
ಲೈಂಗಿಕತೆ ಅನ್ನೋದು ಗಂಡು ಹೆಣ್ಣಿನ ರಿಲೇಶನ್‌ಶಿಪ್‌ನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತೆ. ರಿಲೇಶನ್‌ಶಿಪ್ ಗಟ್ಟಿಗೊಳಿಸೋದಕ್ಕೆ ಅದು ಹೇಗೆ ಕಾರಣ ಆಗುತ್ತೋ ಹಾಗೇ ಎಷ್ಟೋ ಸಂಬಂಧಗಳು ನೆಲಕ್ಕಚ್ಚಲಿಕ್ಕೂ ಅದು ದೊಡ್ಡ ಕಾರಣ ಆಗಿದೆ. ವೈವಾಹಿಕ ಬದುಕಲ್ಲಿ ಬಿರುಕು ಮೂಡುವುದಕ್ಕೂ ಇದು ಕಾರಣ ಆಗುತ್ತೆ. ಲೈಂಗಿಕತೆ ಅನ್ನೋದು ಮೇಲ್ನೋಟಕ್ಕೆ ದೇಹದ ಕ್ರಿಯೆ ಅನಿಸಿದರೂ ಇದು ಮಾನಸಿಕವಾಗಿ ಎರಡು ಜೀವಗಳು ದೀರ್ಘ ಕಾಲ ಜೊತೆಗಿರೋದಕ್ಕೆ ಕಾರಣ ಅನ್ನೋದನ್ನು ಅಲ್ಲಗಳೆಯಲಾಗದು. ಗಂಡು ಹೆಣ್ಣಿನ ರಿಲೇಶನ್ ಶಿಪ್‌ನಲ್ಲಿ ಒಬ್ಬರು ಇನ್ನೊಬ್ಬರಿಗಿಂತ ವಿಭಿನ್ನವಾಗಿರುತ್ತಾರೆ. ಎಲ್ಲ ಗಂಡು ಹೆಣ್ಣಿನ ಲೈಂಗಿಕ ಸಂಬಂಧ ಸಿನಿಮಾಗಳಂತೆ ಸುಂದರವಾಗಿರುವುದಿಲ್ಲ. ಈ ಸಂಬಂಧವು ಏರಿಳಿತಗಳಿಂದ ಕೂಡಿರುತ್ತದೆ. ಆದರೆ ಇಂಥಾ ಸಮಸ್ಯೆ ಬಂದಾಗ ದಂಪತಿಗಳು, ರಿಲೇಶನ್‌ನಲ್ಲಿರುವವರು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ದಂಪತಿಗಳ ನಡುವೆ ಸಂತೋಷವೇ ಇರುವುದಿಲ್ಲ. ಲೈಫು ನರಕವಾಗಿ ಬಿಡುತ್ತದೆ.
ಲೈಂಗಿಕ ಆಸಕ್ತಿಯಲ್ಲಿ ವ್ಯತ್ಯಾಸ
ಒಬ್ಬರಿಗೆ ಸೆಕ್ಸ್ ಬಗ್ಗೆ ತೀವ್ರ ಆಸಕ್ತಿ. ಇನ್ನೊಬ್ಬರಿಗೆ ನಿರಾಸಕ್ತಿ. ಇನ್ನೊಬ್ಬರ ಬಲವಂತಕ್ಕಾಗಿ ಸೆಕ್ಸ್ ಮಾಡಬೇಕಾದ ಅನಿವಾರ್ಯತೆ. ಇದು ಸಂಬಂಧಕ್ಕೆ ಕೊಡಲಿಯೇಟು ಹಾಕುವ ದೊಡ್ಡ ಸಾಧ್ಯತೆ. ಲೈಂಗಿಕತೆಯಲ್ಲಿ ಅತ್ಯಾಸಕ್ತಿ ಇರುವ ವ್ಯಕ್ತಿ ಅದೆಷ್ಟು ಅಂತ ಜೊತೆಗಾರರನ್ನು ಒತ್ತಾಯಿಸಲು ಸಾಧ್ಯ. ಒಂದು ಹಂತದಲ್ಲಿ ಇದು ಫ್ರರ್ಸ್ಟೇಶನ್‌ಗೆ ತಿರುಗುತ್ತದೆ. ಆಗ ಯಾವ್ಯಾವುದೋ ಕಾರಣಕ್ಕೆ ಜಗಳ, ಮನಸ್ತಾಪ ಶುರುವಾಗುತ್ತದೆ. ಆದರೆ ಮೂಲಕ ಕಾರಣ ಇದೇ ಇರುತ್ತದೆ. ಇಂಥಾ ರಿಲೇಶನ್ ಶಿಪ್‌ನಲ್ಲಿ ಆ ಹೊಂದಾಣಿಕೆ ಇಲ್ಲದೇ ಇರೋದನ್ನು ಹೇಳಲೂ ಆಗದೇ ಆ ಸಂಬಂಧದಿಂದ ಹೊರಬರಲೂ ಆಗದೆ ಒದ್ದಾಡುವವರು ಬಹಳ ಮಂದಿ ಇರುತ್ತಾರೆ.
ಲೈಂಗಿಕ ವಿಚಾರಗಳ ಬಗ್ಗೆ ಮುಕ್ತವಾದ ಮಾತು ಇಲ್ಲದೇ ಇರುವುದು
ಲೈಂಗಿಕತೆ ಒಬ್ಬೊಬ್ಬರಿಗೆ ಒಂದೊಂದು ಬಗೆಯ ಕಲ್ಪನೆಗಳು, ಕನಸುಗಳು ಇದ್ದೇ ಇರುತ್ತವೆ. ಆದರೆ ಆ ಬಗ್ಗೆ ಅವರೆಲ್ಲೂ ಮುಕ್ತವಾಗಿ ಹೇಳಿಕೊಳ್ಳೋದಿಲ್ಲ. ಆದರೆ ಒಳಗಿಂದೊಳಗೇ ಅಸಹನೆ, ಅತೃಪ್ತಿ ಅನುಭವಿಸುತ್ತಾರೆ. ಇದು ಮತ್ಯಾವುದೋ ರೀತಿಯಲ್ಲಿ ಸಂಬಂಧದಲ್ಲಿ ಹುಳಿ ಹಿಂಡಿದಂತೆ ಆಗಬಹುದು.
ಇಂಥ ವಿಷ್ಯಗಳನ್ನು ಗಂಡಂದಿರೇಕೆ ಹೆಂಡ್ತಿಯಿಂದ ಮುಚ್ಚಿಡುತ್ತಾರೆ?
ಹಸ್ತಮೈಥುನ
ಸಂಗಾತಿ ಜೊತೆಗಿದ್ದರೂ ಹಸ್ತಮೈಥುನ ಮಾಡಿಕೊಳ್ಳೋದು ಎಷ್ಟೋ ಸಂಬಂಧಗಳನ್ನು ದೂರ ನಿಲ್ಲಿಸುತ್ತದೆ ಎನ್ನುತ್ತದೆ ಅಧ್ಯಯನವೊಂದು. ಇದರ ಜೊತೆಗೆ ಪೋರ್ನ್ ವೀಡಿಯೋ ನೋಡಿ ಅದರಂತೆ ತಮ್ಮ ಲೈಂಗಿಕತೆಯನ್ನು ಇಮ್ಯಾಜಿನ್ ಮಾಡಿಕೊಳ್ಳೋದು ಸಹ ಎಷ್ಟೋ ಸಂಬಂಧಗಳ ನಡುವೆ ಬಿರುಕು ಬರುವಂತೆ ಮಾಡುತ್ತದೆ.
ಮಕ್ಕಳಾದ ಮೇಲೆ ದೈಹಿಕ ಅಂತರ
ಇದರ ಜೊತೆಗೆ ಮಕ್ಕಳಾದ ಮೇಲೆ ದಂಪತಿಗಳಲ್ಲಿ ಒಬ್ಬರಿಗೆ ಸೆಕ್ಸ್ ಬಗ್ಗೆ ಆಸಕ್ತಿ ಕಡಿಮೆ ಆಗೋದು, ಸೆಕ್ಸ್ ಬಗ್ಗೆ ಭಯ ಇರೋದು ಹೀಗೆ ಹಲವು ಕಾರಣಗಳಿವೆ. ಮಕ್ಕಳಾದ ಮೇಲೆ ಮಕ್ಕಳು ದಂಪತಿ ಜೊತೆಗೆ ಮಲಗೋದು ಭಾರತೀಯ ಸಮಾಜದಲ್ಲಿ ಸಾಮಾನ್ಯ. ಈ ವೇಳೆ ಸೆಕ್ಸ್ ಮಾಡುವಾಗ ಮಕ್ಕಳಿಗೆ ಎಲ್ಲಿ ಎಚ್ಚರಾಗಿಬಿಡುತ್ತೋ ಎಂಬ ಭಯ ಒಂದು ಕಡೆ. ಮಕ್ಕಳ ಆರೈಕೆಯಲ್ಲೇ ಮುಳುಗಿ ಹೋದವರಿಗೆ ಸೆಕ್ಸ್ ಬಗ್ಗೆ ಆಸಕ್ತಿ ಹೋಗೋದು ಮತ್ತೊಂದು ಕಾರಣ.
ಈ ಲೈಂಗಿಕ ಭಿನ್ನಾಭಿಪ್ರಾಯಗಳನ್ನು ಸರಿಪಡಿಸದಿದ್ದರೆ ಸಂಬಂಧಗಳು ದೂರವಾಗುವ ಅಪಾಯವಿದೆ. ಹೆಚ್ಚಿನ ಸಮಸ್ಯೆಗಳನ್ನು ಇಬ್ಬರೂ ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡು ಆ ಬಗ್ಗೆ ಹೊಂದಾಣಿಕೆ ಮಾಡಿಕೊಂಡು ನಿರ್ವಹಿಸಬಹುದು. ಈ ಮಾತುಕತೆಗಳಿಂದ ಸರಿಹೋಗದಿದ್ದರೆ ಆಪ್ತ ಸಲಹೆಗಾರರನ್ನು ಭೇಟಿ ಆಗಬಹುದು.
6.3 ಇಂಚಿನ ಮರದ ದೊಣ್ಣೆ, 2000 ವರ್ಷಗಳ ಹಿಂದೆಯೇ ಬಳಕೆಯಲ್ಲಿತ್ತಾ ಸೆಕ್ಸ್ ಟಾಯ್?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.