
ತ್ರಿಶೂರ್(ಸೆ.01): ಬಾಯ್‌ಫ್ರೆಂಡ್, ಕ್ರಶ್, ಗರ್ಲ್‌ಫ್ರೆಂಡ್ ಹುಡುಕಿದಷ್ಟು ಸುಲಭವಲ್ಲ ಪರ್ಮನೆಂಟ್ ಪತ್ನಿಯನ್ನು ಹುಡುಕೋದು. ಹೌದು. ವಿವಾಹ ಅನ್ನೋ ವಿಚಾರ ಬಂದಾಗ ಎಲ್ಲರೂ ಹೈರಾಣಾಗ್ತಾರೆ. ಹುಡುಗಿ ಸಿಗಲ್ಲ, ಹುಡುಗ ಸಿಗಲ್ಲ, ಸಿಕ್ಕಿದ್ರೂ ಓಕೆ ಆಗಲ್ಲ. ಜಾಬ್ ಮಾಡ್ತಿರ್ಬೇಕು, ಎತ್ತರ ಇರಬೇಕು, ಸರ್ಕಾರಿ ನೌಕರಿ, ಗೃಹಿಣಿಯಾಗಬೇಕು, ಮನೆ ತೋಟ ನೋಡಿಕೊಳ್ಳಬೇಕು, ಹೆಚ್ಚು ಕಲಿತಿರಬೇಕು... ಅಬ್ಬಾ ಒಂದಾ ಎರಡಾ ಡಿಮ್ಯಾಂಡ್..! ಆದ್ರೆ ಹುಡುಗೀನೇ ಸಿಗದವರಿಗೆ ಈ ಕಂಡೀಷನ್ ಏನಿಲ್ಲ.
ಮದ್ವೆಯಾಗಬೇಕು. ಒಂದು ಹುಡುಗಿ ಬೇಕು ಅಷ್ಟೇ.. ಇಷ್ಟೇ ಕಂಡೀಷನ್. ಕೇರಳದ ತ್ರಿಶೂರ್‌ನಲ್ಲಿ ವ್ಯಕ್ತಿಯೊಬ್ಬರು ಮದ್ವೆಗೆ ಹುಡುಗಿ ಹುಡುಕಿ ಎಷ್ಟು ಸುಸ್ತಾಗಿದ್ದಾರೆ ಎನ್ನುವುದಕ್ಕೆ ಅವರ ಅಂಗಡಿ ಮುಂದಿನ ಬೋರ್ಡ್ ಸಾಕ್ಷಿ. ಇದು ಅಂಗಡಿಯ ಹೆಸರೋ, ಯಾವುದೇ ಜಾಹೀರಾತು ಬ್ಯಾನರ್ ಅಲ್ಲ. ಪಕ್ಕಾ ಮದುವೆಗೆ ವಧು ಬೇಕೆಂದು ಕೇಳೋ ಮನವಿ.
ಮೃತ ಪತ್ನಿಗೆ ಭಾವನಾತ್ಮಕ ಗೌರವ: ಮಗಳ ಜೊತೆ ಮೆಟರ್ನಿಟಿ ಶೂಟ್ ವೈರಲ್
ವರ್ಷಗಳ ಕಾಲ ತನ್ನ ಜೀವನವನ್ನು ಸ್ಥಿರಗೊಳಿಸಲು ಹೆಣಗಾಡಿದ ನಂತರ ಉಣ್ಣಿಕೃಷ್ಣನ್ ಅವರು ತಾವಿನ್ನು ಮದುವೆಯಾಗುವ ಸಮಯ ಎಂದು ಭಾವಿಸಿದಾಗ ಮದುವೆ ಅಷ್ಟು ಸುಲಭವಲ್ಲ ಎಂಬ ವಿಚಾರ ಅರ್ಥವಾಗಿದೆ. ಆದ್ದರಿಂದ ತಮ್ಮ ಜೀವನ ಸಂಗಾತಿಗಾಗಿ ಅವರರು ಕಾಯುತ್ತಲೇ ಇದ್ದರು. ಆದರೆ ಪ್ರತಿಬಾರಿಯೂ ಉಣ್ಣಿಕೃಷ್ಣನ್ ನಿರಾಶೆಗೊಳ್ಳುತ್ತಿದ್ದರು. ಕಾರಣ ಯಾವೊಂದು ಪ್ರಪೋಸಲ್ ಕೂಡಾ ಸೆಟ್ ಆಗುತ್ತಿರಲಿಲ್ಲ.
ಆಗ ಉಣ್ಣಿಕೃಷ್ಣನ್ ಅವರಿಗೆ ಒಂದು ಐಡಿಯಾ ಹೊಳೆಯಿತು. ಅವರು ರಸ್ತೆಯ ಪಕ್ಕದಲ್ಲಿ ಸಣ್ಣ ಅಂಗಡಿ ನಡೆಸುತ್ತಿದ್ದಾರೆ. ಆತ ತನ್ನ ಅಂಗಡಿಯ ಮುಂದೆ 'ವಧು ಬೇಕಾಗಿದ್ದಾರೆ, ಧರ್ಮ/ಜಾತಿ ಬೇಡ' ಎಂದು ಬೋರ್ಡ್ ಹಾಕಿದ್ದಾರೆ. ಉಣ್ಣಿಕೃಷ್ಣನ್ ಅವರ ಸ್ನೇಹಿತ ಮೊಬೈಲ್ ಸಂಖ್ಯೆಯನ್ನು ಹೊಂದಿದ್ದ ಚಿಕ್ಕ ಬೋರ್ಡ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ನಂತರ ಅದು ವೈರಲ್ ಆಯಿತು. ಪೋಸ್ಟ್ ವೈರಲ್ ಆದ ನಂತರ ಬಂದ ಪ್ರತಿಕ್ರಿಯೆ ನಂಬಲಸಾಧ್ಯವಾಗಿದೆ ಎನ್ನುತ್ತಾರೆ ಉಣ್ಣಿಕೃಷ್ಣನ್.
ಮಂಟಪದಲ್ಲೇ ತಂಬಾಕು ಅಗಿಯುತ್ತಿದ್ದ ವರನಿಗೆ ವಧುವಿನಿಂದ ಕಪಾಳಮೋಕ್ಷ
ನಂತರದ ದಿನಗಳಲ್ಲಿ ಅವರು ಹಲವಾರು ಕರೆಗಳು ಬರುತ್ತಿರುವುದಾಗಿ ಅವರು ಹೇಳಿದ್ದಾರೆ. ಉಣ್ಣಿಕೃಷ್ಣನ್ ಅವರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದು, ಇಟಲಿ ಮತ್ತು ಆಸ್ಟ್ರೇಲಿಯಾ ಸೇರಿದಂತೆ ದೇಶದ ಹೊರಗಿನಿಂದಲೂ ಕೆಲವು ಕರೆಗಳನ್ನು ಸ್ವೀಕರಿಸಿದ್ದರು. ಕುತೂಹಲಕಾರಿ ವಿಚಾರವೆಂದರೆ ಉಣ್ಣಿಕೃಷ್ಣನ್ ಅವರಿಗೆ ಪ್ರಪೋಸಲ್ ಕರೆ ಕೇವಲ ಹುಡುಗಿಯರ ಅಥವಾ ಅವರ ಕುಟುಂಬಗಳಿಂದ ಮಾತ್ರ ಬಂದಿಲ್ಲ. ಜೊತೆಗೆ ಅವನನ್ನು ಇಷ್ಟಪಡುವ ಬಹಳಷ್ಟು ಜನ ಯುವಕರು ಉಣ್ಣಿ ರಿಜೆಕ್ಟ್ ಮಾಡಿದ ಯುವತಿಯರ ಪ್ರಪೋಸಲ್ ತಮಗೆ ನೀಡುವಂತೆ ಕೇಳುತ್ತಿದ್ದಾರೆ.
2017 ರಲ್ಲಿ, ಮಲಪ್ಪುರಂನ ಮಂಜೇರಿಯ 34 ವರ್ಷದ ಛಾಯಾಗ್ರಾಹಕ ರಂಜಿಶ್ ಮಂಜೇರಿ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದು ಪೋಸ್ಟ್ ಭಾರೀ ವೈರಲ್ ಆಗಿತ್ತು, ಶೀಘ್ರದಲ್ಲೇ ರಂಜೀಶ್ ವಿವಾಹವಾದರು. ಪ್ರಾಸಂಗಿಕವಾಗಿ, ಒಂದೆರಡು ವರ್ಷಗಳ ಹಿಂದೆ ಮತ್ತೊಬ್ಬ ಯುವಕ ಕೂಡ ಇದೇ ರೀತಿಯ ಪ್ರಯತ್ನ ಮಾಡಿದ್ದ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.