
ದೆಹಲಿ: ಮದುವೆ ದಿನ ಖುಷಿಯಲ್ಲಿ ವಧು ವರರು ಡಾನ್ಸ್ ಮಾಡೋದು ಸಾಮಾನ್ಯವಾಗಿದೆ. ಅದರಲ್ಲೂ ಉತ್ತರ ಭಾರತದ ರಾಜ್ಯಗಳಲ್ಲಿ ಮಧುಮಗ ಡಾನ್ಸ್ ಮಾಡೋದು ಮದುವೆಯ ದಿಬ್ಬಣದ ಪ್ರಮುಖ ವಿಚಾರವಾಗಿದೆ. ಆದರೆ ಹೀಗೆ ಡಾನ್ಸ್ ಮಾಡಲು ಹೋಗಿ ಯುವಕನೊರ್ವನ ಮದುವೆಯೇ ನಿಂತು ಹೋಗಿದೆ. ಹೌದು ಬಾಲಿವುಡ್‌ನ ಒಂದು ಕಾಲದ ಐಟಂ ನಂಬರ್ ಹಾಡಾಗಿರುವ 'ಚೋಲಿ ಕೇ ಪೀಚೆ ಕ್ಯಾಹೇ' ಹಾಡು ಯುವಕನೊಬ್ಬ ಬಾಳಲ್ಲಿ ಬಿರುಗಾಳಿ ಎಬ್ಬಿಸಿದ್ದು, ಮದುವೆಯೇ ನಿಂತು ಹೋಗಿದೆ. ಐಟಂ ಹಾಡಿಗೆ ಮಧುಮಗನ ಎರ್ರಾಬ್ರಿರಿ ಡಾನ್ಸ್ ನೊಡಿದ ಮಾವ (ವಧುವಿನ ತಂದೆ) ಮದುವೆಯನ್ನೇ ರದ್ದು ಮಾಡಿದ್ದಾರೆ. ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.
ವರ ಹಾಗೂ ಆತನ ಸ್ನೇಹಿತರು ಬಿಂದಾಸ್ ಅಗಿ ಈ 'ಚೋಲಿ ಕೇ ಪೀಚೆ ಕ್ಯಾಹೆ' ಹಾಡಿಗೆ ಕಾಲು ಕುಣಿಸಿದ್ದರು. ವರದಿಗಳ ಪ್ರಕಾರ ದೆಹಲಿಯಲ್ಲಿ ಮದುವೆ ನಿಗದಿಯಾಗಿತ್ತು, ವರ ತನ್ನ ಬಂಧುಗಳು ಸ್ನೇಹಿತರೊಂದಿಗೆ ಈ ಮದುವೆ ಸಮಾರಂಭಕ್ಕೆ ದಿಬ್ಬಣದ ಮೂಲಕ ಆಗಮಿಸಿದ್ದ. ಈ ವೇಳೆ ವರನ ಸ್ನೇಹಿತರು ವರನಿಗೆ ಡಾನ್ಸ್ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಗೆಳೆಯನ ಮಾತು ಕೇಳಿ ಡಾನ್ಸ್ ಮಾಡಲು ಮುಂದಾದಾಗ ಐಟಂ ಹಾಡು ಬಂದಿದ್ದು, ಅಲ್ಲಿದ್ದವರೆಲ್ಲಾ ಜೊತೆಯಾಗಿ ಈ ಹಾಡಿಗೆ ಚೆನ್ನಾಗಿ ಡಾನ್ಸ್ ಮಾಡಿದ್ದಾರೆ. ಆದರೆ ವಧುವಿನ ತಂದೆಗೆ ಇದ್ಯಾವುದೂ ಇಷ್ಟವಾಗಿಲ್ಲ, ಅವರು ಕೂಡಲೇ ಸಿಟ್ಟಿಗೆದ್ದು ಮದುವೆಯನ್ನೇ ನಿಲ್ಲಿಸಿದ್ದಾರೆ. ವರ್ನ ವರ್ತನೆಯಿಂದ ನಮ್ಮ ಕುಟುಂಬದ ಮೌಲ್ಯಗಳಿಗೆ ಅವಮಾನವಾಗಿದೆ ಎಂದು ಹೇಳಿ ವಧುವಿನ ತಂದೆ ಮದುವೆ ನಿಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಘಟನೆಯಿಂದಾಗಿ ಇತ್ತ ವಧು ಕಣ್ಣೀರಿಟ್ಟರೆ ವರ ಆಕೆಯ ತಂದೆಯ ಮನವೊಲಿಸಲು ಪ್ರಯತ್ನಿಸಿದ್ದಾನೆ. ಇದೆಲ್ಲವೂ ಕೇವಲ ಸಂಭ್ರಮದ ಕ್ಷಣಗಳನ್ನು ಸಂಭ್ರಮಿಸುವುದಕ್ಕಾಗಿ ಆಗಿತ್ತು ಎಂದು ಹೇಳಿದರು ಕೇಳದ ವಧುವಿನ ತಂದೆ ಮದುವೆಯನ್ನು ನಿಲ್ಲಿಸಿದ್ದಾರೆ. ವಧುವಿನ ಕುಟುಂಬಕ್ಕೆ ಹತ್ತಿರವಿರುವ ಮೂಲಗಳ ಪ್ರಕಾರ, ಮದುವೆ ರದ್ದಾದ ನಂತರವೂ ತಂದೆ ತನ್ನ ಕೋಪವನ್ನು ಬಹಳ ಸಮಯದ ಹೊತ್ತು ಇಟ್ಟುಕೊಂಡಿದ್ದರು. ತನ್ನ ಮಗಳು ಮತ್ತು ವರನ ಕುಟುಂಬದ ನಡುವೆ ಯಾವುದೇ ಸಂಪರ್ಕ ಇರದಂತೆ ನಿಷೇಧಿಸುವವರೆಗೂ ಅವರು ಹೋದರು ಎಂದು ವರದಿಯಾಗಿದೆ.
ಈ ಘಟನೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಬೇಗನೆ ವೈರಲ್ ಆಯ್ತು. ಆ ಪೋಸ್ಟ್‌ನಲ್ಲಿ ವರನು ಅತಿಥಿಗಳನ್ನು ರಂಜಿಸಲು 'ಚೋಲಿ ಕೆ ಪೀಚೆ' ಹಾಡಿಗೆ ನೃತ್ಯ ಮಾಡುತ್ತಾನೆ. ಆದರೆ ವಧುವಿನ ತಂದೆ ಮದುವೆಯನ್ನೇ ರದ್ದುಗೊಳಿಸುತ್ತಾನೆ ಎಂಬ ಶೀರ್ಷಿಕೆಯಲ್ಲಿ ಸುದ್ದಿ ವೈರಲ್ ಆಗಿತ್ತು. ವೀಡಿಯೋ ನೋಡಿದ ಅನೇಕರು ಹಲವು ವಿಭಿನ್ನ ಕಾಮೆಂಟ್ ಮಾಡಿದ್ದಾರೆ. ಹುಡುಗಿ ತಂದೆ (ಮಾವ) ಸರಿಯಾದ ನಿರ್ಧಾರ ತೆಗೆದುಕೊಂಡರು, ಇಲ್ಲದಿದ್ದರೆ ಅವರು ಈ ನೃತ್ಯವನ್ನು ಪ್ರತಿದಿನ ನೋಡಬೇಕಾಗಿತ್ತು ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಇದು ನಿಶ್ಚಯಿಸಿದ ವಿವಾಹಾಗಿರಲಿಲ್ಲ, ಇದೊಂದು ಎಲಿಮಿನೇಷನ್ ರೌಂಡ್ ಆಗಿತ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಹಾಡನ್ನು ಹಾಕಿದ್ದರೆ ನನ್ನ ಮದುವೆಯಾದರೂ ನಾನು ಡಾನ್ಸ್ ಮಾಡುತ್ತಿದೆ. ಈ ಡಾನ್ಸ್‌ನಲ್ಲೇನಿದೆ ಎಂದು ಕೆಲವರು ವರನನ್ನು ಸಮರ್ಥಿಸಿಕೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.