ಮಕ್ಕಳು ಸಾಮಾನ್ಯವಾಗಿ ಚಾಕೋಲೇಟ್ಸ್, ಟಾಯ್ಸ್ ಅಂಥಾ ಸುಮ್ ಸುಮ್ನೆ ಹಣ ಖರ್ಚು ಮಾಡುತ್ತಾರೆ. ಆದರೆ ಹಣದ ಮೌಲ್ಯ ಗೊತ್ತಿದ್ದರೆ ಹೀಗೆ ಅನಗತ್ಯವಾಗಿ ಖರ್ಚು ಮಾಡುವುದಿಲ್ಲ. ಹಾಗಿದ್ರೆ ಮಕ್ಕಳಿಗೆ ಹಣ ಉಳಿತಾಯ ಕಲಿಸಲು ಏನು ಮಾಡಬೇಕು..? ಇಲ್ಲಿದೆ ಮಾಹಿತಿ.
ಮಕ್ಕಳ ಹಠದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಮಕ್ಕಳು ತಮಗೆ ಬೇಕಾದುದನ್ನು ಪಡೆಯುವವರೆಗೂ ಬಿಡುವುದಿಲ್ಲ. ತಂದೆ ತಾಯಿಯ ಬಳಿ ಹಣವಿದೆಯೋ ಇಲ್ಲವೋ ಎಂದು ಯೋಚಿಸುವುದಿಲ್ಲ. ತಮಗೆ ಬೇಕಾದುದನ್ನು ಖರೀದಿಸಲು ಒತ್ತಾಯಿಸುತ್ತಾರೆ. ಕೊಂಡುಕೊಳ್ಳದಿದ್ದರೆ ಅಳುವುದು, ಊಟ ಮಾಡದೇ ಇರುವುದು ಮಾಡುತ್ತಾರೆ. ಹೀಗಾಗದಿರಲು ಮಕ್ಕಳಿಗೆ ಬಾಲ್ಯದಿಂದಲೇ ಹಣದ ಮೌಲ್ಯವನ್ನು ಕಲಿಸಬೇಕು. ಹಣದ ಮೌಲ್ಯ ಗೊತ್ತಿದ್ದರೆ ಮಕ್ಕಳು ಅನಗತ್ಯವಾಗಿ ಖರ್ಚು ಮಾಡುವುದಿಲ್ಲ. ಆದರೆ ಮಕ್ಕಳಿಗೆ ಹಣ ಉಳಿತಾಯ ಕಲಿಸಲು ಏನು ಮಾಡಬೇಕು..? ಹಣವನ್ನು ಉಳಿಸುವುದು ಹೇಗೆ? ಗಳಿಸುವುದು ಹೇಗೆ..? ಈಗ ಹೇಗೆ ಖರ್ಚು ಮಾಡಬೇಕೆಂದು ಪೋಷಕರಿಗೆ ಕಲಿಸುವುದು ಹೇಗೆ ಎಂದು ನೋಡೋಣ.
ಅನೇಕ ಪೋಷಕರು ತಮ್ಮ ಮಕ್ಕಳು ಕೇಳುವುದನ್ನು ಖರೀದಿಸಿ ಕೊಡುತ್ತಾರೆ. ಹಣದ ಮೌಲ್ಯವನ್ನು ಹೇಳಿಕೊಡಿ ಎಂದು ಯಾರಾದರೂ ಹೇಳಿದರೂ, ಅವರು ದೊಡ್ಡವರಾದ ನಂತರ ಅದನ್ನು ಕಲಿಯುತ್ತಾರೆ, ಈಗ ಅಗತ್ಯವಿಲ್ಲ ಎಂದೇ ಹೇಳುತ್ತಾರೆ. ಆದರೆ ಮಕ್ಕಳು ದೊಡ್ಡವರಾದ ಮೇಲೆ ಒಮ್ಮೆಲೇ ಹಣ ಉಳಿಸುವುದನ್ನು ಕಲಿಯುವುದು ಸುಲಭವಲ್ಲ. ಅದನ್ನು ಬಾಲ್ಯದಿಂದಲೇ ರೂಢಿಸಿಕೊಂಡು.. ಬಂದರೆ ಭವಿಷ್ಯ ಸುಭದ್ರವಾಗಿರುತ್ತದೆ.
ದುಡಿಯೋ ಹೆಣ್ಣಿನ ಕೈಯ್ಯಲ್ಲೂ ಇರ್ಬೇಕು ತುರ್ತು ನಿಧಿ, ಹೇಗೆ ಹೆಲ್ಪ್ ಆಗುತ್ತೆ ಇಲ್ನೋಡಿ!
ಅಗತ್ಯ ಮತ್ತು ಅನಗತ್ಯ ವಸ್ತುಗಳು
ಉಳಿತಾಯದ ಮೌಲ್ಯವನ್ನು ಮಕ್ಕಳಿಗೆ ಕಲಿಸುವ ಮೊದಲ ಹಂತವೆಂದರೆ ಅಗತ್ಯತೆಗಳು ಮತ್ತು ಅನಗತ್ಯ ವಿಷಯಗಳ ನಡುವೆ ವ್ಯತ್ಯಾಸವನ್ನು ಕಲಿಸುವುದು. ಆಹಾರ, ವಸತಿ, ಬಟ್ಟೆ, ಆರೋಗ್ಯ, ಶಿಕ್ಷಣದಂತಹ ಮೂಲಭೂತ ವಿಷಯಗಳಿಗೆ ಖರ್ಚು ಮಾಡಬೇಕು. ಮೂವೀಸ್, ಗ್ಯಾಜೆಟ್ಸ್, ದುಬಾರಿ ಬಟ್ಟೆಗಳು ಅನಗತ್ಯ ವಿಷಯಗಳಾಗಿವೆ. ಈ ವಿಷಯವನ್ನು ಮಾತಿನಲ್ಲಿ ಹೇಳುವ ಬದಲು, ನಿಮ್ಮ ಮನೆಯಲ್ಲಿರುವ ವಸ್ತುಗಳನ್ನು ಅವರಿಗೆ ತೋರಿಸಿ.. ಅವರಿಗೆ ಅರ್ಥವಾಗುವಂತೆ ಹೇಳಿ.
ಮಕ್ಕಳಿಗೆ ಮನೆಯಲ್ಲಿ ಕೆಲಸ ಕೊಟ್ಟು ಹಣ ನೀಡಬೇಕು
ಚಿಕ್ಕ ಮಕ್ಕಳಿಗೆ ಮನೆಯಲ್ಲೇ ಕೆಲವು ಕೆಲಸಗಳನ್ನು ನೀಡಿ ಅದಕ್ಕೆ ದುಡ್ಡು ನೀಡಬೇಕು. ಇದರಿಂದ ಮಕ್ಕಳು ಕಷ್ಟ ಪಟ್ಟು ಹಣ ಸಂಪಾದಿಸುವ ರೀತಿಯನ್ನು ತಿಳಿಯುತ್ತಾರೆ. ಹೀಗಾಗಿ ಕಷ್ಟಪಟ್ಟು ದುಡಿದ ಹಣವನ್ನು ಖರ್ಚು ಮಾಡಬಾರದು ಎಂದು ಸಹ ತಿಳಿಯುತ್ತದೆ.
ಭಾರತದಲ್ಲೂ ಮಹಿಳೆಯರಿಗೆ ಗೊತ್ತಾಗಿದೆ ಹಣ ಗಳಿಸೋ ಗುಟ್ಟು, ಸುಮ್ ಸುಮ್ಮನೆ ಹೂಡಿಕೆ ಮಾಡೋಲ್ಲ!
ಉಳಿತಾಯ ಯೋಜನೆಗಳು
ಮಕ್ಕಳು ಮಿತವ್ಯಯಿಯಾಗಬೇಕೆಂದು ನೀವು ಬಯಸಿದರೆ, ಹಣವನ್ನು ಗಳಿಸಲು ಮತ್ತು ಉಳಿಸಲು ಅವರಿಗೆ ಅವಕಾಶ ನೀಡುವುದು ಮುಖ್ಯ. ಪಾಕೆಟ್ ಮನಿ ಕೊಟ್ಟರೆ ಇಟ್ಟುಕೊಳ್ಳಲು ಹೇಳಬೇಕು. ಹೆಚ್ಚು ಖರ್ಚು ಮಾಡದೆ ಹಣವನ್ನು ಉಳಿಸಿದಾಗ ನೀವು ಅವರಿಗೆ ಉತ್ತಮ ಉಡುಗೊರೆಯನ್ನು ನೀಡಬೇಕು. ಹೀಗೆ ಮಾಡುವುದರಿಂದ ಹಣ ಉಳಿಸುವ ಆಸಕ್ತಿ ಹೆಚ್ಚುತ್ತದೆ.
ಉಳಿಸಲು ಒಂದು ಸ್ಥಳವನ್ನು ಒದಗಿಸಿ
ಮಕ್ಕಳು ಉಳಿತಾಯದ ಗುರಿಯನ್ನು ಅದನ್ನು ಸಂಗ್ರಹಿಸುವ ರೀತಿಯನ್ನು ಹೇಳಿ. ಚಿಕ್ಕಮಕ್ಕಳಾಗಿದ್ದರೆ ಪಿಗ್ಗಿ ಬ್ಯಾಂಕ್ ಉತ್ತಮ ಮಾರ್ಗ. ಮಕ್ಕಳು ದೊಡ್ಡವರಾಗಿದ್ದರೆ ಬ್ಯಾಂಕ್‌ನಲ್ಲಿ ಅವರ ಸ್ವಂತ ಉಳಿತಾಯ ಖಾತೆಯನ್ನು ಓಪನ್ ಮಾಡಬಹುದು.
ಖರ್ಚುಗಳನ್ನು ಟ್ರ್ಯಾಕ್ ಮಾಡಿ
ಹಣ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ ಉಳಿತಾಯದ ಭಾಗವಾಗಿ ಅತ್ಯಗತ್ಯ. ಬ್ಯಾಂಕ್ ಅಥವಾ ಡೆಬಿಟ್ ಕಾರ್ಡ್ ಅಪ್ಲಿಕೇಶನ್‌ನೊಂದಿಗೆ ವೆಚ್ಚಗಳನ್ನು ಟ್ರ್ಯಾಕಿಂಗ್ ಮಾಡುವುದು ಸ್ವಲ್ಪ ಸುಲಭವಾಗಿದೆ. ಅವರ ಖರ್ಚುವೆಚ್ಚಗಳ ಮೇಲೆ ಸದಾ ಗಮನವಿರಲಿ.