ದುಬೈ ಮನೆಯಿಂದ ಶೋಯೆಬ್‌ ಮಲೀಕ್‌ನ ಹೊರಹಾಕಿದ ಸಾನಿಯಾ ಮಿರ್ಜಾ!

Published : Feb 03, 2025, 09:26 AM IST
ದುಬೈ ಮನೆಯಿಂದ ಶೋಯೆಬ್‌ ಮಲೀಕ್‌ನ ಹೊರಹಾಕಿದ ಸಾನಿಯಾ ಮಿರ್ಜಾ!

ಸಾರಾಂಶ

ಶೋಯೆಬ್ ಮಲೀಕ್ ಅವರಿಂದ ವಿಚ್ಛೇದನ ಪಡೆದ ನಂತರ ಸಾನಿಯಾ ಮಿರ್ಜಾ ದುಬೈನಲ್ಲಿ ಹೊಸ ಮನೆ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಈ ಮನೆಯನ್ನು ಪುತ್ರ ಅಜಾನ್ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ವರದಿಯಾಗಿದೆ. ಮಿರ್ಜಾ ಈಗ ದುಬೈ ಮತ್ತು ಹೈದರಾಬಾದ್‌ನಲ್ಲಿರುವ ತಮ್ಮ ಅಕಾಡೆಮಿಗಳ ಮೂಲಕ ಟೆನಿಸ್‌ನಲ್ಲಿ ಸಕ್ರಿಯರಾಗಿದ್ದಾರೆ.

ಬೆಂಗಳೂರು (ಫೆ.3): ತನ್ನ ಬದುಕಿನಿಂದ ಹೊರಹೋಗಿರುವ ಮಾಜಿ ಪತಿ ಹಾಗೂ ಪಾಕಿಸ್ತಾನದ ಕ್ರಿಕೆಟ್‌ ತಂಡದ ಮಾಜಿ ನಾಯಕ ಶೋಯೆಬ್‌ ಮಲೀಕ್‌ ಅವರನ್ನು ದುಬೈನ ಮನೆಯಿಂದಲೂ ಸಾನಿಯಾ ಮಿರ್ಜಾ ಹೊರಹಾಕಿದ್ದಾರೆ ಎನ್ನಲಾಗಿದೆ. ದುಬೈನಲ್ಲಿ ತಾವು ಕಟ್ಟಿರುವ ಐಷಾರಾಮಿ ನಿವಾಸಕ್ಕೆ ಈ ಹಿಂದೆ ಶೋಯೆಬ್‌ ಮಲೀಕ್‌ ಅವರ ಹೆಸರಿತ್ತು. ಈಗ ಶೋಯೆಬ್‌ ಮಲೀಕ್‌ರ ಬದಲು ಪುತ್ರ ಅಜಾನ್‌ ಹೆಸರನ್ನು ಹಾಕಲಾಗಿದೆ ಎಂದು ವರದಿಯಾಗಿದೆ. ಸಾನಯಾ ಮಿರ್ಜಾ ತಮ್ಮ ವಿಲ್ಲಾದ ಕೊನೇ ಹಂತದ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಇದು ಮುಕ್ತಾಯವಾದ ಬಳಿಕ ಪುತ್ರನೊಂದಿಗೆ ದುಬೈನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ವಿಲ್ಲಾ ನಿರ್ಮಾಣ ಕಾರ್ಯ ಈಗ ಪೂರ್ಣಗೊಂಡಿದ್ದು, ಅವರು ಹೊಸ ಮನೆಗೆ ಸ್ಥಳಾಂತರಗೊಳ್ಳುವ ಮೊದಲು ಫೈನಲ್‌ ಟಚ್‌ ಕೆಲಸಗಳು ನಡೆಯುತ್ತಿವೆ. ಅಜಾನ್‌ ಜೊತೆ ಯುಎಇಯಲ್ಲಿ ದೀರ್ಘಕಾಲದಿಂದ ವಾಸಿಸುತ್ತಿರುವ ಮಿರ್ಜಾ, ತನ್ನ ಮಗ ಈಗ ತನ್ನ ಪ್ರಮುಖ ಆದ್ಯತೆ ಮತ್ತು ಉತ್ತಮ ಸ್ನೇಹಿತ ಎಂದು ಹೇಳಿದ್ದಾರೆ. 2024 ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ಅವರಿಂದ ವಿಚ್ಛೇದನ ಪಡೆದ ನಂತರ ಅವರು ಈ ನಿರ್ಧಾರ ಮಾಡಿದ್ದಾರೆ. ವಿಚ್ಛೇದನದೊಂದಿಗೆ ಅವರ 14 ವರ್ಷಗಳ ದಾಂಪತ್ಯ ಜೀವನ ಕೊನೆಗೊಂಡಿತ್ತು. ಶೋಯೆಬ್‌ ಮಲೀಕ್‌ ಹಾಗೂ ಸಾನಿಯಾ ದಂಪತಿಗೆ 2017ರಲ್ಲಿ ಅಜಾನ್‌ ಜನಿಸಿದ್ದ.

ಖ್ಯಾತ ಉದ್ಯಮಿಯನ್ನು ಮದುವೆ ಆಗ್ತಾರಾ ಸಾನಿಯಾ ಮಿರ್ಜಾ?

ಮಿರ್ಜಾ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಊಹಾಪೋಹಗಳು ಹರಡಿದ್ದು, ಯುಎಇ ಮೂಲದ ವ್ಯವಹಾರ ಉದ್ಯಮಿ ಅದೀಬ್ ಸಾಜನ್ ಅವರೊಂದಿಗೆ ಅವರ ಸಂಬಂಧವಿದೆ ಎಂಬ ವರದಿಗಳಿವೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಬಂದಿಲ್ಲ. ಆದೀಬ್‌ ಸಾಜನ್‌ ಅವರೇ ಸಾನಿಯಾ ಮಿರ್ಜಾ ಅವರ ಹೊಸ ಮನೆಯ ವಿನ್ಯಾಸ ನೋಡಿಕೊಂಡಿದ್ದಾರೆ ಎನ್ನಲಾಗಿದೆ. ತಮ್ಮ ವೈಯಕ್ತಿಕ ಜೀವನದ ಹೊರತಾಗಿ, ಮಿರ್ಜಾ ದುಬೈ ಮತ್ತು ಹೈದರಾಬಾದ್‌ನಲ್ಲಿರುವ ತಮ್ಮ ಅಕಾಡೆಮಿಗಳ ಮೂಲಕ ಟೆನಿಸ್‌ನಲ್ಲಿ ಸಕ್ರಿಯರಾಗಿದ್ದಾರೆ. ಅವರು ಕ್ರೀಡಾ ವಿಶ್ಲೇಷಕರಾಗಿಯೂ ಕೆಲಸ ಮಾಡುತ್ತಿದ್ದಾರೆ, ಇತ್ತೀಚೆಗೆ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ಗಾಗಿ 2025 ರ ಆಸ್ಟ್ರೇಲಿಯನ್ ಓಪನ್‌ಗೆ ವಿಶ್ಲೇಷಕರಾಗಿ ಕೆಲಸ ಮಾಡಿದ್ದರು. ಟೆನಿಸ್‌ನಲ್ಲಿ ಅತ್ಯಂತ ಯಶಸ್ವಿ ವೃತ್ತಿಜೀವನ ಕಂಡ 6 ಬಾರಿಯ ಗ್ರ್ಯಾಂಡ್‌ ಸ್ಲಾಂ ಚಾಂಪಿಯನ್‌ 2023ರಲ್ಲಿ ಟೆನಿಸ್‌ಗೆ ವಿದಾಯ ಹೇಳಿದ್ದರು.

ಸಾನಿಯಾ ಮಿರ್ಜಾಗಿಂತ ಸುಂದರಿ ರಷ್ಯಾದ ಈ ಟೆನಿಸ್ ಬೆಡಗಿ ಶೆರಪೋವಾ!

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌