Menstruation and Sex: ಮುಟ್ಟಾದಾಗ ಸೆಕ್ಸ್‌ಗೆ ಒತ್ತಾಯಿಸುವ ಗಂಡ, ಇದೇನು ವಿಚಿತ್ರ!

By Suvarna News  |  First Published Dec 13, 2021, 1:46 PM IST

ಕೆಲವು ಗಂಡಸರು ತಮ್ಮ ಸಂಗಾತಿಯ ಋತುಸ್ರಾವದ ಸಮಯದಲ್ಲಿ ಸಂಭೋಗಿಸಲು ಇಚ್ಛೆಪಡುತ್ತಾರೆ. ಇದು ಯಾವ ಬಗೆಯ ಫೆಟಿಷ್? ಇದರಿಂದ ಏನಾದರೂ ಸಮಸ್ಯೆಯಿದೆಯೇ?
 


ಪ್ರಶ್ನೆ: ನನ್ನ ವಯಸ್ಸು ಇಪ್ಪತ್ತಮೂರು. ಮದುವೆಯಾಗಿದೆ. ಗಂಡನ (Husband) ವಯಸ್ಸು ಇಪ್ಪತ್ತೈದು. ಒಂದು ಸಮಸ್ಯೆ ಹೊರತುಪಡಿಸಿದರೆ ನಮ್ಮಿಬ್ಬರ ಲೈಂಗಿಕ (Sexual) ಆರೋಗ್ಯ ಉತ್ತಮವಾಗಿದೆ. ನನಗೆ ನಿಯಮಿತವಾಗಿ ಮುಟ್ಟು (Menstruation) ಆಗುತ್ತದೆ. ನಾವಿಬ್ಬರೂ ಸದ್ಯಕ್ಕೆ ಮಗು ಬೇಡ ಎಂದು ನಿರ್ಧರಿಸಿರುವುದರಿಂದ ಕಾಂಡೋಮ್ (Condom) ಬಳಸುತ್ತದ್ದೇವೆ. ಆದರೆ ಗಂಡನ ಒಂದು ಗೀಳು ನನಗೆ ಸಮಸ್ಯೆಯಾಗಿದೆ. ಅದೇನೆಂದರೆ ಆತನಿಗೆ ನನ್ನ ಮುಟ್ಟಿನ ದಿನಗಳಲ್ಲಿ ಸಂಭೋಗಿಸುವ ತೀವ್ರ ದಾಹ. (Periods) ಋತುಸ್ರಾವದ ದಿನಗಳಲ್ಲಿ ನನಗೆ ಸಾಮಾನ್ಯವಾಗಿ ಆಯಾಸ ಕಾಡುತ್ತಿರುತ್ತದೆ. ಕೆಳಹೊಟ್ಟೆಯಲ್ಲಿ ಸ್ವಲ್ಪ ನೋವು, ಕಾಲುಗಳಲ್ಲಿ ಸೆಳೆತವೂ ಇರುತ್ತದೆ. ಬೇರೆ ಎಲ್ಲಾ ಸಮಯದಲ್ಲಿ ನನ್ನ ಆರೈಕೆ ಮಾಡುವ ಒಳ್ಳೆಯ ಹೃದಯದ ಗಂಡ, ನನ್ನ ಮುಟ್ಟಿನ ರಾತ್ರಿಗಳಲ್ಲಿ ಮಾತ್ರ ಸಂಭೋಗ ಬೇಕೇ ಬೇಕು ಎಂದು ಒತ್ತಡ ಹಾಕುತ್ತಾನೆ. ಆತನಿಗೆ ನಿರಾಶೆ ಮಾಡಲು ಸಾಧ್ಯವಿಲ್ಲದೆ, ಸ್ವಲ್ಪ ಅಸಹನೀಯ ಎನಿಸಿದರೂ ಸಹಿಸಿಕೊಳ್ಳುತ್ತೇನೆ. ಆ ದಿನಗಳಲ್ಲಿ ಆತನಿಗೆ ತೃಪ್ತಿ ಆದಷ್ಟು ಇನ್ಯಾವ ದಿನಗಳಲ್ಲೂ ಆಗುವುದಿಲ್ಲವಂತೆ. ಆತನ ಶಿಶ್ನಕ್ಕೆ (Penis) ನನ್ನ ಮುಟ್ಟಿನ ರಕ್ತ ಅಂಟಿಕೊಂಡಾಗ, ನಮ್ಮ ಮೊದಲ ರಾತ್ರಿಯ ಸಮಾಗಮದ ನೆನಪು ಆತನಿಗೆ ಆಗಿ, ಇನ್ನಷ್ಟು ಸಂತೃಪ್ತಿ ಆಗುತ್ತದಂತೆ. ಇದು ಒಂದು ಲೈಂಗಿಕ ಸಮಸ್ಯೆ ಇರಬಹುದೇ? ಇದಕ್ಕೆ ಟ್ರೀಟ್‌ಮೆಂಟ್‌ ಅಗತ್ಯವಿದೆಯೇ?

Pregnancy Myth-Busting: ಸೆಕ್ಸ್ ನಂತರ ಮೂತ್ರ ಮಾಡಿದರೆ ಗರ್ಭಧಾರಣೆ ತಡೆಯಬಹುದಾ?

Tap to resize

Latest Videos

undefined

ಉತ್ತರ: ನಿಮ್ಮ ಗಂಡನಿಗೆ ಪೀರಿಯಡ್ ಫೆಟಿಷ್ ಎಂದು ಕರೆಯಲಾಗುವ ಒಂದು ಸ್ವಭಾವ ಇರಬಹುದು. ಇದು ವಿಕೃತಿ ಏನಲ್ಲ. ತುಂಬಾ ಮಂದಿ ಪುರುಷರು ಇದನ್ನು ಹೊಂದಿರುವುದನ್ನು ನಾವು ಕಾಣಬಹುದು. ಸ್ವಭಾವತಃ, ಪ್ರಾಣಿಜಾತಿಗಳಲ್ಲೆಲ್ಲಾ ಗಂಡುಪ್ರಾಣಿಗೆ, ಹೆಣ್ಣು ಪ್ರಾಣಿಯ ಜೊತೆಗೆ ಋತುಸ್ರಾವದ ಸಂದರ್ಭದಲ್ಲಿ ಸೆಕ್ಸ್ ಮಾಡುವ ಹುಮ್ಮಸ್ಸು ಜಾಗ್ರತವಾಗುತ್ತದೆ. ಯಾಕೆಂದರೆ ಹೆಣ್ಣು ತುಂಬಾ ಫಲವತ್ತಾಗಿರುವ ಸಮಯ ಇದು. ಈ ಸಂದರ್ಭದಲ್ಲಿ ಸಂಭೋಗಿಸಿದರೆ ಗರ್ಭ ಕಟ್ಟುವ ಸಾಧ್ಯತೆ ಹೆಚ್ಚು. ಈ ಕಾರಣದಿಂದಾಗಿಯೇ ಪ್ರಕೃತಿ ಗಂಡುಪ್ರಾಣಿಯಲ್ಲಿ ಜಾಗ್ರತವಾಗಿ ಇರಿಸಿರುವ ಒಂದು ಸ್ವಭಾವವಿದು.

ಇನ್ನು ನಿಮ್ಮ ಗಂಡ ನೀಡಿರುವ ಕಾರಣ ನಿಜವೇ ಇರಬಹುದು. ಹೆಚ್ಚಿನ ಗಂಡಸರು, ತಮ್ಮ ಹೆಂಡತಿಯ ಅಥವಾ ಗೆಳತಿಯ ಕನ್ಯತ್ವ ಮುರಿದವರು ತಾವೇ ಎಂಬ ಅಹಂ ಅನ್ನು ತೃಪ್ತಿಪಡಿಸಿಕೊಳ್ಳಲು ಬಯಸುತ್ತಿರುತ್ತಾರೆ. ಇದೂ ಮೃಗಸಹಜ ಸ್ವಭಾವವೇ. ತನ್ನ ಶಿಶ್ನಕ್ಕೆ ಅಂಟಿಕೊಂಡು ನಿಮ್ಮ ಮುಟ್ಟಿನ ರಕ್ತವನ್ನು ನೋಡಿ, ಮೊದಲ ಬಾರಿ ಹೆಂಡತಿಯ ಕನ್ಯಾಪೊರೆ ಹರಿದ ಕ್ಷಣಗಳು ನೆನಪಾಗಿ ಅವರಿಗೆ ಸಂತೃಪ್ತಿ ತಂದುಕೊಡುತ್ತಿರಬಹುದು. ದಾಂಪತ್ಯದ ಆವರಣದ ಒಳಗೇ ನಡೆಯುವ ಇಂಥ ಲೈಂಗಿಕ ವರ್ತನೆಗಳು ತಪ್ಪಲ್ಲ.

Feelfree: ಅವಳ ಹಿಂಭಾಗ ನೋಡಿದರೆ ಕಾಮೋದ್ರೇಕ! ಇದು ತಪ್ಪಾ?

ಆದರೆ ಇದರಿಂದ ನಿಮಗೆ ಸಮಸ್ಯೆ ಆಗುತ್ತಿದೆಯೇ ಎಂಬುದು ಮುಖ್ಯ. ಒಂದು ವೇಳೆ ಗಂಡನ ಈ ಅಭ್ಯಾಸವನ್ನು ಇನ್ನು ಸಹಿಸಿಕೊಳ್ಳಲು ನಿಮಗೆ ಸಾಧ್ಯವೇ ಇಲ್ಲ ಎನಿಸಿದರೆ, ಅದನ್ನು ಅವರಿಗೆ ಸ್ಪಷ್ಟವಾಗಿ ಹೇಳಿ. ಕೇಳಲಿಲ್ಲ ಎಂದಿದ್ದರೆ, ಲೈಂಗಿಕ ತಜ್ಞರಲ್ಲಿಗೆ ಅಥವಾ ಗೈನಕಾಲಜಿಸ್ಟ್ ಬಳಿಗೆ ಕರೆದೊಯ್ದು ಹೇಳಿಸಿ. ಆಗ ಈ ವರ್ತನೆ ಸ್ವಲ್ಪ ತಹಬಂದಿಗೆ ಬರಬಹುದು. ನಿಮ್ಮ ಗಂಡ ನಿಮ್ಮನ್ನು ತುಂಬಾ ಪ್ರೀತಿಸುವವರೇ ಆಗಿದ್ದರೆ, ನಿಮ್ಮ ಲೈಂಗಿಕ ಸುಖದ ಬಗ್ಗೆಯೂ ಅವರು ಗಮನ ಕೊಡುವವರಾಗಿದ್ದರೆ, ಈ ವರ್ತನೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಎನ್ನಬಹುದು.

ನಿಮ್ಮ ಸಮಸ್ಯೆ ನಿಮಗೆ ಮುಜುಗರ ತರುವಂಥದೇ ಇರಬಹುದು. ಆದರೆ ಇನ್ನೊಂದು ಸತ್ಯ ಏನೆಂದರೆ, ತುಂಬಾ ಮಂದಿ ಮಹಿಳೆಯರು ಋತುಸ್ರಾವದ ಸಮಯದ ಸಂಭೋಗವನ್ನು ತುಂಬಾ ಎಂಜಾಯ್ ಮಾಡುತ್ತಾರೆ ಎಂಬುದು! ಇತ್ತೀಚೆಗೆ ಜರ್ಮನಿಯ ಒಂದು ವೈದ್ಯಕೀಯ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ, ಅರುವತ್ತು ಪ್ರತಿಶತಕ್ಕೂ ಹೆಚ್ಚು ಮಹಿಳೆಯರು ತಮಗೆ ಪೀರಿಯೆಡ್ ಸೆಕ್ಸ್ ತುಂಬಾ ಆರಾಮದಾಯಕ, ಸಂತೃಪ್ತಿದಾಯಕ ಎಂದಿದ್ದಾರೆ.

ಮತ್ತೊಂದು ವಿಚಾರ ಏನೆಂದರೆ, ಪೀರಿಯೆಡ್ಸ್ ಸಂದರ್ಭದಲ್ಲಿ ಸೆಕ್ಸ್ ಮಾಡುವುದರಿಂದ ಹೆಣ್ಣಿಗೂ ಆರೋಗ್ಯವಿದೆ. ಇದರಿಂದ ಸ್ನಾಯುಗಳ ಸೆಳೆತ, ಕೆಳಹೊಟ್ಟೆಯ ನೋವುಗಳೆಲ್ಲ ಕಡಿಮೆಯಾಗುತ್ತವೆ. ಇದೂ ವೈದ್ಯಕೀಯ ತಜ್ಞರು ಕಂಡುಕೊಂಡಿರುವಂಥದ್ದು. ಆದರೆ ಸ್ವಚ್ಛತೆಗೆ ಪ್ರಾಮುಖ್ಯ ಕೊಡಿ. ಸೆಕ್ಸ್‌ಗೆ ಮೊದಲು ಹಾಗೂ ನಂತರ ನಿಮ್ಮ ನಿಮ್ಮ ಅಂಗಗಳನ್ನು ಸ್ವಚ್ಛಗೊಳಿಸಿಕೊಳ್ಳಿ.

click me!