ಭಾರತದಲ್ಲಿ ಈಗ್ಲೂ ಪ್ರೇಮ ವಿವಾಹಕ್ಕೆ ಅನೇಕರ ವಿರೋಧವಿದೆ. ಇದಕ್ಕೆ ಜಾತಿ ಸೇರಿದಂತೆ ಅನೇಕ ಕಾರಣವಿದೆ. ಸಾಮಾಜಿಕ ನ್ಯಾಯ ದಿನವಾದ ಇಂದು ಮಹಿಳೆಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ, ಜಾತಿ ಕಾರಣಕ್ಕೆ ಪ್ರೀತಿ ಕಳೆದುಕೊಂಡ ಕಥೆ ಹೇಳಿದ್ದಾಳೆ.
ಪ್ರೀತಿ ಹಾಗೂ ಜಾತಿ ಇವೆರಡು ಇಂದು ನಿನ್ನೆಯದಲ್ಲ. ಅನಾದಿಕಾಲದಿಂದಲೂ ಈ ವಿಷ್ಯಕ್ಕೆ ಅನೇಕ ಕೊಲೆಗಳು ನಡೆದಿವೆ. ಅನೇಕ ಪ್ರೇಮಿಗಳು ದೂರವಾಗಿದ್ದಾರೆ. ಹಿಂದೆ ನೋವನ್ನು ತೋಡಿಕೊಳ್ಳಲು ಅವಕಾಶವಿರಲಿಲ್ಲ. ಈಗ ಮಾದ್ಯಮಗಳು, ಸಾಮಾಜಿಕ ಜಾಲತಾಣಗಳು ಜನರ ಕಥೆಯನ್ನು ಬಿಚ್ಚಿಡಲು ಅವಕಾಶ ನೀಡಿವೆ. ಇನ್ಸ್ಟಾಗ್ರಾಮ್ ನಲ್ಲಿ ಕೌಶಲ್ಯ ಹೆಸರಿನ ಮಹಿಳೆ ಪ್ರೀತಿಯ ಕಥೆಯನ್ನು ಬಿಚ್ಚಿಟ್ಟಿದ್ದಾಳೆ. ಅದಕ್ಕೆ ಏನೆಲ್ಲ ಪ್ರತಿಕ್ರಿಯೆ ಬಂದಿದೆ ಎಂಬುದನ್ನು ನಾವಿಂದು ಹೇಳ್ತೇವೆ.
Officialhumansofbombay ಹೆಸರಿನ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಆಕೆ ತನ್ನ ಕಥೆಯನ್ನು ಹೇಳಿಕೊಂಡಿದ್ದಾಳೆ. ವಿಶ್ವ ಸಾಮಾಜಿಕ ನ್ಯಾಯ (Social Justice) ದಿನದ ಹಿನ್ನಲೆಯಲ್ಲಿ ಈ ಕಥೆಯನ್ನು ಪೋಸ್ಟ್ ಮಾಡಲಾಗಿದೆ. ಆಕೆ ಶಂಕರ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಆದ್ರೆ ಜಾತಿ ಹೆಸರಿನಲ್ಲಿ ಕುಟುಂಬಸ್ಥರು ತೊಂದರೆ ನೀಡ್ತಿದ್ದಾರೆ ಅನ್ನೋದು ಆಕೆಯ ಆರೋಪ.
ಪತಿಯ ಹೆಸರು ಶಂಕರ್. ಅವರಿಬ್ಬರು 2015 ರಲ್ಲಿ ಕಾಲೇಜಿನಲ್ಲಿ ಭೇಟಿಯಾಗಿದ್ದರಂತೆ. ಕಾಲೇಜು ಬಸ್ಸಿನಲ್ಲಿ ಇಬ್ಬರ ಪ್ರೀತಿ ಚಿಗುರಿತ್ತಂತೆ. ಶಂಕರ್ ನಾಚಿಕೆ ಸ್ವಭಾವದವನಾಗಿದ್ದ. ಆದರೆ ಸ್ಪಷ್ಟವಾಗಿ ನನ್ನನ್ನು ಪ್ರೀತಿಸುತ್ತಿದ್ದ. ನನಗೂ ಶಂಕರ್ ಮೇಲೆ ಪ್ರೀತಿಯತ್ತು. ಆದ್ರೆ ಶಂಕರ್ ಮದುವೆಯಾಗಲು ಕುಟುಂಬಸ್ಥರು ಬಿಡೋದಿಲ್ಲ ಎನ್ನುವುದು ನನಗೆ ತಿಳಿದಿತ್ತು. ಯಾಕೆಂದ್ರೆ ಶಂಕರ್ ದಲಿತ ಎನ್ನುತ್ತಾಳೆ ಆಕೆ.
ಮನೆಯವರ ಭಯಕ್ಕೆ ಆಕೆ ಪ್ರೀತಿಯನ್ನು ಮುಚ್ಚಿಟ್ಟಿದ್ದಳಂತೆ. ಎಂದಿಗೂ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಶಂಕರ್ ಗೆ ಹೇಳಿರಲಿಲ್ಲವಂತೆ.
6.3 ಇಂಚಿನ ಮರದ ದೊಣ್ಣೆ, 2000 ವರ್ಷಗಳ ಹಿಂದೆಯೇ ಬಳಕೆಯಲ್ಲಿತ್ತಾ ಸೆಕ್ಸ್ ಟಾಯ್?
ಪಾಲಕರಿಗೆ ತಿಳಿತು ವಿಷ್ಯ : ಒಂದು ವರ್ಷದಿಂದ ನಡೆಯುತ್ತಿದ್ದ ಶಂಕರ್ ಹಾಗೂ ಆಕೆ ಪ್ರೀತಿಯಾಟ ಪಾಲಕರಿಗೆ ತಿಳಿದಿದೆ. ಒಬ್ಬ ಕಂಡಕ್ಟರ್ ಇವರನ್ನು ಬಸ್ಸಿನಲ್ಲಿ ನೋಡಿದ್ದಾನೆ. ಈ ವಿಷ್ಯವನ್ನು ಪಾಲಕರಿಗೆ ಹೇಳಿದ್ದಾನೆ. ಫೋನ್ ಮಾಡಿ ಮಗಳನ್ನು ಮನೆಗೆ ಕರೆಸಿಕೊಂಡ ಪಾಲಕರು, ಕಾಲೇಜಿಗೆ ಹೋಗದಂತೆ ಅವಳನ್ನು ಬಂಧಿಸಿದ್ದರಂತೆ. ಕೋಣೆಯಲ್ಲಿ ಲಾಕ್ ಮಾಡಿದ್ದರಂತೆ. ಮಗಳು ಓದಲಿ ಎನ್ನುವ ಕಾರಣಕ್ಕೆ ಅಪ್ಪನ ಜೊತೆ ಜಗಳವಾಡಿದ್ದೆ. ಆದ್ರೆ ನೀನು ನನಗೆ ಮೋಸ ಮಾಡಿದೆ ಎಂದು ತಾಯಿ ಹೇಳಿದ್ದಳಂತೆ. ಶೀಘ್ರದಲ್ಲಿಯೇ ಬೇರೆ ಹುಡುಗನ ಜೊತೆ ಮದುವೆ ಮಾಡುವುದಾಗಿ ಹೇಳಿದ್ದರಂತೆ.
ಕೊನೆಗೂ ನಡೀತು ಮದುವೆ : ಶಂಕರ್ ಬಿಟ್ಟು ಬೇರೆಯವರ ಜೊತೆ ಮದುವೆಯಾಗೋದು ಈಕೆಗೆ ಇಷ್ಟವಿರಲಿಲ್ಲವಂತೆ. ಇದೇ ಕಾರಣಕ್ಕೆ ಮರುದಿನ ವರನ ಭೇಟಿಗೆ ಹೋದ ಸಂದರ್ಭದಲ್ಲಿ ಮನೆ ಬಿಟ್ಟು ಶಂಕರ್ ಬಳಿ ಓಡಿ ಬಂದಿದ್ದಳಂತೆ. ಇಬ್ಬರು ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದ್ರಂತೆ. ಶಂಕರ್ ಮನೆಗೆ ಬಂದ ಹುಡುಗಿಯನ್ನು ಆತನ ಪಾಲಕರು ಒಪ್ಪಿಕೊಂಡರಂತೆ. ಅದೇ ದಿನ ಪಾಲಕರ ಎದುರು ಮದುವೆ ನಡೆದಿತ್ತಂತೆ. ಪ್ರಾಣಕ್ಕೆ ಅಪಾಯವಿದೆ ಎಂಬುದು ಗೊತ್ತಿದ್ದೂ ನಾನು ಮದುವೆ ನಿರ್ಧಾರ ಕೈಗೊಂಡಿದ್ದೆ ಎನ್ನುತ್ತಾಳೆ ಮಹಿಳೆ.
ಪ್ರತಿ ದಿನ ತೊಂದರೆ ನೀಡ್ತಿದ್ದ ಪಾಲಕರು : ಮದುವೆ ನಂತ್ರವೂ ಜೀವನ ಸುಖಕರವಾಗಿರೋದಿಲ್ಲ ಎಂಬುದು ನನಗೆ ಗೊತ್ತಿತ್ತು. ನಾನು ನಿರೀಕ್ಷಿಸಿದಂತೆ ಆಯ್ತು ಎನ್ನುತ್ತಾಳೆ ಆಕೆ. ಪ್ರತಿ ದಿನ ಆಕೆ ಮನೆ ಮುಂದೆ ಬಂದು ಶಂಕರ್ ಗೆ ಪಾಲಕರು ಬೈಯ್ಯುತ್ತಿದ್ದರಂತೆ. ಕೆಟ್ಟ ಶಬ್ಧಗಳಿಂದ ನಿಂದನೆ ಮಾಡ್ತಿದ್ದರಂತೆ. ಮಗಳನ್ನು ಅಪಹರಿಸಲಾಗಿದೆ ಎಂದು ದೂರು ನೀಡಿದ್ದರಂತೆ. ಆದ್ರೆ ಮಹಿಳೆಯ ಹೇಳಿಕೆ ನಂತ್ರ ಪ್ರಕರಣ ಖುಲಾಸೆಯಾಗಿತ್ತಂತೆ. ಮದುವೆಯಾದ 8 ತಿಂಗಳಿಗೆ ನನ್ನ ಭಯ ನಿಜವಾಯ್ತು ಎನ್ನುತ್ತಾಳೆ ಮಹಿಳೆ. ಪೋಷಕರು ಅಂತಿಮ ಮಾತುಕಥೆಗೆ ಬಂದಿದ್ದರಂತೆ. ವಾಪಸ್ ಬರುವಂತೆ ಹೇಳಿದ್ದರಂತೆ. ಇದಕ್ಕೆ ಒಪ್ಪದಾಗ, ಮುಂದೆ ಏನಾದ್ರೂ ಅದಕ್ಕೆ ನೀನೇ ಜವಾಬ್ದಾರಿ ಎಂದಿದ್ದರಂತೆ. ಒಂದು ವಾರದ ನಂತ್ರ ಅವರು ಹೇಳಿದಂತೆ ನಡೆದುಕೊಂಡಿದ್ದರಂತೆ.
Relationship Tips : ನಿಮ್ಮ ಪತಿ ಮೇಲೆ ಪರಸ್ತ್ರೀ ಕಣ್ಣಿದ್ಯಾ? ಹೀಗ್ ಮಾಡಿ
ಶಾಪಿಂಗ್ ಗೆ ಹೋದಾಗ ಶಂಕರ್ ಹಾಗೂ ಈಕೆಗೆ ಇರಿದಿದ್ದರಂತೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಂತೆ. ಆದ್ರೆ ಶಂಕರ್ ಸಾವನ್ನಪ್ಪಿದ್ದನಂತೆ. 20 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಮಹಿಳೆ ಹೊರ ಬಂದ ತಕ್ಷಣ ಶಂಕರ್ ಗೆ ನ್ಯಾಯ ಕೊಡಿಸಲು ಹೋರಾಡಿದ್ದಳಂತೆ. ಘಟನೆ ನಡೆದ ಮೇಲೆ ಸಂಬಂಧಿಕರು ತಪ್ಪೊಪ್ಪಿಕೊಂಡಿದ್ದರಂತೆ. ತಂದೆಗೆ ಮರಣದಂಡನೆ ವಿಧಿಸಲಾಗಿತ್ತಂತೆ. ಆದ್ರೆ ಕೆಲ ದಿನದ ನಂತ್ರ ನಿರಪರಾಧಿ ಎಂದು ಅವರನ್ನು ಬಿಡಲಾಗಿತ್ತಂತೆ. ಇದಾದ್ಮೇಲೆ ನಾನು ಮೇಲ್ಮನವಿ ಸಲ್ಲಿಸಿದ್ದೇನೆ ಎನ್ನುತ್ತಾಳೆ ಮಹಿಳೆ. ಘಟನೆ ನಡೆದು 8 ವರ್ಷ ಕಳೆದಿದೆ. ಸಾಮಾಜಿಕ ನ್ಯಾಯಕ್ಕಾಗಿ, ಜಾತಿಗಳ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದೇನೆ. ನನ್ನ ಹೆತ್ತವರು ಈಗ ನನ್ನ ಬಳಿ ಬರಲು ಇಚ್ಛಿಸುತ್ತಿದ್ದಾರೆ. ನಾನು ಸಲೂನ್ ತೆರೆದಿದ್ದು, ಇನ್ನೊಬ್ಬರನ್ನು ವಿವಾಹವಾಗಿದ್ದೇನೆ. ಆದ್ರೆ ಶಂಕರ್ ಮರೆಯಲು ಸಾಧ್ಯವಿಲ್ಲ. ನನಗಾದ ಅನ್ಯಾಯ ಇನ್ನಾರಿಗೂ ಆಗಬಾರದು ಎನ್ನುವ ಕಾರಣಕ್ಕೆ ಹೋರಾಟ ಮುಂದುವರೆದಿದೆ ಎಂದಿದ್ದಾಳೆ.