ಕನ್ಯಾಪೊರೆ ಕಾಂಕ್ರಿಟ್‌ನಿಂದ ಮಾಡಿದ್ದಲ್ಲ, ನಿಮಿರುವಿಕೆ ಅಪಸಾಮಾನ್ಯ ರೋಗವೇ ಅಲ್ಲ!

By Roopa HegdeFirst Published Jul 8, 2024, 1:13 PM IST
Highlights

ಸೆಕ್ಸ್ ಬಗ್ಗೆ ನಮ್ಮಲ್ಲಿ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಹಾಗೆಯೇ ಈ ಸಮಸ್ಯೆಗಳೇ ದಂಪತಿಯನ್ನು ಬೇರ್ಪಡಿಸುತ್ತಿವೆ. ಸಮಸ್ಯೆ ಬಗ್ಗೆ ನಾಚಿಕೆ ಬಿಟ್ಟು ಮಾತನಾಡಿದಾಗ, ನಮ್ಮಲ್ಲಿರುವ ದೋಷವನ್ನು ಒಪ್ಪಿಕೊಂಡಾಗ ಮಾತ್ರ ಆನಂದಕರ ಲೈಂಗಿಕ ಜೀವನ ಸಾಧ್ಯ.
 

ಆಕೆಗೆ ಮದುವೆ ಆಗಿ ಎರಡು ವರ್ಷ ಕಳೆದಿದೆ. ಇನ್ನೂ ಮಕ್ಕಳಾಗಿಲ್ಲ. ಈ ಬಗ್ಗೆ ಇಷ್ಟು ದಿನ ಸುಮ್ಮನಿದ್ದ ಮಹಿಳೆ ಕೊನೆಗೂ ಮೌನ ಮುರಿದಿದ್ದಾಳೆ. ಪತಿಗೆ ನಿಮಿರುವಿಕೆ  ಅಪಸಾಮಾನ್ಯ ಕ್ರಿಯೆಯಿದ್ದು, ಇದ್ರಿಂದ ಮಕ್ಕಳಾಗ್ತಿಲ್ಲ ಅನ್ನೋದು ಅವಳ ವಾದ. ಆದ್ರೆ ಆಕೆ ಮಾವ ಇದನ್ನು ಒಪ್ಪುತ್ತಿಲ್ಲ. ತನ್ನ ಮಗನಿಗೆ ಏನೂ ಸಮಸ್ಯೆ ಇಲ್ಲ. ನಿನ್ನಲ್ಲಿ ದೋಷವಿದೆ. ಕನ್ಯಾಪೊರೆ ಗಟ್ಟಿಯಾಗಿದ್ದು, ಅದನ್ನು ಆಪರೇಷನ್ ಮೂಲಕ ಸರಿಪಡಿಸೋಣ ಎನ್ನುತ್ತಿದ್ದಾನೆ. ಇದ್ರಿಂದ ಬೇಸತ್ತ ಮಹಿಳೆ ವಿಚ್ಛೇದನದ ಬಗ್ಗೆ ಮಾತನಾಡಿದ್ರೆ, ಕುಟುಂಬಸ್ಥರು ಅದಕ್ಕೂ ಸಿದ್ಧರಿದ್ದಾರೆ. ಮಗನಿಗೆ ಇನ್ನೊಂದು ಮದುವೆ ಮಾಡ್ತೇನೆ ಎನ್ನುವ ದರ್ಪದ ಮಾತನಾಡ್ತಿದ್ದಾರೆ.

ಇದು ಈ ಮಹಿಳೆ (Woman) ಯೊಬ್ಬಳ ಸಮಸ್ಯೆ ಮಾತ್ರವಲ್ಲ. ನಮ್ಮಲ್ಲಿ ಅನೇಕ ಮಹಿಳೆಯರು, ಪುರುಷರು ಸೆಕ್ಸ್ (Sex) ವಿಷ್ಯದಲ್ಲಿ ಸಮಸ್ಯೆ, ಗೊಂದಲವನ್ನು ಹೊಂದಿದ್ದಾರೆ.  ಸೆಕ್ಸ್ ವಿಷ್ಯದಲ್ಲಿ ಜನರು ತಮ್ಮ ಭಾವನೆಯನ್ನು ಮುಚ್ಚಿಡುವ ಪ್ರಯತ್ನ ಮಾಡ್ತಾರೆಯೇ ವಿನಃ ಅದನ್ನು ಹಂಚಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗೋದಿಲ್ಲ. ಯಾವುದೇ ವ್ಯಕ್ತಿಯ ಮೌನ, ಹಿಂಸೆಯನ್ನು ಬೆಂಬಲಿಸುತ್ತದೆ ಎಂಬುದನ್ನು ನೆನಪಿಡಬೇಕು.

Latest Videos

18 ತುಂಬಿದವರಿಗೆ ತಿಂಗಳಿಗೆ 30 ಅಶ್ಲೀಲ ಚಿತ್ರ ವೀಕ್ಷಣೆ ಮಾತ್ರ,ಏನಿದು ಪೋರ್ನ್ ಪಾಸ್‌ಪೋರ್ಟ್ ನಿಯಮ?

ಸೆಕ್ಸ್ ವಿಷ್ಯ ಬಂದಾಗ, ಅದ್ರಲ್ಲಿ ಸಮಸ್ಯೆಗಳು ಕಾಣಿಸಿಕೊಂಡಾಗ ಇಬ್ಬರೂ ಕುಳಿತು ಪರಿಹಾರ ಕಂಡುಕೊಳ್ಳಬೇಕು. ಅವರಿಂದ ಸಾಧ್ಯವಿಲ್ಲ ಎಂದಾಗ, ತಜ್ಞರ ಮೊರೆ ಹೋಗ್ಬೇಕು. ಈ ಮಹಿಳೆ ಸಮಸ್ಯೆಗೂ ಇನ್ಸ್ಟಾಗ್ರಾಮ್ mtvnishedh ನಲ್ಲಿ ಪರಿಹಾರ ನೀಡುವ ಪ್ರಯತ್ನ ನಡೆಸಲಾಗಿದೆ. ಅಲ್ಲದೆ ಇಂಥ ಸಮಸ್ಯೆಗಳಿದ್ರೆ ನಮ್ಮ ಬಳಿ ಬನ್ನಿ ಎಂದು ಜನರಿಗೆ ಮನವಿ ಮಾಡಲಾಗಿದೆ.

ಕನ್ಯಾಪೊರೆ ಬಗ್ಗೆ ತಪ್ಪು ಕಲ್ಪನೆ : ಕನ್ಯಾಪೊರೆ ಬಗ್ಗೆ ಜನರಲ್ಲಿ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಮೊದಲ ರಾತ್ರಿಯೇ ಕನ್ಯಾಪೊರೆ ಹರಿಯಬೇಕು ಎಂಬುದು ಒಂದಾದ್ರೆ ಮತ್ತೊಂದು ಕನ್ಯಾಪೊರೆ ಗಟ್ಟಿಯಿರುತ್ತದೆ ಎಂಬ ನಂಬಿಕೆ. ತಜ್ಞರ ಪ್ರಕಾರ, ಕನ್ಯಾಪೊರೆ ಅದು ಮುದ್ರೆಯಲ್ಲ. ಅದನ್ನು ಕಾಂಕ್ರೀಟಿನಿಂದ ಮಾಡಲಾಗಿಲ್ಲ. ಅಪರೂಪದಲ್ಲಿ ಅಪರೂಪದ ಪ್ರಕರಣ ಹೊರತುಪಡಿಸಿದ್ರೆ ಸಾಮಾನ್ಯ ಸ್ಥಿತಿಯಲ್ಲಿ ಅದರ ಮೇಲೆ ಹೆಚ್ಚುವರಿ ಪದರ ಇರೋದು ಕಡಿಮೆ. ಇದ್ರೂ ಅದು ಸಂಭೋಗದ ವೇಳೆ ಯಾವುದೇ ಅಡ್ಡಿಯುಂಟು ಮಾಡೋದಿಲ್ಲ ಎನ್ನುತ್ತಾರೆ ತಜ್ಞರು.

ಈ ಜೋಡಿಯನ್ನು ಬೇರೆ ಮಾಡ್ತಿದ್ದೀರಾ? ದೇವ್ರು ಮೆಚ್ತಾನಾ ನಿಮ್ಮನ್ನು ಡೈರೆಕ್ಟರ್​ ಸಾಹೇಬ್ರೆ? ಫ್ಯಾನ್ಸ್​ ಅಸಮಾಧಾನ

ನಿಮಿರುವಿಕೆ ಅಪಸಾಮಾನ್ಯ ಕ್ರಿಯೆ ರೋಗವಲ್ಲ : ಇನ್ನು ನಿಮಿರುವಿಕೆ ಅಪಸಾಮಾನ್ಯ ಕ್ರಿಯೆ (Erection) ಬಗ್ಗೆಯೂ ಜನರು ತಪ್ಪು ನಂಬಿಕೆ ಹೊಂದಿದ್ದಾರೆ. ತಮಗೆ ಈ ಸಮಸ್ಯೆ ಇದೆ ಎಂಬುದನ್ನು ಯಾವುದೇ ಪುರುಷ ಹೇಳೋದಿಲ್ಲ. ಇದು ಅವಮಾನದ ಸಂಗತಿ ಎಂದು ಜನರು ನಂಬಿದ್ದಾರೆ. ಅದನ್ನು ಒಂದು ಗಂಭೀರ ರೋಗ ಎಂದೇ ಪರಿಗಣಿಸಲಾಗುತ್ತದೆ. ನಿಮಿರುವಿಕೆ ಅಪಸಾಮಾನ್ಯ ಕ್ರಿಯೆ ಸಮಸ್ಯೆ ಇದೆ ಅಂದ್ರೆ ಅದು ಕುಟುಂಬಸ್ಥರಿಗೆ, ಸಮಸ್ಯೆಯಿಂದ ಬಳಲುತ್ತಿರುವ ಪುರುಷನಿಗೆ ಅವಮಾನವಲ್ಲ. ಇದು ಒಂದು ಸಾಮಾನ್ಯ ಸಮಸ್ಯೆ. ಒತ್ತಡದಿಂದ ಹಿಡಿದು ಸಂಬಂಧವಿಲ್ಲದ ಆರೋಗ್ಯ ಸಮಸ್ಯೆಗಳವರೆಗೆ ಹಲವಾರು ಕಾರಣಗಳಿಗಾಗಿ ಇದು ಸಂಭವಿಸುತ್ತದೆ. ಇದನ್ನು ಮುಚ್ಚಿಡುವ ಬದಲು ತಜ್ಞರ ಬಳಿ ಹೋಗಿ ಚಿಕಿತ್ಸೆ ಪಡೆಯುವುದು ಒಳ್ಳೆಯದು. ನಾವು ನಮ್ಮ ಸಮಸ್ಯೆಯನ್ನುನ ಬಹಿರಂಗಪಡಿಸದೆ, ಅದನ್ನು ಬಗೆಹರಿಸಿಕೊಳ್ಳಲು ಆಸಕ್ತಿ ತೋರದೆ ಹೋದಲ್ಲಿ ಸಮಸ್ಯೆ ಉಲ್ಬಣವಾಗುತ್ತದೆ. ಇದ್ರಿಂದ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ. ಆರೋಗ್ಯಕರ ಲೈಂಗಿಕ ಜೀವನವನ್ನು ಆನಂದಿಸಬೇಕು ಎನ್ನುವವರು ತಮ್ಮ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಬೇಕು ಎಂದು ಇನ್ಸ್ಟಾಗ್ರಾಮ್ ನ ಈ ಪೋಸ್ಟ್ ನಲ್ಲಿ ಸಲಹೆ ನೀಡಲಾಗಿದೆ. ಈ ಪೋಸ್ಟ್ ಗೆ ಅನೇಕರು ಸ್ಪಂದಿಸಿದ್ದಾರೆ. ತಮ್ಮ ಕುಟುಂಬದಲ್ಲಾಗ್ತಿರುವ ಸಮಸ್ಯೆಗಳನ್ನು ಬಹಿರಂಗವಾಗಿ ಹೇಳಿದ್ದಾರೆ. ಅಲ್ಲದೆ ದಂಪತಿ ಮಧ್ಯೆ ಇರುವ ಸಮಸ್ಯೆಗೆ ಮಾವನ ಮಧ್ಯಪ್ರವೇಶ ಏಕೆ ಎಂದು ಪ್ರಶ್ನೆ ಮಾಡಿದ್ದಾರೆ. 

 

click me!