SEX SECRET: ಬೆತ್ತಲಾಗುವ ಮಲಗುವ ಕೋಣೆಯಲ್ಲಿಯೂ ದಂಪತಿ ಬಚ್ಚಿಡುವ ವಿಚಾರಗಳಿವು..!

By Suvarna News  |  First Published Dec 13, 2021, 10:37 PM IST

ದಂಪತಿ ಒಂದಾಗುವ ಮಲಗುವ ಕೋಣೆ (Bedroom)ಯಲ್ಲಿ ಸೀಕ್ರೇಟ್ (Secret)ಗಳೇ ಇಲ್ಲ ಎಂದು ಹೇಳುತ್ತಾರೆ. ಆದರೆ, ಬೆತ್ತಲಾಗುವ ಬೆಡ್ ರೂಮ್‌ನಲ್ಲಿಯೂ ಗುಟ್ಟುಗಳಿವೆ. ಪತಿ-ಪತ್ನಿ (Couples) ಪರಸ್ಪರ ಹೇಳಿಕೊಳ್ಳಲಾಗದ ಪಿಸುಮಾತುಗಳಿವೆ. ಏನದು..?


ಲೈಂಗಿಕತೆಯು ಜೀವನದ ಅವಿಭಾಜ್ಯ ಅಂಗವಾಗಿದೆ. ಜೀವನವನ್ನು ಪುನರುತ್ಪಾದಿಸಲು ಮತ್ತು ವಂಶಾವಳಿಯನ್ನು ಮುಂದುವರಿಸುವ ಮಾರ್ಗವಾಗಿದೆ. ಆದರೂ, ದೇಹದ ಇತರ ಭಾಗಗಳಂತೆ, ಕೆಲವೊಮ್ಮೆ, ನಮ್ಮ ಲೈಂಗಿಕ (Sex) ಅಂಗಗಳು ನಾವು ಬಯಸಿದ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಇದು ಪುರುಷರು ಮತ್ತು ಸ್ತ್ರೀಯರಲ್ಲಿ ಮುಜುಗರ ಮತ್ತು ಅವಮಾನಕ್ಕೆ ಕಾರಣವಾಗುತ್ತದೆ. ಈ ಹಲವು ಕಾರಣಗಳಿಂದಾಗಿಯೇ ಬೆಡ್ ರೂಮ್‌ (Bedroom)ನಲ್ಲಿಯೂ ಪತಿ-ಪತ್ನಿ ಮಧ್ಯೆ ಸೀಕ್ರೆಟ್‌ಗಳಿರುತ್ತವೆ. ಗಂಡ-ಹೆಂಡತಿ ಅದೆಷ್ಟು ಆತ್ಮೀಯರಾಗಿದ್ದರೂ ಈ ವಿಚಾರಗಳ ಬಗ್ಗೆ ಮಲಗುವ ಕೋಣೆಯಲ್ಲಿ ಮಾತನಾಡುವುದೇ ಇಲ್ಲ. ಹಾಗಾದರೆ ದಂಪತಿಗಳು ಎದುರಿಸುವ ಸಾಮಾನ್ಯ ಸಮಸ್ಯೆಗಳು ಯಾವುವು ತಿಳಿಯೋಣ..?

ಪುರುಷ ಬಂಜೆತನ

Latest Videos

undefined

ಸಾಮಾನ್ಯವಾಗಿ ಬಂಜೆತನ (Infertility) ಸಮಸ್ಯೆ ಮಹಿಳೆಯರಿಗೆ ಮಾತ್ರ ಸಂಬಂಧಿಸಿದ್ದು ಎಂದು ಹಲವರು ಭಾವಿಸುತ್ತಾರೆ. ಆದರೆ ಪುರುಷರು ಸಹ ಬಂಜೆತನಕ್ಕೆ ಒಳಗಾಗಬಹುದು. ಪುರುಷ ಬಂಜೆತನಕ್ಕೆ ಪ್ರಾಥಮಿಕ ಕಾರಣವೆಂದರೆ ಕಡಿಮೆ ವೀರ್ಯ ಎಣಿಕೆ ಅಥವಾ ಕಡಿಮೆ ಚಲನಶೀಲತೆ. ದೇಹದಲ್ಲಿ ವೀರ್ಯಾಣುಗಳ ಕಡಿಮೆ ಉತ್ಪಾದನೆ, ಅನಾರೋಗ್ಯಕರ ವೀರ್ಯಗಳು ಮತ್ತು ತಪ್ಪಾದ ವೀರ್ಯಗಳಿಂದ ಪುರುಷ ಬಂಜೆತನ ಆಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ವಯಸ್ಸು, ಅನಿಯಮಿತ ಜೀವನಶೈಲಿ, ಅತಿಯಾದ ಒತ್ತಡ ಅಥವಾ ಅನುವಂಶಿಕ ಕಾರಣಗಳಿಂದಾಗಿ ಪುರುಷ ದೇಹವು ಹೆಣ್ಣು ಮೊಟ್ಟೆಗಳನ್ನು ಫಲವತ್ತಾಗಿಸಲು ಸಾಕಷ್ಟು ಅಥವಾ ಆರೋಗ್ಯಕರ ವೀರ್ಯಾಣುಗಳನ್ನು ಉತ್ಪಾದಿಸಲು ಅಸಮರ್ಥವಾಗುತ್ತದೆ.

Feelfree Menstruation Sex: ಮುಟ್ಟಾದಾಗ ಸೆಕ್ಸ್‌ಗೆ ಒತ್ತಾಯಿಸುವ ಗಂಡ, ಇದೇನು ವಿಚಿತ್ರ!

ಅಕಾಲಿಕ ಸ್ಖಲನ

ಲೈಂಗಿಕ ಕ್ರಿಯೆಯ ಸಮಯದಲ್ಲಿ ಅತಿ ಬೇಗನೆ ವೀರ್ಯ ಸ್ಖಲನ (Ejaculation)ವಾಗುವುದನ್ನು ಅಕಾಲಿಕ ಸ್ಖಲನ ಎನ್ನಲಾಗುತ್ತದೆ. ಇದು ಸ್ಖಲನದ ಸಮಸ್ಯೆ. ಇದನ್ನು ಕೆಲವರು ಶೀಘ್ರ ಸ್ಖಲನ ಎನ್ನುತ್ತಾರೆ. ಅಕಾಲಿಕ ಸ್ಖಲನವು ಅನೇಕ ಪುರುಷರನ್ನು ಕಾಡುವ ಸಮಸ್ಯೆಯಾಗಿದೆ. ಅತಿ ಬೇಗನೇ ಸ್ಖಲನವಾಗುವುದು ಎಷ್ಟೋ ಪುರುಷರಿಗೆ ಅವಮಾನ ಮತ್ತು ಕಿರಿಕಿರಿಯ ವಿಷಯವಾಗಿದೆ. ಲೈಂಗಿಕ ಜೀವನದಲ್ಲಿ ಆತಂಕಕ್ಕೂ, ಮುಜುಗರಕ್ಕೂ ಕಾರಣವಾಗುತ್ತದೆ. ಇದಕ್ಕೆ ಕಾರಣವೇನೆಂದು ನಿರ್ಧಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆದರೆ ವೈದ್ಯರು, ಮಾನಸಿಕ, ದೈಹಿಕ ಪರಿಸ್ಥಿತಿ ಇದಕ್ಕೆ ಕಾರಣ ಎಂದು ಹೇಳುತ್ತಾರೆ.

ಆಯುರ್ವೇದದ ಪ್ರಕಾರ, ಈ ರೀತಿಯ ಸಮಸ್ಯೆಯು ತಮ್ಮ ದೇಹದಲ್ಲಿ ಹೆಚ್ಚಿನ ಶಾಖವನ್ನು ಹೊಂದಿರುವ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ, ಈ ರೋಗವನ್ನು ಗುಣಪಡಿಸಲು, ವೈದ್ಯರು ಕೆಲವು ಆಹಾರ ಬದಲಾವಣೆಗಳನ್ನು ಮಾಡುವಂತೆ ಸಲಹೆ ನೀಡುತ್ತಾರೆ. ಹೆಚ್ಚು ಉಪ್ಪು, ಚಹಾ, ಕಾಫಿ ಮತ್ತು ಮಸಾಲೆಯುಕ್ತ ಆಹಾರ ಸೇವಿಸದಂತೆ ಸೂಚಿಸುತ್ತಾರೆ. ಏಕೆಂದರೆ ಈ ರೀತಿಯ ಆಹಾರಗಳು ದೇಹದಲ್ಲಿ ಉಷ್ಣವನ್ನು ಹೆಚ್ಚಿಸುತ್ತದೆ. ಬದಲಿಗೆ ಮೊಸರು, ಪುದೀನಾ ಮತ್ತು ಧನಿಯಾ ಚಟ್ನಿ ತಿನ್ನುವುದರಿಂದ ಉಷ್ಣತೆ ಕಡಿಮೆಯಾಗುತ್ತದೆ.

ಕಾಮಾಸಕ್ತಿಯ ಕೊರತೆ

ಕಾಮಾಸಕ್ತಿ ಅಥವಾ ಲೈಂಗಿಕ ಬಯಕೆಯ ಕೊರತೆಯು ಪುರುಷರು ಮತ್ತು ಮಹಿಳೆಯರಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಮತ್ತು ಅದರ ಆಯುರ್ವೇದ (Ayurveda) ಪರಿಹಾರವು ಎರಡೂ ಲಿಂಗಗಳಿಗೆ ಬಹುತೇಕ ಒಂದೇ ಆಗಿರುತ್ತದೆ. ಆಯುರ್ವೇದವು ಈ ಸಮಸ್ಯೆಯನ್ನು ಎರಡು ಪ್ರಮುಖ ಕಾರಣಗಳಿಂದ ನಿರೂಪಿಸುತ್ತದೆ. ಒತ್ತಡ, ಆತಂಕ ಮತ್ತು ಒತ್ತಡದ ಜೀವನಶೈಲಿ, ದೈಹಿಕ ದೌರ್ಬಲ್ಯದಿಂದ ಕಾಮಾಸಕ್ತಿಯ ಕೊರತೆ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.

Health Tips: ಸಂಗಾತಿಯೊಂದಿಗೆ ವ್ಯಾಯಾಮ ಮಾಡಿ ಪ್ರೀತಿ ಹೆಚ್ಚಿಸಿಕೊಳ್ಳಿ!

ಸ್ತ್ರೀಯರಲ್ಲಿ ಬಂಜೆತನ

ಮಹಿಳೆಯರಲ್ಲಿ ಬಂಜೆತನವು ಸಾಮಾನ್ಯ ಸಮಸ್ಯೆಯಾಗಿದೆ. ಬಂಜೆತನವು ಸಂತಾನೋತ್ಪತ್ತಿ ಅಂಗವ್ಯೂಹದ ಒಂದು ರೋಗ. ಇದು ದೇಹದ ಅತಿ ಮುಖ್ಯ ಕಾರ್ಯ ನಿರ್ವಹಣೆಯಾದ ಗರ್ಭಧರಿಸಿ ಮಗು ಪಡೆಯುವುದನ್ನು ನಿರುಪಯುಕ್ತಗೊಳಿಸುತ್ತದೆ. 12 ತಿಂಗಳ ಕಾಲ ನಿರಂತರ ಮತ್ತು ಅಸುರಕ್ಷಿತ ಲೈಂಗಿಕ ಕ್ರಿಯೆಯನ್ನು ನಡೆಸಿದ ಬಳಿಕವೂ ಗರ್ಭ ಧರಿಸದೆ ಇರುವುದನ್ನು ಬಂಜೆತನ ಎಂದು ಕರೆಯಲಾಗುತ್ತದೆ.  ಆದರೆ 'ಶತಾವರಿ' ಎಂಬ ಚಿಕಿತ್ಸೆ ಸ್ತ್ರೀ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಮಾನಸಿಕ ಮತ್ತು ದೈಹಿಕ ಒತ್ತಡಗಳನ್ನು ಕಡಿಮೆ ಮಾಡುತ್ತದೆ.

ಸ್ತ್ರೀ ಲೈಂಗಿಕ ಅಪಸಾಮಾನ್ಯ ಕ್ರಿಯೆ

ಲೈಂಗಿಕ ಚಟುವಟಿಕೆ ಅಥವಾ ಲೈಂಗಿಕ ಅಸಾಮಾನ್ಯ ಕ್ರಿಯೆ, ಲೈಂಗಿಕ ಚಟುವಟಿಕೆಯಿಂದ ತೃಪ್ತಿಯನ್ನು ಅನುಭವಿಸುವ ವ್ಯಕ್ತಿಯನ್ನು ಅಥವಾ ದಂಪತಿಗಳನ್ನು ತಡೆಯುವ ಲೈಂಗಿಕ ಪ್ರತಿಕ್ರಿಯೆ ಚಕ್ರದಲ್ಲಿನ ಯಾವುದೇ ಹಂತದಲ್ಲಿ ಕಂಡು ಬರುವ ಒಂದು ಸಮಸ್ಯೆಯಾಗಿದೆ. ದೈಹಿಕ ಕಾರಣಗಳು, ವೈದ್ಯಕೀಯ ಪರಿಸ್ಥಿತಿಗಳು ಲೈಂಗಿಕ ಕ್ರಿಯೆಗೆ ಸಮಸ್ಯೆ ಉಂಟು ಮಾಡಬಹುದು. ಕೆಲವೊಂದು ಔಷಧಿಗಳ ಅಡ್ಡ ಪರಿಣಾಮ ಸಹ ಲೈಂಗಿಕ ಆಸೆ ಕಡಿಮೆಯಾಗುವಲ್ಲಿ ಪರಿಣಾಮ ಬೀರಬಹುದು.

click me!