ನಮ್ಮ ಪಕ್ಕದ ರಾಜ್ಯದಲ್ಲಿ ಮದುವೆ ಬಳಿಕ ವರನನ್ನು ಆಳವಾದ ಬಾವಿಗೆ ಎಸೆಯಲಾಗುತ್ತದೆ. ಈ ಪದ್ಧತಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದು ಇಲ್ಲಿಯ ಜನರು ಹೇಳುತ್ತಾರೆ.
ಭಾರತ ವೈವಿದ್ಯಮಯ ರಾಷ್ಟ್ರವಾಗಿದ್ದು, ಸಂಪ್ರದಾಯ ಆಚರಣೆ, ಜೀವನಶೈಲಿ, ಆಹಾರ, ಭಾಷೆ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತಿರುವೆ. ನಮ್ಮಲ್ಲಿ ಮದುವೆಗಳು ತುಂಬಾನೇ ಅದ್ಧೂರಿಯಾಗಿ ನಡೆಯುತ್ತವೆ. ಮದುವೆ ಅಂದ್ರೆ ಅದು ಹಲವು ಆಚರಣೆಗಳ ಸಂಭ್ರಮ ಎಂದು ಹೇಳಬಹುದು. ಸಾಮನ್ಯವಾಗಿ ಮದುವೆಯಲ್ಲಿ ವರನ ಚಪ್ಪಲಿ ಕಳ್ಳತನ, ಅರಿಶಿನ ಶಾಸ್ತ್ರ, ಹೂವಿನ ಚೆಂಡಾಟ, ಉಂಗುರು ಹುಡುಕಾಟ ಹೀಗೆ ಹಲವು ಶಾಸ್ತ್ರಗಳನ್ನು ಕಾಣಬಹುದು. ನಮ್ಮ ಪಕ್ಕದ ರಾಜ್ಯದಲ್ಲಿ ಮದುವೆ ಬಳಿಕ ವರನನ್ನು ಆಳವಾದ ಬಾವಿಗೆ ಎಸೆಯಲಾಗುತ್ತದೆ. ಈ ಪದ್ಧತಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದು ಇಲ್ಲಿಯ ಜನರು ಹೇಳುತ್ತಾರೆ.
ವರನನ್ನು ಆಳವಾದ ಬಾವಿಗೆ ಎಸೆದಾಗ ಈ ಸಮಯದಲ್ಲಿ ವಧುವಿನ ಪರಿಸ್ಥಿತಿ ಏನಾಗಿರಬಹುದು ಎಂಬುದನ್ನು ಒಮ್ಮೆ ಯೋಚಿಸಿ. ಇದೇ ರೀತಿ ಭಾರತದಲ್ಲಿ ವಿವಿಧ ಆಚರಣೆಗಳನ್ನು ನೀಡಬಹುದು. ಅದರಲ್ಲೂ ಬುಡಕಟ್ಟು ಸಮುದಾಯದಲ್ಲಿ ಇಂತಹ ವಿಚಿತ್ರ ಆಚರಣೆಗಳನ್ನು ಗಮನಿಸಬಹುದು. ಕೆಲವು ಕಡೆ ಹುಡುಗಿಯರೇ ವರನನ್ನು ಆಯ್ಕೆ ಮಾಡಿಕೊಂಡು,.ಲಿವ್ ಇನ್ ಟುಗೆದರ್ ಬಳಿಕ ಒಪ್ಪಿಗೆಯಾದ್ರೆ ಮಾತ್ರ ಮದುವೆ ಆಗುವ ಪದ್ಧತಿಗಳು ಭಾರತದ ಉತ್ತರ ಭಾಗದಲ್ಲಿ ಇನ್ನು ಚಾಲ್ತಿಯಲ್ಲಿವೆ.
undefined
ತಡರಾತ್ರಿ ಸ್ನೇಹಿತೆಯ ಕೋಣೆಗೆ ನುಗ್ಗಿದ್ದ 15ರ ಬಾಲಕನ ಪ್ರಾಣ ಹೋಗಿದ್ದೇಗೆ? ಇಬ್ಬರ ಬಂಧನ
ಗೋವಾದ ಉತ್ತರದಲ್ಲಿ ಬಾವಿಗೆ ತಳ್ಳುವ ಆಚರಣೆ
ಉತ್ತರ ಗೋವಾದ ಗ್ರಾಮದಲ್ಲಿ ವರನನ್ನು ಬಾವಿಗೆ ತಳ್ಳುವ ಆಚರಣೆ ಇದೆ. ಮದುವೆ ಬಳಿಕ ಇಲ್ಲಿನ ಪದ್ಧತಿ ಪ್ರಕರ, ವರನಿಗೆ ಶಿಕ್ಷೆ ನೀಡಲಾಗುತ್ತದೆ. ಹಿಂದೂ ಸಂಪ್ರದಾಯದಂತೆ ಮದುವೆ ನಡಯುತ್ತದೆ. ಬಾವಿಗೆ ತಳ್ಳೋದು ಇಲ್ಲಿನ ಮದುವೆಯ ಕೊನೆಯ ಶಾಸ್ತ್ರ. ಈ ಪದ್ಧತಿಯನ್ನು ಸಾಓ, ಜೋಆಓ ಎಂದು ಕರೆಯಲಾಗುತ್ತದೆ. ಹಿಂದಿನಿಂದಲೂ ಆಚರಣೆ ನಡೆದುಕೊಂಡು ಬಂದ ಕಾರಣ, ಇದನ್ನು ಮಿಸ್ ಮಾಡುವ ಹಾಗಿಲ್ಲ ಅಂತ ಇಲ್ಲಿನ ಸ್ಥಳೀಯರು ಹೇಳುತ್ತಾರೆ. ಬಾವಿಗೆ ಬಿದ್ದ ಯುವಕ ಸುರಕ್ಷಿತವಾಗಿ ಮೇಲೆ ಬಂದ್ರೆ ದಾಂಪತ್ಯ ಜೀವನ ಸುಖಕರವಾಗಿರುತ್ತದೆ ಎಂಬವುದು ಇಲ್ಲಿಯ ಜನರ ನಂಬಿಕೆಯಾಗಿದೆ. ಆದ್ರೆ ಸ್ವಲ್ಪ ಆಯತಪ್ಪಿದ್ರೂ ಪ್ರಾಣವೇ ಹೋಗಬಹುದು.
ಬಾವಿಗೆ ತಳ್ಳುವ ಹಿಂದಿನ ಉದ್ದೇಶ ಏನು?
ಹೀಗೆ ಬಾವಿಯಿಂದ ಮೇಲೆ ಬರುವ ವರನ ಆರೋಗ್ಯ ಚೆನ್ನಾಗಿರುತ್ತದೆ. ಈ ಪದ್ಧತಿಯಿಂದ ಯುವಕನ ಶಕ್ತಿ ಮತ್ತು ಸಾಮಾರ್ಥ್ಯ ಎಲ್ಲರಿಗೂ ಗೊತ್ತಾಗುತ್ತದೆ. ಇದೊಂದು ರೀತಿ ಸ್ಪರ್ಧೆ ಇದ್ದಂತೆ, ಈ ಮೂಲಕ ಪತ್ನಿಯನ್ನು ರಕ್ಷಣೆ ಹೇಗೆ ಮಾಡ್ತಾನೆ ಅಂತ ವಧುವಿನ ಪೋಷಕರು ತಿಳಿದುಕೊಳ್ಳುತ್ತಾರೆ. ಕೆಲವು ಭಾಗದಲ್ಲಿ ಮದುವೆ ಬಳಿಕ ವರನನ್ನು ಕಟ್ಟಿ ಹಾಕಿ ಥಳಿಸಲಾಗುತ್ತದೆ. ಈ ವೇಳೆ ಯುವಕ ಕಟ್ಟನ್ನು ಬಿಡಿಸಿಕೊಂಡು ಹೊರಗೆ ಬರಬೇಕು.
ಕೈಯಲ್ಲಿ ಮದರಂಗಿ, ಪ್ರೀತಿಸಿದವನೊಂದಿಗೆ ಮದುವೆ ಫಿಕ್ಸ್; ಆದ್ರೂ ನೇಣಿಗೆ ಕೊರಳೊಡ್ಡಿದ ವಧು