Relationship Tips: ಅಪ್ಪಿತಪ್ಪಿಯೂ ಸಂಗಾತಿ ಮುಂದೆ ಈ ಮಾತಾಡ್ಬೇಡಿ

By Suvarna News  |  First Published Dec 25, 2021, 1:03 PM IST

ಮಾತು ಮನೆ ಕೆಡಿಸ್ತು,ತೂತು ಒಲೆ ಕೆಡಿಸ್ತು ಎಂಬ ಮಾತಿದೆ. ಸಂದರ್ಭ ಯಾವುದೇ ಇರಲಿ. ತಮಾಷೆಯಿರಲಿ,ಕೋಪದಲ್ಲಿರಲಿ, ಮಾತನಾಡುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ. ಸಣ್ಣ ಮಾತು ಸಂಬಂಧ ಹಾಳು ಮಾಡುವ ಶಕ್ತಿ ಹೊಂದಿದೆ. ದಾಂಪತ್ಯದಲ್ಲಿ ಮಾತಿಗೆ ಬಂಗಾರದ ತೂಕವಿದೆ.


ಕೋಪ (Anger)ದಲ್ಲಿದ್ದಾಗ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎನ್ನುತ್ತಾರೆ. ಕೋಪ ನೆತ್ತಿಗೇರಿದಾಗ ಮನಸ್ಸು(Mind )ನಿಯಂತ್ರಣಕ್ಕೆ ಸಿಗುವುದಿಲ್ಲ. ಕೋಪವನ್ನು ನಿಯಂತ್ರಿಸಿಕೊಳ್ಳುವ ಕಲೆ ಮನುಷ್ಯನಿಗೆ ಗೊತ್ತಿರಬೇಕು. ಕೋಪದಲ್ಲಿ ಆಡಿದ ಮಾತು(Speech),ನಡೆದುಕೊಂಡು ರೀತಿ ಮುಂದೆ ಸಂಬಂಧವನ್ನು ಹಾಳು ಮಾಡುತ್ತದೆ. ದೀರ್ಘಕಾಲ ಸಂಬಂಧ ಉಳಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಕಷ್ಟವಾಗಿದೆ. ಚಿಕ್ಕಪುಟ್ಟ ವಿಷ್ಯಕ್ಕೆ ಸಂಬಂಧ (Relationship) ಹಾಳಾಗುತ್ತಿದೆ. ಅದರಲ್ಲೂ ಪ್ರೇಮ ಸಂಬಂಧದ ಮೇಲೆ ಒತ್ತಡ ದೊಡ್ಡ ಪರಿಣಾಮ ಬೀರ್ತಿದೆ. ಮದುವೆಯಾದ ಕೆಲವೇ ದಿನಗಳಲ್ಲಿ ಮನಸ್ತಾಪವಾಗಿ ಸಂಬಂಧ ಮುರಿದು ಬೀಳ್ತಿರುವ ಪ್ರಕರಣ ಹೆಚ್ಚಾಗಿದೆ. 

ದಾಂಪತ್ಯದಲ್ಲಿ ಚಿಕ್ಕಪುಟ್ಟ ಜಗಳ,ವಿರಸ ಇರಬೇಕು. ಇದು ಇಬ್ಬರು ಪರಸ್ಪರ ಅರ್ಥಮಾಡಿಕೊಳ್ಳಲು ನೆರವಾಗುತ್ತದೆ. ಹಾಗಂತ ಮುನಿಸಿದ ಎಳೆಯನ್ನು ಮತ್ತಷ್ಟು ಎಳೆಯುತ್ತ ಹೋದರೆ ಅದು ವಿಚ್ಛೇದನಕ್ಕೆ ಬಂದು ನಿಲ್ಲುತ್ತದೆ. ಗಲಾಟೆಯಲ್ಲಿ ಆಡಿದ ಮಾತುಗಳಿಗೆ ಯಾವುದೇ ಅರ್ಥವಿಲ್ಲ.ಕೋಪ ತಣ್ಣಗಾದ್ಮೇಲೆ ವ್ಯಕ್ತಿಯು ತನ್ನ ತಪ್ಪನ್ನು ಅರಿತುಕೊಳ್ಳುತ್ತಾನೆ. ಸಂಗಾತಿ ಮುಂದೆ ಕೆಲವರು ಕ್ಷಮೆ ಯಾಚಿಸುತ್ತಾರೆ. ಆ ಮೂಲಕ ಮತ್ತೆ ಒಂದಾಗುತ್ತಾರೆ. ಆಗ ಆ ಮಾತನ್ನು ಸಂಗಾತಿ ಮರೆಯಬಹುದು. ಆದ್ರೆ ಆ ಸಂದರ್ಭದಲ್ಲಿ ಮರೆತ ಮಾತು ಮತ್ತೊಮ್ಮೆ ಜಗಳಕ್ಕೆ ಕಾರಣವಾಗಬಹುದು. ಹಾಗಾಗಿ ಯಾವುದೇ ಕಾರಣಕ್ಕೂ ಸಂಗಾತಿ ಮುಂದೆ ಕೆಲ ವಿಷ್ಯಗಳನ್ನು ಅಪ್ಪಿತಪ್ಪಿಯೂ ಹೇಳಬಾರದು.

Latest Videos

undefined

ಸಂಗಾತಿ ಮುಂದೆ ಈ ಮಾತು ಹೇಳಬೇಡಿ : 

ನಾನು ನಿನ್ನನ್ನು ದ್ವೇಷಿಸುತ್ತೇನೆ (I hate you): ಅಸಮಾಧಾನ  ವ್ಯಕ್ತಪಡಿಸಲು ನಾವು ಕೆಲವೊಮ್ಮೆ ಚಲನಚಿತ್ರದ ಡೈಲಾಗ್‌ ಹೇಳುತ್ತೇವೆ. ಕೋಪದಲ್ಲಿ ಸಿನಿಮಾ (Cinema )ಡೈಲಾಗ್ ಅರಿವಿಲ್ಲದೆ ಹೊರಗೆ ಬಂದಿರುತ್ತದೆ.  ಅದರ ಪರಿಣಾಮವನ್ನು ಮುಂದೆ ಅನುಭವಿಸಬೇಕಾಗುತ್ತದೆ. ಅದಕ್ಕಾಗಿಯೇ ಜಗಳದ ಸಮಯದಲ್ಲಿ ಎಂದಿಗೂ ನಾನು ನಿನ್ನನ್ನು ದ್ವೇಷಿಸುತ್ತೇನೆ ಎಂಬ ಮಾತನ್ನು ಹೇಳಬೇಡಿ. ಐ ಹೇಟ್ ಯು ಚಿಕ್ಕ ಪದವಾಗಿರಬಹುದು. ಆದರೆ ಈ ಮೂರು ಪದಗಳು ದೊಡ್ಡ ಪರಿಣಾಮ ಬೀರಬಲ್ಲದು. ನಿಮ್ಮ ಸಂಗಾತಿಯ ಮನಸ್ಸನ್ನು ಚುಚ್ಚಬಹುದು. 

Extensive Smartphone Use: ಮಕ್ಕಳ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ ಪೋಷಕರ ಅತಿಯಾದ ಸ್ಮಾರ್ಟ್ಫೋನ್ ಬಳಕೆ!

ನಾನಿಲ್ಲದೇ ನೀನೇನೂ ಅಲ್ಲ (You are nothing without me): ದಾಂಪತ್ಯದಲ್ಲಿ ಒಟ್ಟಾಗಿ ಹೆಜ್ಜೆ ಇಡುವುದು ಬಹಳ ಮುಖ್ಯ. ನೀವಿಬ್ಬರೂ ಜೊತೆಯಾಗಿ ಜೀವನದಲ್ಲಿ ಸಾಕಷ್ಟು ಸಾಧಿಸಿರಬಹುದು. ಆದರೆ,ನೀವಿಲ್ಲದೆ ಅವರಿಲ್ಲ ಎಂಬ ಭಾವನೆ ತಪ್ಪು. ನಿಮ್ಮ ಸಂಗಾತಿ ನಿಮ್ಮಿಂದಾಗಿ ಮುಂದೆ ಸಾಗುತ್ತಿದ್ದಾರೆ ಎಂದು ಎಂದಿಗೂ ಅಹಂಕಾರಪಡಬೇಡಿ. ನೀವು ಇಲ್ಲದೆ ನಿಮ್ಮ ಸಂಗಾತಿ ಏನೂ ಅಲ್ಲ ಎಂದು ಎಂದಿಗೂ ಆಲೋಚಿಸಬೇಡಿ. ನಿಮ್ಮ ತಲೆಯಲ್ಲಿ ಈ ಆಲೋಚನೆ ಬಂದರೆ ಕೋಪದ ಸಂದರ್ಭದಲ್ಲಿ ಈ ವಿಷ್ಯ ನಾಲಿಗೆಗೆ ಬರುತ್ತದೆ. ಇದು ನಿಮ್ಮ ದಾಂಪತ್ಯದಲ್ಲಿ ಬಿರುಗಾಳಿ ಎಬ್ಬಿಸಬಹುದು. ಸಂಗಾತಿಯ ನೋವಿ(Pain)ಗೆ ಕಾರಣವಾಗಬಹುದು.ಜಗತ್ತಿನಲ್ಲಿ ಪ್ರತಿಯೊಬ್ಬರೂ ಅವರದೇ ಸಾಮರ್ಥ್ಯ ಹೊಂದಿರುತ್ತಾರೆ. ನೀವಿಲ್ಲದೆ ಹೋದ್ರೂ ನಿಮ್ಮ ಸಂಗಾತಿ ಸಾಧಿಸಬಲ್ಲರು. ಈ ಸತ್ಯ ನಿಮಗೆ ಗೊತ್ತಿರಬೇಕು. 

Health Tips: ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣಕ್ಕೆ ತರಲು ಜೀರಿಗೆಯನ್ನು ತಿಂದರೆ ಸಾಕು

ಮಾತಿನ ಮಧ್ಯೆ ಮಾಜಿ ಸಂಗಾತಿಯ ಪ್ರವೇಶ : ಹಿಂದೆ ಆಗಿದ್ದು ಆಗಿ ಹೋಗಿದೆ. ಅದನ್ನು ಮರೆತು ಮುಂದೆ ನಡೆಯುವುದು ಬಹಳ ಮುಖ್ಯ. ಬಹುತೇಕರು ಹಿಂದಿನ ಘಟನೆಗಳನ್ನು ಜೊತೆಯಲ್ಲಿಟ್ಟು ಸಾಗುತ್ತಾರೆ. ಮಾಜಿಗಳಿದ್ದರೆ ಪತಿ ಜೊತೆ ಅವರ ಹೋಲಿಕೆ ಶುರು ಮಾಡುತ್ತಾರೆ. ಸಂಗಾತಿಗೆ ಮಾಜಿ ಇದ್ದರು ಎಂಬ ವಿಷ್ಯ ಗೊತ್ತಾದರೆ ಅದನ್ನು ದೊಡ್ಡದು ಮಾಡುವವರಿದ್ದಾರೆ. ಪ್ರತಿ ಮಾತಿನ ಮಧ್ಯೆ ಮಾಜಿಗಳನ್ನು ಎಳೆದು ತರುತ್ತಾರೆ. ಅವರಂತೆ ನನಗೆ ನಡೆದುಕೊಳ್ಳಲು ಸಾಧ್ಯವಿಲ್ಲ,ಅವರಂತೆ ನಾನಲ್ಲ ಹೀಗೆ ಕೆಲ ಮಾತುಗಳು ಬಂದು ಹೋಗುತ್ತಿರುತ್ತವೆ. ಈ ಮಾತುಗಳು ಸಂಗಾತಿ ಮನಸ್ಸನ್ನು ಘಾಸಿಗೊಳಿಬಹುದು. ಹಳೆಯದನ್ನು ಮರೆತು ಹೊಸ ಜೀವನ ಶುರು ಮಾಡಿದ್ದ ಸಂಗಾತಿಗೆ ಈ ಮಾತುಗಳು ದೊಡ್ಡ ಆಘಾತ ನೀಡಬಹುದು.
 

click me!