
ಮನೆಯ ಭದ್ರತೆಗಾಗಿ ಮುಂಭಾಗದಲ್ಲಿ ಸಿಸಿಟಿವಿ ಅಳವಡಿಸುವುದು ಸಾಮಾನ್ಯ. ಇಲ್ಲೊಬ್ಬ ಪತಿ ಕೆಲಸದ ನಿಮಿತ್ತ ಹಲವು ದಿನಗಳ ಕಾಲ ಮನೆಯಿಂದ ದೂರವಿರುವ ಕಾರಣ ಒಂದು ಹೆಜ್ಜೆ ಮುಂದೆ ಹೋಗಿ ರಹಸ್ಯ ಕ್ಯಾಮೆರಾ ಒಂದನ್ನು ಅಳವಡಿಸಿದ್ದಾನೆ. ಮನೆಯ ಪ್ರವೇಶ ದ್ವಾರದ ಬಳಿ ಲೀವಿಂಗ್ ರೂಂನಲ್ಲಿ ಈ ಕ್ಯಾಮೆರಾ ಅಳಡಿಸಿ ಎಂದಿನಂತೆ ತನ್ನ ಕೆಲಸಕ್ಕೆ ತೆರಳಿದ್ದಾನೆ. ಕೆಲದಿಂದ ಮನೆಗೆ ಮರಳಲು ಕೆಲ ದಿನಗಳಾಗಿದೆ. ಮನೆಗೆ ಬಂದ ಪತಿ ರಹಸ್ಯ ಕ್ಯಾಮೆರಾದಲ್ಲಿನ ದೃಶ್ಯ ನೋಡಿ ದಂಗಾಗಿದ್ದಾನೆ. ಈ ದೃಶ್ಯಗಳನ್ನು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಈ ಘಟನೆ ನಡೆದಿರುವುದು ಅಮೆರಿಕದ ಸೌತ್ ಕೆರೋಲಿನಾದಲ್ಲಿ. ಪತಿ ಹಾಗೂ ಪತ್ನಿ ನಡುವಿನ ಸುಂದರ ಸಂಸಾರ ಅದು. ಪತಿ ಕೆಲಸಕ್ಕೆ ತೆರಳಿದರೆ ಮತ್ತೆ ಮನೆ ಮರಳಲು ಕನಿಷ್ಠ ಒಂದು ವಾರ ಬೇಕು. ಇತ್ತ ಮನೆಯಲ್ಲಿ ಪತ್ನಿ ಒಂಟಿ. ಹೀಗಾಗಿ ಪತಿ ಲಿವಿಂಗ್ ರೂಂನಲ್ಲಿ ರಹಸ್ಯ ಕ್ಯಾಮೆರಾ ಒಂದನ್ನು ಅಳವಡಿಸಿ ಕೆಲಸಕ್ಕೆ ತೆರಳಿದ್ದಾನೆ.
ಮನೆಗೆ ಸರ್ಕಾರದಿಂದ ಹಣ ಪಡೆದು ಗಂಡನಿಗೆ ಕೈಕೊಟ್ಟು ಪ್ರೇಮಿಗಳ ಜೊತೆ ಮಹಿಳೆಯರು ಎಸ್ಕೇಪ್..!
ಮನೆಗೆ ಮರಳಿ ಈ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯದಿಂದ ಈ ಸಂಸಾರ ಒಡೆದು ಹೋಗಿದೆ. ಕಾರಣ ಪತಿ ಮನೆಯಲ್ಲಿ ಇಲ್ಲದ ವೇಳೆ ಪತ್ನಿ ಆಟಕ್ಕೆ ಕಂಗಾಲಾಗಿದ್ದಾನೆ. ಪತಿ ಇಲ್ಲದ ವೇಳೆ ಪತ್ನಿ ಪರಪುರುಷನ ಜೊತೆ ಕಾಲ ಕಳೆದ ಹಲವು ಘಟನೆಗಳಿವೆ. ಆದರೆ ಇಲ್ಲಿ ಒಬ್ಬ ಪುರುಷನಲ್ಲ, ನಾಲ್ಕು ದಿನದಲ್ಲಿ ನಾಲ್ವರು ಪುರುಷರು. ಪತಿ ಮನೆಯಲ್ಲಿ ಇಲ್ಲದ ಆರಂಭದ ನಾಲ್ಕು ದಿನದಲ್ಲಿ ನಾಲ್ವರು ಪುರುಷರನ್ನು ಪತ್ನಿ ಮನೆಗೆ ಆಹ್ವಾನಿಸಿದ್ದಾಳೆ. ಅವರ ಜೊತೆ ಒಂದೊಂದು ದಿನ ಕಳೆದಿದ್ದಾಳೆ.
ಇದು 2024ರ ಎಪ್ರಿಲ್ ತಿಂಗಳಲ್ಲಿ ನಡೆದ ಘಟನೆ. ಈ ಕುರಿತು ಪ್ರಕರಣ ಕೂಡ ದಾಖಲಾಗಿದೆ. ವಿಶೇಷ ಅಂದರೆ ಸೌತ್ ಕೆರೋಲಿನಾ ಪೊಲೀಸ್ ಅದಿಕಾರಿ ರ್ಯಾನ್ ಟೆರೆಲ್ ತನ್ನ ಮನೆಯಲ್ಲಿ ಈ ಕ್ಯಾಮೆರಾ ಅಳವಡಿಸಿದ್ದಾನೆ. ಕಾರು ಪಾರ್ಕಿಂಗ್ ಬಳಿ ಅಳವಡಿಸಲು ಸಿಸಿಟಿವಿ ಕ್ಯಾಮೆರಾವನ್ನು ಖರೀದಿಸಿದ ಅಧಿಕಾರಿ, ಬಳಿಕ ಪತ್ನಿ ಮೇಲಿನ ಅನುಮಾನದಿಂದ ಲೀವಿಂಗ್ ರೂಂನಲ್ಲಿ ಅಳವಡಿಸಿದ್ದಾನೆ. ಪೊಲೀಸರಿಗೆ ನೀಡುವ ರಹಸ್ಯ ಕ್ಯಾಮೆರಾಗಳನ್ನು ದುರ್ಬಳಕೆ ಮಾಡಿದ ಗಂಭೀರ ಆರೋಪ ಇದೀಗ ಅಧಿಕಾರಿ ಟೆರೆಲ್ ಮೇಲಿದೆ. ಹೀಗಾಗಿ ಕರ್ತವ್ಯದಿಂದ ಅಮಾನತುಗೊಂಡಿದ್ದಾರೆ.
ಪೊಲೀಸ್ ಇಲಾಖೆಯಿಂದ ರಹಸ್ಯ ಕ್ಯಾಮೆರಾ ಪಡೆದು ತನ್ನ ಮನೆಯಲ್ಲಿ ಪತ್ನಿ ಚಲನವಲನ ಗಮನಿಸಲು ಅಳವಡಿಸಿದ್ದಾರೆ ಅನ್ನೋದು ಪೊಲೀಸ್ ಮೇಲಿನ ಆರೋಪ. ಪತ್ನಿ ಅಕ್ರಮ ಸಂಬಂಧ ಪತ್ತೆ ಹಚ್ಚಿದ ಪೊಲೀಸ್ ಅಧಿಕಾರಿಗೆ ಇದೀಗ ಕೆಲಸವೂ ಇಲ್ಲ, ಇತ್ತ ಪತ್ನಿಯೂ ಇಲ್ಲದಾಗಿದೆ. ಪಿಕ್ಚರ್ಸ್ ಫೋಲ್ಡರ್ ಅನ್ನೋ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಒಂದೇ ದಿನದಲ್ಲಿ 2.9 ಮಿಲಿಯನ್ ವೀಕ್ಷಣೆ ಪಡೆದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.