ಕಿಮೋಥೆರಪಿಗೊಳಗಾದ ಮಹಿಳೆ ಕೂದಲು ಕಟ್..ತಲೆ ಬೋಳಿಸಿಕೊಂಡು ಸಾಂತ್ವಾನ ಹೇಳಿದ ಸಲೂನ್ ಬಾಯ್!

Published : Jul 19, 2023, 02:29 PM IST
ಕಿಮೋಥೆರಪಿಗೊಳಗಾದ ಮಹಿಳೆ ಕೂದಲು ಕಟ್..ತಲೆ ಬೋಳಿಸಿಕೊಂಡು ಸಾಂತ್ವಾನ ಹೇಳಿದ ಸಲೂನ್ ಬಾಯ್!

ಸಾರಾಂಶ

ಕಿಮೋಥೆರಪಿಗೆ ಒಳಗಾದವರು ಕೂದಲು ಕಳೆದುಕೊಳ್ತಾರೆ. ತಲೆ ಬೋಳಾದಾಗ ಆಗುವ ನೋವು ಅಷ್ಟಿಷ್ಟಲ್ಲ. ಎಷ್ಟೇ ಧೈರ್ಯವಾಗಿದ್ದರೂ ಮನಸ್ಸು ಮುದುಡುತ್ತೆ. ಅಂಥ ಮಹಿಳೆಯೊಬ್ಬಳಿಗೆ ಕ್ಷೌರಿಕರು ತಮ್ಮದೇ ಶೈಲಿಯಲ್ಲಿ ಧೈರ್ಯ ನೀಡಿದ್ದಾರೆ.   

ಮನುಷ್ಯ ಸ್ವಾರ್ಥಿ, ತನ್ನ ಭಾವನೆಗಳಿಗೆ ಮಾತ್ರ ಬೆಲೆ ಕೊಡ್ತಾನೆ ಎಂಬ ಮಾತುಗಳನ್ನು ನಾವು ಸಾಕಷ್ಟು ಕೇಳಿರ್ತೇವೆ. ಆದ್ರೆ ಕೆಲವೊಂದು ಘಟನೆಗಳನ್ನು ನೋಡಿದಾಗ, ಮನುಷ್ಯನಲ್ಲಿ ಇನ್ನೂ ಮಾನವೀಯತೆಯಿದೆ. ಬೇರೆಯವರ ನೋವಿಗೆ ಆತ ಸ್ಪಂದಿಸುತ್ತಾನೆ. ಬೇರೆಯವರ ಭಾವನೆಯನ್ನು ಆತ ಅರ್ಥ ಮಾಡಿಕೊಳ್ಳೋದನ್ನು  ಮರೆತಿಲ್ಲ ಅಂತಾ ನಾವು ಹೇಳ್ಬಹುದು. ಈಗ ಇದಕ್ಕೆ ಇನ್ನೊಂದು ಘಟನೆ ಸಾಕ್ಷ್ಯವಾಗಿದೆ. 

ಕೂದಲು (Hair) ಸೌಂದರ್ಯವನ್ನು ಹೆಚ್ಚಿಸುತ್ತದೆ. ಉದ್ದದ, ದಪ್ಪದ ಕೂದಲು ಇಲ್ಲವೆಂದ್ರೂ ತಲೆಯ ಮೇಲೆ ಒಂದಿಷ್ಟು ಕೂದಲು ಇರ್ಬೇಕು, ಆಗ್ಲೇ ಚೆಂದ. ಮಹಿಳೆಯರಿಗೆ ಅವರ ಕೂದಲ ಮೇಲೆ ವಿಶೇಷ ಪ್ರೀತಿ ಇರುತ್ತದೆ. ಫ್ಯಾಷನ್ (Fashion) ಹೆಸರಿನಲ್ಲೂ ತಲೆ ಕೂದಲನ್ನು ಸಂಪೂರ್ಣ ತೆಗೆಯುವ ಮಹಿಳೆಯರ ಸಂಖ್ಯೆ ಬಹಳ ಕಡಿಮೆ. ನಾನಾ ಕಾರಣಕ್ಕೆ ತಲೆ ಮೇಲಿರುವ ಕೂದಲು ಉದುರಿ ಹೋಗೋದು ಬೇರೆ. ಆದ್ರೆ ಕಿಮೋಥೆರಪಿ (Chemotherapy) ನಂತ್ರ ಕೂದಲನ್ನು ಕಳೆದುಕೊಳ್ಳುವುದು ಬೇರೆ. ಈ ಸಂದರ್ಭದಲ್ಲಿ ಕಿಮೋಥೆರಪಿ ನೋವಿನ ಜೊತೆ ಉದುರುವ ಕೂದಲು ಸಾಕಷ್ಟು ನೋವನ್ನು ನೀಡುತ್ತದೆ. ಒಂದೊಂದಾಗಿ ಕೂದಲು ಬುಡದಿಂದ ಕಿತ್ತು ಬರ್ತಿದ್ದರೆ ಜೀವ ಹಿಂಡಿದ ಅನುಭವವಾಗುತ್ತದೆ. ಇದೇ ಕಾರಣಕ್ಕೆ ಅನೇಕರು ಕಿಮೋಥೆರಪಿ ಆರಂಭವಾದ ಕೆಲವೇ ದಿನಗಳಲ್ಲಿ ಸಲೂನ್ ಗೆ ಬಂದು ತಲೆ ಕೂದಲನ್ನು ಶೇವ್ ಮಾಡಿಕೊಂಡು ಹೋಗ್ತಾರೆ. 

ಗಂಡ-ಹೆಂಡತಿ ಜಗಳ ಆಡೋದಾದ್ರೆ ಆಡಿ, ಮಕ್ಕಳ ಮುಂದೆ ಮಾತ್ರ ಅವೆಲ್ಲ ಇಡ್ಕೋಬೇಡಿ!

ನಟಿ ಸೋನಾಲಿ ಬೇಂದ್ರೆ, ಮನೀಶಾ ಕೊಯಿರಾಲಾ ಸೇರಿದಂತೆ ಅನೇಕ ಕಲಾವಿದರು ಕ್ಯಾನ್ಸರ್ ನಿಂದ ಬಳಲ್ತಿದ್ದು, ಕಿಮೋಥೆರಪಿ ವೇಳೆ ಕೂದಲು ಉದುರಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಉಳಿದ ಕ್ಯಾನ್ಸರ್ ರೋಗಿಗಳಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣದಲ್ಲಿ ಇನ್ನೂ ಅನೇಕ ಮನಕಲಕುವ ವಿಡಿಯೋಗಳನ್ನು ನಾವು ನೋಡ್ಬಹುದು. ಮಗಳು, ಪತ್ನಿ ಅಥವಾ ಪತಿ ಕ್ಯಾನ್ಸರ್ ಗೆ ಒಳಗಾಗಿದ್ದ ಸಂದರ್ಭದಲ್ಲಿ ಮನೆಯವರೆಲ್ಲ ತಲೆ ಬೋಳಿಸಿಕೊಂಡ ಅನೇಕ ವಿಡಿಯೋಗಳನ್ನು ನಾವು ನೋಡ್ಬಹುದು. ಆದ್ರೆ ಈಗ  ಟ್ವಿಟರ್ ನಲ್ಲಿ ವೈರಲ್ ಆಗಿರುವ ವಿಡಿಯೋ ಸ್ವಲ್ಪ ಭಿನ್ನವಾಗಿದೆ. 

Inspirational Story: ಕಿಶೋರ್ ಕುಮಾರ್ ಹಾಡು ಕೇಳಲೆಂದೇ ಹಿಂದಿ ಕಲಿತ ಜರ್ಮನ್ ಪ್ರೊಫೆಸರ್!

@AishaDar19  ಟ್ವಿಟರ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದು ಮಾನವೀಯತೆಯ ಶುದ್ಧ ರೂಪ ಎಂದು ಶೀರ್ಷಿಕೆ ಹಾಕಲಾಗಿದೆ. ಸಂಬಂಧಿಕರು, ಆಪ್ತರು ಕಿಮೋಥೆರಪಿ ವೇಳೆ ಕೂದಲು ಕಳೆದುಕೊಂಡಾಗ ಅವರಿಗೆ ಸಮಾಧಾನ ಮಾಡಲು ನೀವು ಕೂದಲು ತೆಗೆಯೋದು ಸಾಮಾನ್ಯವಾಗಿರಬಹುದು ಆದ್ರೆ ಯಾವುದೇ ಸಂಬಂಧವಿಲ್ಲದ ವ್ಯಕ್ತಿ ಕೂದಲು ತೆಗೆದ್ರೆ ಅದ್ರಷ್ಟು ಅಚ್ಚರಿ ಮತ್ತೊಂದಿಲ್ಲ

ವೈರಲ್ ವಿಡಿಯೋದಲ್ಲಿ ಏನಿದೆ? : ವಿಡಿಯೋದಲ್ಲಿ ಮಹಿಳೆಯೊಬ್ಬರು ಸಲೂನ್ ಗೆ ಬಂದಿರೋದನ್ನು ನೀವು ನೋಡ್ಬಹುದು. ಆಕೆ ಕಿಮೋಥೆರಪಿಗೆ ಒಳಗಾದ ಕಾರಣ ಕೂದಲು ಉದುರುತ್ತಿದೆ. ಹಾಗಾಗಿ ಆಕೆ ಕೂದಲನ್ನು ಸಂಪೂರ್ಣ ತೆಗೆಯುವ ನಿರ್ಧಾರ ಮಾಡಿದ್ದಾಳೆ. ಆಕೆ ಕೂದಲಿಗೆ ರೇಸರ್ ಹಾಕ್ತಿದ್ದ ಸಲೂನ್ ಬಾಯ್, ಮಹಿಳೆಯನ್ನು ನೋಡ್ತಾನೆ. ಕೂದಲು ಹೋಗ್ತಿದ್ದಂತೆ ಆಕೆ ಕಣ್ಣಲ್ಲಿ ನೀರು ಬರುತ್ತದೆ. ಆರಂಭದಲ್ಲಿ ಆಕೆಯನ್ನು ಸಮಾಧಾನಪಡಿಸಲು ಯತ್ನಿಸುವ ಹುಡುಗ, ನಂತ್ರ ತನ್ನ ತಲೆಗೆ ರೇಸರ್ ಹಾಕಿ, ತನ್ನ ತಲೆ ಶೇವ್ ಮಾಡಿಕೊಳ್ತಾನೆ. ಇದನ್ನು ನೋಡಿದ ಸಲೂನ್ ನ ಇನ್ನೊಬ್ಬ ಸಿಬ್ಬಂದಿ ಅಲ್ಲಿಗೆ ಬರೋದಲ್ಲದೆ ಆತನೂ ಶೇವ್ ಮಾಡಿಕೊಳ್ತಾನೆ. ಮಹಿಳೆ ಬೇಡ ಎಂದು ಪ್ರತಿಕ್ರಿಯೆ ನೀಡೋದನ್ನು ನೀವು ಕಾಣ್ಬಹುದು. ಅಷ್ಟೇ ಅಲ್ಲ ಪಕ್ಕದಲ್ಲಿದ್ದ ಇನ್ನೊಬ್ಬ ಹುಡುಗ ಕೂಡ ತಲೆ ಕೂದಲನ್ನು ಶೇವ್ ಮಾಡಿಕೊಳ್ತಾನೆ. ಈ ಮೂವರು ಹುಡುಗರು ತಲೆ ಕೂದಲನ್ನು ಸಂಪೂರ್ಣ ಶೇವ್ ಮಾಡಿದ್ದು ನೋಡಿ ಮಹಿಳೆ ಕಣ್ಣಲ್ಲಿ ನೀರು ಬರುತ್ತೆ. ಅಕ್ಕಪಕ್ಕದವರು ಕೂಡ ಭಾವುಕರಾಗ್ತಾರೆ. 

ಈ ವೈರಲ್ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ಆಂಟಿಯನ್ನು ಬೇರೆ ಯಾವುದೇ ವಿಧದಲ್ಲಿ ಮೋಟಿವೇಟ್ ಮಾಡಲು ಸಾಧ್ಯವಿರಲಿಲ್ಲ. ಸಲೂನ್ ಹುಡುಗರಿಗೆ ಸೆಲ್ಯೂಟ್ ಎಂದು ಅನೇಕರು ಬರೆದಿದ್ದಾರೆ. ಇದು  ಹೃದಯ ತಟ್ಟಿದೆ ಎಂದು ಅನೇಕರು ಸಲೂನ್ ಹುಡುಗರ ಬೆನ್ನು ತಟ್ಟಿದ್ದಾರೆ.  
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?