗತ್ಯವಿಲ್ಲ ಎಂದು ಹೇಳಿದರು. ಈ ಕ್ಷಣವು ಅವರ ಇಡೀ ಜೀವಮಾನದ ಸ್ನೇಹವನ್ನು ಪ್ರಾರಂಭಿಸಿತು. ಮನಿಯಾರ್, ಶರದ್ ಪವಾರ್ ಅವರ ಅತ್ಯಂತ ವಿಶ್ವಾಸಾರ್ಹ ರಾಜಕೀಯೇತರ ಸ್ನೇಹಿತರಾದರು.

ಇದನ್ನೂ ಓದಿ: ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?

ಮಣಿಯಾರ್ ಅವರನ್ನು ರಕ್ತಸಂಬಂಧವಿಲ್ಲದ ಪವಾರ್ ಕುಟುಂಬದ ಸದಸ್ಯರೆಂದು ಪರಿಗಣಿಸಲಾಗಿದೆ. ಅವರು ವಿದ್ಯಾ ಪ್ರತಿಷ್ಠಾನ, ಪವಾರ್ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಒಳಗೊಂಡಂತೆ ಪವಾರ್ ಕುಟುಂಬದ ನೇತೃತ್ವದ ಬಹುತೇಕ ಎಲ್ಲಾ ಪ್ರಮುಖ ಸಂಸ್ಥೆಗಳಿಗೆ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆರು ದಶಕಗಳಿಗೂ ಹೆಚ್ಚು ಕಾಲ ಮಹಾರಾಷ್ಟ್ರದ ಪವರ್‌ ಕಾರಿಡಾರ್‌ನಲ್ಲಿದ್ದರೂ, ಮಣಿಯಾರ್ ಎಂದಿಗೂ ರಾಜಕೀಯ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಅಥವಾ ಸರ್ಕಾರಿ ಹುದ್ದೆಯನ್ನು ಹುಡುಕಿಲ್ಲ. ಅವರು ಸ್ನೇಹಿತ, ತತ್ವಜ್ಞಾನಿ ಮತ್ತು ಮಾರ್ಗದರ್ಶಕನಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Chinmayi Sripada: 'ಉದ್ಯಮವು ಕನ್ನಡಿಯಲ್ಲ' ಎಂದು ಮೆಗಾಸ್ಟಾರ್ ಚಿರಂಜೀವಿ ವಿರುದ್ಧ ಗುಡುಗಿದ ಗಾಯಕಿ
Adnan Sami: 16 ವರ್ಷಗಳ ಹಿಂದೆ, ನನ್ನ ಸುಂದರಿ ರೋಯಾ ನನಗೆ 'ಹೌದು' ಎಂದು ಒಪ್ಪಿಗೆ ನೀಡಿದಳು