ಹಲವು ಗಂಡಸರು, ಸ್ತ್ರೀಯರು ಕೂಡ, ತಮ್ಮ ಹೆಂಡತಿ ಅಥವಾ ಗಂಡನ ಜೊತೆಗೆ ಸಂಭೋಗದ ಸಮಯದಲ್ಲಿ ಕಣ್ಣು ಮುಚ್ಚಿ ಇನ್ಯಾರೋ ಬಾಲಿವುಡ್ ಅಥವಾ ಹಾಲಿವುಡ್ ಸೆಲೆಬ್ರಿಟಿಯನ್ನು ನೆನೆಪಿಸಿಕೊಳ್ತಾ ಇರ್ತಾರಂತೆ!
ಪ್ರಶ್ನೆ: ನಾನು ಮೂವತ್ತು ವರ್ಷದ ಪುರುಷ. ನನ್ನ ಪತ್ನಿಗೆ ಇಪ್ಪತ್ತೆಂಟು ವರ್ಷ. ನಾವಿಬ್ಬರೂ ವಾರದಲ್ಲಿ ಹಲವು ಬಾರಿ ಸೆಕ್ಸ್ ನಡೆಸುತ್ತೇವೆ. ಆದರೆ ನನ್ನ ಪತ್ನಿ ಸಾಕಷ್ಟು ಅಕರ್ಷಕವಾಗಿಯೇ ಇದ್ದಾಳೆ. ಆದರೆ, ಅವಳ ಜೊತೆ ಸೆಕ್ಸ್ ಮಾಡುತ್ತಿರುವಾಗ ಮಾತ್ರ ನಾನು ಬಾಲಿವುಡ್‌ನ ಯಾವುದೋ ಒಬ್ಬಳು ಹೀರೋಯಿನ್ ಅನ್ನು ನೆನಪಿಸಿಕೊಳ್ತಾ ಇರ್ತೀನಿ. ಹಾಗೆ ನೆನೆಸಿಕೊಳ್ತಾ ಇದ್ರೆ ನಂಗೆ ಹೆಚ್ಚು ಉದ್ರೇಕ ಆಗುತ್ತೆ, ಹೆಚ್ಚು ತೃಪ್ತಿ ಸಿಗುತ್ತೆ. ಆದ್ರೆ ಇದರಿಂದ ನನ್ನ ಹೆಂಡತಿಗೆ ಮೋಸ ಮಾಡ್ತಾ ಇದೀನಾ ಅಂತ್ಲೂ ಅನಿಸುತ್ತಾ ಇರುತ್ತೆ. ಈ ಪಾಪಪ್ರಜ್ಞೆಯಿಂದ ಹೊರಬರೋದು ಹೇಗೆ?
ಉತ್ತರ: ಇತ್ತೀಚೆಗೆ ಅಮೆರಿಕದ ಯೂನಿವರ್ಸಿಟಿಯೊಂದು ನಡೆಸಿದ ಅಧ್ಯಯನದ ಪ್ರಕಾರ, ಫ್ಯಾಂಟಸಿ ಎಂಬುದು ಸೆಕ್ಸ್‌ನಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಫ್ಯಾಂಟಸಿ ಎಂಬುದು ಸೆಕ್ಸ್‌ನ ಅನಿವಾರ್ಯ ಅಂಗವೇ ಎಂದೂ ಹೇಳಬಹುದು. ಕೆಲವು ದಂಪತಿಗಳನ್ನು ನೋಡಿ- ಅನಾಕರ್ಷಕವಾಗಿರುತ್ತಾರೆ. ಆದರೆ ಅವರು ಸೆಕ್ಸ್‌ನಲ್ಲಿ ಹೇಗೆ ತೃಪ್ತಿ ಪಡೆಯುತ್ತಾರೆ? ಇದಕ್ಕೆ ಉತ್ತರ- ಫ್ಯಾಂಟಸಿ ಅಥವಾ ಕಲ್ಪನೆ. ಸೆಕ್ಸಾಲಜಿಸ್ಟ್‌ಗಳು ತಮ್ಮಲ್ಲಿಗೆ ಬಂದ ಪೇಷೆಂಟ್‌ಗಳನ್ನು ಮಾತಾಡಿಸುವಾಗ ತಿಳಿದು ಬಂದದ್ದೇನೆಂದರೆ, ನೂರಕ್ಕೆ ತೊಂಬತ್ತಕ್ಕೂ ಹೆಚ್ಚು ಮಂದಿ ಸೆಕ್ಸ್ ಸಂದರ್ಭದಲ್ಲಿ ಇನ್ಯಾರೋ ವ್ಯಕ್ತಿಯನ್ನು ನೆನೆಪಿಸಿಕೊಳ್ತಾ ಇರುತ್ತಾರೆ ಎಂಬುದೇ. ಇದರಲ್ಲಿ ಸ್ತ್ರೀ- ಪುರುಷ ಎಂಬ ಭೇದವೇನಿಲ್ಲ. ಪುರುಷರು ಮಾದಕವಾದ ಹುಡುಗಿಯರನ್ನು, ನಟಿಯರನ್ನು ತಮ್ಮ ಸಂಗಾತಿಯ ಜಾಗದಲ್ಲಿ ಕಲ್ಪಿಸಿಕೊಳ್ಳುತ್ತಾರೆ. ಸ್ತ್ರೀಯರು ಕಟ್ಟುಮಸ್ತಾದ, ಸುಂದರಾಂಗ ತರುಣ ಅಥವಾ ಹೀರೋನನ್ನು ನೆನೆಪಿಸಿಕೊಳ್ತಾ ಇರುತ್ತಾರೆ. ಇದರರ್ಥ ಎಲ್ಲರೂ ಹೀಗೇ ಎಂದಲ್ಲ. ಕನಸ್ಸು ಮನಸ್ಸಿನಲ್ಲೂ ಸಂಗಾತಿಗೆ ನಿಷ್ಠರಾಗಿ ಇರುವವರೂ ಇರಬಹುದು. ಆದರೆ ಸೆಲೆಬ್ರಿಟಿಗಳನ್ನು ಸಂಗಾತಿಯ ಜಾಗದಲ್ಲಿ ಕಲ್ಪಿಸಿಕೊಳ್ಳುವುದು ಮಹಾಪರಾಧವೇನೂ ಅಲ್ಲ.
ಸೆಕ್ಸಾಲಿಜಿಸ್ಟ್‌ಗಳು ಹೇಳುವ ಪ್ರಕಾರ, ಇಂಥ ಫ್ಯಾಂಟಸಿಗಳು ಸಂಬಂಧವನ್ನು ಉಳಿಸಲೂ ನೆರವು ನೀಡುತ್ತವೆ. ನೈಜ ಸಂಬಂಧದಲ್ಲಿ ತೃಪ್ತಿ ಪಡಲು ಸಾಧ್ಯವಿಲ್ಲದವರು ಇಂಥ ಕಲ್ಪನೆಗಳ ಮೂಲಕ ತೃಪ್ತಿ ಪಡೆಯುತ್ತಾರೆ. ಆ ಮೂಲಕ ತಮ್ಮ ವಾಸ್ತವ ಸಂಬಂಧವನ್ನು ಉಳಿಸಿಕೊಳ್ಳುತ್ತಾರೆ. ಕಲ್ಪನೆಯಲ್ಲೇ ಅನುಭವವನ್ನು ನಿಜ ಮಾಡಿಕೊಳ್ಳುತ್ತಾರೆ. ಇವರ ಮುಂದೆ ದಾಂಪತ್ಯದ ಸವಾಲುಗಳು ಬಂದಾಗ, ಅಂದರೆ ಸಂಗಾತಿ ಸತ್ತುಹೋದರೆ ಅಥವಾ ವಿಚ್ಛೇದನ ಉಂಟಾದರೆ, ಆಗ ಉಂಟಾಗುವ ಸೆಕ್ಸ್‌ನ ಖಾಲಿತನವನ್ನು ತುಂಬಿಕೊಳ್ಳಲು ಇನ್ನೊಂದು ಸಂಬಂಧವನ್ನು ಬೆಳೆಸುವುದು ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇಂಥವರಿಗೆ ಸುಲಭ ಆಗುತ್ತದೆ. ಇವರು ಬಲು ಬೇಗನೆ ಮಾನಸಿಕ ಡಿಪ್ರೆಶನ್ ಅಥವಾ ಖಿನ್ನತೆಗೆ ಒಳಗಾಗುವವರಲ್ಲ. ಯಾಕೆಂದರೆ ಇವರಿಗೆ ಫ್ಯಾಂಟಸಿಯ ಬಲವಿರುತ್ತದೆ.
ಈ ಅಭ್ಯಾಸಗಳಿಗೆ ಬೈ, ಸೆಕ್ಸ್‌ಗೆ ಹಾಯ್ ! ಏನಿದು ಟ್ರೆಂಡ್!
ಹಾಗಂತ ಇವರು ದಾಂಪತ್ಯದಲ್ಲಿ ಮೋಸ ಮಾಡಬಲ್ಲವರು ಅಂತಲೂ ಭಾವಿಸಬಾರದು. ಪುರುಷರಾಗಲೀ ಸ್ತ್ರೀಯರಾಗಲೀ, ಸಂಗಾತಿಗೆ ಸೆಕ್ಸ್ ಮಾಡುವಲ್ಲಿ ಇರುವ ಚಾನ್ಸ್‌ಗಳು ಫಿಫ್ಟಿ ಫಿಫ್ಟಿ. ಆದರೆ ಫ್ಯಾಂಟಸಿಯೇ ಇದರ ಮೂಲವಲ್ಲ. ಫ್ಯಾಂಟಸಿ ಮೂಲಕ ಸಂತೃಪ್ತಿ ಹೊಂದುವವರು ಸಂಗಾತಿಗೆ ಮೋಸ ಮಾಡುತ್ತಿದ್ದೇವೆ ಎಂದೂ ಭಾವಿಸಬೇಕಿಲ್ಲ. ಪುರುಷ ಅಥವಾ ಸ್ತ್ರೀ, ಹಸ್ತಮೈಥುನ ಮಾಡಿಕೊಳ್ಳುವ ಸಂದರ್ಭದಲ್ಲೂ ಫ್ಯಾಂಟಸಿಗೆ ಮೊರೆ ಹೋಗುತ್ತಾರೆ. ಹಾಗೆ ಕಲ್ಪನೆಗೆ ಅವಕಾಶ ನೀಡದಿದ್ದರೆ ಅವರ ಹಸ್ತಮೈಥುನ ಈಡೇರುವುದೂ ಸಾದ್ಯವಿಲ್ಲ.
#Feelfree: ತುಂಬಾ ಬೇಗ ಮುಗಿದೇ ಹೋಗಿ ಬಿಡುತ್ತೆ, ಏನು ಮಾಡೋದು?
ಪ್ರಾಣಿಗಳಿಗೆ ಇಲ್ಲದ ಒಂದು ವಿಶಿಷ್ಟವಾದ ಸಾಮರ್ಥ್ಯವನ್ನು ಮಾನವನಿಗೆ ಪ್ರಕೃತಿ ನೀಡಿದೆ- ಅದೇ ಚಿಂತನೆ. ಈ ಚಿಂತನೆಯ ಮೂಲಕವೇ ಆತ ಸರಿಯಾದ ಕೆಲಸವನ್ನೂ ಮಾಡುತ್ತಾನೆ, ತಪ್ಪನ್ನೂ ಮಾಡುತ್ತಾನೆ. ಕೆಲವು ಅಪರಾಧಗಳು ಆತನ ಮನೋರಂಗದಲ್ಲೇ ನಡೆಯುತ್ತವೆ. ಆದರೆ ಮನಸ್ಸಿನಲ್ಲಿ ಆತ ನಡೆಸಿದ ಅಕೃತ್ಯಗಳಿಗೆಲ್ಲಾ ಕಾನೂನಿನಲ್ಲಿ ಶಿಕ್ಷಿಸಲು ಆಗುವುದಿಲ್ಲ ತಾನೆ? ಹಾಗೇ ಇದು ಕೂಡ. ಮಾಡದ ತಪ್ಪನ್ನು ಮಾಡಿದ್ದೇನೆಂದು ಭಾವಿಸಿಕೊಂಡು ಕೊರಗಬೇಕಿಲ್ಲ. ಸಂಗಾತಿಯ ಜೊತೆಗೆ ಇನ್ನಷ್ಟು ಸುಖ ಹೊಂದುವ ವಿಧಾನಗಳನ್ನು ಆವಿಸ್ಕರಿಸಿಕೊಳ್ಳಿ, ಸಂತೋಷಪಡಿ.
#Feelfree: ಪತ್ನಿ ಗೆಳತಿ ಜೊತೆಗೆ ಸರಸ ನಡೀತು, ಮುಂದೇನು ಕತೆ? ...