ಸಂಬಂಧ ಸುಧಾರಿಸುವ ಜೊತೆಗೆ ದಂಪತಿ ಮಧ್ಯೆ ಪ್ರೀತಿಯನ್ನು ದುಪ್ಪಟ್ಟು ಮಾಡುವ ಶಕ್ತಿ ಸೆಕ್ಸ್ ಗಿದೆ. ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅಂದ್ರೂ ಕೆಲವೊಂದು ಲೋಪ ಇರ್ಲೇಬೇಕು. ಸಂಭೋಗದ ವಿಷ್ಯದಲ್ಲೂ ಇದು ನಿಜ.
ಸೆಕ್ಸ್ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಸಂಗತಿ ಬಹುತೇಕ ಎಲ್ಲರಿಗೂ ಗೊತ್ತು. ಆದ್ರೆ ಸೆಕ್ಸ್ ನಿಮ್ಮನ್ನು ಅನಾರೋಗ್ಯಕ್ಕೆ ತಳ್ಳಬಹುದು ಎಂಬ ಸಂಗತಿ ಗೊತ್ತಾ? ಕೆಲವೊಮ್ಮೆ ಸಂಭೋಗ ಮಹಿಳೆಯ ಆರೋಗ್ಯವನ್ನು ಹಾಳು ಮಾಡುತ್ತದೆ. ತೀವ್ರ ತಲೆನೋವು, ಜ್ವರ ಮತ್ತು ಯುಟಿಐ ಸೋಂಕಿನಂತಹ ಲಕ್ಷಣ ಕಾಣಿಸುತ್ತದೆ. ನಾವಿಂದು ಈ ಅನಾರೋಗ್ಯಕ್ಕೆ ಕಾರಣವೇನು ಹಾಗೆ ಯಾವೆಲ್ಲ ಅನಾರೋಗ್ಯ ನಿಮ್ಮನ್ನು ಕಾಡುತ್ತದೆ ಎಂಬ ಮಾಹಿತಿ ನೀಡ್ತೇವೆ.
ಸೆಕ್ಸ್ (Sex) ನಂತ್ರ ಅಸ್ವಸ್ಥತೆ ಕಾಡೋದೇಕೆ? : ನಮ್ಮ ಗರ್ಭಕಂಠವು ನರ ತುದಿಗಳಿಂದ ತುಂಬಿದೆ. ಇದು ವಾಸೋಡಿಲೇಷನ್ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ. ದೇಹವು ವಾಗಸ್ ಅಥವಾ ವಾಗನ್ ನರವನ್ನು ಉತ್ತೇಜಿಸಿದಾಗ ವಾಸೋಡಿಲೇಷನ್ ಪ್ರತಿಕ್ರಿಯೆ ಸಂಭವಿಸುತ್ತದೆ. ಇದರಿಂದ ಹೃದಯ (Heart) ಬಡಿತ ಮತ್ತು ರಕ್ತದೊತ್ತಡ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಇದು ವಾಂತಿ, ಪ್ರಜ್ಞೆ ತಪ್ಪಿದ ಭಾವನೆ ಇದ್ರಿಂದ ಉಂಟಾಗುತ್ತದೆ. ಇದು ಸಂಭೋಗದ ಸಮಯದಲ್ಲೂ ಆಗೋದಿದೆ.
400 ಪುರಷರಿಂದಲೂ ಸಿಗಲೇ ಇಲ್ವಂತೆ ಶುದ್ಧ ಪ್ರೀತಿ, ಒಂಟಿಯಾಗಿರುವುದೇ ಇಷ್ಟವಂತೆ 55ರ ಈ ನಾರಿಗೆ!
ಸಂಭೋಗದ ನಂತ್ರ ಕಾಡುವ ಸಮಸ್ಯೆಗಳು ಯಾವುವು? :
ಪರಾಕಾಷ್ಠೆಯ ಮೊದಲು ತಲೆನೋವು (Headache) : ಪರಾಕಾಷ್ಠೆಯೊಂದಿಗೆ ತಲೆನೋವು ಸಂಬಂಧ ಹೊಂದಿದೆ. ಸೆಕ್ಸ್ ಪ್ರಚೋದನೆ ತಲೆ ಮತ್ತು ಕುತ್ತಿಗೆಯಲ್ಲಿ ಸ್ನಾಯುವಿನ ಸಂಕೋಚನವನ್ನು ಉಂಟುಮಾಡುತ್ತದೆ. ಇದ್ರಿಂದ ನಿಮಗೆ ತಲೆನೋವು ಕಾಣಿಸಿಕೊಳ್ಳುತ್ತದೆ. ಮೈಗ್ರೇನ್ ಇರುವ ಜನರಿಗೆ ಈ ತಲೆನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಪರಾಕಾಷ್ಠೆಗೆ ಸ್ವಲ್ಪ ಮೊದಲು ಮೈಗ್ರೇನ್ ಸಮಸ್ಯೆ ಇರುವವರಿಗೆ ಈ ತಲೆನೋವು ಸಾಮಾನ್ಯವಾಗಿ ಕಾಡುತ್ತದೆ. ಇದು ಸ್ವಲ್ಪ ಹೊತ್ತು ಮಾತ್ರ ಇರುತ್ತದೆ. ಆ ಸಮಯದಲ್ಲಿ ರಕ್ತದೊತ್ತಡ ಹೆಚ್ಚಾಗುವ ಕಾರಣ ಪುರುಷರಿಗೆ ತಲೆನೋವು ಕಾಡೋದು ಹೆಚ್ಚು ಎಂದು ತಜ್ಞರು ಹೇಳ್ತಾರೆ.
ಉಸಿರಾಡಲು ಸ್ಪೇಸ್ ಇಲ್ಲದ ದಾಂಪತ್ಯದಿಂದ ಬೇಗ ಹೊರ ಬನ್ನಿ: ಡಿವೋರ್ಸ್ ಕೋಚ್!
ಪರಾಕಾಷ್ಠೆ ನಂತ್ರ ಕಾಡುತ್ತೆ ಈ ಸಮಸ್ಯೆ : ಪರಾಕಾಷ್ಠೆ ನಂತ್ರ ಕೆಲವರಿಗೆ ಜ್ವರ, ಕಣ್ಣಿನ ದೃಷ್ಟಿ ಮಸುಕಾಗುವುದು, ಸ್ನಾಯು ನೋವು, ಕೀಲು ನೋವು, ಆಯಾಸ ಕಾಣಿಸಿಕೊಳ್ಳುತ್ತದೆ. ಸೆಕ್ಸ್ ತಕ್ಷಣ ಏಕಾಗ್ರತೆ ಕೊರತೆ ಆಗೋದಿದೆ. ಇದು ಕೂಡ ಹೆಚ್ಚಾಗಿ ಪುರುಷರಲ್ಲಿ ಕಾಣಿಸಿಕೊಳ್ಳುತ್ತದೆ. ನಿಮಗೆ ಇದು ಹೆಚ್ಚಾಗಿ ಕಾಡ್ತಿದ್ದರೆ, ಪದೇ ಪದೇ ಕಾಣಿಸಿಕೊಳ್ತಿದ್ದರೆ ವೈದ್ಯರನ್ನು ಭೇಟಿಯಾಗೋದು ಸೂಕ್ತ ಎನ್ನುತ್ತಾರೆ ತಜ್ಞರು.
ಸಂಭೋಗದ (Sexual Intercourse) ನಂತ್ರ ಖಿನ್ನತೆ (Depression) : ಸಂಭೋಗದ ನಂತ್ರ ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆ ಕಾಡೋದಿದೆ. ಬಹುತೇಕ ಮಹಿಳೆಯರು ಖಿನ್ನತೆಗೆ ಒಳಗಾಗ್ತಾರೆ. ಶೇಕಡಾ ಹತ್ತರಷ್ಟು ಮಹಿಳೆಯರಿಗೆ ಸಂಭೋಗದ ನಂತ್ರ ಖಿನ್ನತೆ ಕಾಡುತ್ತದೆ ಎಂದು ಅಧ್ಯಯನ ಹೇಳಿದೆ. ಇದನ್ನು ಪೋಸ್ಟ್‌ಕೋಯಿಟಲ್ ಡಿಸ್ಫೋರಿಯಾ ಎಂದು ಕರೆಯಲಾಗುತ್ತದೆ. ಇದ್ರಿಂದ ಬಳಲುವ ಮಹಿಳೆಯರು ಸಂಭೋಗದ ನಂತ್ರ ಕಿರಿಕಿರಿ, ಆತಂಕ, ನೋವಿಗೆ ಒಳಗಾಗ್ತಾರೆ. ಖಿನ್ನತೆ ಅನೇಕ ಬಾರಿ ಲೈಂಗಿಕ ಜೀವನವನ್ನು ಹಾಳು ಮಾಡುತ್ತದೆ. ಪ್ರತಿ ಬಾರಿ ಸಂಭೋಗ ಸುಖದ ನಂತ್ರವೂ ನೀವು ಖಿನ್ನತೆಗೆ ಒಳಗಾಗ್ತಿದ್ದರೆ ವೈದ್ಯರನ್ನು ಭೇಟಿಯಾಗೋದು ಉತ್ತಮ.
ವೀರ್ಯದ ಅಲರ್ಜಿ (Sperm Allergy) : ಕೆಲ ಮಹಿಳೆಯರಿಗೆ ವೀರ್ಯ ಅಲರ್ಜಿಯನ್ನುಂಟು ಮಾಡುತ್ತದೆ. ವೀರ್ಯ ಸ್ಪರ್ಶದಿಂದ ಯೋನಿಯಲ್ಲಿ ಉರಿಯೂತ, ತುರಿಕೆ ಕಾಣಿಸಿಕೊಳ್ಳುತ್ತದೆ. ಯೋನಿಯ ಪಿಎಚ್ ಮಟ್ಟದಲ್ಲಿ ಏರುಪೇರಾಗುವುದೇ ಇದಕ್ಕೆ ಕಾರಣ. ಸಂಭೋಗದ ನಂತ್ರ ಯೋನಿಯಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಳ್ಳಬಾರದು ಅಂದ್ರೆ ಕಾಂಡೋಮ್ ಬಳಸಬೇಕು.
ಯುಟಿಐಗೆ ಕಾರಣ : ಸೆಕ್ಸ್ ಕೆಲ ಮಹಿಳೆಯರಿಗೆ ಯುಟಿಐ ಸಮಸ್ಯೆಯನ್ನುಂಟು ಮಾಡುತ್ತದೆ. ಯುಟಿಐ ಸಮಸ್ಯೆಯಿರುವ ಮಹಿಳೆಯರು ಹೆಚ್ಚಿನ ಕಾಳಜಿವಹಿಸಬೇಕು. ಮೂತ್ರಕೋಶದ ಸೋಂಕು ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರಿಗೆ ಶೇಕಡಾ 30 ಪಟ್ಟು ಹೆಚ್ಚಿರುತ್ತದೆ. ಒಂದ್ವೇಳೆ ನೀವು ಯುಟಿಐನಿಂದ ಬಳಲುತ್ತಿದ್ದರೆ ಸಂಭೋಗದ ತಕ್ಷಣ ಮೂತ್ರ ವಿಸರ್ಜನೆ ಮಾಡುವುದು ಒಳ್ಳೆಯದು.